ಕಾಯಂಗೊಳಿಸಲು ಆಗ್ರಹಿಸಿ ಫೆ.೧ರಿಂದ ಹೊರಗುತ್ತಿಗೆ ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ

Date:

ಹಾವೇರಿ: ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಪೌರಕಾರ್ಮಿಕರ ಮಾದರಿಯಲ್ಲಿ ಇತರೆ ನೌಕರರನ್ನು ನೇರಪಾವತಿಗೆ ಒಳಪಡಿಸಿ ಹಂತಹಂತವಾಗಿ ಕಾಯಂಗೊಳಿಸುವಂತೆ ರಾಜ್ಯ ಆಗ್ರಹಿಸಿ ಫೆ.೧ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಪಾಲಿಕೆ,ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಹೊರಗುತ್ತಿಗೆ ನೌಕರರ ಹಾವೇರಿಜಿಲ್ಲಾ ಘಟಕದ ಅಧ್ಯಕ್ಷ ರಾಜಪ್ಪ ಹೊಸಮನಿ ತಿಳಿಸಿದ್ದಾರೆ.
ರಾಜ್ಯ ಸಂಘದ ಕರೆಯ ಮೇರೆಗೆ ಫೆ.೧ರಿಂದ ಕುಡಿಯುವ ನೀರು ಹಾಗೂ ಸ್ವಚ್ಛತೆ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುವದು. ರಾಜ್ಯ ಸರಕಾರವೂ ಎರಡನೇ ಬಾರಿಗೆ ಪೌರಕಾರ್ಮಿಕರ ವಿಶೇಷ ನೇರ ನೇಮಕಾತಿ ನಡೆಸುತ್ತಿದೆ. ಆದರೆ ಇನ್ನುಳಿದ ಸಚ್ಛತಾ ಕಾರ್ಮಿಕರಾದ ಕಸ ಸಾಗಿಸುವ ವಾಹನ ಚಾಲಕರು, ಲೋಡರ್ಸ್, ಕ್ಲೀನರ್ಸ್, ಒಳಚರಂಡಿ ಕಾರ್ಮಿಕರು, ನೀರು ಸರಬರಾಜು ಸಹಾಯಕರು ಸೇರಿದಂತೆ ಹೊರಗುತ್ತಿಗೆ ನೌಕರರನ್ನು ನೇರಪಾವತಿಗೆ ಒಳಪಡಿಸದೆ ಗುತ್ತಿಗೆಯಲ್ಲಿ ಮುಂದುವರಿಸುವ ಸರಕಾರದ ತಾರತಮ್ಯು ಖಂಡಿಸಿ ಪೌರಕಾರ್ಮಿಕರ ಮಾದರಿಯಲ್ಲಿ ನೇರಪಾವತಿಗೆ ಆಗ್ರಹಿಸಿ ಫೆ.೧ರಿಂದ ರಾಜ್ಯಾದ್ಯಂತ ಅನಿರ್ದಿಷ್ಟ ಮುಷ್ಕರ ಹಮ್ಮಿಕೊಳ್ಳಲಾಗಿದೆ.
ನಗರಗಳ ಸ್ವಚ್ಛತೆಯಲ್ಲಿ ಪೌರಕಾರ್ಮಿಕರೊಂದಿಗೆ ಪೂರಕವಾಗಿ ದುಡಿಯುವ ಹೊರಗುತ್ತಿಗೆ ನೌಕರರನ್ನು ಈ ಹಿಂದಿನ ರಾಜ್ಯ ಸರಕಾರವೂ ಕಡೆಗಾಣಿಸಿದ್ದು ಈಗಿನ ಸರಕಾರವೂ ಗುತ್ತಿಗೆಯಲ್ಲಿ ಮುಂದುವರಿಸುವ ಮೂಲಕ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬ ಧೋರಣೆ ಅನುಸರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಹೊರಗುತ್ತಿಗೆ ನೌಕರರು ನೇರಪಾವತಿಗೆ ಆಗ್ರಹಿಸಿ ಫೆ.೧ರಂದು ಬೆಳಿಗ್ಗೆ ೧೦ಗಂಟೆಗೆ ನಗರದ ಹೊಸಮನಿ ಸಿದ್ದಪ್ಪ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಮೆರವಣಿಗೆ ನಡೆಸಿ, ಧರಣಿ ಮುಷ್ಕರ ನಡೆಸಲಾಗುವುದು .ಸದರಿ ಮುಷ್ಕರಲ್ಲಿ ಸುಮಾರು ೩೦೦ಕ್ಕೂ ಅಧಿಕ ಜನರು ಭಾಗವಹಿಸುವರೆಂದು ಹೊರಗುತ್ತಿಗೆ ನೌಕರರ ಹಾವೇರಿಜಿಲ್ಲಾ ಘಟಕದ ಅಧ್ಯಕ್ಷ ರಾಜಪ್ಪ ಹೊಸಮನಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ ಹಾವೇರಿ: ೨೦೨೮ ವಿಧಾನಸಭೆ ಚುನಾವಣೆಯಲ್ಲಿ...

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಾಕೀತು

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ...

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ ಹಾವೇರಿ: ಹಾವೇರಿ...

ಏ. ೧೦ರಂದು ರಾಜ್ಯಾದ್ಯಂತ “ಗ್ಯಾಂಗ್ಸ್ ಆಫ್ ಯುಕೆ” ಚಿತ್ರದ ಬಿಡುಗಡೆ

ಏ. ೧೦ರಂದು ರಾಜ್ಯಾದ್ಯಂತ "ಗ್ಯಾಂಗ್ಸ್ ಆಫ್ ಯುಕೆ" ಚಿತ್ರದ ಬಿಡುಗಡೆ ಹಾವೇರಿ: ಡೆಡ್ಲಿ...