ಹೊಸರಿತ್ತಿಯಲ್ಲಿ ಎನ್‌ಇಎಸ್ ಸಂಸ್ಥೆಯಿಂದ ಕೋಟ್ಯಾಂತರ ರೂ ಮೌಲ್ಯದ ಆಸ್ತಿ ಕಬಳಿಕೆ ಆರೋಪ-ಬೃಹತ್ ಪ್ರತಿಭಟನೆ

Date:

ಹಾವೇರಿ: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನಕ್ಕೆ ಹೆಸರಾಗಿರುವ ತಾಲೂಕಿನ ಹೊಸರಿತ್ತಿ ಗ್ರಾಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಆಡಳಿತ ಮಂಡಳಿಯ ಪದಾಧಿಕಾರಿಗಳು ಕೋಟ್ಯಾಂತರ ರೂ ಮೌಲ್ಯದ ಆಸ್ತಿ ಕಬಳಿಸಿದ್ದಾರೆಂದು ಆರೋಪಿಸಿ ಬುಧವಾರ ಗ್ರಾಮಸ್ಥರು, ಹಾಗೂ ಶಿಕ್ಷಣ ಸಂಸ್ಥೆಗಳ ನೂರಾರು ಹಳೆಯ ವಿದ್ಯಾರ್ಥಿಗಳು ಹೊಸರಿತ್ತಿಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡುವ ಎಚ್ಚರಿಕೆ ನೀಡಿದರು.
ಎನ್‌ಇಎಸ್ ಶಿಕ್ಷಣ ಸಂಸ್ಥೆಯ ಜಾಗ ಕಬಳಿಕೆ ವಿರುದ್ಧ ಹಳೇ ವಿದ್ಯಾರ್ಥಿಗಳು, ಕರವೇ ಸ್ವಾಭಿಮಾನಿ ಬಳಗ, ನಿವೃತ್ತ ಶಿಕ್ಷಕರು ಸೇರಿದಂತೆ ನೂರಾರು ಗ್ರಾಮಸ್ಥರು ಹೋರಾಟದ ಕಹಳೆ ಮೊಳಗಿಸಿದ್ದಾರೆ. ಗ್ರಾಮದ ಅತಿಥಿ ಗೃಹದಿಂದ ಮಾರುಕಟ್ಟೆ ರಸ್ತೆ, ಶ್ರೀ ಗುದ್ದಲಿಶಿವಯೋಗಿಶ್ವರ ಮಠದ ರಸ್ತೆ ಮಾರ್ಗವಾಗಿ ಕಬಳಿಕೆಯಾದ ಸಂಸ್ಥೆಯ ಜಾಗದವರೆಗೂ ಬೃಹತ್ ಮೆರವಣಿಗೆ ನಡೆಸಲಾಯಿತು. ಪ್ರತಿಭಟನೆ ಉದ್ದಕ್ಕೂ ಆಡಳಿತ ಮಂಡಳಿಗೆ ಧಿಕ್ಕಾರ, ಎನ್‌ಇಎಸ್ ಉಳಿಸಿ ಘೋಷವಾಕ್ಯಗಳು ಮೊಳಗಿದವು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಎನ್‌ಇಎಸ್ ಉಳಿಸಿ ಹೋರಾಟ ಸಮಿತಿ ಮುಖಂಡ ಸಿದ್ದಣ್ಣ ಕಲಕೋಟಿ ರಾಷ್ಟ್ರೀಯ ಶಿಕ್ಷಣ ಸಮಿತಿ ಪದಾಧಿಕಾರಿಗಳು ಅಕ್ರಮವಾಗಿ ಸಂಸ್ಥೆಯ ಜಾಗೆ ಕಬಳಿಸಿದ್ದನ್ನು ಕೂಡಲೇ ವಾಪಾಸ್ ಕೊಡಬೇಕು ಹಾಗೂ ಮೂರು ದಿನಗಳಲ್ಲಿ ಸಂಸ್ಥೆಯ ಪದಾಧಿಕಾರಿಗಳ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಇಲ್ಲದಿದ್ದರೆ ಲೋಕಾಯುಕ್ತರಿಗೆ ದೂರು ನೀಡಿ ಕಾನೂನು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಪದಾಧಿಕಾರಿಗಳು ಕಾನೂನು ಬಾಹಿರವಾಗಿ ಸಂಸ್ಥೆಯ ಕೋಟ್ಯಾಂತರ ಬೆಳೆಬಾಳುವ ಆಸ್ತಿಯನ್ನು ಕಬಳಿಸಿದ್ದು, ಸಂಸ್ಥೆಯ ಪದಾಧಿಕಾರಿಗಳಾಗಿ ಮುಂದುವರೆಸಲು ಅವರಿಗೆ ನೈತಿಕತೆ ಇಲ್ಲ. ಇವರಿಗೆ ಕಾನೂನು, ಸಂಸ್ಥೆಯ ಬೈಲಾದ ಬಗ್ಗೆ ಪರಿಜ್ಞಾನವಿಲ್ಲ, ಇವರು ಆಡಿದ್ದೇ ಆಟವಾಗಿದೆ ಎಂದು ಅವರು ಪದವಿ ಕಾಲೇಜು ನಿರ್ಮಾಣ ನೆಪದಲ್ಲಿ ಶಾಲೆ ಜಾಗ ಗುಳುಂ: ಡಿಗ್ರಿ ಕಾಲೇಜು ಸ್ಥಾಪಿಸಲು ಹಣದ ಅಗತ್ಯವಿತ್ತು. ಹೀಗಾಗಿ ಊರ ಮಧ್ಯದಲ್ಲಿನ ಗ್ರಾ.ಪಂ ಮುಂದಿನ ಎನ್‌ಇಎಸ್ ಶಾಲೆಯ ಭೂಮಿಯನ್ನು ಮಾರಾಟ ಮಾಡಿದ್ದೇವೆ ಎಂದು ಆಡಳಿತ ಮಂಡಳಿ ಹೇಳಿದೆ. ಆದರೆ ಆ ಜಾಗವನ್ನು ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಕೊಳ್ಳಲಾಗಿದೆ ಎಂದು ಅವರು ಖಂಡಿಸಿದರು. ಜಾಗ ಮಾರಾಟದಲ್ಲಿ ಯಾವುದೇ ನಿಯಮ ಪಾಲಿಸದೇ ಸಂಸ್ಥೆಯಲ್ಲಿದ್ದವರೇ ಜಾಗ ಗುಳುಂ ಮಾಡಿದ್ದಾರೆ. ಕೂಡಲೇ ಎನ್‌ಇಎಸ್ ಸಂಸ್ಥೆ ಪದಾಧಿಕಾರಿಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು. ಜಾಗ ಮರಳಿ ಸಂಸ್ಥೆಗೆ ಬಿಟ್ಟು ಕೊಡುವಂತೆ ಅವರು ಆಗ್ರಹಿಸಿದರು.
ಪತ್ರಕರ್ತ ಬಸವರಾಜ ಮರಳಿಹಳ್ಳಿ ಮಾತನಾಡಿ, ಇಂಥಹ ಅಕ್ರಮದಲ್ಲಿ ಭಾಗಿಯಾದವರು ಕಾನೂನಿನ ಹೊರತಾಗಿದ್ದಾರೆಯೋ ಎಂಬ ಅನುಮಾನ ಮೂಡಿದೆ. ಸಂಸ್ಥೆ ಜಾಗ ಲಪಟಾಯಿಸಿದ್ದಲ್ಲದೇ ತಮ್ಮ ದುಡ್ಡಿನಿಂದ ತಾವು ಖರೀದಿಸಿದ್ದಾಗಿ ಸಮರ್ಥನೆ ಸಹ ನೀಡುತ್ತಾರೆ. ಸಾರ್ವಜನಿಕ ಜಾಗ ಸಾರ್ವಜನಿಕ ಉಪಯೋಗಕ್ಕೆ ಆಗಬೇಕೆ ವಿನಃ ಸ್ವಂತಕ್ಕಲ್ಲ ಎಂಬ ಸಾಮಾನ್ಯ ಜ್ಞಾನ, ಕಾನೂನಿನ ಅರಿವು ಎನ್‌ಇಎಸ್ ಆಡಳಿತ ಮಂಡಳಿ ಸದಸ್ಯರಿಗೆ ಇಲ್ಲವಲ್ಲ ಎಂದು ಕಿಡಿ ಕಾರಿದರು.
ಪದಾಧಿಕಾರಿಗಳ ಹೆಸರಿನಲ್ಲಿ ಅಕ್ರಮವಾಗಿ ಜಾಗದ ನೋಂದಣಿ ಆಗಿದೆ. ಮತ್ತೊಂದೆಡೆ ಹೊಸ ಡಿಗ್ರಿ ಕಾಲೇಜು ಕಳಪೆ ಗುಣಮಟ್ಟದಿಂದ ಕೂಡಿರುವುದನ್ನು ಇಡೀ ಗ್ರಾಮಸ್ಥರೇ ಕಂಡಿದ್ದಾರೆ. ಇದೆಲ್ಲ ನೋಡಿ ಸಾಕಾಗಿದ್ದ ಗ್ರಾಮಸ್ಥರು ಇನ್ನೇನು ಹೋರಾಟ ಆರಂಭಿಸಬೇಕು ಆ ಹೊತ್ತಿನಲ್ಲಿ ಮಾತು ಬದಲಿಸುವ ಪದಾಧಿಕಾರಿಗಳು ಒಮ್ಮೆ ರಾಜೀನಾಮೆ ನೀಡುವುದಾಗಿ ಹೇಳಿದರೆ, ಮತ್ತೊಮ್ಮೆ ಜಾಗ ಬಹಿರಂಗ ಹರಾಜಿಗೆ ಸಿದ್ದವೆಂದು ಹೇಳುತ್ತಿದ್ದಾರೆ. ಎನ್‌ಇಎಸ್ ಅನ್ನು ತಾವೇ ಕಟ್ಟಿ ಬೆಳೆಸಿದ್ದೇವೆಂದು ಹೇಳಿಕೊಳ್ಳುವ ಹಿರಿತಲೆಗಳಿಗೂ ಕಾನೂನಿನ ಅರಿವಿಲ್ಲ. ಯಾವ ನಿಯಮ ಪಾಲಿಸಲಾಗಿಲ್ಲ. ಅವರದ್ದು ಸದರಿ ಎನ್‌ಇಎಸ್ ಶಿಕ್ಷಣ ಸಂಸ್ಥೆಗೆ ಕೊಡುಗೆ ಶೂನ್ಯವೆಂದು ಅವರು ಲೇವಡಿ ಮಾಡಿದರು.
ಪ್ರತಿಭಟನೆಯಲ್ಲಿ ನಿವೃತ್ತ ಯೋಧ ಕೆ.ಸಿ.ಕೋರಿ, ನಿವೃತ್ತ ಶಿಕ್ಷಕ ಎಂ.ಸಿ.ಚುರ್ಚಿ, ಶಂಕ್ರಣ್ಣ ಕೋಣನವರ, ದುದ್ದುಸಾಬ್ ನದಾಫ್, ಪ್ರಭಾವತಿ ಕೋಣನವರ, ನಾಗರಾಜ ಮಡಿವಾಳರ, ಬಾಬಣ್ಣ ಮುಂಡರಗಿ, ಸುಭಾಷ್ ಮಾತನಾಡಿದರು. ಪ್ರಭಾವತಿ ಕೋಣನವರ, ನಾಗರಾಜ ಮಡಿವಾಳರ, ಬಾಬಣ್ಣ ಮುಂಡರಗಿ, ಸುಭಾಷ್ ಮಾತನಾಡಿ, ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.ಸಭೆಯಲ್ಲಿ ಲಕ್ಷ್ಮೀ ಜೋಶಿ, ಬಿ.ಎಂ.ಕಿತ್ತೂರ, ಐ.ಜಿ.ಕೋರಿ, ಎಂ.ಜಿ.ಹಳ್ಳಿಕೇರಿ, ಸುರೇಶ ರಾಚನಾಯ್ಕರ್, ಯಲ್ಲನಗೌಡ ಮರಿಗೌಡ್ರ, ಶ್ರೀಕಾಂತ ದೀಪಾಳಿ, ಲೋಕೇಶ ಕುಬಸದ, ಸುರೇಶಗೌಡ ಪಾಟೀಲ ಸೇರಿದಂತೆ ಇತರರು ಇದ್ದರು. ಎನ್ ಇ ಎಸ್ ಉಳಿಸಿ ಹೋರಾಟ ಮುಖಂಡ ಕೆ.ಸಿ.ಕೋರಿ ಕಾರ್ಯಕ್ರಮ ನಿರ್ವಹಿಸಿದರು.
ಪ್ರಕರಣದ ಸಂಕ್ಷಿಪ್ತ ಹಿನ್ನೆಲೆ: ಹೊಸರಿತ್ತಿ ಗ್ರಾಮ ಪಂಚಾಯಿತಿ ಮುಂದೆಯೇ ಎನ್‌ಇಎಸ್ ಶೈಕ್ಷಣಿಕ ಸಂಸ್ಥೆಯ ಜಾಗ ಇದೆ. ಮೊದಲು ಅಲ್ಲಿಯೇ ಸಂಸ್ಥೆ, ಜಿ.ವಿ.ಎಚ್. ಕಾಲೇಜಿನ ಬೃಹತ್ ಆವರಣಕ್ಕೆ ಸ್ಥಳಾಂತರವಾಯಿತು. ಸದರಿ ೨೪ ಗುಂಟೆ ಜಾಗ ಖಾಲಿ ಉಳಿಯಿತು. ಅದರಲ್ಲಿ ಸುಮಾರು ೦೬ ಗುಂಟೆ ಜಾಗವನ್ನು ಭೂಮಿ ಕಬಳಿಕೆ ಅರೋಪ ಎದರಿಸುತ್ತಿರುವ ಎನ್‌ಇಎಸ್ ಸಂಸ್ಥೆ ಪದಾಧಿಕಾರಿಗಳಾದ ’ ಗಿರೀಶ ಅಂಕಲಕೋಟಿ (ಉಪ ಗೌರವಾಧ್ಯಕ್ಷರು), ಮೃತ್ಯುಂಜಯ ವಗ್ಗಣ್ಣನವರ (ಉಪ ಕಾರ್ಯದರ್ಶಿ), ಶರಣಬಸಪ್ಪ ಕೋಡಿಹಳ್ಳಿ (ನಿರ್ದೇಶಕ), ಚಂದ್ರಶೇಖರ ಅರಳಿಹಳ್ಳಿ (ಕಾರ್ಯದರ್ಶಿ), ರಮೇಶ ಏಕಬೋಟೆ (ಕಾರ್ಯಾಧ್ಯಕ್ಷ), ಶಂಭಣ್ಣ ಅರಳಿ (ನಿರ್ದೇಶಕ), ಚನಬಸಪ್ಪ ಹೆಗಡಾಳ ಮತ್ತು ವಿಠಲ್ ಸುಭಾಷ ಏಕಬೋಟೆ ಸೇರಿದಂತೆ ಒಂಬತ್ತು ಮಂದಿಯ ಹೆಸರಿನಲ್ಲಿ ಅಕ್ರಮವಾಗಿ ನೋಂದಣಿ ಮಾಡಿಸಲಾಗಿದೆ. ಇದರಲ್ಲಿ ಸಾಕಷ್ಟು ಅಕ್ರಮ ನಡೆದಿದ್ದಾಗಿ ಮಾಹಿತಿ ಲಭ್ಯವಾಗುತ್ತಿದ್ದಂತೆ ಗ್ರಾಮಸ್ಥರು ಬೀದಿಗಿಳಿದು ಪ್ರತಿಭಟಿಸುತಿದ್ದಾರೆ. ಉಪ ನೋಂದಣಾಧಿಕಾರಿ, ಗ್ರಾ.ಪಂ.ಪಿಡಿಓ ಹಾಗೂ ಇತರ ಅಧಿಕಾರಿಗಳು ಅಕ್ರಮದಲ್ಲಿ ಶಾಮೀಲಾಗಿದ್ದಾರೆಂದು ಆರೋಪಿಸಲಾಗಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ

--      ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ ಹಾವೇರಿ: ಇಲ್ಲಿನ ಜಿಲ್ಲಾ...

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು ಹೊರಟಿದ್ದು...

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ ಹಾವೇರಿ : ಹಾವೇರಿನಗರದಲ್ಲಿ ಕಳೆದ ವಾರದಿಂದ...

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ ಹಾವೇರಿ: ಯುವ ಜನಾಂಗ...