
ಇನಸ್ಟಾಗ್ರಾಮ್ ಜ್ಯೋತಿಷಿಗಳಿಂದ ಹಾವೇರಿಯ ಫಾರ್ಮಸಿಸ್ಟ್ ವಿದ್ಯಾರ್ಥಿನಿ ವೈಷ್ಣವಿಗೆ ೧೫ ಲಕ್ಷರೂ ವಂಚನೆ
ಹಾವೇರಿ: ಜಾಲತಾಣವಾದ ಇನಸ್ಟಾಗ್ರಾಮ್ ನಲ್ಲಿ ಬಂದ ಯಾಪ್ ನ್ನು ನಂಬಿ ಜ್ಯೋತಿಷಿಗಳ ಭಯಾನಕ ಮೂಢ ನಂಬಿಕೆಗಳಿಗೆ ಹೆದರಿ ಹಾವೇರಿ ಯ ಫಾರ್ಮಸಿಸ್ಟ್ ವಿದ್ಯಾರ್ಥಿನಿ ವೈಷ್ಣವಿ ೧೫ ಲಕ್ಷರೂ ಮೌಲ್ಯದ ೧೬೫
ಗ್ರಾಂ ಬಂಗಾರವನ್ನು ನೀಡಿ ಮೋಸಹೋಗಿದ್ದಾಳೆ.
ಈ ವಂಚನೆಯ ಬಗ್ಗೆ ಹಾವೇರಿ ಯ ಸಿಇಎನ್ ಪೊಲೀಸ್ ಠಾಣೆ ಯಲ್ಲಿ ಜೂ.೨೮ರಂದು ದೂರು ದಾಖಲಾಗಿದೆ.
ಹಾವೇರಿ ಯ ವೈಷ್ಣವಿ ಹೂವನಗೌಡ ದ್ಯಾವಣ್ಣನವರ
ಇನಸ್ಟಾಗ್ರಾಮನಲ್ಲಿ
ಗಣೇಶ ಶಾಸ್ತ್ರಿ, ಚಂದನ ಹಾಗೂ ಗುರು
ಎನ್ನುವವರು ದಿನಾಂಕ ೨೩-೦೩-೨೦೨೫ ರಂದು
ಸಾಯಂಕಾಲ ೦೫:೦೦ ಗಂಟೆಯಿಂದ ದಿನಾಂಕ:೦೯-೦೬-೨೦೨೫ ರಂದು ಸಾಯಂಕಾಲ ೦೬-೦೦ ಗಂಟೆವರೆಗಿನ ಅವಧಿಯಲ್ಲಿ ಇನಸ್ಟಾಗ್ರಾಮನಲ್ಲಿ
ಯ್ಯಾಪ್‌ನ ಮೂಲಕ ಪರಿಚಯಿಸಿಕೊಂಡು ಬೇರೆ ರೀತಿಯ ಕುಂಕುಮ ,ಬಂಡಾರ, ತಾಯತಾ, ಕುಬೇರ ಯಂತ್ರ ಪೂಜೆಯ
ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಕೊಡುತ್ತೇವೆ , ಇಲ್ಲದಿದ್ದರೆ ನಿಮ್ಮ ಜೀವಕ್ಕೆ ಅಪಾಯವಿದೆ ಎಂದುನಂಬಿಸಿದ್ದಾರೆ.
ವಂಚಕ ನಂಬಿಕೆ ಬರುವ ಮಾತುಗಳನ್ನು ನಂಬಿ, ಅವರ ಹೆದರಿಕೆಗೆ ಬೆದರಿ ಮೂವರು ಜ್ಯೋತಿಷಿಗಳಿಗೆ
ಒಟ್ಟು ರೂ ೧೫ ಲಕ್ಷ ಮೌಲ್ಯದ ೧೬೫
ಗ್ರಾಂ ಬಂಗಾರವನ್ನು ನೀಡಿದ್ದಾರೆ, ವಂಚಕರು ಸಿಕ್ಕತಲೇ ಚಾನ್ಸ್ ಎಂದು ಸುಳ್ಳು, ಪೊಳ್ಳ ಹೇಳಿ ಬಂಗಾರವನ್ನು ಪಡೆದುಕೊಂಡೊ, ಹೊಡೆದು ಕೊಂಡ ಹೋಗಿದ್ದಾರೆ. ಈ ಘಟನೆ ದೂರುದಾರರಾದ ವೈಷ್ಣವಿಗೆಅವರ ಮೊಬೈಲ್ ನಲ್ಲಿ ಮನೆಯಲ್ಲಿ ನಡೆದಿದೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.

