ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ :ಹಾವೇರಿಯಲ್ಲಿ ಆರೋಪಿ ಬಂಧನ
ಹಾವೇರಿ : ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿದ ಆರೋಪಿಯನ್ನು ಹಾವೇರಿಯಲ್ಲಿ ಮಹಾರಾಷ್ಟ್ರ ಪೊಲೀಸ್‌ರು ಬುಧವಾರ ಬಂಧಿಸಿ ಕರೆದೊಯ್ದಿದ್ದಾರೆ.
ಬಂಧಿತನಾಗಿರುವ ಆರೋಪಿ ಬಿಕಾರಾಮ್ ನಟ ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿದ್ದ ಎಂದು ತಿಳಿದು ಬಂದಿದೆ.
ಆರೋಪಿ 32 ವರ್ಷದ
ಬಿಕಾರಾಮ್ ವಿಕ್ರಂ, ಜಲಾರಾಂ ಬಿಷ್ಣೋಯಿ ರಾಜಸ್ತಾನ ಮೂಲದ ಜಲೋರಾದ ನಿವಾಸಿಯಾಗಿದ್ದು. ಈತ ನಟ ಸಲ್ಮಾನ್ ಖಾನ್ ಗೆ ಬೆದರಿಕೆ ಹಾಕಿದ ಆರೋಪಿ ಆಗಿದ್ದು ಈತ ಹಾವೇರಿಯಲ್ಲಿ ಇರುವ ಸುಳಿವನ್ನು ಪತ್ತೆಹಚ್ಚಿದ ಮಹಾರಾಷ್ಟ್ರದ ಎ.ಟಿ.ಎಸ್ ಟಿಂ ಅತನ ವಿವರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದ ಹಿನ್ನಲೆಯಲ್ಲಿ
ಮಹಾರಾಷ್ಟ್ರದ
ಪೊಲೀಸರೊಂದಿಗೆ ಕಾರ್ಯಾಚರಣೆ ನಡೆಸಿ ಬಿಕಾರಾಮ್
ನನ್ನು ವಶಕ್ಕೆ ಪಡೆದರು.
ಹಾವೇರಿ ನಗರದಲ್ಲಿ ಬಾರ್ ಬೈಂಡಿಂಗ್ ಕೆಲಸಮಾಡಿಕೊಂಡಿದ್ದ ಬಿಖಾರಾಮ್ ಇಲ್ಲಿನ ಮಹಾತ್ಮಾ ಗಾಂಧಿ ಸರ್ಕಲ್ ಮುಂಭಾಗದ ರಸ್ತೆ ಗೆ ಹೊಂದಿಕೊಂಡಿರುವ ಗೌಡರ ಓಣಿಯಲ್ಲಿ ಬಾಡಿಗೆ ಕೊಠಡಿಯಲ್ಲಿ ರಾಜಸ್ತಾನ ಮೂಲದ ಕೂಲಿಕಾರರೊಂದಿಗೆ ವಾಸವಿದ್ದನೆಂದು,
ಗ್ರಿಲ್ ಕೆಲಸ ಮಾಡಿಕೊಂಡಿದ್ದ. ಮುಂಬೈ ಪೊಲೀಸರ ಮಾಹಿತಿ ಆಧಾರದಲ್ಲಿ ಆರೋಪಿಯನ್ನು ಜಿಲ್ಲಾ ಪೊಲೀಸರು ವಶಕ್ಕೆ ಪಡೆದು, ಮುಂಬೈ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಮೊದಲು ಬೇರೆಡೆ ಕೆಲಸ ಮಾಡುತ್ತಿದ್ದ. ಒಂದೂವರೆ ತಿಂಗಳ ಹಿಂದೆ ಬಿಕಾರಾಮ್ ಕೂಲಿಗಾಗಿ ಹಾವೇರಿಗೆ ಬಂದಿದ್ದ. ಮುಂಬೈ ಪೊಲೀಸರ ಮಾಹಿತಿ ಆಧಾರದ ಮೇಲೆ ವಶಕ್ಕೆ ಪಡೆದು ಅವರಿಗೆ ಒಪ್ಪಿಸಿದ್ದೇವೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಅಂಶುಕುಮಾರ ತಿಳಿಸಿದ್ದಾರೆ.