
ಕಾಂಗ್ರೆಸ್ ನಿಂದ ದೊಡ್ಡ ಪ್ರಮಾಣದ ಪೊಲಿಟಿಕಲ್ ಕರಪ್ಷನ್: ಸಂಸದ ಬಸವರಾಜ ಬೊಮ್ಮಾಯಿ
ಹಾವೇರಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಆಗಿರುವುದು ಅತ್ಯಂತ ಆಘಾತಕಾರಿ ಹಾಗೂ ದುರ್ದೈವದ ಸಂಗತಿ. ಕಾಂಗ್ರೆಸ್ ಪೊಲಿಟಿಕಲ್ ಕರಪ್ಷನ್ ನಡೆಸಿದ್ದು, ಬಹಳ ದೊಡ್ಡ ಪ್ರಮಾಣದ ಹಣ ಖರ್ಚು ಮಾಡಿದ್ದಾರೆ ಹಣದ ಆಮಿಷಕ್ಕೆ ನಮ್ಮ ಕೆಲವು ಶಾಸಕರು ಬಲಿಯಾಗಿರುವುದು ನಿಜ. ಈ ಕುರಿತು ಪಕ್ಷದ ನೇಮಿಸಿರುವ ಸಮಿತಿ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಆಗಬಾರದಿತ್ತು. ಇದು ನಮಗೆ ಅತ್ಯಂತ ಆಘಾತಕಾರಿ ಹಾಗೂ ದುರ್ದೈವದ ಸಂಗತಿ. ಅಡ್ಡ ಮತದಾನದ ಕುರಿತು ತನಿಖೆ ನಡೆಸಿ ಅದರ ವರದಿಯನ್ನು ಹೈಕಮಾಂಡ್ ಗೆ ಕಳಿಸುವುದಾಗಿ ವಿಪಕ್ಷ ನಾಯಕರು, ಹಾಗೂ ರಾಜ್ಯಾದ್ಯಕ್ಷರು ಈಗಾಗಲೇ ಹೇಳಿದ್ದಾರೆ. ಅದರ ವರದಿ ಒಂದು ವಾರದಲ್ಲಿ ತರಿಸಿಕೊಂಡು ತಪ್ಪಿತಸ್ಥರು ಯಾರಿದ್ದಾರೆ ಅವರ ಮೇಲೆ ಕ್ರಮ ತಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಹಣದ ದುರಹಂಕಾರದಿಂದ ಆಡಳಿತ ನಡೆಸುತ್ತಿದೆ. ಇದು ಪೊಲಿಟಿಕಲ್ ಕರಪ್ಷನ್ ಬಹಳ ದೊಡ್ಡ ಪ್ರಮಾಣದ ಹಣ ಖರ್ಚು ಮಾಡಿದ್ದಾರೆ. ಹಣದ ಆಮಿಷಕ್ಕೆ ನಮ್ಮ ಕೆಲವು ಶಾಸಕರು ಬಲಿಯಾಗಿರೋದು ನಿಜ. ಹೀಗೆ ಆಗಬಾರದಾಗಿತ್ತು ಈಗ ಇಂಥ ತಪ್ಪುಗಳಾಗದಂತೆ ಇನ್ನು ಮುಂದೆ ಎಚ್ಚರಿಕೆ ವಹಿಸುತ್ತೇವೆ. ಯಾರ ತಲೆದಂಡ ಆಗಬೇಕು ಎಂಬ ಬಗ್ಗೆ ಒಂದು ಸಮಿತಿ ಮಾಡಿದ್ದೇವೆ. ಸಮಿತಿ ವರದಿ ಆಧರಿಸಿ ಕ್ರಮ ಆಗುತ್ತದೆ ಎಂದು ಹೇಳಿದರು.
ಹಾವೇರಿ ರೈಲ್ವೆ ನಿಲ್ದಾಣದ ಪ್ರವೇಶದ ಸಮಸ್ಯೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಾವೇರಿ ರೈಲ್ವೆ ನಿಲ್ದಾಣ ಪ್ರವೇಶ ಸಮಸ್ಯೆ ಇದೆ. ಅಲ್ಲಿ ಖಾಸಗಿಯವರ ಜಾಗ ಇದೆ. ಇದು ಕೋರ್ಟ್ ನಲ್ಲಿದೆ. ಮಾತುಕತೆಯ ಮೂಲಕ ಬಗೆ ಹರಿಸಲು ಎರಡು ಮೂರುಬಾರಿ ಮಾತುಕತೆಯಾಗಿದೆ. ಫಲ ಸಿಕ್ಕಿಲ್ಲ. ಬರುವ ದಿನಗಳಲ್ಲಿ ಪ್ರಯತ್ನಿಸಿ ಸರಿಪಡಿಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಬೆಂಬಲ ವಾಪಸ್ ಪಡೆಯಲಿ: ಮೇಕೆದಾಟು ವಿಚಾರವಾಗಿ ತಮಿಳು ನಾಡು ವಿಧಾನಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನ ಮಾಡಿದರೆ ಸಂಬಂಧ ಇಲ್ಲ, ಕೋರ್ಟ್ ನಲ್ಲಿ ತಮಿಳುನಾಡು ಹೋದಾಗ ನಾವು ಹಾಸ್ತಕ್ಷೇಪ ಮಾಡುವುದಿಲ್ಲ ಅಂತ ಹೇಳಿದ್ದಾರೆ. ಇದು ತಾಂತ್ರಿಕವಾಗಿ ಏನಾಗುತ್ತಿದೆ ಅದು ಆಗಲಿ ಅಂತ ಹೇಳಿದೆ. ರಾಜ್ಯ ಸರ್ಕಾರ ಆದಷ್ಡು ಬೇಗ ಡಿಪಿಆರ್ ತಯಾರು ಮಾಡಿ ಆದಷ್ಟು ಬೇಗ ಅದಕ್ಕೆ ಅನುಮತಿ ಪಡೆಯಬೇಕು. ನೆಲ, ಜಲ, ಭಾಷೆ ವಿಚಾರದಲ್ಲಿ ನಾವೆಲ್ಲ ಒಂದಾಗಿದ್ದೆವೆ. ಅದಕ್ಕೆ ಸರ್ಕಾರ ಏನೆಲ್ಲ ಕ್ರಮ ತೆಗೆದುಕೊಳ್ಳುತ್ತದೆ ರಾಜ್ಯದ ಹಿತ ದೃಷ್ಟಿಯಿಂದ ನಾವೆಲ್ಲ ಒಂದಾಗಿ ಕೆಲಸ ಮಾಡುತ್ತೇವೆ. ಸಿಎಂ ಶಿವಕುಮಾರ ಪಡುತ್ತೇನೆ ಮೇಕೆದಾಟು ದಕ್ಷಿಣ ಭಾರತದ ಹೃದಯ ಭಾಗ ಅಂತ ಹೇಳುತ್ತಾರೆ, ಅವರು ತಮಿಳುನಾಡಿನಲ್ಲಿ ಕಾಂಗ್ರೆಸ್ ಅಲ್ಲಿನ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆಯಲಿ ಎಂದು ಆಗ್ರಹಿಸಿದರು.
ಬೆಡ್ತಿ ವರದಾ ಯೋಜನೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೆಡ್ತಿ ವರದಾ ಯೋಜನೆಗೆ ರಾಜ್ಯ ಸರ್ಕಾರ ಡಿಪಿಆರ್ ಮಾಡುತ್ತಿದೆ. ಅದನ್ನು ಮಾಡಿದ ನಂತರ ನಾವು ನಮ್ಮ ಹೋರಾಟವನ್ನು ಮತ್ತೆ ಮುಂದುವರೆಸುತ್ತೇವೆ ಎಂದರು.
ದೊಡ್ಡ ಮಟ್ಟದ ಹೋರಾಟ: ಹಾವೇರಿ ಜಿಲ್ಲೆಯ ಲ್ಲಿ ಅಕ್ರಮ ದಂಧೆ, ಮರಳು ಮಾಫಿಯಾ ಜೋರಾಗಿ ನಡೆಯುತ್ತಿರುವುದನ್ನು ತಡೆಯಲು ಬಿಜೆಪಿ ಏನು ಮಾಡುತ್ತಿದೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಡೀ ರಾಜ್ಯದಲ್ಲಿ ಭ್ರಷ್ಟಾಚಾರ ಇದೆ. ವರ್ಗಾವಣೆಯಿಂದ ಹಿಡಿದು ಆಡಳಿತದಲ್ಲಿ ಭ್ರಷ್ಟಾಚಾರ ಇದೆ. ಈಗಾಗಲೇ ನಾವು ಪ್ರತಿಭಟನೆ ಮಾಡಿದ್ದೇವೆ. ಮುಂಬರುವ ದಿನಗಳಲ್ಲಿ ಜಿಲ್ಲಾಡಳಿತದ ವಿರುದ್ದದ ದೊಡ್ಡ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

