ಬ್ಲೌಜ್‌ಗಾಗಿ ಹಾವೇರಿಯ ಮಹಾತ್ಮಾಗಾಂಧಿರಸ್ತೆಯ ಬಟ್ಟೆ ಅಂಗಡಿಯೊಂದರಲ್ಲಿ ಮಾರಾಮಾರಿ….!

Date:

ಹಾವೇರಿ: ಶುಭ ಕಾರ್ಯಕ್ಕೆಂದು ಮಹಿಳೆಯೋರ್ವರು ಬ್ಲೌಜ್ ಹೊಲಿಯಲು ಆರ್ಡರ ನೀಡಿದ್ದ ಬಟ್ಟೆ ತಯಾರಿಕೆ, ಮಾರಾಟ, ಟೇಲರಿಂಗ್ ಸೇರಿದಂತೆ ವಿವಿಧ ವ್ಯಾಪಾರ ವಹಿವಾಟು ನಡೆಸುವ ಬಟ್ಟೆ ಅಂಗಡಿಯವರು ಸರಿಯಾಗಿ ಬ್ಲೌಜ್ ಹೊಲಿಯದ ಕಾರಣಕ್ಕೆ ಸರಿಯಾಗಿ ಬ್ಲೌಜ್ ಹೊಲೆದಿಲ್ಲ ಎಂದು ಮಹಿಳೆ ಹೇಳಿದ ಕಾರಣಕ್ಕೆ, ಬಟ್ಟೆ ಅಂಗಡಿಯಲ್ಲಿದ್ದ ಇನ್ನೋರ್ವ ಮಹಿಳೆ ನಿಗದಿ ಪಡಿಸಿದ ದರಕ್ಕಿಂದ ಹೆಚ್ಚಿನದರವನ್ನ ಕೇಳಿದ್ದಾರೆಂದು, ಹೆಚ್ಚಿನದರ ಕೊಡಲು ನಿರಾಕರಿಸಿದ ಗ್ರಾಹಕ ಮಹಿಳೆ ಬೆಳಿಗ್ಗ ಶುಭ ಕಾರ್ಯವಿದೆ. ನೀವು ಹೇಳಿದ ದರ ಮೊದಲ ನೀಡಿದ್ದೇವೆ., ನೀವು ಹೊಲೆದಿರುವ ಬ್ಲೌಜ್ ಸ್ಟಿಚಿಂಗ್ ಸರಿಯಾಗಿಲ್ಲ ಎಂದು ಪ್ರಶ್ನಿಸಿದ ವೇಳೆ ಮಾತಿಗೆ ಮಾತು ಬೆಳೆದು ಬ್ಲೌಜ್ ಹೊಲಿಸಿಲು ಬಂದಿದ್ದ ಮಹಿಳೆಯನ್ನು ಇನ್ನೋಬ್ಬ ಮಹಿಳೆ ಜಡೆಹಿಡಿದು ಹಲ್ಲೆಮಾಡಿರುವ ಘಟನೆ, ಮಾರಾಮಾರಿ ಘಟನೆ ಭಾನುವಾರ ರಾತ್ರಿ ೮ರ ಸುಮಾರಿಗ ಹಾವೇರಿನಗರದ ಮಹಾತ್ಮಾಗಾಂಧಿ ರಸ್ತೆಗೆ ಹೊಂದಿಕೊಂಡಿರುವ ಗಜಾನನ ವೃತ್ತದಬಳಿಯ ಅಂಗಡಿಯೊಂದರಲ್ಲಿ ನಡೆದಿದೆ.
ಮಹಿಳೆಯೇ ಇನ್ನೊಬ್ಬ ಮಹಿಳೆಯ ಮೇಲೆ ಹಲ್ಲೆಮಾಡಿರುವ ಸುದ್ದಿ ಕಾಡ್ಗಿಚ್ಚಿಂತೆ ಹರಡಿ ಬಹುಮಹಡಿ ಸಂಕಿರ್ಣದಂತಿರುವ ಅಂಗಡಿಯ ಮುಂದೆ ನೂರಾರು ಜನರು ಸೇರಿದ್ದರು. ಈ ಸಂದರ್ಭದಲ್ಲಿ ಮಹಾತ್ಮಾಗಾಂಧಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಹಲ್ಲೆಗೊಳಗಾದ ಮಹಿಳೆಯ ಬಂಧುಗಳು, ಸಾರ್ವಜನಿಕರು ಈ ವೇಳೆ ಅಂಗಡಿಯ ಮುಂದೆ ಜಮಾಯಿಸಿ ಮಹಿಳೆಯ ಮೇಲೆ, ಮಹಿಳೆ ನಡೆಸಿರುವ ದೌರ್ಜನ್ಯವನ್ನು ಖಂಡಿಸಿದರು. ಒಂದು ಹಂತದಲ್ಲಿ ಸಾರ್ವಜನಿಕರು ಬಟ್ಟೆ ಅಂಗಡಿಯ ಮುಂದೆ ಸೇರಿ ಅಂಗಡಿಯವರು ನಿತ್ಯ ಒಂದಿಲ್ಲ ಒಂದು ಕಾರಣಕ್ಕೆ ಗ್ರಾಹಕರ ಜೊತೆಗೆ ಜಗಳ ಕಾಯುತ್ತಾರೆ. ಇವರದ್ದು ಬರಿ ಜಗಳವಾಡುವದೆ ಆಗಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತ ಪಡಿಸಿದರು.
ವಾಣಿಜ್ಯ ಸಂಕಿರ್ಣದಲ್ಲಿನ ಮಹಿಳಾ ಟೇಲರ್ ಬಳಿ ಶುಭ ಕಾರ್ಯಕ್ಕೆಂದು ಬ್ಲೌಜ್ ಹೊಲಿಯಲು ಆರ್ಡರ್ ನೀಡಿದ್ದ ಮಹಿಳೆಗೆ ಬ್ಲೌಜ್ ಸರಿಪಡಿಸಿಕೊಡಲು ನಿಗದಿ ಪಡಿಸಿದ್ದಕ್ಕಿಂತ ಹೆಚ್ಚಿನದರ ಕೇಳಿದ್ದಕ್ಕೆ ಗದ್ದಲ ನಡೆಯಿತು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದ ಕಾರಣಕ್ಕೆ ಅಕ್ಕ-ಪಕ್ಕದ ಅಂಗಡಿಯವರು ತಮ್ಮ ತಮ್ಮ ಅಂಗಡಿಗಳ ಶೆಟರ್‍ಸ್‌ಗಳನ್ನು ಮುಚ್ಚಿಕೊಂಡರು. ಈ ಅಂಗಡಿಯಲ್ಲಿ ನಿತ್ಯ ಒಂದಿಲ್ಲ ಒಂದು ಕಾರಣಕ್ಕೆ ಗಲಾಟೆಗಳು ನಡೆಯುತ್ತಲೇ ಇವೆ. ಸಾಕಷ್ಟು ಬಾರಿ ಜಗಳ ಬಿಡಿಸಿದರು ನಿತ್ಯ ತಂಟೆ-ತಕರಾರಗಳು ನಡೆಯತ್ತಲೇ ಇವೆ. ಇಲ್ಲಿಂದ ಕೇವಲ ನೂರು ಮೀಟರ್ ಅಂತರದಲ್ಲಿ ಎಸ್‌ಪಿ ಅವರ ಕಚೇರಿ ಇದೆ. ಆದರೂ ಸಹ ಈ ಅಂಗಡಿಯವರು ಗ್ರಾಹಕರೊಂದಿಗೆ ನಡೆದುಕೊಳ್ಳವ ರೀತಿ, ಜಗಳಗಳಿಗೆ ಕಡಿವಾಣ ಬಿಳುತ್ತಿಲ್ಲ ಎನ್ನುವುದು ಸಾರ್ವಜನಿಕರ ಅನಿಸಿಕೆಯಾಗಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ

--      ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ ಹಾವೇರಿ: ಇಲ್ಲಿನ ಜಿಲ್ಲಾ...

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು ಹೊರಟಿದ್ದು...

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ ಹಾವೇರಿ : ಹಾವೇರಿನಗರದಲ್ಲಿ ಕಳೆದ ವಾರದಿಂದ...

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ ಹಾವೇರಿ: ಯುವ ಜನಾಂಗ...