ಕೊಲೆಯಾದ ಬಸವರಾಜ.
೮ಎಕರೆ ಭೂಮಿ, ೧೦ಲಕ್ಷ ಇನ್ಶುರೆನ್ಸ್ ಹಣಕ್ಕಾಗಿ ನಡೆದ ಕೊಲೆ ರಹಸ್ಯ ಬಯಲು
ಕಾರು ಡಿಕ್ಕಿಪಡಿಸಿ ಓರ್ವನ ಕೊಲೆ, ಯೂಟ್ಯೂಬರ ಸೇರಿ ನಾಲ್ವರ ಬಂಧನ
ಹಾವೇರಿ: ಭೂಮಿ, ಆಸ್ತಿ-ಪಾಸ್ತಿ, ವಿಮಾಪಾಲಿಸಿ ಹಣ ಕಬಳಿಸುವ ಉದ್ದೇಶದಿಂದ ಓರ್ವನನ್ನು ಕಾರು ಡಿಕ್ಕಿ ಪಡಿಸಿ ಕೊಲೆ ಮಾಡಿದ್ದ ಯೂಟ್ಯೂಬರ ಸೇರಿ ನಾಲ್ವರು ಅಪಘಾತದ ಕತೆ ಸೃಷ್ಟಿಸಿದ್ದ ಆರೋಪಿಗಳನ್ನು ಅ.೧೦ರಂದು ಜಿಲ್ಲೆಯ ರಟ್ಟೀಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಸೆ.೨೭ರಂದು ನಡೆದಿತ್ತು ಕೊಲೆ; ರಟ್ಟೀಹಳ್ಳಿಯ ಬಸವರಾಜ ಬೊಮ್ಮಪ್ಪ ಪುಟ್ಟಣ್ಣನವರ(೩೮)ಮೇಲೆ ಸೆ.೨೭ರಂದು ರಟ್ಟಿಹಳ್ಳಿ -ಚಿಕ್ಕಯಡಚಿ ರಸ್ತೆಯ ಬಣಕಾರ ಮನೆ ಕ್ರಾಸ್ ಹತ್ತಿರ ರಸ್ತೆಯ ಮೇಲೆ ಯಾವುದೋ ವಾಹನದ ಚಾಲಕನು ತಾನು ಚಲಾಯಿಸುತ್ತಿದ್ದ ವಾಹನವನ್ನು ಅತೀಜೋರಿನಿಂದ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಅಪಘಾತಪಡಿಸಿ ಭಾರೀ ಸ್ವರೂಪದ ಗಾಯ ಪಡಿಸಿ ಸ್ಥಳದಲ್ಲಿಯೇ ಮರಣ ಹೊಂದುವಂತೆ ಮಾಡಿ ಅಪಘಾತದ ಸುದ್ದಿಯನ್ನು ತಿಳಿಸದೇ ಹೋಗಿದ್ದ.
ಈ ಬಗ್ಗೆ ಮೃತ ಬಸವರಾಜನ ಸಂಬಂಧಿ ಶಿವಕುಮಾರ ಪುಟ್ಟಣ್ಣನವರ ರಟ್ಟೀಹಳ್ಳಿ ಪೊಲೀಸ್‌ಠಾಣೆಯಲ್ಲಿ ದೂರು ದಾಖಲಿಸಿದ್ದ, ಈ ಬಗ್ಗೆ ತನಿಖೆ ಕೈಗೊಂಡ ಪೊಲೀಲಿಸರಿಗೆ ಬಸವರಾಜನ ಸಾವು ಆಗಿರುವುದು ಅಪಘಾತದಿಂದಲ್ಲ ಇದೊಂದು ವ್ಯವಸ್ಥಿತ ಕೊಲೆ ಎನ್ನುವುದು ದೃಢಪಟ್ಟಿದೆ.
ಅ.೮ರಂದು ಕೊಲೆಯ ರಹಸ್ಯ ಬಯಲು: ಮೃತ ಬಸವರಾಜನ ಸಂಬಂಧಿ ಶಿವಕುಮಾರ ಅ.೦೮-೨೦೨೫ ರಂದು ಪೊಲೀಸ್‌ಠಾಣೆಗೆ ಹಾಜರಾಗಿ ಲಿಖಿತ ಹೇಳಿಕೆ ನೀಡಿ “ಕೊಲೆಯಾದ ಬಸವರಾಜನ ತಂದೆ, ತಾಯಿ ಹಾಗೂ ಅಣ್ಣಂದಿರು ಕಾಯಿಲೆಯಿಂದ ತೀರಿಕೊಂಡಿದ್ದು, ಮೃತನಿಗೆ ಸಂಬಂಧಿಸಿದ ೦೮ ಎಕರೆ ಆಸ್ತಿ ಮತ್ತು ಮನೆಯನ್ನು ಹಾಗೂ ಮೃತನ ಹೆಸರಿನಲ್ಲಿ ೧೦ ಲಕ್ಷ ರೂ ಆಕ್ಸಿಡೆಂಟಲ್ ಪಾಲಸಿಯ ಹಣವನ್ನು ಕಬಳಿಸುವ ಉದ್ದೇಶದಿಂದ ಕೊಲೆ ನಡೆದಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾನೆ’.
ತನಿಖೆಯ ವೇಳೆ ಬಸವರಾಜನ ಬಳಿ ಇದ್ದ ಆಸ್ತಿ, ಹಣಕ್ಕಾಗಿ ಬಸವರಾಜ್ ಮಾವ ಸಿದ್ದನಗೌಡ ಕೊಲೆ ಮಾಡಿದ್ದು, ವಿಚಾರಣೆ ವೇಳೆ ಬಯಲಾಗಿದೆ.
ರಟ್ಟೀಹಳ್ಳಿಯ ಕೇಬಲ್ ಆಪರೇಟರ್ ಹಾಗೂ ಜೀವನ ನೆರಳು ಯೂಟ್ಯೂಬ ವರದಿಗಾರ ರಾಘವೇಂದ್ರ ಈರಪ್ಪ ಮಾಳಗೊಂಡರ, ಸಿದ್ದು @ ಸಿದ್ದನಗೌಡ ಮಂಜಪ್ಪ ಹಲಗೇರಿ, ದಾವಣಗೆರೆ ಜಿಲ್ಲೆಯ ಬಾಡಕಂದಗಲ್ಲು ಗ್ರಾಮದ ಪ್ರವೀಣ ಜಯಪ್ಪ, ರಟ್ಟೀಹಳ್ಳಿ ತಾಲೂಕಿನ ಕಡೂರುಗ್ರಾಮದ ಲೊಕೇಶ ರಾಜಪ್ಪ ಬೆಟ್ಟಣ್ಣನವರ ಆರೋಪಿತರು ಮೃತನ ಆಸಿ, ಮನೆಯನ್ನು ಮತ್ತು ಆಕ್ಸಿಡೆಂಟಲ್ ಇನ್ಸೂರೆನ್ಸ್ ಹಣವನ್ನು ಕಬಳಿಸುವ ಉದ್ದೇಶದಿಂದ ಕೊಲೆ ಮಾಡಿದ ಬಗ್ಗೆ ಸಂಶಯ ವ್ಯಕ್ತ ಪಡಿಸಿದ್ದಾನೆ.
ಆರೋಪಿಗಳು ಬಸವರಾಜ್‌ನನ್ನು ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ್ದರು. ಬಸವರಾಜ್‌ನ ಶವವನ್ನು ಮಣ್ಣು ಮಾಡುವ ಬದಲು ಆರೋಪಿಗಳು ಸುಡಲು ಮುಂದಾದಾಗ, ಬಸವರಾಜ್ ಸಹೋದರ ಸಂಬಂಧಿ ಶಿವಕುಮಾರ್‌ಗೆ ಸಂಶಯ ಬಂದಿತ್ತು. ಈ ಕುರಿತಂತೆ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರ ತನಿಖೆಯಲ್ಲಿ ಕೃತ್ಯ ಬಯಲಾಗಿದೆ. ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದಾರೆ. ತಮ್ಮ ಅಪರಾಧವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಬಸವರಾಜ್ ಸಹೋದರ ಸಂಬಂಧಿಕರು ಯಾವುದೇ ಆಸ್ತಿ ಮಾರಾಟ ಮಾಡದಂತೆ ಕೋರ್ಟ್ ಸ್ಟೇ ಮಾಡಿಸಿದ್ದರು. ಮದ್ಯ ವ್ಯಸನಿಯಾಗಿದ್ದ ಬಸವರಾಜ್ ಒಬ್ಬಂಟಿಯಾಗಿ ಜೀವನ ಮಾಡುತ್ತಿದ್ದ. ಈ ವ್ಯಕ್ತಿಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಆಸ್ತಿ ಇತ್ತು. ಜತೆಗೆ ಆಕ್ಸಿಡೆಂಟಲ್ ಇನ್ಸೂರೆನ್ಸ್ ಮಾಡಿಸಿದ್ದ. ಆದರೆ, ಆತ ಮದ್ಯ ವ್ಯಸನಿಯಾಗಿದ್ದ. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಮಾವ ಸಿದ್ದನಗೌಡ ಹಣದ ಆಸೆಗಾಗಿ ಪ್ಲ್ಯಾನ್ ಮಾಡಿ ಮನೆಯಿಂದ ಕರೆದುಕೊಂಡು ಹೋಗಿ ಕಂಠಫೂರ್ತಿ ಕುಡಿಸಿ ಬೈಕ್‌ನಲ್ಲಿ ಊರಿಗೆ ಕಳಿಸಿದ್ದರು. ನಂತರ ಬಸವರಾಜ್‌ನ ಹಿಂದೆ ಕಾರಿನಿಂದ ಡಿಕ್ಕಿ ಹೊಡಿಸಿ ಅಪಘಾತ ಎಂದು ಬಿಂಬಿಸಿದ್ದರು ಎಂದು ತನಿಖೆ ವೇಳೆ ಬಯಲಾಗಿದೆ.
ಈ ಕೊಲೆಯ ಬಗ್ಗೆ ತನಿಖೆ ನಡೆಸಲು ನೇಮಿಸಲಾಗಿದ್ದ ತನಿಖಾ ತಂಡವು ೨೪ ಗಂಟೆಯಲ್ಲಿ ಕೊಲೆಯ ರಹಸ್ಯ ಬಯಲಿಗೆ ಎಳೆದಿದೆ. ಮೃತನ ಆಸ್ತಿ ಮನೆಯನ್ನು ಮತ್ತು ಆಕ್ಸಿಡೆಂಟಲ್ ಇನ್ಸೂರೆನ್ಸ್ ಹಣವನ್ನು ಕಬಳಿಸುವ ಉದ್ದೇಶದಿಂದ ಮೃತನಿಗೆ ಕಾರಿನಿಂದ ಡಿಕ್ಕಿ ಮಾಡಿ ಕೊಲೆ ಮಾಡಿದ ಆರೋಪಿತರಾದ ಕೇಬಲ್ ಆಪರೇಟರ್ ಹಾಗೂ ಜೀವನ ನೆರಳು ಯೂಟ್ಯೂಬ ವರದಿಗಾರ ರಾಘವೇಂದ್ರ ಈರಪ್ಪ ಮಾಳಗೊಂಡರ, ಸಿದ್ದು @ ಸಿದ್ದನಗೌಡ ಮಂಜಪ್ಪ, ಹಲಗೇರಿ, ಪ್ರವೀಣ ಜಯಪ್ಪ, ಲೊಕೇಶ ರಾಜಪ್ಪ ಬೆಟ್ಟಣ್ಣನವರ ಇವರನ್ನು ಪತ್ತೆ ಮಾಡಿ ಇವರಿಂದ ಮೊಬೈಲ್‌ಗಳು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಒಂದು ಕಾರು ಮತ್ತು ಒಂದು ಮೋಟಾರ ಸೈಕಲನ್ನು ಜಪ್ತು ಮಾಡಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಕೊಲೆ ಮಾಡಿದ ಆರೋಪಿತರನ್ನು ಪತ್ತೆ ಮಾಡಿದ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

—