೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ

Date:

ಹಾವೇರಿ: ೨೦೨೮ ವಿಧಾನಸಭೆ ಚುನಾವಣೆಯಲ್ಲಿ ಬ್ಯಾಡಗಿ ಮತಕ್ಷೇತ್ರದಿಂದ ಪುನ: ಸ್ಪರ್ಧಿಸುವೆ, ಪಕ್ಷ ಕೂಡ ನನಗೆ ಟಿಕೇಟ್ ನೀಡಲಿದೆ. ಮತಕ್ಷೇತ್ರದಲ್ಲಿ ಕೆಲ ರಾಜಕೀಯ ವಿರೋಧಿಗಳು ನನ್ನ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಅರಣ್ಯ ಅಭಿವೃದ್ದಿ ನಿಗಮ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.
ಭಾನುವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ
ಸುದ್ದಿಗೋಷ್ಠಿ ಮಾತನಾಡಿದರು. ೪ ದಶಕಗಳ ಕಾಲ ರಾಜಕೀಯ ಜೀವನದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳೊಂದಿಗೆ ಜನತೆ ವಿಶ್ವಾಸ ಗಳಿಸಿರುವೆ. 
೮ ಬಾರಿ ವಿಧಾನಸಭೆಗೆ ಸ್ಪರ್ಧಿಸಿ, ೪ ಬಾರಿ ಗೆಲುವು ಪಡೆದಿರುವೆ. ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿರುವೆ. ಹಾವೇರಿ ೨, ಬ್ಯಾಡಗಿ ೨ ಅವಧಿಯಲ್ಲಿ ಶಾಸಕನಾಗಿ ಕ್ಷೇತ್ರದ ಜನತೆಯ ಮೆಚ್ಚುಗೆ ಪಡೆದಿರುವೆ. ಕಳೆದ ಎರಡು ತಿಂಗಳ ಹಿಂದೆ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದು, ವೈದ್ಯರ ಸಲಹೆಯಂತೆ ೨ ತಿಂಗಳ ವಿಶ್ರಾಂತಿಯಲ್ಲಿದ್ದೆ. ಅನಿವಾರ್ಯವಾಗಿ ಕ್ಷೇತ್ರದ ಕಾರ್ಯಕ್ರಮಗಳಿಂದ ದೂರ ಉಳಿದಿದ್ದೆ, ಇಂದಿನಿಂದ ಎಲ್ಲ ಸಭೆ, ಸಮಾರಂಭಗಳಿಗೆ ತೆರಳುತ್ತಿರುವೆ. ಆದರೆ ಕೆಲ ರಾಜಕೀಯ ವಿರೋಧಿಗಳು ನನ್ನ ಆರೋಗ್ಯ ಸರಿಯಿಲ್ಲ, ಚುನಾವಣೆಯಲ್ಲಿ ಶಿವಣ್ಣನವರ ಸ್ಪರ್ಧೆ ಕುರಿತು ಸುಳ್ಳು ಸುದ್ದಿ ಪ್ರಚಾರ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆ ಸೇರಿದಂತೆ ಸುಮಾರು ೨ ಸಾವಿರಕೋ.ರೂ ಕ್ಷೇತ್ರದಲ್ಲಿ ಅನುದಾನ ಹರಿದು ಬಂದಿದೆ. ೩ ವರ್ಷದ ಅವಧಿಯಲ್ಲಿ ಗುಡ್ಡದಮಲ್ಲಾಪುರ ಏತ ನೀರಾವರಿ ಪೈಪಲೈನ್, ಮುಖ್ಯರಸ್ತೆ ಕಾಮಗಾರಿ, ಸಾವಿರಾರು ನಿರಾಶ್ರಿತರಿಗೆ ನಿವೇಶನಗಳ ಹಕ್ಕುಪತ್ರ, ಆಕ್ರಮ ಸಕ್ರಮ ಭೂ ಸಾಗುವಳಿದಾರರಿಗೆ ಹಕ್ಕುಪತ್ರ, ಶಾಲಾ ಕಾಲೇಜುಗಳ ಕಟ್ಟಡಕ್ಕೆ ಅನುದಾನ, ಶಾದಿಮಹಲ್, ದೇವಸ್ಥಾನಗಳ ಜೀರ್ಣೊದ್ದಾರ, ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ, ಕೆಪಿಎಸ್ ಶಾಲೆ, ವಸತಿ ನಿಲಯ ಆರಂಭ, ಕಟ್ಟಡಕ್ಕೆ ಅನುದಾನ ಸೇರಿದಂತೆ ಸಾಕಷ್ಟು ಅಭಿವೃದ್ದಿ ಯೋಜನೆಗಳನ್ನು ನನ್ನ ಕ್ಷೇತ್ರದಲ್ಲಿ ತಂದಿರುವೆ. 
೫೦ಕೋ.ರೂ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ೨೫ ಕೋ.ರೂ ರಸ್ತೆ ಕಾಮಗಾರಿಗೆ ಹಾನಗಲ್ಲ ಕುಮಾರಸ್ವಾಮಿಗಳ ಜನ್ಮಸ್ಥಳ ಜೋಯಿಸರಹಳ್ಳಿ ಮಠದ ಅಭಿವೃದ್ದಿಗೆ ೨ ಕೋ.ರೂ ಸೇರಿದಂತೆ ಸಾವಿರಾರು ಕೋ.ರೂ ಅನುದಾನ ಪ್ರಸಕ್ತ ಅವಧಿಯಲ್ಲಿ ಮಂಜೂರಾಗಿದೆ. ಬ್ಯಾಡಗಿ ಮತಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ ನನಗೆ ಅಪಾರ ಕಾರ್ಯಕರ್ತರ, ಅಭಿಮಾನಿಗಳು, ಸಾರ್ವಜನಿಕರ ಬೆಂಬಲವಿದ್ದು, ಎಲ್ಲರ ಪ್ರೀತಿ ವಿಶ್ವಾಸ ಗಳಿಸಿರುವೆ.
ಯಾವುದೇ ಕಾರಣಕ್ಕೂ ೨೦೨೮ ವಿಧಾನಸಭೆ ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ, ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುವ ಕುರಿತು ಸ್ಪಷ್ಟತೆ ವ್ಯಕ್ತಪಡಿಸಿದರು.
ಮುಖ್ಯರಸ್ತೆ ಕಾಮಗಾರಿ ಒಂದೆ ತಿಂಗಳಲ್ಲಿ ಆರಂಭ: ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಗಜೇಂದ್ರಗಡ ಸೊರಬ ರಾಜ್ಯ ಹೆದ್ದಾರಿ ಹಾಯ್ದು ಹೋಗಿರುವ ಮುಖ್ಯರಸ್ತೆ ವಿಸ್ತರಣೆಗೆ ೧೧ ಕೋ.ರೂ ಭೂ ಪರಿಹಾರ ಮಾಲೀಕರಿಗೆ ತಲುಪಿದೆ. ಇನ್ನುಳಿದ ೧೬ ಕೊ.ರೂ ಹಾಗೂ ರಸ್ತೆ ಕಾಮಗಾರಿಗೆ ೧೩.೫ ಕೋ.ರೂ. ಮುಂದಿನ ಸಚಿವ ಸಂಪುಟದಲ್ಲಿ ಬಿಡುಗಡೆಯಾಗಲಿದೆ. ಗುಡ್ಡದಮಲ್ಲಾಪುರ ಏತನೀರಾವರಿ ಯೋಜನೆ ಪೈಪಲೈನ ಕಾಮಗಾರಿಗೆ ೧೧೫.೬೦ ಕೋ.ರೂ ಒಂದೆ ಹಂತದಲ್ಲಿ ಮಂಜೂರಾಗಲಿದೆ. ಹೊಸ ಬಸ್ಸ ನಿಲ್ದಾಣ ಕಾಮಗಾರಿಗೆ ಶೀಘ್ರದಲ್ಲೆ ಭೂಮಿಪೂಜೆ ನಡೆಯಲಿದೆ, ಬ್ಯಾಡಗಿ ಪಟ್ಟಣದಲ್ಲಿ ಸಿಟಿ ಬಸ್ ಓಡಾಟಕ್ಕೆ ಚಾಲನೆ ಸಿಗಲಿದೆ ಎಂದರು.
ಈ ವೇಳೆ ತಾಲೂಕು ಕಾಂಗ್ರೆಸ ಅಧ್ಯಕ್ಷ ದಾನಪ್ಪ ಚೂರಿ, ವೀರನಗೌಡ್ರ ಪಾಟೀಲ, ಕೆಸಿಸಿ ಬ್ಯಾಂಕ ನಿರ್ಧೆಶಕ ಚನ್ನಬಸಪ್ಪ ಹುಲ್ಲತ್ತಿ, ಗ್ಯಾರಂಟಿ ಯೋಜನೆ ತಾಲೂಕಾಧ್ಯಕ್ಷ ಶಂಭಣ್ಣ ಪಾಟೀಲ, ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ್ ಎರೆಸೀಮೆ, ಡಾ.ಎ.ಎಮ್.ಸೌದಾಗರ, ನಾಗರಾಜ ಆನ್ವೇರಿ, ಖಾದರಸಾಬ ದೊಡ್ಡಮನಿ, ದುರ್ಗೆಶ ಗೋಣೆಮ್ಮನವರ, ಡಿ.ಬಿ.ಬುಡ್ಡನಗೌಡ್ರ, ಲಿಂಗರಾಜ ತಿಮ್ಮಾಪುರ ಇತರರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಾಕೀತು

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ...

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ ಹಾವೇರಿ: ಹಾವೇರಿ...

ಏ. ೧೦ರಂದು ರಾಜ್ಯಾದ್ಯಂತ “ಗ್ಯಾಂಗ್ಸ್ ಆಫ್ ಯುಕೆ” ಚಿತ್ರದ ಬಿಡುಗಡೆ

ಏ. ೧೦ರಂದು ರಾಜ್ಯಾದ್ಯಂತ "ಗ್ಯಾಂಗ್ಸ್ ಆಫ್ ಯುಕೆ" ಚಿತ್ರದ ಬಿಡುಗಡೆ ಹಾವೇರಿ: ಡೆಡ್ಲಿ...

ಹಾವೇರಿ :  ಏಪ್ರಿಲ್ ೧ರಿಂದ ೧೫ರವರೆಗೆ ಸಂಪೂರ್ಣ ಡಿಜಿಟಲ್ ರೂಪದಲ್ಲಿ ಜನಗಣತಿ: ಡಿಸಿ ಡಾ. ವಿಜಯಮಾಹಾಂತೇಶ್ 

ಹಾವೇರಿ :  ಏಪ್ರಿಲ್ ೧ರಿಂದ ೧೫ರವರೆಗೆ ಸಂಪೂರ್ಣ ಡಿಜಿಟಲ್ ರೂಪದಲ್ಲಿ...