
ಪಿ.ಎಂ.ಕಿಸಾನ್ ಯೋಜನೆ ಜೂ.೨೦ ರಂದು ಪ್ರಧಾನಿಗಳಿಂದ ೨೩ನೇ ಕಂತಿನ ಹಣ ಬಿಡುಗಡೆ
ಕರ್ನಾಟಕದ ೪೧.೫೪ ಲಕ್ಷ ಜನರಿಗೆ ಲಭಿಸಲಿದೆ ನೆರವು
ಹಾವೇರಿ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ ೨೩ನೇ ಕಂತಿನ ಆರ್ಥಿಕ ನೆರವನ್ನು ಬಿಡುಗಡೆ ಮಾಡಲು ದಿನಾಂಕ ನಿಗದಿಯಾಗಿದೆ. ಮಾನ್ಯ ಪ್ರಧಾನ ಮಂತ್ರಿಗಳು ೨೦೨೬ ನೇ ಜೂನ್ ೨೦ ರಂದು ಪಶ್ಚಿಮ ಬಂಗಾಳ ರಾಜ್ಯದ ತಾರಕೇಶ್ವರ್, ಹೂಗ್ಲಿಯಲ್ಲಿ ಸಂಜೆ ೪ ಗಂಟೆಗೆ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ದೇಶದ ರೈತರ ಖಾತೆಗಳಿಗೆ ಅಧಿಕೃತವಾಗಿ ಹಣ ವರ್ಗಾವಣೆ ಮಾಡಲಿದ್ದಾರೆ. ಈ ವಿಶೇ? ದಿನವನ್ನು *”ಪಿ.ಎಂ. ಕಿಸಾನ್ ಉತ್ಸವ ದಿವಸ್”* ಎಂದು ಆಚರಿಸಲಾಗುತ್ತಿದೆ.
?ಕರ್ನಾಟಕದ ರೈತರಿಗೆ ರೂ. ೮೩೦.೮೩೨ ಕೋಟಿ ಅನುದಾನ: ?ಈ ಯೋಜನೆಯಡಿ ಕರ್ನಾಟಕ ರಾಜ್ಯದ ಒಟ್ಟು ೪೧,೫೪,೧೬೦ ಫಲಾನುಭವಿ ರೈತರಿಗೆ ಕೇಂದ್ರ ಸರ್ಕಾರದಿಂದ ಒಟ್ಟಾರೆ ರೂ. ೮೩೦.೮೩೨ ಕೋಟಿಗಳ ಆರ್ಥಿಕ ನೆರವು ನೇರ ನಗದು ವರ್ಗಾವಣೆ (ಆಃಖಿ) ಮೂಲಕ ಜಮೆಯಾಗಲಿದೆ.
?ಯೋಜನೆಯ ಹಿನ್ನೆಲೆ ಮತ್ತು ಪ್ರಯೋಜನಗಳು: ?ವಾರ್ಷಿಕ ನೆರವು: ಅರ್ಹ ರೈತ ಕುಟುಂಬಗಳಿಗೆ ಕೃಷಿ ಚಟುವಟಿಕೆಗಳ ನಿರ್ವಹಣೆ ಹಾಗೂ ಉತ್ತಮ ಇಳುವರಿ ಪಡೆಯಲು ನೆರವಾಗುವಂತೆ ವಾರ್ಷಿಕವಾಗಿ ಒಟ್ಟು ರೂ. ೬,೦೦೦/- ಗಳ ಆರ್ಥಿಕ ಸಹಾಯ ನೀಡಲಾಗುತ್ತದೆ.
ಕಂತುಗಳ ವಿವರ: ಈ ಮೊತ್ತವನ್ನು ತಲಾ ರೂ. ೨,೦೦೦/- ಗಳಂತೆ ಮೂರು ಸಮಾನ ಕಂತುಗಳಲ್ಲಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ ಜಮೆ ಮಾಡಲಾಗುತ್ತದೆ.
?ಅರ್ಹತೆ: ಕರ್ನಾಟಕದಲ್ಲಿ ಫೆಬ್ರವರಿ ೨೦೧೯ ರಿಂದ ಈ ಯೋಜನೆ ಜಾರಿಯಲ್ಲಿದ್ದು, ದಿನಾಂಕ ೦೧-೦೨-೨೦೧೯ ರ ಅನ್ವಯ ಸಾಗುವಳಿ ಭೂಮಿ ಹೊಂದಿರುವ ಅರ್ಹ ರೈತ ಕುಟುಂಬಗಳು (ಗಂಡ, ಹೆಂಡತಿ ಮತ್ತು ಅಪ್ರಾಪ್ತ ಮಕ್ಕಳು) ಇದರ ಪ್ರಯೋಜನ ಪಡೆಯುತ್ತಿದ್ದಾರೆ.
?ಪ್ರಧಾನ ಮಂತ್ರಿಗಳ ಈ ನೇರ ನಗದು ವರ್ಗಾವಣೆ ಪ್ರಕ್ರಿಯೆಯಿಂದಾಗಿ ರಾಜ್ಯದ ಲಕ್ಷಾಂತರ ರೈತ ಕುಟುಂಬಗಳ ಕೃಷಿ ವೆಚ್ಚಕ್ಕೆ ಸಕಾಲದಲ್ಲಿ ಆರ್ಥಿಕ ಆಸರೆ ಸಿಕ್ಕಂತಾಗಲಿದೆ.

