ದಶಕದ ನಂತರ ಹಾವೇರಿ ಚಿನ್ನದ ಗಣಿಗಾರಿಕೆ ಮರುಜೀವ! ಆತಂಕದಲ್ಲಿ ರೈತರು

Date:

ಹಾವೇರಿ: ಇತ್ತೀಚೆಗೆ ಹಾವೇರಿಯ ಸುತ್ತ-ಮುತ್ತ ವಿಮಾನದ ಮೂಲಕ ಖನೀಜ ನಿಕ್ಷೇಪಗಳ ಬಗ್ಗೆ ವಿಮಾನದ ಮೂಲಕ ವೈಮಾನಿಕ ಸಮೀಕ್ಷೆ ನಡೆಸಲಾಗಿತ್ತು. ಆಗಲೇ ಹಾವೇರಿ ಸಮೀಪದ ಗಣಜೂರಿನಲ್ಲಿ ಚಿನ್ನದ ಗಣಿಗಾರಿಕೆಯ ಚರ್ಚೆಗಳು ಆರಂಭವಾಗಿದ್ದವು. ಸುಪ್ರೀಂಕೋರ್ಟ್ ಗಣಜೂರು ಮಾದರಿಯಲ್ಲಿರುವ ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ಚಿನ್ನದ ಗಣಿಗಾರಿಕೆಗೆ ಅನುಮತಿ ನೀಡಿದ್ದು, ಗಣಜೂರು ಗ್ರಾಮದಲ್ಲಿಯೂ ಸಹ ಸರ್ವೋಚ್ಛ ನ್ಯಾಯಾಲಯ ಚಿನ್ನದ ಗಣಿಗಾರಿಕೆಗೆ ಅವಕಾಶ ನೀಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಇದರ ಬೆನ್ನಲ್ಲಿಯೇ ಹಾವೇರಿ ಸಮೀಪ ಗಣಜೂರಿನಲ್ಲಿ ಚಿನ್ನದ ಗಣಿಗಾರಿಕೆ ಶುರುವಾಗಲಿದೆ ಎನ್ನುವ ಚರ್ಚೆ ಶುರುವಾಗಿದೆ.
೨೦೧೫ರಲ್ಲಿ ನಡೆದ ಸಂಶೋಧನೆಯಲ್ಲಿ ಗಣಜೂರಿನಲ್ಲಿ ಚಿನ್ನದ ನಿಕ್ಷೇಪಗಳು ಇರುವುದು ಪತ್ತೆಯಾಗಿತ್ತು. ೨೦೧೫ರಲ್ಲಿ ಡೆಕ್ಕನ್ ಗೋಲ್ಡ್ ಮೈನ್ಸ್ ಕಂಪನಿಯು ಇಲ್ಲಿ ಚಿನ್ನದಂಶ ಇರುವ ಬಗ್ಗೆ ಸಂಶೋಧನೆ ಕೈಗೊಂಡಿತ್ತು. ಪ್ರಾಥಮಿಕ ಪರವಾನಗಿ ಮೂಲಕ ಸಂಶೋಧನೆ ಆರಂಭಿಸಿತ್ತು. ಡೆಕ್ಕನ್ ಎಕ್ಸ್‌ಪ್ಲೋರೇಷನ್ ಸರ್ವೀಸಸ್ ಹೆಸರಿನಲ್ಲಿ ಜಮೀನಿನಲ್ಲಿ ಕೊಳವೆಬಾವಿ ಕೊರೆದು, ಕಲ್ಲಿನ ಮಾದರಿ ಸಂಗ್ರಹಿಸಿ ಪರೀಕ್ಷಿಸಿತ್ತು. ಕಲ್ಲುಗಳಲ್ಲಿ ಯಥೇಚ್ಛವಾಗಿ ಚಿನ್ನದ ಅಂಶ ಇರುವುದು ಸಾಬೀತಾಗಿತ್ತು. ಸಂಶೋಧನೆಗಾಗಿ ಕಂಪನಿಯು ಕೋಟ್ಯಂತರ ರೂಪಾಯಿ ಖರ್ಚು ಮಾಡಿತ್ತು. ರೈತರ ಜಮೀನು ಲೀಜ್ ಹಾಕಿಕೊಂಡು ೭ ರಿಂದ ೮ ವರ್ಷ ಸಂಶೋಧನೆ ಮಾಡಿತ್ತು. ಅಲ್ಲದೇ ವರದಿಯನ್ನ ಸರ್ಕಾರಕ್ಕೆ ಸಲ್ಲಿಸಿತ್ತು. ರಾಯಚೂರಿನ ಹಟ್ಟಿ ಹಾಗೂ ಕೆಜಿಎಫ್‌ಗಣಿಗಿಂತಲೂ ಹೆಚ್ಚಿನ ಚಿನ್ನ ಗಣಜೂರಿನಲ್ಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದು ಖಾತ್ರಿಯಾಗುತ್ತಿದ್ದಂತೆ, ಪೂರ್ಣ ಪ್ರಮಾಣದ ಗಣಿಗಾರಿಕೆಗೆ ಡೆಕ್ಕನ್ ಗೋಲ್ಡನ್ ಮೈನ್ಸ್ ಕಂಪನಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಕೆಲ ಕಾನೂನುಗಳಿಂದ ಅರ್ಜಿ ತಿರಸ್ಕಾರವಾಗಿತ್ತು. ಈಗ ಮಹಾರಾಷ್ಟ್ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಹೀಗಾಗಿ, ಗಣಜೂರಿನಲ್ಲಿ ಚಿನ್ನದ ಗಣಿಗಾರಿಕೆ ಶುರುವಾಗುತ್ತಾ ಅನ್ನೋ ಚರ್ಚೆ ಶುರುವಾಗಿದೆ. ಈಗ ಸಂಶೋಧನೆ ನಡೆದ ೭೨ ಎಕರೆ ಸ್ಥಳದಲ್ಲಿ ಚಿನ್ನದ ಗಣಿಗಾರಿಕೆ ಪ್ರಾರಂಭವಾಗುತ್ತದೆ. ಅಲ್ಲದೇ, ಚಿನ್ನದಗಣಿಗಾರಿಕೆ ಸುತ್ತಮುತ್ತ ೪೦೦ ಎಕರೆ ಪ್ರದೇಶ ಇತರ ಕೆಲಸಗಳಿಗೆ ಬಳಕೆಯಾಗುತ್ತದೆ. ಇದು ಸ್ಥಳೀಯ ರೈತರಲ್ಲಿ ಆತಂಕ ಮೂಡಿಸಿದೆ.
ಗ್ರಾಮದ ಸುತ್ತಮುತ್ತ ಫಲವತ್ತಾದ ಭೂಮಿಯಿದೆ. ಭೂಮಿಯಲ್ಲಿ ಮೆಕ್ಕೆಜೋಳ, ಶೇಂಗಾ, ಹತ್ತಿ, ಮೆಣಸಿನಕಾಯಿ, ಸೋಯಾಬಿನ್, ಕಬ್ಬು, ರೇಷ್ಮೆ ಸೇರಿದಂತೆ ವಿವಿಧ ಬೆಳೆಗಳನ್ನ ಬೆಳೆಯಲಾಗುತ್ತಿದೆ. ಈಗ ಮಹಾರಾಷ್ಟ್ರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶ, ಗಣಜೂರು ಗಣಿಗಾರಿಕೆ ಯೋಜನೆ ಆರಂಭಕ್ಕೆ ಪೂರಕವಾಗಿರುವ ಅಂಶ ಹೊಂದಿರುವ ಮಾಹಿತಿ ಲಭ್ಯವಾಗಿದೆ. ಸದ್ಯದಲ್ಲೇ ಗಣಿಗಾರಿಕೆ ಪ್ರಕ್ರಿಯೆ ಆರಂಭವಾಗುವ ಲಕ್ಷಣಗಳಿವೆ. ಕಂಪನಿಯು ರೈತರೊಂದಿಗೆ ಸಭೆ ಮಾಡಬೇಕು. ನಮಗೆ ಇರೋದು ಒಂದು ಎರಡು ಎಕರೆ ಜಮೀನು. ನಾವು ಜಮೀನು ಕೊಟ್ಟು ಎಲ್ಲಿಗೆ ಹೋಗಬೇಕು? ಎನ್ನುತ್ತಿದ್ದಾರೆ ಗಣಜೂರು ರೈತರು.
ಚಿನ್ನದ ಗಣಿಗಾರಿಕೆಗೆ ಗ್ರೀನ್ ಸಿಗ್ನಲ್ ಸಿಕ್ಕರೆ ಮತ್ತೆ ರೈತರಿಗೆ ಕಿರುಕುಳ ಪ್ರಾರಂಭವಾಗಲಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡೆಕ್ಕನ್ ಮೈನಿಂಗ್ ಕಂಪನಿ ಚಿನ್ನದ ಗಣಿಗಾರಿಕೆ ಮಾಡಲು ತುದಿಗಾಲಿನಲ್ಲಿ ನಿಂತಿದೆ. ಸುಪ್ರೀಂಕೋರ್ಟ್ ಗಣಜೂರು ಚಿನ್ನದ ಗಣಿಗಾರಿಕೆಗೆ ಹಸಿರು ನಿಶಾನೆ ತೋರಿದರೆ ಯಾವ ರೀತಿ ಹೋರಾಟ ನಡೆಸಬೇಕು ಎನ್ನುವ ಚಿಂತನೆಯಲ್ಲಿ ಗಣಜೂರು ರೈತರಿದ್ದಾರೆ. ರೈತರು ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ. ಸುಪ್ರೀಂ ಕೋರ್ಟ್ ಯಾವ ತೀರ್ಪು ನೀಡಲಿದೆ ಎಂಬುವುದನ್ನು ಕಾದು ನೋಡಬೇಕಿದೆ.
ಈ ಕುರಿತು ಗ್ರಾಮದ ದುದ್ದುಸಾಬ್ ಎಂಬುವವರು ಮಾತನಾಡಿದ್ದು, ’ಇಲ್ಲಿ ಡೆಕ್ಕನ್ ಗೋಲ್ಡ್ ಕಂಪನಿಯವರು ೨೦೧೫ರಲ್ಲಿ ಇಲ್ಲಿಗೆ ಬಂದಿದ್ದರು. ಎರಡು ಮಂದಿ ಬಂದು ಇಲ್ಲಿಯೇ ಇರುವ ಗುಡ್ಡದ ಮೇಲೆ ಓಡಾಡಿ ಸಣ್ಣ ಸಣ್ಣ ಕಲ್ಲು ತೆಗೆದುಕೊಂಡು ಸಂಶೋಧನೆ ಮಾಡಿದ್ದರು. ನಂತರ ಇಲ್ಲಿ ಗೋಲ್ಡ್ ಇದೆ ಎಂಬುದನ್ನು ಕನ್ಪರ್ಮ್ ಮಾಡಿಕೊಂಡರು. ಅದಾದ ನಂತರ ಕಂಪನಿಯೇ ಇಲ್ಲಿಗೆ ಬಂತು. ಡ್ರಿಲ್ ಹಾಕುವ ಮಷೀನ್ ಸೇರಿ ವಿವಿಧ ಯಂತ್ರೋಪಕರಣಗಳು ಬಂದವು. ಮೂರ್ನಾಲ್ಕು ವರ್ಷ ಇಲ್ಲಿ ಸಂಶೋಧನೆ ಮಾಡಿ ಸುಮಾರು ೭೨ ಎಕರೆಯಲ್ಲಿ ಚಿನ್ನದ ಖನಿಜ ಇದೆ ಎಂದು ಪತ್ತೆ ಹಚ್ಚಿದರು’ ಎಂದಿದ್ದಾರೆ.
’ಅವರು ಸಂಶೋಧನೆ ಮಾಡುತ್ತಿದ್ದ ರೈತರ ಜಮೀನುಗಳಿಗೆ ಲಾವಣಿ ನೀಡಿದರು. ರೈತರ ಜಮೀನಿನಲ್ಲಿ ಸಂಶೋಧನೆ ಮಾಡುವ ವೇಳೆ ಯಾವುದೇ ಬೆಳೆ ಬೆಳೆಯದ ಕಾರಣ ರೈತರಿಗೆ ಹಣ ನೀಡಿದರು. ಡ್ರಿಲ್ ಹಾಕುವುದು ಸೇರಿದಂತೆ ವಿವಿಧ ಕೆಲಸಗಳಿಗೆ ಗಣಜೂರಿನ ಸುಮಾರು ೫೦ ರಿಂದ ೬೦ ಜನರಿಗೆ ಕೆಲಸ ನೀಡಿದರು. ೭೨ ಎಕರೆಯಲ್ಲಿ ಗೋಲ್ಡ್ ಇದೆ, ಅದನ್ನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದವರು. ಮತ್ತೆ ಈ ಕಡೆ ಬಂದಿರಲಿಲ್ಲ. ಈಗ ಮತ್ತೆ ಗಣಜೂರಿನಲ್ಲಿ ಚಿನ್ನದ ಗಣಿಗಾರಿಕೆ ಆರಂಭವಾಗುತ್ತದೆ ಎಂಬ ಸುದ್ದಿ ಹೊರಟಿದೆ. ಆದರೆ, ಇಲ್ಲಿಯ ಜಮೀನುಗಳು ಬಹಳ ದುಬಾರಿಯಾಗಿವೆ. ಒಮ್ಮೆ ಆಸ್ತಿ ಮಾರಾಟ ಮಾಡಿದರೆ ಮರಳಿ ಆಸ್ತಿ ಬರುವುದಿಲ್ಲ, ಆಸ್ತಿ ಮಾಡುವುದು ಬಹಳ ಕಷ್ಟವಿದೆ. ಈಗಾಗಲೇ ಗಣಜೂರು ಪಕ್ಕದ ೬೦೦ ಎಕರೆ ಜಾಗ ಕೈಗಾರಿಕಾ ಕಾರಿಡಾರ್‌ಗೆ ಹೋಗಿದೆ. ಈಗ ಚಿನ್ನದ ಗಣಿಗೆ ೪೦೦ ಎಕರೆ ಹೋದರೆ ರೈತರಿಗೆ ದುಡಿದುಕೊಂಡು ತಿನ್ನಲು ಭೂಮಿಯೇ ಇಲ್ಲದಂತಾಗುತ್ತದೆ ಎಂದಿದ್ದಾರೆ.
’ದುಡ್ಡು ಸಿಗುತ್ತದೆ, ಭೂಮಿ ಸಿಗಬೇಕಲ್ಲ. ದುಡಿದುಕೊಂಡು ತಿನ್ನಲು ಭೂಮಿ ಸಿಗಬೇಕಲ್ಲ. ಈ ಹಿಂದೆ ಕಂಪನಿಯವರು ಡ್ರೀಲ್ ಹಾಕಿದಾಗ ಒಂದೊಂದು ಕೊಳವೆ ಬಾವಿ ಸಂಪರ್ಕ ಮತ್ತೊಂದು ಕಡೆ ಸೇರಿ ಕೊಳವೆಬಾವಿಗಳ ನೀರು ಹೋಗಿದೆ. ಕೋಟ್ಯಂತರ ರೂಪಾಯಿ ಬೇಕೆಂದರೂ ಸಿಗುತ್ತದೆ. ಆದರೆ, ಈ ಹೊಲ ಸಿಗಬೇಕಲ್ಲ. ಹೊಲನೇ ಸಿಗುವುದಿಲ್ಲ. ಮುಂದೆ ಭೂಮಿ ಸಿಗುವುದಿಲ್ಲ. ಭೂಮಿ ಸಿಗುವುದು ಕಷ್ಟ ಇದೆ. ನಮ್ಮ ಹೊಲದಲ್ಲಿ ದುಡಿದುಕೊಂಡು ನಾವು ಜೀವನ ಮಾಡುತ್ತಿದ್ದೇವೆ. ಈ ಭೂಮಿ ಕೊಟ್ಟು ನಾವು ಏನು ಮಾಡೋಣಾ. ಗಣಿಗಾರಿಕೆ ಬರುವ ಜಾಗದಲ್ಲಿ ನನಗೆ ಸೇರಿದ ೭ ಎಕರೆ ನಾಲ್ಕು ಗುಂಟೆ ಭೂಮಿಯಿದೆ. ನಮ್ಮ ಸುತ್ತಮುತ್ತ ಇರುವ ರೈತರು ಗಣಿಗಾರಿಕೆಗೆ ಭೂಮಿ ಕೊಡುತ್ತೇವೆ ಅಂದರೆ ನಾವು ಸಾಧ್ಯವಾದಷ್ಟು ಭೂಮಿ ನೀಡುವುದಕ್ಕೆ ಹೋರಾಟ ಮಾಡುತ್ತೇವೆ. ಮುಂದೆ ಗ್ರಾಮಸ್ಥರು, ರೈತರು, ಗ್ರಾಮದ ಮುಖಂಡರು ಯಾವ ತೀರ್ಮಾನ ಕೈಗೊಳ್ಳುತ್ತಾರೆಯೋ ಅದಕ್ಕೆ ನಾನು ಬದ್ದನಾಗಿರುತ್ತೇನೆ’ ಎಂದು ತಿಳಿಸಿದ್ದಾರೆ.
ಮತ್ತೊಬ್ಬ ರೈತ ಸುರೇಶ್ ಚಲವಾದಿ ಅವರು ಮಾತನಾಡಿ, ’ಈಗ ಮತ್ತೆ ಗಣಜೂರಿನಲ್ಲಿ ಚಿನ್ನದ ಗಣಿಗಾರಿಕೆಯ ಮಾತುಗಳು ಕೇಳಿಬರುತ್ತಿವೆ. ಈ ಹಿಂದೆ ಇಲ್ಲಿಯೇ ಇದ್ದ ರೈತರು ಕೈಗಾರಿಕಾ ಕಾರಿಡಾರ್‌ಗೆ ಜಮೀನು ನೀಡಿ ಕಂಗಾಲಾಗಿದ್ದಾರೆ. ಗಣಜೂರಲ್ಲಿ ಚಿನ್ನದ ಗಣಿಗಾರಿಕೆ ಆರಂಭಿಸುವ ಕುರಿತಂತೆ ಬಹಳ ವರ್ಷದಿಂದ ಚರ್ಚೆ ನಡೀತಾ ಇದೆ. ರಾಜಕೀಯ ಕಾರಣದಿಂದ ಅದು ಬಂದಾಗಿತ್ತು. ರೈತರು ಗಣಿಗಾರಿಕೆ ನಡೆಸಲು ಭೂಮಿ ನೀಡಲು ತಯಾರಿರಬೇಕು. ಮೊದಲು ಕಂಪನಿ ಸರ್ಕಾರ, ರೈತರ ಜೊತೆ ಮಾತನಾಡಲಿ. ಅವರು ಕೇಳಿದ ದರಕ್ಕೆ ನಾವು ಭೂಮಿ ಕೊಡಲಾಗುವುದಿಲ್ಲ. ಈಗ ಕೈಗಾರಿಕಾ ಕಾರಿಡಾರ್‌ಗೆ ಭೂಮಿ ಕೊಟ್ಟ ರೈತರು ಮೋಸಕ್ಕೆ ಒಳಗಾಗಿದ್ದಾರೆ. ಇದು ಹೊಟ್ಟೆಗೆ ಅನ್ನ ತೆಗೆಯುವ ಫಲವತ್ತಾದ ಭೂಮಿ. ಇಲ್ಲಿ ನಾವು ಜನರ ಹೊಟ್ಟೆ ತುಂಬಿಸಲು ಬೆಳೆ ಬೆಳೆಯುತ್ತಿದ್ದೆವು. ಆದರೀಗ ಇವರು ಬಂಗಾರ ತೆಗೆಯಲು ಮುಂದಾಗಿದ್ದಾರೆ. ಅವರು ಹೇಳಿದ ದರಕ್ಕೆ ನಾವು ಭೂಮಿ ಕೊಡಲು ಸಾಧ್ಯವಿಲ್ಲ. ಇದು ಪಿತ್ರಾರ್ಜಿತ ಆಸ್ತಿ, ಒಂದು ಸಾರಿ ಇದನ್ನ ಕೊಟ್ಟರೆ ವಾಪಸ್ ಪಡೆಯಲಾಗಲ್ಲ. ನಮ್ಮ ಭೂಮಿಗೆ ಯಾವ ದರ ನೀಡುತ್ತಾರೆ ನೋಡುತ್ತೇವೆ. ರೈತ ಮುಖಂಡರಿದ್ದಾರೆ, ರೈತ ಸಂಘಟನೆಗಳ ಜೊತೆ ಚರ್ಚೆ ಮಾಡುತ್ತೇವೆ, ಚರ್ಚೆ ಮಾಡಿ ನಾವು ನಿರ್ಧಾರ ಮಾಡುತ್ತೇವೆ. ನಮಗೆ ಬೇರೆ ಹೊಲ ಕೊಟ್ಟರೂ ನಮಗೆ ಬೇಡ. ಸದ್ಯ ಇರುವ ಹೊಲ ನಮ್ಮ ತಾಯಿ ಇದ್ದಂಗೆ. ಬೇರೆ ಕಡೆ ಇದನ್ನ ಮಾರಾಟ ಮಾಡಿದರೆ ನಾವು ತಾಯಿ ಮಾರಾಟ ಮಾಡಿದಂಗೆ ಆಗಲಿದೆ. ಯಾವ ಸರ್ಕಾರ ಬರಲಿ, ಯಾವ ಕಂಪನಿ ಬಂದರೂ ನಾವು ಭೂಮಿ ಕೊಡುವುದಿಲ್ಲ, ನಮ್ಮ ರೈತರು, ಸಂಘಟನೆಯವರು ಏನು ತೀರ್ಮಾನ ಕೈಗೊಳ್ಳುತ್ತಾರೆ ನೋಡೋಣಾ’ ಎಂದಿದ್ದಾರೆ. ಒಂದು ಕಡೆಗೆ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಮುಖಿಯಾಗುತ್ತಿದೆ. ಚಿನ್ನದ ದರ ಏರಿಕೆಯ ನಾಗಾಲೋಟದಿಂದ ಜನಸಾಮಾನ್ಯರಿಗೆ ಅದು ಗಗನಕುಸುಮವಾಗಿದೆ. ಈ ಮಧ್ಯ ಹಾವೇರಿಯಲ್ಲಿ ದಶಕದ ನಂತರ ಚಿನ್ನದ ಗಣಿಗಾರಿಕೆ ಮರುಜೀವ! ಪಡೆದುಕೊಂಡಿದ್ದು, ರೈತರು ಆತಂಕದಲ್ಲಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಮೃದು ಹೃದಯದ, ಅಭಿವೃದ್ಧಿ ಹರಿಕಾರ ಬಸವರಾಜ ಶಿವಣ್ಣನವರ

ಮೃದು ಹೃದಯದ, ಅಭಿವೃದ್ಧಿ ಹರಿಕಾರ ಬಸವರಾಜ ಶಿವಣ್ಣನವರ ಉತ್ತರ ಕರ್ನಾಟಕದ ಹೆಬ್ಬಾಗಿಲು, ಸಾಂಸ್ಕೃತಿಕ...

ಯೋಗವು ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಬೇಕು: ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ

ಯೋಗವು ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಬೇಕು: ಜಿಲ್ಲಾಧಿಕಾರಿ ಡಾ....

ಮೋದಿ ಪ್ರಧಾನಿಯಾದ ಮೇಲೆ ಭಾರತಕ್ಕೆ ಶುಕ್ರದೆಸೆ : ಬಸವರಾಜ ಬೊಮ್ಮಾಯಿ

ಮೋದಿ ಪ್ರಧಾನಿಯಾದ ಮೇಲೆ ಭಾರತಕ್ಕೆ ಶುಕ್ರದೆಸೆ : ಬಸವರಾಜ ಬೊಮ್ಮಾಯಿ ಹಾವೇರಿ: ಯುಪಿಎ...

ಕಾಂಗ್ರೆಸ್ ನಿಂದ ದೊಡ್ಡ ಪ್ರಮಾಣದ ಪೊಲಿಟಿಕಲ್ ಕರಪ್ಷನ್: ಸಂಸದ ಬಸವರಾಜ ಬೊಮ್ಮಾಯಿ

ಕಾಂಗ್ರೆಸ್ ನಿಂದ ದೊಡ್ಡ ಪ್ರಮಾಣದ ಪೊಲಿಟಿಕಲ್ ಕರಪ್ಷನ್: ಸಂಸದ ಬಸವರಾಜ ಬೊಮ್ಮಾಯಿ ಹಾವೇರಿ:...