ಹಾವೇರಿ:ವಿಎಓ ನೇಮಕಾತಿ ಪರೀಕ್ಷಾ ಅಕ್ರಮ-ನಾಲ್ವರು ಹೆಡ್‌ಕಾನ್‌ಸ್ಟೆಬಲ್‌ ಅಮಾನತು

Date:

ಓರ್ವ ಸಿಪಿಐ , ಇಬ್ಬರು ಪಿಎಸ್‌ಐ ಗಳ ವಿರುದ್ಧ ಶಿಸ್ತು ಕ್ರಮಕ್ಕೆ   ಹಿರಿಯ ಅಧಿಕಾರಿಗಳಿಗೆ ವರದಿ
ಹಾವೇರಿ:ಹಾವೇರಿ ಜಿಲ್ಲೆಯಲ್ಲಿ ನಡೆದ ಗ್ರಾಮ ಆಡಳಿತ ಅಧಿಕಾರಿ (ಗಿಂಔ) ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ, ಕರ್ತವ್ಯ
 ಲೋಪದ ಆರೋಪದ ಮೇಲೆ ನ.೧೨ರಂದು ನಾಲ್ವರು ಹೆಡ್‌ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಯಶೋದಾ ವಂಟಗೋಡಿ ಆದೇಶ ಹೊರಡಿಸಿದ್ದಾರೆ. 
ಅಮಾನತುಗೊಂಡ ಸಿಬ್ಬಂದಿ ಮತ್ತು ಶಿಸ್ತು ಕ್ರಮದ ವಿವರಗಳು:
ಪರೀಕ್ಷಾ ಕೇಂದ್ರದಲ್ಲಿ ಭದ್ರತಾ ಲೋಪ ಎಸಗಿದ ಹಿನ್ನೆಲೆಯಲ್ಲಿ ಅಮಾನತುಗೊಂಡ ಹೆಡ್‌ಕಾನ್‌ಸ್ಟೆಬಲ್‌ಗಳು. ಸಿ. ಎ. ಮರೆಣ್ಣವರ, ಪಿ. ಸಿ. ಹೊನ್ನಾಳಿ, ಆರ್. ಎಂ. ಮಣಕವಾಡ ಮತ್ತು ಎಸ್. ಆರ್. ನಾಗನೂರು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. 
ಹಿರಿಯ ಅಧಿಕಾರಿಗಳ ವಿರುದ್ಧ ಶಿಫಾರಸು: ಕರ್ತವ್ಯ ನಿರ್ಲಕ್ಷ್ಯ ದ
  ಆರೋಪದಡಿ ಓರ್ವ ಸಿಪಿಐ (cPI) ಹಾಗೂ ಇಬ್ಬರು ಪಿಎಸ್‌ಐ (PSI) ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ.
ಇತರ ಸಿಬ್ಬಂದಿಗೆ ನೋಟಿಸ್: ಪರೀಕ್ಷಾ ಕರ್ತವ್ಯ ದಲ್ಲಿದ್ದ ಇತರ ನಾಲ್ವರು ಪೊಲೀಸ್ ಸಿಬ್ಬಂದಿ ಹಾಗೂ ಶಿಕ್ಷಣ ಇಲಾಖೆಯ ನಾಲ್ವರು ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. 
ಪ್ರಕರಣದ ಹಿನ್ನೆಲೆ: ಅಕ್ಟೋಬರ್ ೪ ರಂದು ಕರ್ನಾಟಕ
 ಪರೀಕ್ಷಾ ಪ್ರಾಧಿಕಾರ (ಏಇಂ) ನಡೆಸಿದ್ದ ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿತ್ತು. ಮೊಬೈಲ್ ಬಳಕೆ: ಅಭ್ಯರ್ಥಿ
 ಶಂಕರ್ ಬನ್ನೂರ್ ಎಂಬಾತ ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗಿ, ಗೂಗಲ್ ಲೆನ್ಸ್ (ಉoogಟe ಐeಟಿs) ಬಳಸಿ ಉತ್ತರಗಳನ್ನು ಬರೆದಿದ್ದ ಎನ್ನಲಾಗಿದೆ. ಈ ಮೂಲಕ ೨೦೦ಕ್ಕೆ ೧೫೧ ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದನು. 
ತನಿಖೆ : ಈ ಹಿಂದೆ ಕೆಎಸ್‌ಆರ್‌ಪಿ (ಏSಖP) ಕಾನ್‌ಸ್ಟೆಬಲ್ ಪರೀಕ್ಷೆಯಲ್ಲಿ ಕೇವಲ ೨೫ ಅಂಕ ಪಡೆದಿದ್ದ ಅಭ್ರ‍್ಥಿ, ವಿಎಒ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದಿದ್ದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನುಮಾನ ವ್ಯಕ್ತವಾಗಿತ್ತು. ಈ ಕುರಿತು   ಕೆಇಎ ಆದೇಶದ ಮೇರೆಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿವೆ. 

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿಯಲ್ಲಿ ಕಾಡುಹಂದಿ ಬೇಟೆ; ಆರೋಪಿ ಬಂಧನ

ಹಾವೇರಿಯಲ್ಲಿ ಕಾಡುಹಂದಿ ಬೇಟೆ; ಆರೋಪಿ ಬಂಧನ ಸುಟ್ಟ ಕಾಡುಹಂದಿ ಮಾಂಸ ಮಾರಾಟಕ್ಕೆ ಯತ್ನ...

ಶಿಗ್ಗಾಂವ : ಹೊಲದಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ; ಐವರು ಪಾರು

ಶಿಗ್ಗಾಂವ : ಹೊಲದಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ; ಐವರು ಪಾರು ಸೋಲೂರಿನಿಂದ...

ಹಾವೇರಿಯಲ್ಲಿ ರೋಮಾಂಚಕ ಹೋರಿ ಹಬ್ಬದ ವೈಭವ

ಹಾವೇರಿಯಲ್ಲಿ ರೋಮಾಂಚಕ ಹೋರಿ ಹಬ್ಬದ ವೈಭವ ಹಾವೇರಿ:...