
ಉಪಚುನಾವಣೆ ಫಲಿತಾಂಶ ೨೦೨೮ರ ಚುನಾವಣೆಗೆ ದಿಕ್ಕೂಚಿ; ಸಲೀಂ ಅಹ್ಮದ್
ಹಾವೇರಿ: ಇತ್ತೀಚೆಗೆ ನಡೆದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಗಳಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ಆಶರ‍್ವಾದ ಮಾಡಿದ್ದು, ೨೦೨೮ಕ್ಕೆ ೨ ರಾಜ್ಯದಲ್ಲಿ ಮತ್ತೆ ನಮ್ಮ ಕಾಂಗ್ರೆಸ್ ರ‍್ಕಾರ ಅಧಿಕಾರಕ್ಕೆ ಬರಲು -. ಇದು ದಿಕ್ಕೂಚಿಯಾಗಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ – ಸಲೀಂ ಅಹ್ಮದ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ. – ಈಫಲಿತಾಂಶ ಮುಂದಿನ ೨೦೨೮ರ ಚುನಾವಣೆಗೆ ದಿಕ್ಕೂಚಿಯಾ = ಗಲಿದೆ ಎಂದಿದ್ದರು.ಆದರೆ ರಾಜ್ಯದಲ್ಲಿ ನಡೆದ ಎಲ್ಲಾ ಉಪಚುನಾವಣೆ ೩ ಗಳಲ್ಲೂ ನಾವೇ ಗೆದಿದ್ದೇವೆ. ಅವರದೇ ಮಾತಿನಂತೆ ಈ ಫಲಿತಾಂಶ – ಮುಂಬರುವ ಚುನಾವಣೆಗೆ ದಿಕ್ಕೂಚಿಯಾಗಲಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಐ ಡಿ.ಕೆ. ಶಿವಕುಮಾರ ಅವರ ನಾಯಕತ್ವದ ನಮ್ಮ ಕಾಂಗ್ರೆಸ್ ರ‍್ಕಾರ ೫ ನುಡಿದಂತೆ ನಡೆದಿದೆ. ಗ್ಯಾರಂಟಿಗಳೇ ನಮ್ಮ ಗೆಲುವಿಗೆ – ಶ್ರೀರಕ್ಷೆಯಾಗಿವೆ. ದಾವಣಗೆರೆಯಲ್ಲಿ ಕಾಂಗ್ರೆಸ್ ಗೆಲ್ಲಿಸಲು ನಮಗೆ ಜವಾಬ್ದಾರಿ ಕೊಟ್ಟಿದ್ದರು. ಆ ಕೆಲಸವನ್ನು ನಾವು ಮಾಡಿದ್ದೇವೆ. – ದಾವಣಗೆರೆಯಲ್ಲಿ ೩೫ ಸಾವಿರ ಅಲ್ಪಸಂಖ್ಯಾತರು ಕಾಂಗ್ರೆಸ್ ವೋಟು ಹಾಕಿದ್ದು, ಅಲ್ಪಸಂಖ್ಯಾತರ ಜೊತೆಗೆ ಎಲ್ಲ ಸಮುದಾಯದ ಮತದಾರರು ನಮಗೆ ವೋಟು ಹಾಕಿದ್ದಾರೆ. ೨೦೨೮ರಲ್ಲಿ ಮತ್ತೆ ನಾವೇ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು.
ಗ್ಯಾರಂಟಿಗಳನ್ನು ಟೀಕಿಸುವ ಬಿಜೆಪಿಯವರು ಸಂಪರ‍್ಣ ಗ್ಯಾರಂಟಿಗಳನ್ನು ನಿಲ್ಲಿಸಿ ಎಂದು ಹೇಳಲಿ ನೋಡೋಣ ಎಂದು ಸವಾಲು ಹಾಕಿದ ಸಲೀಂ. ರಾಜ್ಯದಲ್ಲಿ ಗ್ಯಾರಂಟಿಗಳ ಜೊತೆಗೆ ಅಭಿವೃದ್ಧಿ ಆಗುತ್ತಿದೆ. ಮುಂದೆಯೂ ರಾಜ್ಯದ ಜನರು ನಮ್ಮ ಕೈ ಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಷಡ್ಯಂತ್ರ ಮಾಡಿ ಗೆಲುವು..: ೨೦೨೩ರ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ನಾವು ಗೆದ್ದಿದ್ದೇವು. ಆದರೆ ಷಡ್ಯಂತ್ರ ಮಾಡಿ
ಈಗ ಬಿಜೆಪಿ ಗೆಲ್ಲಿಸಿದ್ದಾರೆ. ಮರು ಎಣಿಕೆ ಮಾಡಲು ಕರ‍್ಟ್. ಆದೇಶಿಸಿತ್ತು. ಮತ ಎಣಿಕೆ ಮಾಡಿ ಕರ‍್ಟ್‌ಗೆ ಫಲಿತಾಂಶ ನೀಡಬೇಕಿತ್ತು. ಆದರೆ, ಬಹಿರಂಗವಾಗಿ ಫಲಿತಾಂಶ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ನಾವು ಕಾನೂನು ಹೋರಾಟ ಮಾಡುತ್ತೇವೆ.
ಬ್ಯಾಲೆಟ್ ಪೇಪರ ತಿದ್ದಿ ಸೋತವರನ್ನು ಗೆಲ್ಲಿಸಿದ್ದು, ಬಿಜೆಪಿ ವೋಟು ಚೋರಿ ಪರ‍್ಟಿ ಎಂದು ಟೀಕಿಸಿದರು.
ಬೆಂಗಳೂರು ಸೆಂಟ್ರಲ್ ನಲ್ಲಿ ಮತ ಕಳ್ಳತನ ಮಾಡಿರುವುದನ್ನು ನಾವು ತೋರಿಸಿದ್ದೇವು. ಮತ ಎಣಿಕೆ ಕೇಂದ್ರಗಳಲ್ಲಿ ಸಿಸಿ. ಕ್ಯಾಮರಾಗಳಿರುತ್ತವೆ. ಅವುಗಳನ್ನು ತೆಗೆದು ನೋಡುವ ಕೆಲಸ ಮಾಡಬೇಕು. ಷಡ್ಯಂತ್ರ ಮಾಡಿ ಬಿಜೆಪಿ ಗೆಲ್ಲಿಸಿದ್ದಾರೆ ಎಂದು ದೂರಿದರು.
ರಾಜಪಾಲರಿಂದ ರಾಜಕೀಯ: ತಮಿಳುನಾಡಿನಲ್ಲಿದೊಡ್ಡಪಕ್ಷವಾಗಿ ಹೊರ ಹೊಮ್ಮಿರುವ ವಿಜಯ್‌ಗೆ ರ‍್ಕಾರ ಅವಕಾಶ ನೀಡದೇ ರಾಜ್ಯಪಾಲರು ರಾಜಕಾರಣ ಮಾಡಿ ಅತಂತ್ರ ಮಾಡಿದ್ದಾರೆ. ರಾಜ್ಯಪಾಲರು ದೊಡ್ಡ ಪಕ್ಷವನ್ನು ಕರೆದು ಬಹುಮತ ಸಾಬೀತಿಗೆ ಅವಕಾಶ ಕೊಡಬೇಕಿತ್ತು. ಆದರೆ, ಅವರು ಕೇಂದ್ರ ರ‍್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ವಿಧಾನಸಭೆ ಯಲ್ಲಿ ಬಹುಮತ ಸಾಬೀತಿಗೆ ಅವಕಾಶ ಕೊಡದೆ ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ. ರಾಜ್ಯಪಾಲರ ಕೆಲಸ ರಾಜಕೀಯ ಪ್ರೇರಿತವಾಗಿದೆ. ವಿಜಯ ಅವರನ್ನು ಸಿಎಂ ಮಾಡಬಾರದು ಎಂಬುದು ಕೇಂದ್ರ ರ‍್ಕಾರದ ಷಡ್ಯಂತ್ರ ಎಂದು ಕಿಡಿಕಾರಿದರು.
ಸಂಪುಟ ಪುನಾರಚನೆ: ಬಹುಶಃ ಈ ತಿಂಗಳಲ್ಲಿ ಸಂಪುಟ ಪುನಾರಚನೆ ಆಗಬಹುದು, ಸಿಎಂ, ಡಿಸಿಎಂ ಸೇರಿದಂತೆ ಹೈಕಮಾಂಡ್ ನಾಯಕರು ಸೇರಿ ಅಂತಿಮ ತರ‍್ಮಾನ ಮಾಡುತ್ತಾರೆ. ಆದಷ್ಟು ಬೇಗ ಸಚಿವ ಸಂಪುಟ ಪುನಾರಚನೆ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

