ಮಾದಿಗ ಸಮುದಾಯ ಸಮಗ್ರ ಅಭಿವೃದ್ಧಿಗೆ ಸದಾಶಿವ ವರದಿ ಜಾರಿಯಾಗಲಿ: ಹಾಲಹರವಿ

Date:

ಹಾವೇರಿ : ಮಾದಿಗ ಸಮುದಾಯ ಎಲ್ಲಾ ರಂಗದಲ್ಲಿ ಅಭಿವೃದ್ಧಿಯಾಗಲು ಸದಾಶಿವ ಆಯೋಗ ಜಾರಿಯಾಗಬೇಕು. ಸಮಾಜದ ಬಂಧುಗಳು ಸರ್ಕಾರಗಳ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಮುದಾಯದ ಜನತೆ ಜಾಗೃತಿವಹಿಸುವುದು ಅವಶ್ಯ ಎಂದು ಮಾಜಿಶಾಸಕ ವೀರಭದ್ರಪ್ಪ ಹಾಲಹರವಿ ಹೇಳಿದರು.
ಡಿ.೧೮ರಂದು ನಗರದ ಡಾ.ಬಿಆರ್ ಅಂಬೇಡ್ಕರ್ ಭವನದಲ್ಲಿ ಸದಾಶಿವ ಆಯೋಗದ ಜಾರಿಗಾಗಿ ಹಾಗೂ ಮಾದಿಗ ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜರುಗಿದ ಮಾದಿಗರ ಆತ್ಮಗೌರವ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸದಾಶಿವ ಆಯೋಗ ಜಾರಿಗೆ ಆಗಬೇಕು ಎಂಬ ನಮ್ಮ ಕೂಗಿಗೆ ಕಳೆದ ಬಿಜೆಪಿ ಪಕ್ಷದ ನೇತೃತ್ವದ ಸರ್ಕಾರ ಸದಾಶಿವ ಆಯೋಗಕ್ಕೆ ಪುಷ್ಠಿ ನೀಡಿದೆ. ಅದು ಜಾರಿಗೆ ಬರಬೇಕು, ನಿಮ್ಮ ನಮ್ಮೆಲ್ಲರ ಹಾಗೂ ಸಮುದಾಯದ ಹೋರಾಟದ ಫಲವಾಗಿ ನಮ್ಮ ಬೇಡಿಕೆಗಳ ಈಡೇರಿಕೆಗಳಿಗೆ ಬಲ ಬಂದಂತೆ ಆಗಿದೆ. ಸಮುದಾಯದ ಹಿತಕ್ಕಾಗಿ ನಾವೆಲ್ಲರೂ ಬದ್ಧರಾಗೋಣ ಎಂದರು.
ರಾಜ್ಯ ತಂಡದ ಮುಖಂಡ ಬಲ್ಲಾಹುಣಿಸಿ ರಾಮಣ್ಣ ಹಾಗೂ ಡಾ.ಶಿವಪ್ರಸಾದ ಮಾತನಾಡಿ ಸದಾಶಿವ ಆಯೋಗದ ಜಾರಿಗಾಗಿ ರಾಜ್ಯದ ಎಲ್ಲಾ ಭಾಗಗಳಲ್ಲಿ ಸಮಾವೇಶಗಳು ಆಯೋಜನೆ ಮಾಡಲಾಗುತ್ತಿದ್ದು, ಒಗ್ಗಟ್ಟಿನ ಹೋರಾಟದ ಮುಂದುವರಿಸಬೇಕು ಎಂದರು.
ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ ಪ್ರಸ್ತವಿಕವಾಗಿ ಮಾತನಾಡಿ ನಮ್ಮ ಹಕ್ಕುಗಳನ್ನು ಹಾಗೂ ಸೌಲಭ್ಯಗಳನ್ನು ಪಡೆಯಲು ಡಾ.ಬಿ ಆರ್ ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ, ಹೋರಾಟ ಮುಂದುವರಿಸಬೇಕಾಗಿದೆ. ಈ ಸಮಾವೇಶ ನಮ್ಮ ಬೇಡಿಕೆಗಳ ಈಡೇರಿಕೆಗಳಿಗೆ ಸ್ಪೂರ್ತಿಯಾಗಲಿ ಎಂದರು.
ಕರ್ನಾಟಕ ರಾಜ್ಯ ಮಾದಿಗ ಸಮಾಜ ದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಉಡಚಪ್ಪ ಮಾಳಗಿ ಮಾತನಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳನ್ನು ಇಡೇರಿಸಬೇಕು ಎಂದರು.
ಸಮಾವೇಶದ ಅಧ್ಯಕ್ಷತೆವಹಿಸಿ ಮಾತನಾಡಿದ ಲಿಡ್ಕರ್ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ ಸದಾಶಿವ ಆಯೋಗ ಎಲ್ಲರ ಹೋರಾಟದ ಫಲವಾಗಿ ಜಾರಿಯಾಗಲಿ.ನಾವೆಲ್ಲರೂ ಇನ್ನೂ ಹೆಚ್ಚು ಹೋರಾಟ ಮುಂದುವರಿಸಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ರಾಜ್ಯ ಮುಖಂಡರಾದ ಶ್ರೀಮತಿ ಮಹಾಲಕ್ಷ್ಮೀ ಕಂದರಿ, ನಾಗಲಿಂಗ ಮೊಳೆಕೊಪ್ಪ ನೀಲಕಂಠಪ್ಪ ಕುಸನೂರ, ಕರಿಯಪ್ಪ ಕಟ್ಟಿಮನಿ, ಮಾಲತೇಶ ಕರ್ಜಗಿ, ಸುರೇಶ ಆಸಾದಿ, ಜಗದೀಶ ಡೊಳ್ಳೇಶ್ವರ, ಮಂಜಪ್ಪ ಮರೋಳ, ಯಲ್ಲಪ್ಪ ಮಾಸೂರ, ಮಾರುತಿ ಸೊಟ್ಟಪ್ಪನವರ, ಚಂದ್ರಪ್ಪ ಹರಿಜನ,ಹನಮಂತಪ್ಪ ಸಿ.ಡಿ, ಜಗದೀಶ ಹರಿಜನ, ನಾಗರಾಜಬಣಕಾರ, ಸಂತೋಷ ಗುಡ್ಡಪ್ಪನವರ, ಬಸವರಾಜ ಕಾಳೆ ,ದೇವರಾಜ ಹರಿಜನ ಸೇರಿದಂತೆ ಸಮಾಜದ ಮುಖಂಡರು ಹಾಗೂ ಸಮುದಾಯದವರು ಪಾಲ್ಗೊಂಡಿದ್ದರು. ಸವಿತಾ ಮಣ್ಣಮ್ಮನವರ ಸ್ವಾಗತಿಸಿದರು. ನಿವೃತ್ತ ಡಿಡಿಪಿಯು ಎಂ. ಆಂಜನೇಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ

--      ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ ಹಾವೇರಿ: ಇಲ್ಲಿನ ಜಿಲ್ಲಾ...

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು ಹೊರಟಿದ್ದು...

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ ಹಾವೇರಿ : ಹಾವೇರಿನಗರದಲ್ಲಿ ಕಳೆದ ವಾರದಿಂದ...

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ ಹಾವೇರಿ: ಯುವ ಜನಾಂಗ...