ಹಾವೇರಿಯಲ್ಲಿ ಅನ್ನಭಾಗ್ಯ ಅಕ್ಕಿಗೆ ಕನ್ನ! ಶೂಟ್ ಮಾಡುತ್ತಿದ್ದ ಕ್ಯಾಮೆರಾ ಖದೀಮನಿಂದ ಧ್ವಂಸ!

Date:

ಹಾವೇರಿ:ಬಡವರ ಹಸಿವು ನೀಗಿಸಲು ಜಾರಿಗೆ ಬಂದಿರುವ ಯೋಜನೆ ಅನ್ನಭಾಗ್ಯ. ಆದರೆ ಬಡವರ ಮನೆಗೆ ತಲುಪಬೇಕಾದ ಅನ್ನಭಾಗ್ಯದ ಪಡಿತರ ಅಕ್ಕಿಯನ್ನು ನ್ಯಾಯ ಬೆಲೆ ಅಂಗಡಿಗಳಿಂದ ಜನರು ಮನೆಗೆ ತಗೆದುಕೊಂಡ ಹೋಗುವ ಬೆನ್ನಲ್ಲಿಯೇ ಫಲಾನುಭವಿಗಳ ಬೆನ್ನುಹತ್ತುವ ಖದೀಮರು ಅನ್ನ ಭಾಗ್ಯ ಅಕ್ಕಿಗೆ ಭಾನುವಾರ ಕನ್ನ ಹಾಕುತ್ತಿದ್ದ ದೃಷ್ಯಗಳನ್ನು ಚಿತ್ರೀಕರಣ ಮಾಡುತ್ತಿದ್ದ ಖಾಸಗಿವಾಹನಿಗಳ ಕ್ಯಾಮೆರಾಗಳನ್ನು ಒಡೆದುಹಾಕಿರುವ ಘಟನೆ ನಡೆದಿದೆ.
ಗಳಿಗೆ ಖದೀಮರು ಕನ್ನ ಹಾಕುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ೧೮೦ ಪ್ರಕರಣಗಳು ದಾಖಲಾಗಿವೆ.
ರಾಜ್ಯವನ್ನು ಹಸಿವು ಮುಕ್ತ ಮಾಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ಬಂದಿದೆ. ಸಾಕಷ್ಟು ಮಂದಿ ಬಡವರು ಇದರ ಫಲಾನುಭವಿಗಳಾಗಿದ್ದಾರೆ. ಆದರೆ ಬಡವರ ಅನ್ನಕ್ಕೂ ಖದೀಮರು ಕನ್ನ ಹಾಕುವ ಮೂಲಕ ವಂಚನೆ ಮಾಡುತ್ತಿದ್ದಾರೆ. ಹಾವೇರಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಅನ್ನಭಾಗ್ಯ ಅಕ್ಕಿಗೆ ಕನ್ನಹಾಕುತ್ತಾ ಬಂದಿರುವ ಸಚಿನವ ಕಬ್ಬೂರು ಎನ್ನುವಾತನ ಕಡೆಯವರು ಭಾನುವಾರ ನಗರದ ಕೆಲವು ಓಣಿಗಳಲ್ಲಿ ಅನ್ನಭಾಗ್ಯ ಅಕ್ಕಿಗೆ ಕನ್ನಹಾಕುತ್ತಿದ್ದ ವಿಷಯ ತಿಳಿದು ವರದಿಮಾಡುತ್ತಿದ್ದ ಖಾಸಗಿ ವಾಹಿನಿಗಳ ಕ್ಯಾಮೆರಾಗಳನ್ನು ಈ ಸಚಿನ್ ಎನ್ನುವ ಖದೀಮ ಒಡೆದು ದ್ವಂಸಗೊಳಿಸಿದ್ದಲ್ಲದೇ ವರದಿಗಾರರ ಮೇಲೆ ಹಲ್ಲೆಗೂ ಸಹ ಮುಂದಾಗಿದ್ದಾನೆ.
ನ್ಯಾಯಬೆಲೆ ಅಂಗಡಿಗಳಿಂದ ಫಲಾನುಭವಿಗಳು ಅಕ್ಕಿಯನ್ನು ಮನೆಗೆ ತಗೆದುಕೊಂಡು ಹೋದ ಮರುದಿನ ಮನೆಗಳನ್ನು ಪತ್ತೆ ಹಚ್ಚುವ ಖದೀಮರ ಗ್ಯಾಂಗ್ ಆಟೋ, ಕಟಮಾ, ದ್ವಿಚಕ್ರವಾಹನಗಳ ಮೂಲಕ ಮನೆಗಳಿಗೆ ಎಡತಾಕಿ ಕಡಿಮೆಬೆಲೆಗೆ ಅಂದರೆ ಕೆಜಿಗೆ ೨೪ರಿಂದ ೨೬ರೂಗಳವಗೆ ಹಣ ನೀಡಿ ಅನ್ನಭಾಗ್ಯದ ಅಕ್ಕಿಯನ್ನು ಕಳ್ಳಮಾರ್ಗದಲ್ಲಿ ಸಂಗ್ರಹಿಸಿ ಪಾಲಿಶ್ ಮಾಡಿ ವಿವಿಧ ಬ್ರಾಂಡ್‌ಗಳ ಹೆಸರಿನಲ್ಲಿ ಪರಿವರ್ತಿಸಿ ಮಾರಾಟಮಾಡುವ ದಂಧೆಯನ್ನು ಇತ್ತೀಚೆಗೆ ಆಹಾರ ಇಲಾಖೆಯ ತನಿಖಾ ತಂಡವೇ ಬಯಲಿಗೆಳೆದಿತ್ತು.
ನ್ಯಾಯಬೆಲೆ ಅಂಗಡಿಗಳ ಪಕ್ಕದಲ್ಲೇ ಕಾಳಸಂತೆ ಅಂಗಡಿಗಳು ಓಪನ್!; ಸರ್ಕಾರ ಅನ್ನಭಾಗ್ಯದ ಅಕ್ಕಿಯನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದರೂ ಸಹ ಕೆಲವು ಫಲಾನುಭವಿಗಳು ತಮಗೆ ಸಾಕಾಗುವಷ್ಟು ಅಕ್ಕಿಯನ್ನು ಸಂಗ್ರಹಿಸಿಟ್ಟುಕೊಂಡು ಉಳಿದ ಅಕ್ಕಿಯನ್ನು ಈಖದೀಮರಿಗೆ ಮಾರುತ್ತಾರೆ. ಇನ್ನು ಕೆಲವರು ಅನ್ನಭಾಗ್ಯ ಅಕ್ಕಿಯನ್ನು ಮಾರಾಟಮಾಡಿ ಬಂದ ಹಣದಲ್ಲಿ ಉತ್ತಮ ಅಕ್ಕಿಯನ್ನು ಕೊಳ್ಳುತ್ತಾರೆ. ಇನ್ನು ಕೆಲವರು ಅನ್ನಭಾಗ್ಯ ಸಿಕ್ರೆ ಸಾಕಪ್ಪಾ ಎಂದು ಅನ್ಯಭಾಗ್ಯ ಅಕ್ಕಿಯನ್ನು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿ ಮುಂದೆ ಸರತಿ ಸಾಲಿನಲ್ಲಿ ನಿಂತು ಅಕ್ಕಿ ಪಡೆದು ಹೋಗುತ್ತಾರೆ. ಆದರೆ ಅನ್ನಭಾಗ್ಯ ಅಕ್ಕಿಯನ್ನು ಕಾಳಸಂತೆಯಲ್ಲಿ ಖರೀದಿಸುವ, ಮಾರುವ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ ಮಾಡುವ ದಂಧೆಕೋರರು ಹಾಡಹಾಗಲೇ ರಾಜಾರೋಷವಾಗಿ ಅನ್ನಭಾಗ್ಯದ ಅಕ್ಕಿ ಸಂಗ್ರಹ ಮಾಡುತ್ತಾರೆ. ಜಿಲ್ಲೆಯ ಬಹುತೇಕ ಕಡೆ ನ್ಯಾಯಬೆಲೆ ಅಂಗಡಿಗಳ ಪಕ್ಕದಲ್ಲೇ ಕಾಳಸಂತೆ ಅಂಗಡಿಗಳು ಓಪನ್ ಆಗಿವೆ.
ಕಿಂಗ್ ಪಿನ್ ಸಚಿನ್ ಕಬ್ಬೂರು ದರ್ಪ!: ಅನ್ನಭಾಗ್ಯ ಅಕ್ಕಿ ಕಾಳಸಂತೆಕೋರರ ಬಗ್ಗೆ ಭಾನುವಾರ ವರದಿ ಮಾಡಲು ಮಾಧ್ಯಮ ಪ್ರತಿನಿಧಿಗಳು ಸ್ಥಳಕ್ಕೆ ಹೋಗಿದ್ದರು. ಈ ವೇಳೆ ಅಕ್ಕಿ ದಂಧೆ ಕಿಂಗ್ ಪಿನ್ ಸಚಿನ್ ಕಬ್ಬೂರು ಆವಾಜ್ ಹಾಕಿ ದರ್ಪ ಮೆರೆದಿದ್ದಾನೆ. ಹಾವೇರಿ ನಗರದ ಅಕ್ಕಿಪೇಟೆಯ ಬಸವರಾಜ ಹಂದ್ರಾಳ ಎಂಬುವವರ ಮನೆಯಲ್ಲಿ ಅನ್ನಭಾಗ್ಯ ಅಕ್ಕಿ ಸಂಗ್ರಹ ಮಾಡಲಾಗಿದೆ ಎನ್ನುವ ಬಗ್ಗೆ ಮಾಹಿತಿ ಆಧರಿಸಿ ಈ ಬಗ್ಗೆ ವರದಿ ಮಾಡಲು ಹೋಗಿದ್ದ ಮಾಧ್ಯಮದವರ ಮೇಲೆ ಹಲ್ಲೆ ಮಾಡುವ ಯತ್ನ ನಡೆದಿದೆ.ಧಮ್ಕಿ ಹಾಕಿ ಹಲ್ಲೆ ಮಾಡಲು ಮುಂದಾದ ಸಚಿನ್ ಕಬ್ಬೂರ್, ವರದಿ ಮಾಡುವ ಸಂದರ್ಭದಲ್ಲಿ ಮಾಧ್ಯಮಗಳ ಕ್ಯಾಮೆರಾ ಧ್ವಂಸ ಮಾಡಿದ್ದಾನೆ. ಐಷಾರಾಮಿ ಕಾರಿನಲ್ಲಿ ಬಂದಿದ್ದ ಸಚಿನ್ ಕಬ್ಬೂರ್ ಮಾಧ್ಯಮದವರಿಗೆ ಆವಾಜ್ ಹಾಕಿ ಗನ್ನ ತಗೆದುಕೊಂಡು ಶೂಟ್ ಮಾಡುವುದಾಗಿ ಬೆದರಿಕೆಹಾಕಿ ತೆರಳಿದ್ದಾನೆ. ಈ ಬಗ್ಗೆ ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ

--      ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ ಹಾವೇರಿ: ಇಲ್ಲಿನ ಜಿಲ್ಲಾ...

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು ಹೊರಟಿದ್ದು...

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ ಹಾವೇರಿ : ಹಾವೇರಿನಗರದಲ್ಲಿ ಕಳೆದ ವಾರದಿಂದ...

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ ಹಾವೇರಿ: ಯುವ ಜನಾಂಗ...