“ಟ್ರಂಕ್ ಅಂದ್ರ ಡ್ರಿಂಕ್ ಮಾಡಿದ ಮಂಗ್ಯಾನ ಹಂಗ್”

Date:

ಚಿತ್ರ: ಕೃಪೆ ಅಂತರಜಾಲ

“ಟ್ರಂಕ್ ಅಂದ್ರ ಡ್ರಿಂಕ್ ಮಾಡಿದ ಮಂಗ್ಯಾನ ಹಂಗ್”

ಇಡ್ಲಿ ಆದರೇನು ಶಿವಾ
ವಡಾ ಆದರೇನು ಶಿವಾ
ಎಗ್ಗ್ ರೈಸ್ ಆದರೇನು ಶಿವಾ
ಹೊಟ್ಟಿ ತುಂಬಿದರೇ ಸಾಕು ಶಿವ……….
     ಏನ್ಪಾ ಬಸ್ಯಾ, ಏನ್ಲೇ ಇದು…. ಬಸುರಿ ಬಯ್ಕಿ ಹಂಗ್ ಏನೇನೋ ಎಣ್ಣಿ ಬದಕಿನ ಇಲಿ ಬಲಿ ಆಹಾರಗಳ್ನ ಇಟಗೊಂಡು ಹಾಡಾಕ ಹತ್ತಿಯಲ್ಲೋ? ಅದು ಈ ಮುನ್ಸಿಪಾಲ್ಟಿ ಕಟ್ಟಿಮ್ಯಾಗ ಕುತಗಂಡ, ಇಷ್ಟ ದಿವ್ಸ್ ಎಲ್ಲಿ ಹೋಗಿದ್ದಿ? ಏನ ಕತಿ ನಿಂದು!. ಹೆಂಡ್ತಿ-ಮಕ್ಳು ಮನಿಯಿಂದ ಹೊರ‍್ಗ ಹಾಕ್ಯಾರ ಹೆಂಗ್ಯ?.
ನಮಸ್ಕಾರ್ರೀ ಗೌಡ್ರ, ಎಲ್ಲಿ ಹೋಗಬಾರ‍್ದು ಅಂತ ಅನಕಂಡಿದ್ದೆ. ಆದ್ರ ದಿಲ್ಲಿಂದ ಕರೆ ಬಂದಿತ್ತು! ಅರ್ಜಂಟ್‌ಆಗಿ ಬಸಪ್ಪ ದಿಲ್ಲಿಗೆ ಚಲೋ….ಲಗೂನ್ ಹೊಂಟ್ ಬರಬೇಕು… ಅಂವಾಯಾಂವಾನೋ “ಅಮೀಬಾದ ಅಧ್ಯಕ್ಷ ಟ್ರಂಕ್ ನಮ್ಮ ದೇಶದಮ್ಯಾಗ ಸಿಕ್ಕಪಟ್ಟೆ ಜಕಾತಿ ಹಾಕಿ, ಇಲ್ಲಿಂದ ಹೋಗೋ ಸಾಮಾನಗಳು ಅಲ್ಲಿಮಂದಿ ಸಸ್ತಾರೊಕ್ಕದಾಗ ಸಿಗದಂಗ್, ದಾಬಾರಿ ಮಾಡೋ ಮಾಡೋ ಪ್ಲಾನ್ ನಡ್ಸಾನ್”, ಅದ್ಕ ಬಸಪ್ಪ ನೀ ಬಂದ್ ಒಳ್ಳೆ ಪ್ಲಾನ್ ಮಾಡಬೇಕು ಅಂತ್ ವಿಮಾನದ ಟಿಕೆಟ್ ಮತ್ತು ಹೋಗೋ ಬರೋ ಖರ್ಚಿನ ರೊಕ್ಕಾ ಕೊಟ್ಟು ನಮ್ಮ ಚೊಂಬಕ್ಕ ಕರ‍್ಸಿಕೊಂಡಿದ್ರು. ಅದ್ಕ ದಿಲ್ಯಾಗ ಒಂದ್ ಇಪ್ಪತ್ತದಿನ ಟೀಕಾಣಿ ಹೂಡಿದ್ದೆ, ಮೊನ್ನೆ ಊರಿಗೆ ಬಂದನಿ ನೋಡ್ರಿ.
ಅಬಾಬಾ ವಿಷ್ಯಾ ಬ್ಯಾರೇನ ಐತಲ್ಲೋ ಇದು, ನೀ ದಿಲ್ಲಿಗೆ ಹೋಗಿದ್ಯಾ? ಅಲ್ಲೋ ದೊಡ್ಡ ದೊಡ್ಡವ್ರ ಹೆಸ್ರಗಳ್ನ ತಪ್ಪ ತಪ್ಪಾಗಿ ಹೇಳ ಬಾರ‍್ದೋ? ಕಿಡಿಗೇಡಿ. ಅದು “ಅಮೀಬಾ ಅಲ್ಲ ಆಮೇರಿಕಾ, ಅಂವಾ ಟ್ರಂಕ್ ಅಲ್ಲಾ ಟ್ರಂಪ್, ಡೋನಾಲ್ಡ್ ಟ್ರಂಪ್” ಅಂತ್. ಇನ್ನ “ಸಾಮಾನ-ಪಾಮಾನ ಅನ್ನಾಕ ಹತ್ತಿ, ಹೆದ್ರಿಕೆ ಬರಕಾ ಹತ್ತೇತಲ್ಲೋ?. ಸಾಮಾನದ ಚಿತ್ರಾನ ಪವಿತ್ರಾಳಿಗೆ ಕಳ್ಸಿ ರೇಣುಕಾಸ್ವಾಮಿ ಸತ್ತಾನ, ಇನ್ ಇನ್ನ ದರ್ಶನ್ ಅನ್ನೋ ಮೂರ‍್ನು ಬಿಟ್ಟಿರೋ ಸಿನೇಮಾನಟನ ಆರೂ ಬಿಟ್ಟಿರೋ ಕೆಲ್ಸಾ-ಬಗ್ಸಿ ಇಲ್ಲದ ಕೆಲ್ವು ಅಭಿಮಾನಿಗಳು ರಮ್ಯಕ್ಕಂಗ್ ಈ ಸಾಮಾನಾ-ಪಾಮಾನದ ಚಿತ್ರ ಕಳ್ಸಿ ಈಗ ಜೇಲಿನ ಕಂಬಿ ಏಣ್ಸಾಕ ಹತ್ತಾರಂತ” ಪೇಪರ್‌ನ್ಯಾಗ ಸುದ್ದಿ ಬಂದಾವು. ಯಾವಾ ಸಾಮಾನಲೇ ಅವು, ಕಿಡಿಗೇಡಿ ಸುಳೆಮಗ್ನ!.
ಸಾಮಾನ ಅಂದ್ರ ಏನ ಅಂತ್ ತಿಳಕಂಡೀರಿ ನೀವು!, ಹಂದಿ ಕಣ್ಣಾಗ ಬರಿ ಹೇಸ್ಗಿನ ಕಾಣಸ ಹಂಗ್ ನಾ ಸಾಮಾನ ಅಂದ್ರ ನೀವು ನೆಟ್ಟಗ್ ಅಲ್ಲಿಗೇ ಹೋದ್ರಿ, ಸಾಮಾನ ಅಂದ್ರ ಅಕ್ಕಿ, ಬ್ಯಾಳಿ, ಬೆಲ್ಲ, ಬಟ್ಟಿ-ಬರಿ ಅಂತ್”.
ಹೌದ ನೀ ಬಿಡ್ಸಿ ಹೇಳಬೇಕಲೇ…
ಬಿಡ್ಯಾಗ ಯಾಕ್? ಸಿಗರೇಟಿನ್ಯಾಗ ಹೇಳ್ತನಿ ಬೀಡ್ರಿ….
ಏ ಇಲ್ಲಪಾ ನಾ ಈ ಬೀಡಿ, ಸಿಗರೇಟು ಸೇದೋದು ಬಿಟ್ಟು ಬಾಳಾ ವರ್ಷಆಗೇತಿ ಬಿಡು!.
ಎ ಅದರಿ, “ಅವ್ನ ಹೆಸ್ರು ಟ್ರಂಕ್, ಟ್ರಂಪ್, ಪಂಪ್ ಏನರ್ ಆಗಲಿ ಬೀಡ್ರಿ ಗೌಡ್ರ, ಅವನವ್ನ ಅಂವಾ ನಮ್ಮ ದೇಶದ ಮ್ಯಾಲ್ ಹೆಚ್ಗಿ ಜಕಾತಿ ಹಾಕಿ ವಸೂಲಿ ಮಾಡಿ ತನ್ನ ಟ್ರಂಕ್ ತುಂಬಿ ಕೊಳ್ಳಾಕ್ ಹತ್ತಿದ್ದು ಸರಿ ಅಂತಿರೇನು? “ಟ್ರಂಕ್ ಡ್ರಿಂಕ್ ಮಾಡಿದ ಮಂಗ್ಯಾನ ಹಂಗ್” ಮಾಡಿದ್ದು ಸರಿ ಅಂತಿರೇನು ನೀವು?.
ಇದು ಸರಿ-ಬೆಸದ ಪ್ರಶ್ನೆ ಅಲ್ಲಲೇ ಎಪ್ಪಾ!, ನೀನು ಈಗ ಬಾಳಾ ತಿಳ್ಕಂಡಿ…… “ಅಲ್ಪಾ ನಿಮ್ಮ ೬೪ ಇಂಚಿನ ಎದೆ ಐತಿ ನಂದು ಅಂತ್ ತನ್ನ ಬೆನ್ನ ತಾನ ತಟಿಗೊಂಡು ಗೋದಿ ಸಾಹೇಬ್ರು, ಟ್ರಂಪ್‌ನ್ನ ನಮ್ಮ ದೇಶಕ್ಕ ಕರ‍್ಕೊಂಡ್ ಬಂದು, ಇವ್ರು ಅಲ್ಲಿಗೆ ಹೋಗಿ, ಹಮಾರಾ-ತುಮಾರ ಬಾಯಿ ಬಾಯಿ ಅಂತ್ ಬರಿ ಬಾಯಿಮಾತಿನ್ಯಾಗ ಕೊಚಿಗೊಂಡು’. “ಅಮೇರಿಕಾ-ಇಂಡಿಯಾ ಗೆಳೆತನದ್ ಬಗ್ಗೆ, ಟ್ರಂಪ್ಗ್ ಗುಂಡಿಸೆಲಿ ಬರೊಮಟಾ ಅವ್ನ ಇಂದ್ರಾ, ಚಂದ್ರಾ, ಮಹೇಂದ್ರ, ದೇವದೂತ ಅದು-ಇದು ಅಂತ್ ಹೊಗ್ಳಹೊತ್ತಿನ್ಯಾಗ ಈ ಟ್ರಂಕ್‌ನ ಬಗನಿಗೂಟದ ಪ್ಲಾನ್ ಗೊತ್ತಿರಲಿಲ್ಲಾ ಅಂತಿ ಏನು”?.
ಅದೆಲ್ಲಾ ನನ್ಗ ಗೊತ್ತಿಲ್ಲಾ ಗೌಡ್ರ, “ಒಟ್ಟಿನ್ಯಾಗ ಆ ಟ್ರಂಕ್‌ಗ ಹೆಂಗ್ ಬುದ್ದಿ ಕಲಸಬೇಕು ಅಂತ್ ನನ್ನ ಚಂಬಕ್ಕ ಕೇಳಿದ್ಲು”, ಅದ್ಕ ನಾನು ಸಿಂಪಲ್ಲಾಗಿ ಉಪಾಯ ಹೇಳ್ದೆ, ಅರ್ಜಂಟಾಗಿ ಆ “ದೇಶದ ಒಳ್ಗ ಇರೋ ನಮ್ಮ ದೇಶದ ಜನ್ರೀಗೆ ಉಗ್ರ ಹೋರಾಟ ಮಾಡಕಾ ಕರೆ ಕೋಡಬೇಕು”, “ಆಗಾಗ ಹೋರಾಟದ ಮೂಲ್ಕ ನಮ್ಮ ೬೪ಇಂಚಿನ ಎದಿಗೆ ತೊಂದ್ರಿ ಕೊಡಾಕ ಹತ್ತಿರೋ ಈ ರಾವಣಗಾಂಧಿನ ಅಮೇರಿಕ್ಕ ವಿದೇಶಾಂಗ್ ಪ್ರತಿನಿಧಿ ಅಂತ್ ಕಳ್ಸಿಕೊಡಬೇಕು”. “ಮೇಲಾಗಿ ಇಲ್ಲಿಂದ್ ನಮ್ಮ ಗೋಟಾಳ ರಮ್‌ರಾಜನ್ನ ಅಲ್ಲಿಗೆ ನಾಲ್ಕ ಎಮ್ಮಿಕೊಟ್ಟು ಕಳ್ಸಬೇಕು, ಅಲ್ಲೆ ಎಮ್ಮಿ ಮೇಸಿಗೊಂಡ್ ಆಗಾಗ ಉಗ್ರ ಹೋರಾಟ ಮಾಡಕ್ ಹಚ್ಚಬೇಕು”. “ಆ ದೇಶದಿಂದ ನಮ್ಮ ದೇಶಕ್ಕ ಬರೋ ಎಲ್ಲಾ ಸಾಮಾನುಗಳಿಗೆ ೫೦ ಅಲ್ಲಾ ೭೦ರಷ್ಟು ಜಕಾತಿ ಹಾಕಬೇಕು, ಇಲ್ಲಿಂದ್ ಹೋಗೋ ಅಂಗಿ, ಚೊಣ್ಣ, ಹಾಸ್ಗಿ, ಹೊದ್ಕಿ, ಅಕ್ಕಿ, ಬ್ಯಾಳಿ, ಬೆಲ್ಲಾ ತರಕಾರಿನ ಕಡ್ಮಿ ಕಳ್ಸಿ, ಮ್ಯಾಲ್ ಅರ್ಜಂಟಾಗಿ ಸರ್ಜಿಕಲ್ ಆಪರೇಷನ್ ಮಾಡಬೇಕು” ಅಂತ್ ಹೇಳ್ದೆ, ಚೊಂಬಕ್ಕ್ ನನ್ನ ಮಾತ ಕೇಳ್ಳಿಗೊಂಡು ಅವ್ರ ಸಿಬ್ಬಂದಿಗೆ ಹೇಳಿ, ಇವ್ನ ಅರ್ಜಂಟಾಗಿ ಹುಬ್ಬಳ್ಳಿಗೆ ಹೋಗೋ ವಿಮಾನ ಹತ್ತಸರಿ ಅಂತ ಹೇಳಿ ನನ್ನ ಕಡಿಗೆ ನೋಡ್ದಂಗ್ ಅಟ್ಟಾ ಸೇರಿಕೊಂಡ್ರು.
ಅಲ್ಲಲೇ, “ಇಂತಾ ಹಲ್ಕಟ್ ಐಡ್ಯಾಗಳನ್ನ ನೀ ಹೇಳಿಯಲ್ಲ, ಅವ್ರು ಆದ್ಕ್ ನಿನ್ನ ಸುಮ್ನ ಬಿಟ್ಟ ಕಳಸ್ಯಾರ, ಅಲ್ಲಲೇ ಹಿಂಗೆಲ್ಲಾ ಹೇಳಬಾರ‍್ದೋ, ಅವ್ರು ಬಾಳಾ ಶಾಣ್ಯಾರು ಇರ‍್ತಾರ!, “ಅವ್ರ ಹಿಂದ -ಮುಂದ್ ಅಯ್ಯಯ್ಯೋಎಸ್, ಅಯ್ಯಪ್ಪನ್‌ಎಸ್ ಅಂತ್ ಹತ್ತಾರ ಪದ್ವಿ ಪಡದಿರೋ ತಿಂಗಳಿಗೆ ಲಕ್ಷ, ಲಕ್ಷ ಸಂಬ್ಳಾ ತಗಳ್ಳೋ ಉಂಬ್ಳದ ಮಂದಿ ಇರ‍್ತಾರ”. ಅವರು ಬೇಕಾದಂತ ಐಡ್ಯಾ ಕೊಡ್ತಾರ….!
ಕೊಡ್ತಾರ ನಿಮ್ಗ ಅವರು ಕೋಡದ ಬ್ಯಾರೇ, ಅಂತರ ಕೈಯಾಗ ಸಿಕ್ಕ ನಮ್ಮ ಗತಿ ಗಂಗವ್ವನ್ನ ಕೂಡೇತಿ, ಸಾಡೇಸಾತಿ ಆಗೇತಿ……
ಹೋಗಲಿ ಬಿಡು, ಈಬಾರಿ ಸ್ವಾತಂತ್ರ್ಯೋವ ಹೆಂಗಾತೋ?
ಹೆಂಗು ಇಲ್ರಿ ಗೌಡ್ರ, “ಎಲ್ಲಾ ಸಾಮಾನಗಳ ದರ ಹೆಚ್ಚಾಗಿ, ಜನ ಅದ್ರಾಗೂ ಸಾಮಾನ್ಯ ವರ್ಗದ ಜನ, ದುಡ್ದ ತಿನ್ನೋ, ಗುಡಿಸಲದಾಗ ಇರೋ ನಮ್ಮ ಜನ ಹೆಂಗ್ ಜೀವ್ನಾ ಮಾಡೋದು? ಅಂತ್ ಈ ದರ ಏರ‍್ಕಿ ದುನಿಯಾದಾಗ ಒಬ್ಬಿಟ್ಟು ಒದ್ರಾಕ ಹತ್ಯಾರ”. “ಜನ್ರು ಪಡೋ ಕಷ್ಟ ನಮ್ಮ ದೇಶಾ ಆಳೋರಿಗೆ ಗೊತ್ತಾದಂಗ್ ಕಾಣಸತೈತಿ, ಬರೋ ದೀಪಾವಳಿಗೆ ಎಲ್ಲಾ ಸಣ್ಣ ಪುಟ್ಟಾ ಸಾಮಾನಗಳ ಮ್ಯಾಲಿನ ಗಬ್ಬರಸಿಂಗ್‌ನ್ನ ತಗ್ದಹಾಕೋ ಬಗ್ಗೆ ಚಿಂತನೆ ನಡೆಸಾರ ನೋಡ್ರಿ, ಹಂಗ್ ಅಂತ್ ಟಿವ್ಯಾಗ ಟಿವಿ ಒಡ್ದ ಹೋಗೋ ಹಂಗ್ ಸುದ್ದಿ ಓದೋರು ಒದರಾರ ನೋಡ್ರಿ”!.
ಅಲ್ಲಲೇ ಮತ್ತ ತಲಿಗೆ ಹೂಳಾ ಬಿಟ್ಟೇಲ್ಲೋ…. ಸಾಮಾನಗಳ ಮ್ಯಾಲ ಈ ಗಬ್ಬರಸಿಂಗ್ ಯಾಕ ಕುತಗಂಡಾ?
ಏನ್ರೀ ನೀವು ಅಷ್ಟು ಗೊತ್ತಾಗಂಗಿಲ್ಲ ನಿಮ್ಗ!, “ಗಬ್ಬರಸಿಂಗ್ ಅಂದ್ರ ಜಿಎಸ್‌ಟಿ ರಿ, ಈ ಜಿಎಸ್‌ಟಿನ ಗಬ್ಬರಸಿಂಗ್ ಟ್ಯಾಕ್ಸ್ ಅಂತ” ವಿರೋಧಪಕ್ಷದ ನಾಯಕ ರಾವಣಗಾಂಧಿ ಹೇಳ್ಯಾನ ನೋಡ್ರಿ.
ಹೌದು, ಈರಾವಣಗಾಂಧಿ ಯಾರು?, ಪೂಜಾಗಾಂಧಿ ಕಾಕಾನ?
ಏನ್ರೀ ನೀವು ರಾವಣಗಾಂಧಿ ಅಂದ್ರ ಗೊತ್ತಿಲ್ಲ ಅಂದ್ರ ಹೇಂಗ್ಯ? ವಿರೋಧಪಕ್ಷದ ನಾಯಕ ರಿ.
ಅದನ್ ಸರಿತ್ನಾಗ ಹೇಳೋ ಬೋಳಿಮಗ್ನ, “ರಾಹುಲ್‌ಗಾಂಧಿನ ರಾವಣಗಾಂಧಿ ಅಂತ್ ತಪ್ಪ ತಪ್ಪಾಗಿ ಉಚ್ಚಾರ ಮಾಡ್ತಿ, ಇದು ತಮಿಳನಾಡಿನ ಅಣ್ಣಾಮಲ್ಯಾಗ ಗೊತ್ತಾತು ಅಂದ್ರ ನಿನ್ನ ಮ್ಯಾಲ ಕೇಸ್ ಹಾಕಿ ಜೇಲಿಗೆ ಹಾಕತಿದ್ದಾ, ಪುಣ್ಣಾಕ ಅವಂಗ್ ಕನ್ನಡಾ ನೆಟ್ಟಗ ಬರಂಗಿಲ್ಲ, ಇನ್ನ ನಮ್ಮ ಸಿಎಂ-ಡಿಸಿಎಂ ಕುರ್ಚಿ ಗುದ್ದಾಟದಾಗ ರಾಜ್ಯದಾಗ ಏನ ನಡದೈತಿ, ಏನ ನಡಾಕ ಹತ್ತೇತಿ ಅನ್ನೋದನ್ ನೋಡಾಕ ಅವ್ರಿಗೆ ಪುರಸೊತ್ತ ಇಲ್ಲದಂಗ್ ಆಗೇತಿ, ನಿನ್ನ ಬಾಳೆ ಬಚ್ಚೆ ಆಗೇತಿ ನೋಡ್”.
ನೀವು ಬಾಳಾ ಬುದ್ದಿವಂತರು ಅಂತ್ ತಿಳಕಂಡಿದ್ದೆ, ಆದ್ರ ಇಷ್ಟರಮಟ್ಟಿಗೆ ದಡ್ರು ಅದೀರಿ ಅಂತ್ ನನ್ಗ ಗೊತ್ತಿರಲಿಲ್ಲ!. “ಅಲ್ರಿ, ನಮ್ಮರಾಗ ರಸ್ತೆದಾಗ ಹೊಂಡ್, ಕೆರಿ,ಕಟ್ಟಿ ನಿರ್ಮಾಣಾಗ್ಯಾವು, ರಸ್ತೆದಾಗಿನ ಗುಂಡಿ ಮುಚ್ಚಾಕ ಆಗವಲ್ದು ನಿಮ್ಮ ಸರ್ಕಾರಕ್ಕ, ಮೊದ್ಲ ರಸ್ತೆದಾಗಿನ ಗುಂಡಿ ಮುಚ್ಚಸರಿ, ಆ ಮ್ಯಾಲ್ ಕೇಸ್-ಪಾಸು ಎಲ್ಲಾ”.
ಅದಿರಲಿ, ರಾಜಣ್ಣನ ವಿಷ್ಯಾ ಎಲ್ಲಗೆ ಬಂತು? ದರ್ಶನ್ ಮತ್ತ ಆತನ ಗೆಳತಿ ಹೆಂಗ್ ಅದಾರಂತ್?
ರಾಜಣ್ಣ, ಈದರ್ಶನನ್ನಣ್ಣ ಮತ್ತ ಆ ಗೌಡ್ತಿ ಹೆಂಗ್ ಇರಬೇಕೋ ಹಂಗ್ ಅದಾರ, ಈ ಮೂರು ಮಂದಿ ಬಗ್ಗೆ ಒಂದ್ ಮಾತನ್ಯಾಗ ಹೇಳಬೇಕಂದ್ರ “ಮಾಡಿದ್ದೋಣ್ಣೋ ಮಹಾರಾಯ ಅನ್ನೋ ಮಾತಿನಂಗ್, ಮಾತು ಮನೆ ಕೆಡಿಸಿತು, ತುತು ಒಲೆ ಕೆಡಿಸಿತು… ಅನ್ನೋ ಮಾತಿನಂಗ್ ತನ್ನ ನಾಲ್ಗಿ ಮ್ಯಾಲ ಹಿಡ್ತ ಇಲ್ಲದಂಗ್ ಈ ಮತ ಕಳವಿನ ಬಗ್ಗೆ ರಾಜಣ್ಣ ಆಡಿದ ಮಾತು. ಅದ ನಿಮ್ಮ ರಾವಣಗಾಂಧಿಗೆ ಹಿಡಸಿಲ್ಲ ಅಂತ್ ಕಾಣತೈತಿ? ನೇರವಾಗಿ ಸಿಎಂ ಸಿದ್ರಾಮಣ್ಣಂಗ್ ಪೋನ್ ಮಾಡಿ ದೇಖೋ ಸಿದ್ದರಾಮಯ್ಯಾಜಿ “ರಾಜಣ್ಣ ನನ್ನ ವಿಷಯಾದಾಗಿ ಬಾಯಿಗ ಬಂದಂಗ್ ಮಾತನಾಡಿದ್ದಾರೆ, ರಾಜಣ್ಣನ ಕೂಡ್ಲೇ ಸಂಪುಟದಿಂದ ವಜಾಮಾಡಿ ನನಗ ತಿಳಸಿ ಅಂತ್ ಪೋನ್ ಕಟ್ಟ ಮಾಡಿದ್ರಂತ್, ಅದ್ಕ ಸಿದ್ದರಾಮಣ್ಣರೋ ರಿಸ್ಕ್ ಬ್ಯಾಂಡ್ ಅಂತ್ ರಾಜಣ್ಣನ ಸಚಿವಸ್ಥಾನದಿಂದ ವಾಜಾ ಮಾಡ್ಯಾರ, ರಾಜಣ್ಣ ಈಗ ಆರಾಮ ಮನ್ಯಾಗ ಅದ್ಯಾರ, ಇನ್ನದರ್ಶನ ಮತ್ತ ಆ ಗೌಡ್ತಿ ಸದ್ಯಕ್ಕ ಜೇಲಿನ್ಯಾಗ ಮುದ್ದಿ ಮುರ‍್ಯಾಕ ಹತ್ತಾರ” ನೋಡ್ರಿ ಗೌಡ್ರ.
ಹೌದು, ನಮ್ಮ ಹಾವೇರಿನಗರಸಭೆ ಅಧ್ಯಕ್ಷರನ್ನ ಕುರ್ಚೆಯಿಂದ ಕೆಳಗ ಇಳ್ಸೋ ವಿಚಾರ ಎಲ್ಲಿಗೆ ಬಂತೋ?
ತಡ್ರೀ, ತಡ್ರೀ, ಈಗರ ಮೆಂಬರ್ ಹುಲಿಕಂತಿಮಠ ನಾಲ್ಕ ಮಂದಿ ಮೆಂಬರ್ ಜೊತಿಗೆ ಮುನ್ಸಿಪಾಲ್ಟಿ ಒಳ್ಗ ಹೋಗ್ಯಾನ, ಅವ್ನ ಈ ಬಗ್ಗೆ ವಿಚಾರಿಸಿಕೊಂಡು ಬರ‍್ತನಿ ತಡ್ರಿ ಎನ್ನುತ್ತಾ ಬಸ್ಯಾ ನಗರಸಭೆಯ ಕಾರ್ಯಾಲಯದ ಒಳಗೆ ದೌಡಾಯಿಸಿದಾ.
ಹಾವೇರಿಯಾಂವ್
ಮಾಲತೇಶ ಅಂಗೂರ

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿಗೆ 2 “ಮಕ್ಕಳ ಚಂದಿರ ಪ್ರಶಸ್ತಿ”

ಕಾಡುಮೇಡು ಹಾಗೂ ಬೆರಗು ಕೃತಿಗಳಿಗೆ 2023ನೇ ಸಾಲಿನ ಪ್ರಶಸ್ತಿ ಪ್ರಕಟ ಹಾವೇರಿಗೆ 2...

ಹಾವೇರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ

ಹಾವೇರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ ಸದೃಢವಾದ ದೇಹಕ್ಕೆ ಸದೃಢವಾದ...