ಮೋದಿ ಪ್ರಧಾನಿಯಾದ ಮೇಲೆ ಭಾರತಕ್ಕೆ ಶುಕ್ರದೆಸೆ : ಬಸವರಾಜ ಬೊಮ್ಮಾಯಿ

Date:

ಹಾವೇರಿ: ಯುಪಿಎ ಅವಧಿಯಲ್ಲಿ ಭಾರತಕ್ಕೆ ಗ್ರಹಣ ಹಿಡಿದಿತ್ತು, ಮೋದಿಯವರು ಪ್ರಧಾನಿಯಾದ ಮೇಲೆ ಗ್ರಹಣ ಬಿಡಿಸಿ ಅಭಿವೃದ್ಧಿಯ ಶುಕ್ರದೆಸೆ ಆರಂಭವಾಗಿದೆ. ದೇಶದ ಅಭಿವೃದ್ಧಿಗಾಗಿ ೨೦೨೯ ಕ್ಕೆ ಮೋದಿಯವರು ಮತ್ತೊಮ್ಮೆ ಪ್ರಧಾನಿ ಮಾಡಲು ಎಲ್ಲರೂ ಶ್ರಮಿಸೋಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಶನಿವಾರ ಹಾವೇರಿಯ ಗಾಂಧಿ ಸರ್ಕಲ್‌ನಲ್ಲಿ ಹಾವೇರಿ ಜಿಲ್ಲಾ ಭಾರತೀಯ ಜನತಾ ಪಾರ್ಟಿ ವತಿಯಿಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ೧೨ ವರ್ಷಗಳ ಜನಪರ ಯೋಜನೆಗಳ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸ್ವಾತಂತ್ರ್ಯ ನಂತರದ ಭಾರತದಲ್ಲಿ ಅತಿ ಹೆಚ್ಚು ಅವಧಿಗೆ ಪ್ರಧಾನಿಯಾಗಿರುವ ದಾಖಲೆ ನರೇಂದ್ರ ಮೋದಿ ಮಾಡಿದ್ದಾರೆ. ಸತತ ಮೂರು ಬಾರಿ ಪ್ರಧಾನಿ ಆಗಿ ಕೆಲಸ ಮಾಡುತ್ತಿರುವ ಈ ಸಂದರ್ಭದಲ್ಲಿ ಪುನಃ ಪ್ರಾಧಾನಿಯಾಗಿ ಆಯ್ಕೆಯಾಗುತ್ತಿರುವುದು ಆ ನಾಯಕನ ಜನಪ್ರೀಯತೆ ತೊರಿಸುತ್ತದೆ.
ಬಡವರಿಗೆ ಸುಮಾರ ೪ ಕೋಟಿ ಮನೆ ನೀಡಿದ್ದಾರೆ. ಸುಮಾರು ೯ ಕೋಟಿ ಮನೆಗಳಿಗೆ ಗ್ಯಾಸ್ ಸಂಪರ್ಕ, ಜಲ ಜೀವನ ಮಿಷನ್ ಅಡಿ ಹರ್ ಘರ್ ಗಂಗೆ ಯೋಜನೆಗಳು ಶೇ ೭೦% ಬಡವರ ಮನೆಗಳಿಗೆ ಕುಡಿಯುವ ನೀರು ಕೊಟ್ಟಿದ್ದಾರೆ. ಸುಮಾರು ೮೦ ಕೋಟಿ ಜನರಿಗೆ ಪೌಷ್ಟಿಕ ಆಹಾರ ಉಚಿತವಾಗಿ ನೀಡುತ್ತಿದ್ದಾರೆ. ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ, ಯುವಕರ ಕೈಗೆ ಕೆಲಸ ನಿಡುವ ಮೂಲಕ ಬಡತನ ನಿರ್ಮೂಲನೆ ಮಾಡಿದ್ಸಾರೆ. ಅತಿ ಹೆಚ್ಚು ಹೈವೆ ಮೋದಿ ಕಲಾದಲ್ಲಿ ಆಗಿದೆ.
ಯುಪಿಎ ಅವಧಿಯಲ್ಲಿ ಪ್ರತಿ ದಿನ ೫ ಕಿ.ಮಿ ರಸ್ತೆ ಆಗುತ್ತಿತ್ತು. ಈಗ ಪ್ರತಿ ದಿನ ೩೩ ಕಿಮಿ ಹೈವೆ ಆಗುತ್ತಿವೆ. ರೈಲ್ಬೆಯಲ್ಲಿ ಕ್ರಾಂತಿ ಮಾಡಿದ್ದಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಹಲವಾರು ಕ್ರಮ ತಂದಿದ್ದಾರೆ. ವಾಟರ್ ವೇಜ್ ಗೂ ಕೂಡ ದೊಡ್ಡ ಅನುಕೂಲ ಮಾಡಿದ್ದಾರೆ. ಇಡೀ ದೇಶ ಇಂಧನ ಸ್ವಾವಲಂಬನೆ ಮಾಡಿದ್ದಾರೆ. ಒಂದು ದೇಶ ಒಂದು ಗ್ರಿಡ್ ಅಂತ ಮಾಡಿ ಯಾವುದೇ ಮೂಲೆಯಲ್ಲಿ ವಿದ್ಯುತ್ ತಯಾರಾದರೂ ಅದನ್ನು ಬೇರೆ ರಾಜ್ಯಕ್ಕೆ ಸರಬರಾಜು ಮಾಡಲು ಅವಕಾಶ ಕಲ್ಪಿಸಿದ್ದಾರೆ ಎಂದು ಹೇಳಿದರು.
ಮಹಿಳೆಯರಿಗೆ ಸಂಜಿವಿನಿ, ಲಕ್ ಪತಿ ದೀದಿ, ಯುವಕರಿಗೆ ಉತ್ತೇಜನ ಕೊಟ್ಟಿದ್ದಾರೆ. ಮೋದಿಯವರು ಪ್ರಧಾನಿಯಾಗುವ ಮುನ್ನ ದೇಶದಲ್ಲಿ ಸುಮಾರು ೩೨ ಮೆಡಿಕಲ್ ಕಾಲೇಜುಗಳಿದ್ದವು. ಈಗ ೧೭೨ ಮೆಡಿಕಲ್ ಕಾಲೇಜು ನಿರ್ಮಾಣ, ೭೨ ಹೊಸ ವಿಮಾನ ನಿಲ್ದಾಣ ಆಗಿವೆ. ವಿಶೇಷವಾಗಿ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ೨೨ ಸಾವಿರ ಕೋಟಿ ರು ಅನುದಾನ ಬಿಡುಗಡೆ ಮಾಡಿದ್ದಾರೆ. ಹಾವೇರಿ ಜಿಲ್ಲೆಗೆ ೧.೫ ಲಕ್ಷ ರೈತರಿಗೆ ೩೦ ಕೋಟಿ, ಗದಗ ಜಿಲ್ಲೆಗೆ ೧ ಲಕ್ಷ ರೈತರಿಗೆ ೨೦ ಕೋಟಿ ಬಿಡುಗಡೆಯಾಗಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ವೀರುಪಾಕ್ಷಪ್ಪ ಬಳ್ಳಾರಿ, ಮುಖಂಡರುಗಳಾದ ಸಿದ್ದರಾಜ ಕಲಕೋಟಿ, ಗವಿಸಿದ್ದಪ್ಪ ದ್ಯಾಮಣ್ಣವರ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ನನಗೆ ಸಚಿವ ಸ್ಥಾನ ಸಿಗದಿದ್ದರೆ ನಿಗಮ ಮಂಡಳಿಗೆ ರಾಜೀನಾme: ಶಾಸಕ ಬಸವರಾಜ್ ಶಿವಣ್ಣನವರ

ನನಗೆ ಸಚಿವ ಸ್ಥಾನ ಸಿಗದಿದ್ದರೆ ನಿಗಮ ಮಂಡಳಿಗೆ ರಾಜೀನಾme: ಶಾಸಕ ಬಸವರಾಜ್...

ಮಳೆ ಕೊರತೆ: ಹಸಿ ಬರ ಘೋಷಣೆಗೆ ರೈತರ ಮನವಿ

  ಮಳೆ ಕೊರತೆ: ಹಸಿ ಬರ ಘೋಷಣೆಗೆ ರೈತರ ಮನವಿ ಹಾವೇರಿ : ಜಿಲ್ಲಾ...

ಅಭಿವೃದ್ಧಿಪರ ಕೆಲಸಕ್ಕೆ ಸದಾ ಸಹಕಾರ : ಉಡಚಪ್ಪ ಮಾಳಗಿ

  ಅಭಿವೃದ್ಧಿಪರ ಕೆಲಸಕ್ಕೆ ಸದಾ ಸಹಕಾರ : ಉಡಚಪ್ಪ ಮಾಳಗಿ ಹಾವೇರಿ: ಜಿಲ್ಲೆಯ ಸರ್ವಾಂಗಿಣ...