
ಎಸ್‌ಸಿ-ಎಸ್ಟಿ ಮೀಸಲಾತಿ ಪ್ರಮಾಣ ಶೇಕಡ ೫೬ ಕ್ಕೆ ಹೆಚ್ಚಿಸಲು, ಸಂವಿಧಾನದ ೯ನೇ ಶೆಡ್ಯೂಲ್‌ಗೆ ಸೇರಿಸುವ ಕ್ರಮಕ್ಕೆ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಒತ್ತಾಯ
ಬೆಂಗಳೂರು: ಪರಿಶಿಷ್ಟ ಜಾತಿ ಮೀಸಲಾತಿ ಪ್ರಮಾಣ ಶೇಕಡ ೧೫ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣ ಶೇಕಡ ೩ನ್ನು ಕ್ರಮವಾಗಿ ಶೇಕಡ ೧೭ ಮತ್ತು ಶೇಕಡ ೭ ಕ್ಕೆ ಹೆಚ್ಚಿಸಿ ಒಟ್ಟಾರೆ ಮೀಸಲಾತಿ ಪ್ರಮಾಣವನ್ನು ಶೇಕಡ ೫೬ ಕ್ಕೆ ಹೆಚ್ಚಿಸಲು, ಸದರಿ ಕಾನೂನನ್ನು ಸಂವಿಧಾನದ ೯ನೇ ಶೆಡ್ಯೂಲ್ ಗೆ ಸೇರಿಸುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ , ಲೋಕಸಭಾ ಮಾಜಿ ಸದಸ್ಯರಾದ ವಿ.ಎಸ್. ಉಗ್ರಪ್ಪ ಅವರ ನೇತೃತ್ವದಲ್ಲಿ ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಅರ್ಪಿಸಿತು.
ಕರ್ನಾಟಕ ರಾಜ್ಯದ ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಜನಸಂಖ್ಯೆ ಅನುಕ್ರಮವಾಗಿ ೧೭.೧% ಮತ್ತು ೬.೯೫% ಇರುತ್ತವೆ. ಜನಸಂಖ್ಯೆಗೆ ಅನುಗುಣವಾಗಿ ಎಸ್‌ಸಿ ಮತ್ತು ಎಸ್‌ಟಿ ಪಂಗಡದವರಿಗೆ ಮೀಸಲಾತಿ ನೀಡಬೇಕು ಎಂಬುದು ಭಾರತ ಸಂವಿಧಾನದ ನಿರ್ದೇಶನವಾಗಿರುತ್ತದೆ. ಅದರಂತೆ ಲೋಕಸಭೆ, ವಿಧಾನಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲಾಗಿರುತ್ತದೆ. ಕಾನೂನಿನಡಿ ಜನಸಂಖ್ಯೆಗೆ ಅನುಗುಣವಾಗಿ ಕರ್ನಾಟಕ ರಾಜ್ಯದ ಆಯವ್ಯಯದಲ್ಲಿ ಪ್ರತಿ ವರ್ಷ ಎಸ್‌ಸಿ ಮತ್ತು ಎಸ್‌ಟಿ ಪಂಗಡಗಳಿಗೆ ಅನುದಾನ ನೀಡುತ್ತಿದೆ. ರಾಜಕೀಯ ಮೀಸಲಾತಿಯ ಜೊತೆಗೆ ೨೦೦೪-೦೫ ರಿಂದ ಎಸ್‌ಸಿ ಮತ್ತು ಎಸ್‌ಟಿ ಜನಸಂಖ್ಯೆಗೆ ಅನುಗುಣವಾಗಿ ಕೇಂದ್ರ ಸರ್ಕಾರದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುತ್ತಿದೆ.
ಮೀಸಲಾತಿ ಭಿಕ್ಷೆಯಲ್ಲ. ಅದು ಭಾರತ ಸಂವಿಧಾನ ನೀಡಿರುವ ಹಕ್ಕು. ಈ ಕಾರಣಗಳಿಂದ ಕರ್ನಾಟಕ ರಾಜ್ಯದಲ್ಲಿಯೂ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಎಸ್‌ಸಿ ಮತ್ತು ಎಸ್‌ಟಿ ಜನಸಂಖ್ಯೆಗೆ ಅನುಗುಣವಾಗಿ ಅಂದರೆ, ೧೫% ಬದಲು ೧೭%, ೩% ಬದಲು ೭% ಮೀಸಲಾತಿಯನ್ನು ಅನುಕ್ರಮವಾಗಿ ನೀಡಬೇಕೆಂದು ದಶಕಗಳಿಂದ ನಾವುಗಳು ಮಾಡಿದ ಹೋರಾಟಗಳ ಪರಿಣಾಮ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ ೧೬೮೫೨/೨೦೧೫ ರಲ್ಲಿ ೯ ಕರ್ನಾಟಕ ರಾಜ್ಯ ನಾಯಕ ವಿದ್ಯಾರ್ಥಿ ಸಂಘವು ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿಯನ್ನು ಹೆಚ್ಚಿಸಲು ದಾಖಲಿಸಿದ ಮನವಿಯನ್ನು ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿರುವುದರಿಂದ. ಈ ಕುರಿತು ತೀರ್ಮಾನ ಕೈಗೊಳ್ಳಲು ಮತ್ತು ಪ್ರಾಯೋಗಿಕ ದತ್ತಾಂಶವನ್ನು ಸಂಗ್ರಹಿಸಲು ದಿನಾಂಕ: ೨೨/೭/೨೦೧೭ರಂದು ಕರ್ನಾಟಕ ರಾಜ್ಯದ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶ್ರೀ ನಾಗಮೋಹನದಾಸ್‌ರವರ ಆಯೋಗ ನೇಮಿಸಲಾಗಿತ್ತು.
ಆಯೋಗವು ವ್ಯಾಪಕ ಅಧ್ಯಯನ ಕೈಗೊಂಡು ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ಪ್ರಮಾಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ೧೫% ಮತ್ತು ೩% ಬದಲು ೧೭% ಮತ್ತು ೭% ಗೆ ಹೆಚ್ಚಿಸಲು ದಿನಾಂಕ: ೦೨-೦೭-೨೦೨೦ರಂದು ವರದಿ ನೀಡಿತ್ತು. ಈ ವರದಿಯನ್ನು ಅವಲೋಕಿಸಲು ರಾಜ್ಯ ಸರ್ಕಾರ ಮತ್ತೊಂದು ಆಯೋಗವನ್ನು ನ್ಯಾಯಮೂರ್ತಿ ಸುಭಾಷ್ ಆಡಿರವರ ನೇತೃತ್ವದಲ್ಲಿ ನೇಮಕ = ಮಾಡಲಾಗಿತ್ತು. ಆ ಆಯೋಗವು ಸಹ ದಿನಾಂಕ: ೦೭-೧೦-೨೦೨೨ ರಂದು ನೀಡಿದ ವರದಿಯಲ್ಲಿಯೂ ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ೧೭% ಮತ್ತು ೭% ಅನುಕ್ರಮವಾಗಿ ನೀಡಲು ತಿಳಿಸಿತ್ತು. ಈ ಎಲ್ಲಾ ಕಾರಣಗಳಿಂದ ಸರ್ವ ಪಕ್ಷಗಳ ಸಹಕಾರದಿಂದ ರಾಜ್ಯ ಸರ್ಕಾರ “ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಅಧಿನಿಯಮ ೨೦೨೨ ನ್ನು ಜಾರಿಗೆ ತರಲಾಯಿತು.
ಈ ಕಾನೂನು ಜಾರಿಗೊಂಡಾಗಿನಿಂದಲೂ ಈ ಕಾನೂನು ಸಂವಿಧಾನದ ೯ನೇ ಷೆಡ್ಯೂಲ್‌ಗೆ ಸೇರಿಸಿದರೆ ಮಾತ್ರ ಕಾನೂನು ಊರ್ಜಿತವಾಗುತ್ತದೆ. ಇಲ್ಲದಿದ್ದರೆ, ತೊಂದರೆಯಾಗುತ್ತದೆ. ಆದುದರಿಂದ ಈ ಕಾನೂನನ್ನು ೯ನೇ ಷೆಡ್ಯೂಲ್‌ಗೆ ಸೇರಿಸಲು ಕ್ರಮವಹಿಸಲು ನಾವು ಮತ್ತು ಅನೇಕರು ಒತ್ತಾಯ ಮಾಡುತ್ತಾ ಬಂದಿರುತ್ತೇವೆ. ೨೩-೦೩-೨೦೨೩ es ಕಾರಣಗಳಿಂದ ದಿನಾಂಕ: ರಾಜ್ಯ ಸರ್ಕಾರದ ಅಂದಿನ ಮುಖ್ಯ ಕಾರ್ಯದರ್ಶಿಯವರು ಕೇಂದ್ರ ಸರ್ಕಾರದ ಗೃಹ ಇಲಾಖೆಗೆ ಪತ್ರ ಬರೆದು ಸದರಿ ಕಾನೂನನ್ನು ಸಂವಿಧಾನದ ೯ನೇ ಷೆಡ್ಯೂಲ್ ಗೆ ಸೇರಿಸಲು ಮನವಿ ಮಾಡಿದ್ದರು. ಕೇಂದ್ರ ಸರ್ಕಾರದ ಗೃಹ ಇಲಾಖೆಯ ಅಂದಿನ ಮುಖ್ಯ ಕಾರ್ಯದರ್ಶಿಯವರು ಕೇಂದ್ರ ಸರ್ಕಾರದ ಗೃಹ ಇಲಾಖೆಗೆ ಪತ್ರ ಬರೆದು ಸದರಿ ಕಾನೂನನ್ನು ಸಂವಿಧಾನದ ೯ನೇ ಷೆಡ್ಯೂಲ್ ಗೆ ಸೇರಿಸಲು ಮನವಿ ಮಾಡಿದ್ದರು. ಕೇಂದ್ರ ಸರ್ಕಾರದ ಗೃಹ ಇಲಾಖೆಯ ಕಾರ್ಯದರ್ಶಿಯವರು ದಿನಾಂಕ: ೧೧-೦೫-೨೦೨೩ ರಂದು ಸರ್ಕಾರಕ್ಕೆ ಪತ್ರ ಬರೆದು ಸದರಿ ವಿಚಾರ ನಮ್ಮ ಇಲಾಖೆಗೆ ಬರುವುದಿಲ್ಲ. ನೀವು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಮತ್ತು ಬುಡಕಟ್ಟು ಜನಾಂಗ ಇಲಾಖೆಯನ್ನು ಸಂಪರ್ಕಿಸಿ ಪರಿಹಾರ ರೂಪಿಸಿಕೊಳ್ಳಿ ಎಂದು ಬರೆದಿರುತ್ತಾರೆ. ಆದರೆ ರಾಜ್ಯ ಸರ್ಕಾರ ಅನೇಕ ವರ್ಷಗಳ ಕಾಲ ಈ ಹಿನ್ನೆಲೆಯಲ್ಲಿ ಯಾವುದೇ ಕ್ರಮ ಜರುಗಿಸಿರುವುದಿಲ್ಲ. ಕೇಂದ್ರ ಸರ್ಕಾರವೂ ೫೬% ಮೀಸಲಾತಿ ಕಾನೂನನ್ನು ಸಂವಿಧಾನದ ೯ನೇ ಷೆಡ್ಯೂಲ್ ಸೇರಿಸದೆ ಕಾಲಹರಣ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ರಾಜ್ಯದಲ್ಲಿ ಎಸ್‌ಸಿ ಮತ್ತು ಎಸ್‌ಟಿ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಅನೇಕರು ಪಡೆದು ಎಸ್‌ಸಿ ಮತ್ತು ಎಸ್‌ಟಿ ವರ್ಗದ ಸೌಲಭ್ಯಗಳನ್ನು ಕಬಳಿಸುತ್ತಿದ್ದಾರೆ. ಈ ಕಾರಣಗಳಿಂದ ಈ ವರ್ಗಗಳ ಸಬಲೀಕರಣಕ್ಕೆ ಮಾರಕವಾಗಿದೆ.
ಈ ವಿಚಾರವಾಗಿ ಮೊದಲು ಸರ್ವ ಪಕ್ಷಗಳ ಸಭೆಯನ್ನು ಕರೆಯಬೇಕು. ಸರ್ವ ಪಕ್ಷಗಳ ನಿಯೋಗವನ್ನು ಪ್ರಧಾನ ಮಂತ್ರಿಗಳ ಬಳಿಗೆ ಕೊಂಡೊಯ್ಯಬೇಕು. ಉಚ್ಚ ನ್ಯಾಯಾಲಯದಲ್ಲಿ ತಡೆಯಜ್ಞೆ ತೆರವುಗೊಳಿಸಲು ಸಮರ್ಪಕ ವಕೀಲರನ್ನು ನೇಮಕ ಮಾಡಿ ತಡೆಯಾಜ್ಞೆ ತೆರವಿಗೆ ಹಾಕಬೇಕು. ತಡೆಯಾಜ್ಞೆ ತೆರವಾಗದಿದ್ದರೆ, ವಿಶೇಷ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲು ಮಾಡಬೇಕು. ತಡೆಯಾಜ್ಞೆ ತೆರವಾಗದಿದ್ದರೆ, ವಿಶೇಷ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲು ಮಾಡಬೇಕು. ಈ ವಿಚಾರವಾಗಿ ಎಸ್‌ಸಿ ಮತ್ತು ಎಸ್‌ಟಿ ಹಾಗೂ ಇತರೆ ಹಿಂದುಳಿದ ವರ್ಗಗಳ ಜನ ಪ್ರತಿನಿಧಿಗಳ ಮತ್ತು ನಾಯಕರುಗಳ ತುರ್ತು ಸಭೆ ಕರೆದು ಈ ವಿಚಾರವಾಗಿ ಚರ್ಚೆ ನಡೆಸಬೇಕು. ಎಸ್‌ಸಿ ಮತ್ತು ಎಸ್‌ಟಿ ವರ್ಗಗಳ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಲಕ್ಷಾಂತರ ಜನರು ಪಡೆದು ಸೌಲಭ್ಯಗಳನ್ನು ಪಡೆಯುತ್ತಿರುವವರ ಮೇಲೆ ಮತ್ತು ಸುಳ್ಳು ಜಾತಿ ಪ್ರಮಾಣ ಪತ್ರ ಗಳನ್ನು ನೀಡುತ್ತಿರುವ ಅಧಿಕಾರಿಗಳ ಮೇಲೆ ಕೂಡಲೇ ಕ್ರಮ ಜರುಗಿಸಬೇಕು. ಈ ಕ್ರಮಗಳನ್ನು ಮುಖ್ಯ ಮಂತ್ರಿಗಳು ಮತ್ತು ಸರ್ಕಾರ ತೆಗೆದುಕೊಂಡು ಈ ವರ್ಗಗಳಿಗೆ ನ್ಯಾಯ ಕೊಡಿಸಬೇಕೆಂದು
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲೆ ನಮ್ಮ ರಾಜ್ಯದ ಎಲ್ಲಾ ಸಂಸದರು. ಶಾಸಕರು ಮತ್ತು ಮಂತ್ರಿಗಳು ಒತ್ತಡ ತಂದು ೫೬% ಮೀಸಲಾತಿಯ ಕಾನೂನನ್ನು ಸಂವಿಧಾನದ ೯ನೇ ಷೆಡ್ಯೂಲ್ ಗೆ ಸೇರಿಸಲು ಹೋರಾಟ ಮಾಡಲು ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆಯ ಪದಾಧಿಕಾರಿಗಳು, ಮಠಾಧೀಶರು ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

