ಅಭಿವೃದ್ಧಿಪರ ಕೆಲಸಕ್ಕೆ ಸದಾ ಸಹಕಾರ : ಉಡಚಪ್ಪ ಮಾಳಗಿ

Date:

ಅಭಿವೃದ್ಧಿಪರ ಕೆಲಸಕ್ಕೆ ಸದಾ ಸಹಕಾರ : ಉಡಚಪ್ಪ ಮಾಳಗಿ
ಹಾವೇರಿ: ಜಿಲ್ಲೆಯ ಸರ್ವಾಂಗಿಣ ಅಭಿವೃದ್ಧಿಗೆ ನೂತನ ಸಚಿವರಾದ ರುದ್ರಪ್ಪ ಲಮಾಣಿ ಅವರ ಕ್ರಿಯಾಶೀಲ ಹಾಗೂ ಅಭಿವೃದ್ಧಿಪರ ಕೆಲಸಕ್ಕೆ ಸದಾ ಸಹಕಾರ ನೀಡಲಾಗುವುದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ರಾಜ್ಯಾಧ್ಯಕ್ಷ ಉಡಚಪ್ಪ ಮಾಳಗಿ ಹೇಳಿದರು.
ನಗರದಲ್ಲಿನ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ವಿವಿಧ ಸಂಘಟನೆಗಳ ವತಿಯಿಂದ ನೂತನ ಸಚಿವ ರುದ್ರಪ್ಪ ಲಮಾಣಿ ಅವರಿಗೆ ಗೌರವಿಸಿ ಸನ್ಮಾನಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ನೀಡಿದ್ದು ಹೆಮ್ಮೆಯ ವಿಷಯವಾಗಿದೆ. ಸಾಮಾಜಿಕ ನ್ಯಾಯದಡಿ ಲಂಬಾಣಿ ಸಮಾಜಕ್ಕೆ ನ್ಯಾಯ ಒದಗಿಸಿದಂತಾಗಿದೆ. ತುಂಬಾ ಅನುಭವಿಗಳಾದ ರುದ್ರಪ್ಪ ಲಮಾಣಿ ಅವರು ಹಿಂದೆ ಮುಜರಾಯಿ ಸಚಿವರಾಗಿದ್ದಾಗ ರಾಜ್ಯದಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಸೌಮ್ಯ ಸ್ವಾಭಾವದವರಾಗಿದ್ದು, ಇವರಿಂದ ಜಿಲ್ಲೆಯು ಹೆಚ್ಚಿನ ಅಭಿವೃದ್ಧಿ ಆಗಲಿ.ಜಿಲ್ಲೆಯ ಅಭಿವೃದ್ಧಿ ಕೆಲಸಕ್ಕೆ ಅವರೊಂದಿಗೆ ಸದಾ ಇರಲಿದ್ದೇವೆ. ರುದ್ರಪ್ಪ ಲಮಾಣಿ ಅವರಿಗೆ ಮುಂದಿನ ದಿನಮಾನಗಳಲ್ಲಿ ಉತ್ತಮ ಖಾತೆ ದೊರೆಯಲಿ. ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಜಿಲ್ಲೆಯ ಪ್ರಗತಿಗಾಗಿ ನೂತನ ಸಚಿವರಾದ ರುದ್ರಪ್ಪ ಲಮಾಣಿ ಅವರನ್ನು ಪ್ರೋತ್ಸಾಹಿಸೋಣ ಎಂದು ಉಡಚಪ್ಪ ಮಾಳಗಿ ಅವರು ನೂತನ ಸಚಿವರಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಸಂಜೀವಕುಮಾರ ನೀರಲಗಿ,ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್ ಗಾಜೀಗೌಡ್ರ ಮುಖಂಡರಾದ ಪ್ರಭುಗೌಡ ಬಿಷ್ಟನಗೌಡ್ರ,ಎಂ.ಎಂ ಮೈದೂರ,ಗುಡ್ಡನಗೌಡ ಅಂದಾನಿಗೌಡ್ರ,ಶಂಕರ ಮೆಹರವಾಡೆ,ಫಕ್ಕಿರಗೌಡ ಗಾಜೀಗೌಡ್ರ,ಮಾಲತೇಶ ಕರ್ಜಗಿ,ಅಶೋಕ ಮರೆಣ್ಣನವರ, ಎನ್.ಎನ್.ಗಾಳೆಮ್ಮನವರ,ರಾಜು ದಂಡಿನ,ಕರಬಸಪ್ಪ ಹಲಗಣ್ಣನವರ,ನಾಗರಾಜ ಬಡೆಮ್ಮನವರ,ಶ್ರೀಕಾಂತ ಗಡ್ಡಿ,ಶೇಖಣ್ಣ ಮಾಳಗಿ,ದ್ಯಾಮಣ್ಣ ಅರಸನಾಳ, ಶಿವು ಮುದಿಮಲ್ಲಣ್ಣನವರ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ಗಣ್ಯರು ಮತ್ತು ನಾಗರಿಕರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿಯ ಶೆಟ್ಟಿ ವಿಭೂತಿಗೆ ಮನೆಗೊಂದು ಗ್ರಂಥಾಲಯಕ್ಕಾಗಿ ಪ್ರಶಸ್ತಿ ಘೋಷಣೆ

ಹಾವೇರಿಯ ಶೆಟ್ಟಿ ವಿಭೂತಿಗೆ ಮನೆಗೊಂದು ಗ್ರಂಥಾಲಯಕ್ಕಾಗಿ ಪ್ರಶಸ್ತಿ ಘೋಷಣೆ ಹಾವೇರಿ: ಕನ್ನಡ ಪುಸ್ತಕ...

“ಗಣಿತಯಾವಗಲೂ ಸತ್ಯವನ್ನೇ ಹೇಳುತ್ತದೆ” ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಕೋರಗಲ್ ವಿರುಪಾಕ್ಷಪ್ಪ

"ಗಣಿತಯಾವಗಲೂ ಸತ್ಯವನ್ನೇ ಹೇಳುತ್ತದೆ" ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ...

ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ಅವರಿಗೆ ಅಭಿನಂದನಾ ಪತ್ರ

  ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ಅವರಿಗೆ ಅಭಿನಂದನಾ ಪತ್ರ ಹಾವೇರಿ: ಅಟಲ್‌ಜೀ ಜನಸ್ನೇಹಿ ಕೇಂದ್ರ ಯೋಜನೆಯಡಿಯಲ್ಲಿ...

ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾ ಸಂಯೋಜಕರಾಗಿ ಸಂಜಯಗಾಂಧಿ ನೇಮಕ

ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾ ಸಂಯೋಜಕರಾಗಿ ಸಂಜಯಗಾಂಧಿ ನೇಮಕ ಹಾವೇರಿ: ಹಾವೇರಿ ಜಿಲ್ಲೆಯ...