ಹಾವೇರಿಯ ವಿವಿಧ ಮಾಲ್ ಗಳ ಲಾಭ್ ಮಾಲೀಕರ ಜೇಬಿಗೆ……ಆದರೆ ಮಾಲ್ ಗಳ ಕಸ್ ಮಾತ್ರ ಹೆಗ್ಗೇರೆಕೆರೆ ಒಡಲಿಗೆ‌…….ಇದನ್ನು ಕೇಳೋರು ಹಾವೇರಿ ಯಲ್ಲಿ ಯಾರು ಇಲ್ಲವೇ?

Date:

ಹಾನಿಕಾರಕ ಔಷಧೀಯ ತ್ಯಾಜ್ಯ ಕೆರೆಯ ಒಡಲಿಗೆ
ನಗರದ ಮಾಲ್‌ಗಳ ತ್ಯಾಜ್ಯ ಹೆಗ್ಗೆರಿ ಕೆರೆಗೆ
ಹಾವೇರಿ: ನಗರದ ಬಹುತೇಕ ಮಾಲ್‌ಗಳ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಔಷಧ ಅಂಗಡಿಗಳ ಹಾನಿಕಾರಕ ಔಷಧೀಯ ತ್ಯಾಜ್ಯವೂ ಕೂಡಾ ಸಮೀಪದ ಹೆಗ್ಗೆರಿ ಕೆರೆಯ ಒಡಲು ಸೇರುತ್ತಿದೆ.
ನಗರದ ಸ್ವಚ್ಚತೆಯೇ ನಮ್ಮ ಧೇಯ ಎನ್ನುವ ನಗರಸಭೆ ವೇದವಾಕ್ಯ ಕೇವಲ ಮಾತಿಗಷ್ಟೇ ಸಿಮಿತವಾಗಿದೆ. ನಗರಸಭೆಯ ಬೇಜಾವ್ದಾರಿಯಿಂದ ನಗರದ ಶಾಪಿಂಗ್ ಮಾಲ್‌ಗಳ ಮತ್ತು ಔಷಧೀಯ ಅಂಗಡಿಗಳ ತ್ಯಾಜ್ಯ ನಿತ್ಯ ಹೆಗ್ಗೆರಿ ಕೆರಯ ಒಡಲು ಸೇರುವಂತಾಗಿದೆ.
ನಗರದ ಮುನ್ಸಿಪಲ್ ರಸ್ತೆಯ ವಿಶಾಲ್ ಮಾರ್ಟ್‌ನ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೆಗ್ಗೆರಿ ಕೆರೆಗೆ ನಿತ್ಯ ಹಾಕಲಾಗುತ್ತಿದೆ. ಅಲ್ಲದೇ, ನಗರದ ಬಹುತೇಕ ಮಾಲ್‌ಗಳ ತ್ಯಾಜ್ಯವನು ಕೂಡಾ, ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜೀವನಾಡಿ ಕೆರೆಯಾದ ಹೆಗ್ಗೆರಿ ಕೆರೆಗೆ ಹಾಕಲಾಗುತ್ತಿದೆ.
ಆದರೆ, ವಿಶಾಲ್ ಮಾರ್ಟ್‌ನ ಸಿಬ್ಬಂದಿಯ ಹೇಳಿಕೆ ಮಾತ್ರ ತದ್ವಿರುದ್ಧವಾಗಿದೆ. ನಗರಸಭೆಯ ಸಿಬ್ಬಂದಿಯು ಪ್ರತಿದಿನ ಬೆಳಿಗ್ಗೆ ಬೇಗನೇ ಬಂದು ಹೋಗುತ್ತಾರೆ. ಅಷ್ಟು ಬೇಗ ನಮ್ಮ ಮಾರ್ಟ್‌ನ ಸಿಬ್ಬಂದಿ ಬಂದಿರುವುದಿಲ್ಲ. ಅಲ್ಲದೇ, ನಗರಸಭೆಯ ವಾಹನವೂ ಕೂಡಾ ನಮ್ಮ ಮಾಲ್‌ನ ಒಳಗೆ ಬರಲು ಸಾಧ್ಯವಿಲ್ಲ, ಹೀಗಾಗಿ, ನಮ್ಮ ಮಾರ್ಟ್‌ನ ತ್ಯಾಜ್ಯವನ್ನು ನಾವೇ ಸ್ವತಃ ತ್ಯಾಜ್ಯವಿಲೇವಾರಿ ಘಟಕಕ್ಕೆ ಹಾಕಿಸುತ್ತೇವೆ ಎಂದು ವಿಶಾಲ್‌ಮಾರ್ಟ್‌ನ ಸ್ಟೋರ್ ಕೀಪರ್ ಪ್ರವೀಣ ತಿಳಿಸಿದರು.
ಹೆಗ್ಗೆರಿ ಕೆರೆಯು ಈ ವರ್ಷದ ಮುಂಗಾರಿನಲ್ಲಿ ಎರಡು ಭಾರಿ ತುಂಬಿ ಕೋಡಿ ಬಿದ್ದಿದು, ರೈತರ ಮೊಖದಲ್ಲಿ ಮಂದಹಾಸವನ್ನು ಮೂದಿಸಿದೆ. ಆದರೆ, ನಗರದ ತ್ಯಾಜ್ಯವನ್ನು ಕೆರೆಯ ಒಡಲಿಗೆ ಸೇರಿಸುತ್ತಿರುವದನ್ನು ಕಂಡು ಅವರೆಲ್ಲರೂ ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲಾ ಕೇಂದ್ರದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೇ, ಈ ಕೆರೆಯು ಸುಮಾರು ೯೦೦ ಏಕರೆಗೂ ಹೆಚ್ಚು ವಿಶಾಲವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆರೆಯ ಅಕ್ಕಪಕ್ಕದಲ್ಲಿ ಅನೈತಿಕ ಚಟುವತಿಕೆಗಳು ಹೆಚ್ಚಾಗುತ್ತಿರುವುದರಿಂದ, ಸ್ಥಳೀಯರು ಕೆರೆಯ ಸಮೀಪವೂ ಹೋಗಲು ಹಿಂಜರಿಯುವಂತಾಗಿದೆ.
ಹೆಗ್ಗೆರಿ ಕೆರೆಯ ಸುತ್ತಲೂ ಉತ್ತಮವಾದ ಪರಿಸರವಿದೆ. ಆದರೆ, ರಾಶಿಗಟ್ಟಲೆ ಕಸ, ತ್ಯಾಜ್ಯವನ್ನು ಕೆರೆಯ ರಸ್ತೆಯ ಬದಿಯಲ್ಲಿಯೇ ಹಾಕುತ್ತಿರುವುದರಿಂದ, ಕೆರೆಗೆ ಹೋಗುವ ಮನಸ್ಸೂ ಕೂಡಾ ಬರುವುದಿಲ್ಲ ಎಂದು ಸ್ಥಳೀಯ ರೈತ ಹನುಮಂತಪ್ಪ ಬಿಜ್ಜೂರ ತಿಳಿಸಿದರು.
ಪ್ರಾಣಿಗಳ ಕಳೆಬರಹ : ನಗರದಿಂದ ಕೆರಿಮತ್ತಿಹಳ್ಳಿ ರಸ್ತೆಯ ಮಾರ್ಗವಾಗಿ ಹೆಗ್ಗೆರಿ ಕೆರೆಗೆ ಹೋಗುವ ದಾರಿಯುದ್ದಕೂ, ಸತ್ತ ನಾಯಿ, ಹಂದಿ ಹಾಗೂ ಪ್ರಾಣಿಗಳ ದೇಹವು ಕೊಳೆತು ನಾರುತ್ತಿರುತ್ತದೆ. ಹೀಗಾಗಿ, ಆ ಮಾರ್ಗವಾಗಿ ಹೋಗುವ ಸಾಹಸಕ್ಕೂ ನಾವು ಹೋಗುವುದಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಸಿಮೆಂಟ್ ತ್ಯಾಜ್ಯ ಕೆರೆಗೆ : ನಗರದಲ್ಲಿ ನಡೆಯುತ್ತಿರುವ ಮನೆ ಹಾಗೂ ವಾಣಿಜ್ಯ ಕಟ್ಟಡಗಳ ಕಾಮಗಾರಿಗಳಲ್ಲಿ ಬೇಡವಾದ ಮಣ್ಣು, ಪಿಒಪಿ ತ್ಯಾಜ್ಯ ಹಾಗೂ ಹಾಳಾದ ಪೀಠೋಪಕರಣಗಳು ಕೆರೆಯ ಪರಿಸರಕ್ಕೆ ಮಾರಕವಾಗಿದೆ.
ರಸ್ತೆ ದುರಸ್ತಿ : ಜಿಲ್ಲಾ ಕೇಂದ್ರದಿಂದ ಹೆಗ್ಗೇರಿ ಕೆರೆಗೆ ಹೋಗಲು ಸರಿಯಾದ ರಸ್ತೆಯೂ ಕೂಡಾ ಇಲ್ಲದಾಗಿದೆ. ಇರುವ ಡಾಂಬರ್ ರಸ್ತೆ ಸಂಪೂರ್ಣ ಹಾಳಾಗಿದ್ದು, ಅಕ್ಕಪಕ್ಕದ ಮುಳ್ಳಿನ ಬೆಲಿಗಳು ನಡು ರಸ್ತೆಯ ವರೆಗೂ ಬೆಳೆದುಕೊಂಡಿವೆ. ಇದರಿಂದ ಜನರು ಕೆರೆಗೆ ಹೋಗಲು ಹರಸಾಹಸ ಪಡುತ್ತಿದ್ದಾರೆ.

ಬಾಕ್ಸ್೧
ನಮ್ಮ ವಿಶಾಲ್ ಮಾರ್ಟ್‌ನ ಸಂಪೂರ್ಣ ತ್ಯಾಜ್ಯವನ್ನು ತಿಂಗಳಲ್ಲಿ ಎರಡು ಬಾರಿ, ನಮ್ಮ ವಾಹನದಲ್ಲಿಯೇ ತ್ಯಾಜ್ಯವಿಲೇವಾರಿ ಘಟಕಕ್ಕೆ ಕಳುಹಿಸುತ್ತೇವೆ.
ಪ್ರವೀಣ, ವಿಶಾಲ್‌ಮಾರ್ಟ್, ಸ್ಟೋರ್ ಕೀಪರ್

ಬಾಕ್ಸ್೨
ನಗರದ ಎಲ್ಲ ಮಾರ್ಟ್‌ಗಳ ತ್ಯಾಜ್ಯವನ್ನು ನಗರಸಭೆಯ ವಾಹನಗಳಿಗೆ ಹಾಕುವಂತೆ ಸೂಚನೆ ನೀಡಲಾಗಿದೆ. ಯಾವ ಮಾರ್ಟ್‌ಗಳು ನಮ್ಮ ವಾಹನಕ್ಕೆ ಕಸವನ್ನು ನೀಡುವುದಿಲ್ಲವೋ ಅಂತಹ ಮಾರ್ಟ್‌ಗಳಿಗೆ, ೨ ಲಕ್ಷರೂ ವೆಚ್ಚದ ಕಸ ಸಂಸ್ಕರಣಾ ಯಂತ್ರವನ್ನು ಖರೀದಿಸುವಂತೆ ನಗರಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
-ಶ್ರೀಮತಿ ಶಶಿಕಲಾ ರಾಮು ಮಾಳಗಿ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿಗೆ 2 “ಮಕ್ಕಳ ಚಂದಿರ ಪ್ರಶಸ್ತಿ”

ಕಾಡುಮೇಡು ಹಾಗೂ ಬೆರಗು ಕೃತಿಗಳಿಗೆ 2023ನೇ ಸಾಲಿನ ಪ್ರಶಸ್ತಿ ಪ್ರಕಟ ಹಾವೇರಿಗೆ 2...

ಹಾವೇರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ

ಹಾವೇರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ ಸದೃಢವಾದ ದೇಹಕ್ಕೆ ಸದೃಢವಾದ...

10 ಕೋಟಿ ರೂ. ಗಳ ವೆಚ್ಚದಲ್ಲಿ ಕನವಳ್ಳಿ ಗ್ರಾಮದ ಅಭಿವೃದ್ಧಿ. ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ.

10 ಕೋಟಿ ರೂ. ಗಳ ವೆಚ್ಚದಲ್ಲಿ ಕನವಳ್ಳಿ ಗ್ರಾಮದ ಅಭಿವೃದ್ಧಿ. ಉಪಸಭಾಧ್ಯಕ್ಷ...