ಸೆ.೧೯ರಂದು ಬೆಂಗಳೂರಲ್ಲಿ ಪತ್ರಕರ್ತ ಮಾಲತೇಶ ಅಂಗೂರಗೆ ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ

Date:

ಹಾವೇರಿ: ರಾಜ್ಯ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯಿಂದ ನೀಡಲಾಗುವು  ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ೨೦೨೦ ನೇಸಾಲಿನ ಪ್ರಶಸ್ತಿಗೆ ಹಾವೇರಿಯ ಹಿರಿಯ ಪತ್ರಕರ್ತ, ಸಾಹಿತಿ ಮಾಲತೇಶ ಅಂಗೂರ ಅವರನ್ನು ಆಯ್ಕೆ ಮಾಡಲಾಗಿದ್ದು, ಸದರಿ ಪ್ರಶಸ್ತಿಯನ್ನು ಸೆ.೧೯ರಂದು ಬೆಳಿಗ್ಗೆ ೧೧-೩೦ಕ್ಕೆ ವಾರ್ತಾ ಸೌಧದ ಸುಲೋಚನಾ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರದಾನ ಮಾಡಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಉಪಸ್ಥಿತರಿರುವರು, ಅಧ್ಯಕ್ಷತೆಯನ್ನು ಶಾಸಕ ರಿಜ್ವಾನ್ ಅರ್ಷದ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯ ಪಿ.ಸಿ.ಮೋಹನ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ, ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳು, ಹಾಗೂ ಕಾನೂನು ಆಯೋಗದ ಅಧ್ಯಕ್ಷರಾದ ಅಶೋಕ ಹಿಂಚಿಗೇರಿ ಆಗಮಿಸಲಿದ್ದಾರೆ.
ಮಾಲತೇಶ ಅಂಗೂರ ಸ್ಥಳೀಯ ಕೌರವ ದಿನಪತ್ರಿಕೆ ಸೇರಿದಂತೆ  ಅನೇಕ ಪತ್ರಿಕೆಗಳಲ್ಲಿ ಇವರು ಕಾರ್ಯನಿರ್ವಹಿಸಿದ್ದಾರೆ. ಇವರು ಸೆರೆಹಿಡಿದ ವನ್ಯಜೀವಿಗಳ ಛಾಯಾಚಿತ್ರಗಳು ಹಾಗೂ ಪರಿಸರಜಾಗೃತಿಯ ಲೇಖನಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಯಲು, ಬರ, ನೆರೆಯ ನಾಡಿನಲ್ಲಿ ಹುಟ್ಟಿ ಬೆಳೆದ ಮಾಲತೇಶ ಅಂಗೂರ ವನ್ಯಜೀವಿಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡು ನಾಡಿನ ಉದಯೋನ್ಮುಖ ವನ್ಯಜೀವಿ ಛಾಯಾಗ್ರಾಹಕರಾಗಿ, ಪರಿಸರ ಕಾಳಜಿಯ ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ಇವರು ಹಾವೇರಿ ಸುತ್ತಮುತ್ತಲಿನ ಪರಿಸರದಲ್ಲಿ ಅಪರೂಪದ ಪ್ರಾಣಿ, ಪಕ್ಷಿಗಳ ಸಾವಿರಾರು ಛಾಯಾಚಿತ್ರಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದು ನಾಡಿಗೆ ವನ್ಯಜೀವಿಗಳ ಪರಿಚಯಿಸುವ ಮೂಲಕ ಗಮನ ಸೆಳೆದಿದ್ದಾರೆ.
ಪತ್ರಿಕಾಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಾಲತೇಶ ಅಂಗೂರ ಅವರು ಹೆಸರು ಈ ಭಾಗದಲ್ಲಿ ಚಿರಪರಿಚಿತ. ವನ್ಯಜೀವಿ ಸಂರಕ್ಷಣೆ ಹಾಗೂ ಅವುಗಳ ಬಗ್ಗೆ ಅಧ್ಯಯನ ಮಾಡಿರುವ ಅವರಿಗೆ ವನ್ಯಜೀವಿಗಳ ಬಗ್ಗೆ ಇರುವ ತಿಳುವಳಿಕೆ ಅಪಾರವಾದುದು. ಹಿತ ಭಾಷಿ. ಮಿತ ಭಾಷಿ. ಅರ್ಥಪೂರ್ಣ ಮಾತು. ಮೌನ ಅವರ ಗುಣ. ಅವರ ಪರಿಸರ ಪ್ರೀತಿ-ಕಾಳಜಿ ಅನನ್ಯವಾದುದು. ಹಾವೇರಿಯ ಸುತ್ತ- ಮುತ್ತಲ ಕೆರೆಕಟ್ಟೆಗಳು-ಹಳ್ಳಕೊಳ್ಳಗಳು, ನದಿಗಳು, ಬುಹುತೇಕ ಈ ಭಾಗದಲ್ಲಿನ ಪಕ್ಷಿಧಾಮಗಳು, ವನ್ಯಜೀವಿ ಉದ್ಯಾನಗಳು, ಸಂರಕ್ಷಿತ ಪ್ರದೇಶಗಳು,  ಅವರಿಗೆ ಚಿರಪರಿಚಿತ. ಅಂಗೂರ ಅವರ ವೃತ್ತಿ ಪರತೆಯನ್ನು ಅನೇಕ ತಜ್ಞ ಪಕ್ಷಿ ವೀಕ್ಷಕರು, ವನ್ಯಜೀವಿ ಛಾಯಾಗ್ರಾಹಕರು ಶ್ಲಾಘಿಸಿದ್ದಾರೆ.
ಇವರು ವನ್ಯಜೀವಿಗಳ ಬಗ್ಗೆ ದಾಖಲಿಸಿರುವ ಬರಹ ಹಾಗೂ ಛಾಯಾಚಿತ್ರಗಳು ಸಾವಿರಾರು. ಇವರ “ಕಾಡು-ಮೇಡು” ಕೃತಿಯಲ್ಲಿ ಇವರ ಅನನ್ಯ ಪರಿಸರ ಕಾಳಜಿ ಅನಾವರಣಗೊಂಡಿದೆ. “ಕಾಡು-ಮೇಡು” ಕೃತಿ ಕನ್ನಡನಾಡಿನ ಪರಿಸರ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆಯಾಗಿದೆ. ಮಾಲತೇಶ ಅಂಗೂರ ಅವರು ಕಳೆದ ೩ ದಶಕಗಳಿಂದ ಹಾವೇರಿಯಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಣೆ, ಹುಟ್ಟಿದ್ದು, ಓದಿದ್ದು, ಬೆಳೆದುದು ಹಾವೇರಿಯಲ್ಲಿಯೇ. ಇವರು ಸೆರೆ ಹಿಡಿದ ವನ್ಯಜೀವಿಗಳ ಛಾಯಾಚಿತ್ರಗಳಿಗೆ ರಾಜ್ಯ-ಅಂತರಾಷ್ಟ್ರೀಯ ಮನ್ನಣೆ ದೊರೆತಿದೆ.
ಪತ್ರಿಕಾರಂಗ ದಲ್ಲಿನ ಸೇವೆ ಗುರುತಿಸಿ ಕರ್ನಾಟಕ ಸರ್ಕಾರದ ೨೦೧೬-೧೭ನೇ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಮಾಧ್ಯಮ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿನ ಸೇವೆ ಗುರುತಿಸಿ ರಾಯಚೂರಲ್ಲಿ ೨೦೧೬ರಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಸನ್ಮಾನ, ಬೆಂಗಳೂರಿನ ಪ್ರೆಸ್‌ಕ್ಲಬ್ ಕೌನ್ಸಿಲ್‌ನ ಮಾಧ್ಯಮ ಸೇವಾರತ್ನ ಪ್ರಶಸ್ತಿ, “ಬಣ್ಣದ ಗರಿ” ಕೃತಿಗೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೂಡು ಇವರಿಂದ ಅತ್ಯುತ್ತಮ ಅಂಕಣ ಬರಹ ಮಾಧ್ಯಮ ಪ್ರಶಸ್ತಿ, ಸರ್. ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನದ ಹಾಗೂ ಸಂಪಾದಕರ ಸಂಘದ ಅತ್ಯುತ್ತಮ ಅಂಕಣ ಬರಹ ರಾಜ್ಯ ಪ್ರಶಸ್ತಿ, ಹಾವೇರಿ ಜಿಲ್ಲೆಯಲ್ಲಿ ಯುವತಿಯರ ಮಾರಾಟ ಎನ್ನುವ ತನಿಖಾ ವರದಿಗೆ ಕನ್ನಡ ಸಾಹಿತ್ಯ ಪರಿಷತ್‌ನ ಬಿ.ಜಿ.ಬಣಕಾರ ದತ್ತಿನಿಧಿ ಪುರಸ್ಕಾರ, ವೃತ್ತಿ ಚೈತನ್ಯ ರತ್ನ ಪ್ರಶಸ್ತಿ, ಅಕ್ಕಿಆಲೂರಿನ ಜೈ ಭೀಮ ಜನಪದ ಕಲಾ ಸಂಘದ “ಭೀಮ ಪುರಸ್ಕಾರ”,  “ಹಾವೇರಿಯಾಂವ್” ಕೃತಿಗೆ ಮೈಸೂರಿನ ಅಭಿರುಚಿ ಪ್ರಕಾಶನದ ಅತ್ತುತ್ಯಮ ಅಂಕಣಬರಹ ಪ್ರಶಸ್ತಿ, “ಕಾಡು-ಮೇಡು” ಕೃತಿಗೆ ಧಾರವಾಡದ ಪಂಡಿತ ಪುಟ್ಟರಾಜ ಗವಾಯಿಗಳ ಪ್ರತಿಷ್ಠಾನದಿಂದ ಅತ್ಯುತ್ತಮ ಕೃತಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ- ಪುರಸ್ಕಾರಗಳು ಸಂದಿವೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿಗೆ 2 “ಮಕ್ಕಳ ಚಂದಿರ ಪ್ರಶಸ್ತಿ”

ಕಾಡುಮೇಡು ಹಾಗೂ ಬೆರಗು ಕೃತಿಗಳಿಗೆ 2023ನೇ ಸಾಲಿನ ಪ್ರಶಸ್ತಿ ಪ್ರಕಟ ಹಾವೇರಿಗೆ 2...

ಹಾವೇರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ

ಹಾವೇರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ ಸದೃಢವಾದ ದೇಹಕ್ಕೆ ಸದೃಢವಾದ...