ಹಾವೇರಿ ಜಿಲ್ಲೆಯಲ್ಲಿ ೬ ತಿಂಗಳಲ್ಲಿ ೩,೨೩೭ ಜನರಿಗೆ ಕಚ್ಚಿರುವ ಬೀದಿ ನಾಯಿಗಳು- ದಾಖಲಾಗದ ಪ್ರಕರಣಗಳು ಇನ್ನೆಷ್ಟು?

Date:

ಹಾವೇರಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬೀದಿನಾಯಿಗಳ ಹಾವಳಿ ಹೆಚ್ಚಳವಾಗುತ್ತಿದ್ದು, ೬-೭ ತಿಂಗಳಲ್ಲಿ ೩,೨೩೭ ಜನರಿಗೆ ಬೀದಿ ನಾಯಿ ಕಡಿತವಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇನ್ನು ದಾಖಲಾಗದ ಪ್ರಕರಣಗಳು ಇಲ್ಲಿ ಸೇರಿಲ್ಲ. ಪ್ರಮುಖ ವೃತ್ತಗಳಲ್ಲಿ ಪ್ರಮುಖ ರಸ್ತೆಗಳಲ್ಲಿ, ಎಲ್ಲೆಂದರಲ್ಲಿ ಬೀದಿ ನಾಯಿಗಳು ಕಂಡಬರುತ್ತಿವೆ. ಬ್ಯಾಡಗಿ ತಾಲೂಕಿನಲ್ಲಿ ಕಳೆದ ೬ ತಿಂಗಳಲ್ಲಿ ೭೦೨ ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ. ಹಾವೇರಿ ತಾಲೂಕಿನಲ್ಲಿ ೬೪೩, ಹಾನಗಲ್ ತಾಲೂಕಿನಲ್ಲಿ ೪೯೧, ಹಿರೇಕೆರೂರು ತಾಲೂಕಿನಲ್ಲಿ ೩೪೩ , ರಾಣೇಬೆನ್ನೂರು ತಾಲೂಕಿನಲ್ಲಿ ೧೭೭, ಸವಣೂರು ತಾಲೂಕಿನಲ್ಲಿ ೩೮೯ ಹಾಗೂ ಶಿಗ್ಗಾಂವಿ ತಾಲೂಕಿನಲ್ಲಿ ೪೯೨ ಪ್ರಕರಣಗಳು ವರದಿಯಾಗಿವೆ.
ಹಾವೇರಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಳ : ಹಾವೇರಿನಗರದಲ್ಲಿ ನೂರಾರು ಬೀದಿನಾಯಿಗಳಿದ್ದು, ಮಕ್ಕಳು ಕೈಯಲ್ಲಿ ಏನಾದರೂ ಹಿಡಿದುಕೊಂಡರೆ ಅವರ ಮೇಲೆ ದಾಳಿಮಾಡುತ್ತವೆ. ವಯೋವೃದ್ಧರು ವಾಯುವಿವಾರ ಸೇರಿದಂತೆ ಇತರ ಕಾರಣಕ್ಕೆ ಮನೆಯಿಂದ ಹೊರ ಬಂದರೆ ಅವರ ಮೇಲೆ ಬೀದಿನಾಯಿಗಳು ಕಚ್ಚಿದ ಉದಾಹರಣೆಗಳಿವೆ. ಇನ್ನು ಕೆಲವು ಕಡೆ ದ್ವಿಚಕ್ರವಾಹನ ಸವಾರರನ್ನು ಬಿಡದ ನಾಯಿಗಳು ಅವರ ಮೇಲೂ ದಾಳಿ ನಡೆಸಿವೆ.
ಬೀದಿನಾಯಿ ನಿಯಂತ್ರಣದಲ್ಲಿ ಸ್ಥಳೀಯ ಸಂಸ್ಥೆಗಳ ವೈಫಲ್ಯ: ಹಾವೇರಿ ಜಿಲ್ಲೆಯಲ್ಲಿ ಎರಡು ನಗರಸs, ಐದು ಪುರಸ,s ಮೂರು ಪಟ್ಟಣ ಪಂಚಾಯತ್ ಇವೆ. ನಗರಸಭೆ ಇರುವ ಹಾವೇರಿ, ರಾಣೆಬೆನ್ನೂರುಗಳಲ್ಲಿ ಬೀದಿ ನಾಯಿಗಳ ಕಾಟ ಹೇಳತೀರದು. ಪುರಸಭೆ ಆಡಳಿತದಲ್ಲಿರುವ ಹಾನಗಲ್, ಬ್ಯಾಡಗಿ, ಬಂಕಾಪುರ, ಸವಣೂರು ಮತ್ತು ಶಿಗ್ಗಾಂವ್?ಗಳಲ್ಲಿ ಬೀದಿನಾಯಿಗಳ ಹಾವಳಿ ಅಧಿಕವಾಗಿದೆ. ಹಾಗೇ ಪಟ್ಟಣ ಪಂಚಾಯತ್ ಇರುವ ಹಿರೇಕೆರೂರು, ರಟ್ಟಿಹಳ್ಳಿ ಮತ್ತು ಗುತ್ತಲ ಪಟ್ಟಣಗಳಲ್ಲಿ ಸಹ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ.
ಬೀದಿನಾಯಿಗಳ ಸಂಖ್ಯೆ ಅಧಿಕವಾಗಲು ಕಾರಣ?: ರಸ್ತೆ ಬದಿಯ ಮಾಂಸಾಹಾರಿ ದೂಡಂಗಡಿಗಳ ಸಂಖ್ಯೆ ಅಧಿಕವಾಗಿರುವುದು. ಎಲ್ಲೆಂದರಲ್ಲಿ ಎಗ್‌ರೈಸ್ ಅಂಗಡಿಗಳು ತಲೆ ಎತ್ತಿರುವುದು ಬೀದಿ ನಾಯಿಗಳ ಸಂಖ್ಯೆ ಅಧಿಕವಾಗಲು ಕಾರಣ ಎನ್ನುತ್ತಾರೆ ನಾಗರಿಕರು. ಇನ್ನು ಕೆಲವರು ಬೀದಿನಾಯಿಗಳಿಗೆ ಆಹಾರ ಹಾಕುವ ಮೂಲಕ ಅವುಗಳನು ಸಲುಹುತ್ತಿದ್ದಾರೆ. ಜಿಲ್ಲೆಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಒಂದು ವೇಳೆ, ಯಾವುದಾದರೂ ನಾಯಿಗೆ ಹುಚ್ಚುರೋಗ ಬಂದರೆ ಹೇಗೆ ಎಂದು ಜಿಲ್ಲೆಯ ಜನರ ಆತಂಕ.
ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಿಲ್ಲ: ಈ ಕುರಿತಂತೆ ಹಲವು ಬಾರಿ ಸ್ಥಳೀಯ ಸಂಸ್ಥೆಗಳಿಗೆ ದೂರು ನೀಡಿದ್ದೇವೆ. ಬೀದಿನಾಯಿಗಳನ್ನು ಹಿಡಿದು ಬೇರೆ ಕಡೆ ಬಿಟ್ಟುಬನ್ನಿ ಇಲ್ಲವೇ ಅವುಗಳ ಸಂತಾನಹರಣ ಚಿಕಿತ್ಸೆ ಮಾಡಿಸಿ ಅಂತಾ ಎಷ್ಟು ಬಾರಿ ಹೇಳಿದರು ಅಧಿಕಾರಿಗಳು ಜನಪ್ರತಿನಿಧಿಗಳು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.
ಈ ಕುರಿತಂತೆ ಹಾವೇರಿ ನಗರಸಭೆಯ ಅಧ್ಯಕ್ಷ್ಯೆ ಶಶಿಕಲಾ ಮಾಳಗಿ, “ನಾವು ಮೂರು ಬಾರಿ ಬೀದಿನಾಯಿ ಹಿಡಿಯಲು ಟೆಂಡರ್ ಕರೆದಿದ್ದೆವು. ಆದರೆ ಯಾರು ಟೆಂಡರ್ ಹಾಕಲಿಲ್ಲ. ಹಾವೇರಿ ನಗರದಲ್ಲಿಯೇ ೮ ರಿಂದ ೧೦ ಸಾವಿರ ಬೀದಿನಾಯಿಗಳಿವೆ. ಅವುಗಳನ್ನು ಹಿಡಿಯಲು ಈಗಾಗಲೇ ಬೋನ್ ರೆಡಿ ಇಟ್ಟಿದ್ದೇವೆ. ಈ ಕುರಿತಂತೆ ಪಶು ಆರೋಗ್ಯ ಇಲಾಖೆ ಜಿಲ್ಲಾಧಿಕಾರಿ ಪ್ರಾಣಿ ದಯಾಸಂಘದವರ ಜೊತೆ ಸಭೆ ನಡೆಸಲಾಗಿದೆ. ಆದರೆ ಯಾರೂ ಗುತ್ತಿಗೆ ಪಡೆಯಲು ಮುಂದೆ ಬರುತ್ತಿಲ್ಲ. ಒಂದು ನಾಯಿಯ ಸಂತಾನಹರಣ ಚಿಕಿತ್ಸೆಗರ ಸುಮಾರು ೧,೬೫೦ ರೂಪಾಯಿ ಹಣ ಕೇಳುತ್ತಿದ್ದಾರೆ. ನಾವು ಹಣ ನೀಡುತ್ತೇವೆ ಎಂದರೂ ಸಹ ಚಿಕಿತ್ಸೆ ನೀಡಲು ಮುಂದೆ ಬರುತ್ತಿಲ್ಲ. ಹಾವೇರಿ ನಗರಸಭೆ ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಸಿದ್ಧವಾಗಿದೆ. ಆದಷ್ಟು ಬೇಗ ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕುವುದಾಗಿ” ಶಶಿಕಲಾ ತಿಳಿಸಿದರು

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿಗೆ 2 “ಮಕ್ಕಳ ಚಂದಿರ ಪ್ರಶಸ್ತಿ”

ಕಾಡುಮೇಡು ಹಾಗೂ ಬೆರಗು ಕೃತಿಗಳಿಗೆ 2023ನೇ ಸಾಲಿನ ಪ್ರಶಸ್ತಿ ಪ್ರಕಟ ಹಾವೇರಿಗೆ 2...

ಹಾವೇರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ

ಹಾವೇರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ ಸದೃಢವಾದ ದೇಹಕ್ಕೆ ಸದೃಢವಾದ...