ಅಕ್ಕಿಆಲೂರು ಕೆರೆಯಲ್ಲಿ ಮಂಗೋಲಿಯಾದ  “ಪಟ್ಟೆತಲೆ ಹೆಬ್ಬಾತುಗಳ ಕಲರವ”

Date:

ದೂರದ ಮಂಗೋಲಿಯಾದ ಪಟ್ಟೆತಲೆ ಹೆಬ್ಬಾತುಗಳು(ಬಾರ್ ಹೆಡೆಡ್‌ಗೂಸ್)ಜಿಯ ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನ ಕೆರೆಯಲ್ಲಿ ಕಳೆದ ಮೂರ್‍ನಾಲ್ಕುದಿನಗಳಿಂದ ಕಾಣಿಸಿಕೊಂಡಿವೆ. ಪಕ್ಷಿ ಪ್ರೇಮಿ ಕಿರಿಯ ಮಿತ್ರ ಕೂಸನೂರಿನ  ಪ್ರವೀಣ ಪೂಜಾರ ಪಟ್ಟೆತಲೆ ಹೆಬ್ಬಾತುಗಳು ಅಕ್ಕಿ ಆಲೂರಿನ ಕೆರೆಯಲ್ಲಿ ಕಾಣಿಸಿಕೊಂಡಿರುವ ಬಗ್ಗೆ ವಿಷಯ ತಿಳಿಸಿದಾಗ ಸಹಜವಾಗಿ ಅಚ್ಚರಿ ಎನಿಸಿತು.
ಈ ಪಕ್ಷಿಗಳ ಗದಗಜಿಲ್ಲೆಯ ಮಾಗಡಿ ಕೆರೆಗೆ ಚಳಿಗಾಲದ ನವಂಬರ್ ತಿಂಗಳಲ್ಲಿ ಬಂದಿರುವುದು ಗೊತ್ತಿತ್ತು. ಆದರೆ ಅಕ್ಕಿಆಲೂರಿನ ಕೆರೆಗೆ ಬಂದಿರುವುದು ಏಕಿರಬಹುದು? ಎನ್ನುವ ಕೂತಹಲದೊಂದಿಗೆ ಹಾವೇರಿಯ ಇನ್ನೋರ್ವ ಪಕ್ಷಿ ಪ್ರೇಮಿ ವನ್ಯಜೀವಿ ಛಾಯಾಗ್ರಾಹಕ, ಕಿರಿಯ ಮಿತ್ರ ಅಮೃತ ಗೂಂಜಾಳ ಅವರೊಂದಿಗೆ ಫೆ.೨೩ರಂದು ಭಾನುವಾರ  ಬೆಳಿಗ್ಗೆ ೮-೧೫ಕ್ಕೆ ಬೈಕ್‌ನಲ್ಲಿ ನಮ್ಮ ಪ್ರಯಾಣ ಅಕ್ಕಿಆಲೂರಿನ ಕಡೆಗೆ ಸಾಗಿತು.
ಅದಾಗಲೇ ಅಂದಾಜು ೫೦೦ರಕ್ಕೂ ಅಧೀಕ ಸಂಖ್ಯೆಯಲ್ಲಿ ಪಟ್ಟೆತಲೆ ಬೆಬ್ಬಾತುಗಳು ಕೆರೆಯಲ್ಲಿ ಈಜುತ್ತಾ ವಿಶ್ರಾಂತಿಪಡೆಯಲಾರಂಭಿಸಿದ್ದವು. ಪ್ರಪಂಚದಲ್ಲಿನ ಎಲ್ಲ ಹಕ್ಕಿಗಳಿಗಿಂತ ಅತ್ಯಂತ ಎತ್ತರದಲ್ಲಿ ಹಾರಾಡಬಲ್ಲ ಪಕ್ಷಿಗಳಲ್ಲಿ ಇದಕ್ಕೆ ಅಗ್ರ ಸ್ಥಾನವಿದೆ. ೧೮ ಸಾವಿರ ಅಡಿಗಳಿಗಿಂತ ಮೇಲೆ ಹಾರಿ ಹಿಮಾಲಯ ಪರ್ವತದ ಸಾಲುಗಳನ್ನು ದಾಟಿ ಚಳಿಗಾಲದಲ್ಲಿ ಭಾರತಕ್ಕೆ ಇವು ವಲಸೆ ಬರುತ್ತವೆ.
ಹಲವಾರು ವರ್ಷಗಳಿಂದ  ಗದಗಜಿಲ್ಲೆಯ ಲಕ್ಷ್ಮೇಶ್ವರ ಹತ್ತಿರದ  ಮಾಗಡಿ ಕೆರೆಯ ಪ್ರದೇಶಕ್ಕೆ ವಲಸೆ ಬರುವುದನ್ನು  ರೂಢಿ ಮಾಡಿಕೊಂಡಿರುವ ಇವು ಪ್ರತಿ ವರ್ಷ ನವೆಂಬರ್ ೧೦ನೇ ತಾರೀಖಿನ ಆಸುಪಾಸಿನ ದಿನಗಳಲ್ಲಿ ಮಾಗಡಿ ಕೆರೆಗೆ ಬರುತ್ತವೆ. ಮಾರ್ಚ್ ೨ನೇ ವಾರದಲ್ಲಿ ಮರಳಿ ಹೋಗುತ್ತವೆ.
ಪಟ್ಟೆ ತಲೆ ಹೆಬ್ಬಾತು ೭೫ ಸೆ.ಮೀ. ಉದ್ದವಿದೆ. ಇವು ನೋಡಲು ಬಾತುಕೋಳಿಗಿಂತ ದೊಡ್ಡದಾದ ಬೂದು ಮೈ ಬಣ್ಣದ ಹಕ್ಕಿಗಳಿವು. ವಿಶೇಷವಾಗಿ ಇವುಗಳಿಗೆ ತಲೆಯ ಮೇಲೆ ಕಪ್ಪು ಬಣ್ಣದ ಎರಡು ಪಟ್ಟಿಗಳಿವೆ. ಇದರ ಕಂದು ಕತ್ತಿನ ಎರಡು ಬದಿಗಳಲ್ಲಿ ನೀಳವಾದ ಬಿಳಿ ಬಣ್ಣದ ಪಟ್ಟಿಗಳಿವೆ. ಇವುಗಳ ಬೂದು ರೆಕ್ಕೆಯ ತುದಿಯಲ್ಲಿ ಕಪ್ಪು ಬಣ್ಣ ಇದೆ. ಬಿಳಿ ಬಾಲದ ಅಂಚು ಬೂದು ಬಣ್ಣದ ಮೊಂಡು ಬಾಲ, ಇದರ ಕೊಕ್ಕು ಹಳದಿ ಬಣ್ಣ ಹೊಂದಿದೆ,ಕೊಕ್ಕಿನ ತುದಿಯಲ್ಲಿ ಕಪ್ಪು ಮಚ್ಚೆ ಇದೆ. ಇವುಗಳ ಕೊಕ್ಕು ಹಸಿರು ಮೇವು, ಹುಲ್ಲು, ಬೀಜಗಳನ್ನು ಕಿತ್ತು ತಿನ್ನಲು ಬರುವಂತೆ ಈ ಹೆಬ್ಬಾತುಗಳ ಕೊಕ್ಕಿನ ಕೊನೆ ಭಾಗವು ಬಗ್ಗಿಸಿದ ಕೊಂಡಿಯಂತೆ ಮಾರ್ಪಾಡಾಗಿರುವುದು ವಿಶೇಷ. ಇದರ ಕಾಲುಗಳು ನೀರಿನಲ್ಲಿ ಜಲ ಕ್ರೀಡೆ, ನೀರಾಟ, ವಿಶ್ರಾಂತಿಪಡೆಯಲು, ನೀರಿನಲ್ಲಿ ಸರಾಗವಾಗಿ ಕಾಲು ಕಳೆಯಲು ಬರುವಂತೆ ಇವಕ್ಕೂ ಉಳಿದ ಬಾತುಗಳಂತೆ ತಿಳಿ ಗುಲಾಬಿ ಬಣ್ಣದ ಜಲಪಾದ ಹೊಂದಿವೆ. ಇವು ನೀರಿನಿಂದ ಎದ್ದು ಒಟ್ಟಿಗೆ ಹಾರಾಡುವಾಗ “ವಿ”ಆಕಾರದಲ್ಲಿ ಅಥವಾ ಆಧುನಿಕ ಯುದ್ಧ ವಿಮಾನದಂತೆ ಕಂಡು ಬರುತ್ತವೆ.
ಇವು  ಪ್ರತಿ ದಿನವೂ ೮೦ ಕಿ.ಮೀ ನಿಂದ ೧೦೦ ಕಿ.ಮೀವರೆಗೆ ಸಂಚರಿಸಿ ಹೊಲ-ಗದ್ದೆಗಳಲ್ಲಿ ದೊರೆಯುವ ಜೋಳ, ಕಡಲೆ, ಶೇಂಗಾ, ಗೋಧಿ, ಭತ್ತ, ಎಳೆ ಪೈರು, ಇನ್ನೂ ಮುಂತಾದ ಚಳಿಗಾಲದ ಸಮಯದಲ್ಲಿ ದೊರೆಯುವ ದವಸ ಧಾನ್ಯಗಳನ್ನು ಆಹಾರವಾಗಿ ಉಪಯೋಗಿಸಿ ಯೋಗ್ಯವಾದ ವಿಶೇಷ ಜಾತಿಯ ಬೀಜ ಕೋಶಗಳನ್ನು ತಿಂದು ದೇಹಾರೋಗ್ಯ ಉಳಿಸಿಕೊಳ್ಳುತ್ತ ಹಾಗೂ ಇವು ಮೇಯುವುದನ್ನು ಮುಗಿಸಿದ ನಂತರ   ತಿರುಗಿ  ಅಕ್ಕಿಆಲೂರು ಕೆರೆಗೆ ಬಂದಿಳಿದು ವಿಶ್ರಾಂತಿ ಪಡೆಯುತ್ತವೆ.
ಈ ಹೆಬ್ಬಾತುಗಳ ವಲಸೆ ಮಾರ್ಗ ಕಂಡು ಹಿಡಿಯಲು ಪಕ್ಷಿ ವಿಜ್ಞಾನಿಗಳು ಈ ಹಕ್ಕಿಗಳಿಗೆ ಕೊರಳಿಗೆ ಟ್ಯಾಗ್ ಹಾಗೂ ಕಾಲಿಗೆ ಉಂಗುರ ತೊಡಿಸಿರುತ್ತಾರೆ. ರೇಡಿಯೋ ಕಾಲರ್, ಚಿಪ್ಸ್ ಮುಂತಾದ ಎಲೆಕ್ಟ್ರಾನಿಕ್ ಉಪಕರಣವನ್ನು ಅಳವಡಿಸಿರುತ್ತಾರೆ.  ಅಂದರೆ ಮಂಗೋಲಿಯಾದಿಂದ  ಕರ್ನಾಟಕದ ಕೆಲವು ಕೆರೆಗಳ ವರೆಗೆ ಈ ಹಕ್ಕಿ ತನ್ನ ಚಲನವಲನದ ಬಗ್ಗೆ ಸಾಕಷ್ಟು ವ್ಯತ್ಯಾಸಗಳನ್ನು ಹಾಗೂ ಬದಲಾವಣೆಗಳನ್ನು ಮಾಡಿಕೊಂಡು ಬರುತ್ತವೆ. ಎಲೆಕ್ಟ್ರಾನಿಕ್ ಉಪಕರಣ ಮೂಲಕ ಇದರ ವಲಸೆ ಮಾರ್ಗ ಹಾಗೂ ಸ್ಥಿತಿ-ಗತಿ, ಭೂ ಸ್ಪರ್ಶ ಅಥವಾ ಇಲ್ಲಿಗೆ ಬಂದ ದಿನದ ಕುರಿತು ಪಕ್ಷಿಗಳ ಸಮಗ್ರ ಅಧ್ಯಯನ ಮಾಡಲು ಪಕ್ಷಿ ವಿಜ್ಞಾನಿಗಳಿಗೆ ಹಾಗೂ ಪಕ್ಷಿ ವೀಕ್ಷಕರಿಗೆ ಮಾಹಿತಿ ಲಭಿಸುತ್ತದೆ.
ಅಕ್ಕಿ ಆಲೂರುಕೆರೆಯಲ್ಲಿ ಈ ವಲಸೆ ಪಟ್ಟೆತಲೆ ಬೆಬ್ಬಾತುಗಳ  ಜೊತೆಗೆ ಇತರೇ ಸ್ಥಳೀಯ ಪಕ್ಷಿಗಳಾದ ಹಾವಕ್ಕಿ, ನೀರುಕಾಗೆ, ರಿವರ್‌ಟರ್ನ ಸೇರಿದಂತೆ ಅನೇಕ ಪಕ್ಷಿಗಳನ್ನು ಕಾಣಬಹುದಾಗಿದೆ. ಪಕ್ಷಿ ಸಂಕುಲ ಉಳಿಸುವ ನಿಟ್ಟಿನಲ್ಲಿ   ಅರಣ್ಯ ಇಲಾಖೆ ಈ ವಲಸೆ ಹಕ್ಕಿಗಳ ರಕ್ಷಣೆಗೆ ಕಾವಲುಗಾರರನ್ನುನೇಮಿಸುವ  ಮೂಲಕ ಇವು ಇಲ್ಲಿ ಇರುವಷ್ಟುದಿನ ಇವುಗಳನ್ನು ಸಂರಕ್ಷಿಸಬೇಕಿದೆ. ಹೆಚ್ಚೆಂದರೆ ಈ ಪಕ್ಷಿಗಗಳು ಮಾರ್ಚ ಎರಡನೆವಾರದಲ್ಲಿ ಇಲ್ಲಿಂದ ಹಾರಿಹೋಗುತ್ತವೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ   ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕಿದೆ ಎನ್ನುತ್ತಾ ನಮ್ಮ ಪ್ರಯಾಣ ಮರಳಿ ಹಾವೇರಿಯ ಕಡೆಗೆ ಸಾಗಿತು.  ಚಿತ್ರ-ಬರಹ: ಮಾಲತೇಶ ಅಂಗೂರ, ಹಾವೇರಿ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಮೊಬೈಲ್ ಮಕ್ಕಳು ಸಮಾಜಮುಖಿಗಳಾಗುವುದಿಲ್ಲ :ಕೆ.ವಿ.ಪ್ರಭಾಕರ್  

ಮೊಬೈಲ್ ಮಕ್ಕಳು ಸಮಾಜಮುಖಿಗಳಾಗುವುದಿಲ್ಲ :ಕೆ.ವಿ.ಪ್ರಭಾಕರ್     ಹಾವೇರಿ : ರಾಗಿಕಾಳಿಗೆ ಭೂಮಿಯನ್ನೇ...

ಹಾವೇರಿಯ ಗೆಳೆಯರ ಬಳಗಕ್ಕೆ ಪ್ರತಿಷ್ಠಿತ ರಾ.ಹ. ದೇಶಪಾಂಡೆ ಪ್ರಶಸ್ತಿಯ ಸಂಭ್ರಮ

  ಹಾವೇರಿಯ ಗೆಳೆಯರ ಬಳಗಕ್ಕೆ ಪ್ರತಿಷ್ಠಿತ ರಾ.ಹ. ದೇಶಪಾಂಡೆ ಪ್ರಶಸ್ತಿಯ ಸಂಭ್ರಮ ಹಾವೇರಿ _...

“ಎಕ್ಕ ಪೈಸಾ ವಸೂಲಿ ಪಕ್ಕಾ”

"ಎಕ್ಕ ಪೈಸಾ ವಸೂಲಿ ಪಕ್ಕಾ" ಬಹುದಿನಗಳ ನಂತರ ಪಕ್ಕಾ ಪೈಸಾ ವಸೂಲಿ ಎನ್ನಬಹುದಾದ...

ಹಾವೇರಿ ಜಿಲ್ಲೆಯ ನೂತನ ಹಾಗೂ ಪ್ರಥಮ ಮಹಿಳಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಯಶೋದಾ ರೆಡ್ಡಿ ವಂಟಗೋಡಿ ಅಧಿಕಾರ ಸ್ವೀಕಾರ

ಹಾವೇರಿ ಜಿಲ್ಲೆಯ ನೂತನ ಹಾಗೂ ಪ್ರಥಮ ಮಹಿಳಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಯಶೋದಾ...