ಬಸವಣ್ಣನವರ ಕುರಿತು ಅವಹೇಳನಕಾರಿ ಅಂಶ: ಲೇಖಕ ರವಿ ಹಂಜ್ ವಿರುದ್ಧ ಕ್ರಮಕ್ಕೆ ಆಗ್ರಹ – ಹಾವೇರಿ ಯಲ್ಲಿ  ಬಸವಪರ ಸಂಘಟನೆಗಳ ಪ್ರತಿಭಟನೆ

Date:

ಹಾವೇರಿ: ಲೇಖಕ ರವಿ ಹಂಜ್ ಅವರು ರಚಿಸಿರುವ ‘ಬಸವ ಮಂಟಪ’ ಕೃತಿಯಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಕುರಿತು ಅವಹೇಳನಕಾರಿ ಹಾಗೂ ಆಕ್ಷೇಪಾರ್ಹ ಅಂಶಗಳನ್ನು ಪ್ರಕಟಿಸಿರುವುದನ್ನು ಖಂಡಿಸಿ, ಲೇಖಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶನಿವಾರ ಹಾವೇರಿಯ ವಿವಿಧ ಬಸವಪರ ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದವು.

ನಗರದ ಬಸವ ಬಳಗ, ಬಸವ ದಳ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಅಖಿಲ ಭಾರತ ಲಿಂಗಾಯತ ಮಹಾಸಭಾ, ಅಕ್ಕನ ಬಳಗ, ಹಾವೇರಿ ಶಹರ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಸೇರಿದಂತೆ ವಿವಿಧ ಬಸವಪರ ಸಂಘಟನೆಗಳು ಹಾಗೂ ಬಸವಾಭಿಮಾನಿಗಳು ಒಗ್ಗೂಡಿ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ವಿಶ್ವಗುರು ಬಸವಣ್ಣನವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಅವರು ಸಮಾನತೆ, ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳ ಮೂಲಕ ಸಮಾಜಕ್ಕೆ ಹೊಸ ದಿಕ್ಕು ತೋರಿದ ಮಹಾನ್ ದಾರ್ಶನಿಕರು. ಇಂತಹ ಮಹಾನ್ ವ್ಯಕ್ತಿತ್ವದ ಕುರಿತು ಕೃತಿಯಲ್ಲಿ ಅವಹೇಳನಕಾರಿ ಅಂಶಗಳನ್ನು ಸೇರಿಸಿರುವುದು ಬಸವತತ್ವದ ಅನುಯಾಯಿಗಳು ಹಾಗೂ ಬಸವಾಭಿಮಾನಿಗಳ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ. ಇಂತಹ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಿಸಿದ ಲೇಖಕರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಬಸವ ಬಳಗದ ಅಧ್ಯಕ್ಷ ವಿ.ಜಿ. ಯಳಗೇರಿ, ವಕೀಲರಾದ ಕೆ.ಸಿ. ಪಾವಲಿ, ಪ್ರಭು ಬೆನ್ನೂರ, ಮುರಿಗೆಪ್ಪ ಕಡೆಕೊಪ್ಪ, ಮಲ್ಲಿಕಾರ್ಜುನ ಹಿಂಚಿಗೇರಿ, ಶಿವಬಸಪ್ಪ ಮುದ್ದಿ, ಉಳಿವೆಪ್ಪ ಪಂಪಣ್ಣವರ, ಶಿವಯೋಗಿ ಬೆನ್ನೂರ, ಚಂದ್ರಶೇಖರ ಮಾಳಗಿ, ಎನ್.ಬಿ. ಕಾಳೆ, ಬಣಕಾರ, ಶಂಕ್ರಪ್ಪ ಜಾಯಗೊಂಡ, ಇಂದೂಧರ ಯರೇಸೀಮೆ, ಗಂಗಣ್ಣ ಮಾಸೂರ, ಜಗದೀಶ ಹತ್ತಿಕೋಟಿ, ನಾಗೇಂದ್ರಪ್ಪ ಮಂಡಕ್ಕಿ, ಚನ್ನಬಸವಣ್ಣ ರೊಡ್ಡನವರ, ನಾಗರಾಜ ವಿಭೂತಿ, ಪ್ರಭುಗೌಡ ಬಸನಗೌಡ, ಮಾಂತಣ್ಣ ಮಾಸೂರ, ಸಿದ್ದಲಿಂಗಪ್ಪ ಮಹಾರಾಜಪೇಟೆ, ಶಿವರಾಜ ಕಾಯಕದ, ಶಿವಬಸಪ್ಪ ಚೌಶೆಟ್ಟಿ, ಶಿವಯೋಗಿ ಅಂಗಡಿ, ಜಗದೀಶ ಅಂಕಲಕೋಟಿ, ಸಿ.ಬಿ. ಇಟಗಿ, ಶಿವಾನಂದ ಅಂಗಡಿ, ಮಾಲತೇಶ ಕರಿಮಣ್ಣವರ, ಯು.ಜೆ. ಶಶಿಧರ, ಬಸವರಾಜ ಮುಳಗುಂದ, ವಿಶ್ವನಾಥ ಅಂಗಡಿ, ಮಾಂತೇಶ ಯಡ್ರಾಮಿ, ಆನಂದ ಹೊಸಮನಿ, ಗಿರೀಶ ಶೆಟ್ಟರ್, ಜಿ.ಬಿ. ನಾವಿ, ಜಯಶ್ರೀ ಶಿವಪುರ, ಚಂಪಾ ಹುಣಸಿಕಟ್ಟಿ, ಕಮಲ ಬುಕ್ಕಶೆಟ್ಟಿ, ರಾಜೇಶ್ವರಿ ಬಿಷ್ಟನಗೌಡ್ರು, ಕಾವ್ಯ ಅಂಗಡಿ, ಕವಿತಾ ಕಾಯಕದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಬಸವಣ್ಣನವರ ಚರಿತ್ರೆ ಮತ್ತು ಚಾರಿತ್ರ್ಯವನ್ನು ಯಾರೂ ಅಳಸಿ ಹಾಕಲು ಸಾಧ್ಯವಿಲ್ಲ

ಬಸವಣ್ಣನವರ ಚರಿತ್ರೆ ಮತ್ತು ಚಾರಿತ್ರ್ಯವನ್ನು ಯಾರೂ ಅಳಸಿ ಹಾಕಲು ಸಾಧ್ಯವಿಲ್ಲ ಹಾವೇರಿ: ’ಬಸವ...

ಡಾ. ರಾಜಕುಮಾರ್  ಮರೋಳ ಅವರಿಗೆ ಭಾರತೀಯ ವೈದ್ಯಕೀಯ ಸಂಘದ ‘ ಪ್ರೊಫೆಸರ್ ಪ್ರಶಸ್ತಿ’ 

ಡಾ. ರಾಜಕುಮಾರ್  ಮರೋಳ ಅವರಿಗೆ ಭಾರತೀಯ ವೈದ್ಯಕೀಯ ಸಂಘದ ' ಪ್ರೊಫೆಸರ್ ಪ್ರಶಸ್ತಿ’  ಹಾವೇರಿ: ಹಾವೇರಿಯ...

ಸಾಮಾಜಿಕ ಸೇವೆ ಗುರುತಿಸಿ ಉಡಚಪ್ಪ ಮಾಳಗಿ ಅವರಿಗೆ ‘ಭೀಮ ಸೇವಾ ರತ್ನ’ ಪ್ರಶಸ್ತಿ

ಸಾಮಾಜಿಕ ಸೇವೆ ಗುರುತಿಸಿ ಉಡಚಪ್ಪ ಮಾಳಗಿ ಅವರಿಗೆ ‘ಭೀಮ ಸೇವಾ ರತ್ನ’...