
ಬಸವಣ್ಣನವರ ಚರಿತ್ರೆ ಮತ್ತು ಚಾರಿತ್ರ್ಯವನ್ನು ಯಾರೂ ಅಳಸಿ ಹಾಕಲು ಸಾಧ್ಯವಿಲ್ಲ
ಹಾವೇರಿ: ’ಬಸವ ಮಂಟಪ’ ಎಂಬ ಸಂಶೋಧಾನಾ ಕೃತಿ ಹೆಸರಿನಲ್ಲಿ ಬಸವಣ್ಣನವರು ಮತ್ತು ಆ ಕಾಲದ ಶರಣ ಕುಲದ ಸಾಧನೆಗೆ ಅವಮಾನ ಮಾಡಿದ ಕೃತ್ಯವನ್ನು ಸಾಹಿತಿ ಕಲಾವಿದರ ಬಳಗ, ಜಿಲ್ಲಾ ಮತ್ತು ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ಭಾರತ ಜ್ಞಾನ ವಿಜ್ಞಾನ ಸಮಿತಿ, ಎಸ್. ಎಫ್. ಆಯ್, ಡಿ.ವಾಯ್.ಎಫ್. ಆಯ್ ಮುಂತಾದ ಪ್ರಗತಿಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.
ವರ್ಗ ಮತ್ತು ವರ್ಣ ಸಂಘರ್ಷದ ಜೊತೆಗೆ ಸಮಾನತೆ ಮತ್ತು ಸಹಬಾಳ್ವೆ ಸಂದೇಶವನ್ನು ಕಲ್ಯಾಣವೆಂಬ ಪ್ರಯೋಗ ಶಾಲೆಯ ಮೂಲಕ ವಿಶ್ವಕ್ಕೆ ಮೊಟ್ಟ ಮೊದಲ ಬಾರಿ ಸಂದೇಶ ಕೊಟ್ಟ ಬಸವಣ್ಣನವರ ಅಸ್ತಿತ್ವವನ್ನೇ ಅಲ್ಲಗಳೆಯುವ ಕೊಳಕು ಮನಸ್ಸಿನ ರವಿ ಹಂಜ್ ಅವರ ನಡೆಯನ್ನು ಬಳಗಗಳು ಪತ್ರಿಕಾ ಪ್ರಕಟಣೆಯ ಮೂಲಕ ಖಂಡಿಸಿವೆ.
ಕರ್ನಾಟಕ ಸರಕಾರ ತಕ್ಷಣ ತೆಗೆದುಕೊಂಡು, ಪುಸ್ತಕವನ್ನು ಮುಟ್ಟುಗೋಲು ಹಾಕಿದ ಹಾಗೂ ಹಂಜ್ ಅವರನ್ನು ಬಂಧಿಸಿದ ಎಲ್ಲ ಕ್ರಮಗಳನ್ನು ಸಂಘಟನೆಗಳು ಇದೇ ಸಂದರ್ಭದಲ್ಲಿ ಸ್ವಾಗತಿಸಿ, ಯಾವ ಕಾಲಕ್ಕೂ ಬಸವಣ್ಣನವರ ಚರಿತ್ರೆ ಮತ್ತು ಚಾರಿತ್ರ್ಯವನ್ನು ಯಾರೂ ಅಳಸಿ ಹಾಕಲು ಸಾಧ್ಯವಿಲ್ಲ ಎಂದೂ ಪ್ರಕಟಣೆ ಹೇಳಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಲಿಂಗಯ್ಯ ಹಿರೇಮಠ, ತಾಲ್ಲೂಕಾ ಅಧ್ಯಕ್ಷರಾದ ವಾಯ್.ಬಿ. ಆಲದಕಟ್ಟಿ, ಪೃಥ್ವಿರಾಜ ಬೆಟಗೇರಿ, ಭಾರತ ಜ್ಞಾನ ವಿಜ್ಞಾನ ಸಮಿತಿಯ ರೇಣುಕಾ ಗುಡಿಮನಿ, ಜಗದೀಶ ಮಹಾರಾಜಪೇಟ, ಡಿ.ವೈ.ಎಫ್.ಆಯ್ ಮತ್ತು ಎಸ್.ಎಫ್.ಆಯ್ ಸಂಘಟನೆಗಳ ಬಸವರಾಜ ಪೂಜಾರ, ಬಸವರಾಜ ಬಿ. ಅರುಣಕುಮಾರ ನಾಗಾವತ್, ಖಲಂದರ ಅಲ್ಲಿಗೌಡರ, ಚೈತ್ರಾ ಕೊರವರ, ಅಲೆಮಾರಿ ಸಂಘದ ವಿಭೂತಿಶೆಟ್ಟಿ, ಸಾಹಿತಿ ಕಲಾವಿದರ ಬಳಗದ ಎಸ್.ಆರ್. ಹಿರೇಮಠ, ಹಿರಿಯ ಲೇಖಕಿ ಸಂಕಮ್ಮ ಸಂಕಣ್ಣನವರ, ಸೋಮನಾಥ ಡಿ, ಅನಿತ ಮಂಜುನಾಥ, ನೇತ್ರಾ ಅಂಗಡಿ ಮುಂತಾದವರು ಬೆಂಬಲಿಸಿದ್ದಾರೆಂದು ಹಿರಿಯ ಲೇಖಕ ಸತೀಶ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

