ಹಾವೇರಿಯ ಹಳೆಯ ತಹಶೀಲ್ದಾರ ಕಚೇರಿ ಸ್ಥಳದಲ್ಲಿ “ತಾಲೂಕು ಆಡಳಿತ ಸೌಧ”

Date:

ಹಾವೇರಿ; ಸ್ವಾತಂತ್ರ್ಯ ಪೂರ್ವದಿಂದ ತಹಶೀಲ್ದಾರ ಕಚೇರಿ ಕಾರ್ಯನಿರ್ವಹಿಸುತ್ತಿದ್ದ ನಗರದ ಮಧ್ಯಭಾಗದ ಹಳೆಯ ತಹಶೀಲ್ದಾರ ಕಚೇರಿ ಸ್ಥಳವನ್ನು ಪೊಲೀಸ್ ಇಲಾಖೆ ನೀಡಿರುವು ಆದೇಶವನ್ನು ಸರ್ಕಾರ ರದ್ದುಪಡಿಸಿ ಹಳೆಯ ತಹಶೀಲ್ದಾರ ಕಚೇರಿ ಸ್ಥಳದಲ್ಲಿ “ತಾಲೂಕು ಆಡಳಿತ ಸೌಧ” ನಿರ್ಮಿಸಲು ಮುಂದಾಗಿದೆ. ಈ ಬಗ್ಗೆ ಕಂದಾಯ ಇಲಾಖೆಗೆ ಹಸ್ತಾಂತರಿಸಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮೇ.೩ರಂದು ಆದೇಶ ಹೊರಡಿಸಿದ್ದಾರೆ.
ಈ ಮೊದಲು  ಪೊಲೀಸ್ ಇಲಾಖೆಗೆ ಹಾವೇರಿ ನಗರದಲ್ಲಿರುವ ಹಳೆಯ ತಹಶೀಲ್ದಾರ ಕಛೇರಿ ಕಟ್ಟಡದೊಂದಿಗೆ ೨೭೩೨.೩೭ ಚ.ಮೀ. ಜಾಗೆಯನ್ನು ಪೊಲೀಸ್ ಅಧೀಕ್ಷಕರು ಹಾವೇರಿ ಇವರಿಗೆ ಹಸ್ತಾಂತರಿಸಿ ಕಂದಾಯ ಇಲಾಖೆ ಆದೇಶಿಸಿತ್ತು,   ಮಿನಿ ವಿಧಾನಸೌಧದಲ್ಲಿ  ತಹಶೀಲ್ದಾರ ಕಚೇರಿ, ಉಪ ವಿಭಾಗಾಧಿಕಾರಿಗಳ ಕಛೇರಿ, ಉಪ ನೋಂದಣಾಧಿಕಾರಿಗಳ ಕಛೇರಿ ಮತ್ತು ಭೂಮಾಪನ ಇಲಾಖೆಗಳ ಕಛೇರಿಗಳು  ಕಾರ್ಯನಿರ್ವಹಿಸುತ್ತಿದ್ದವು.
ಮಳೆ ನೀರಿನಿಂದ ಈ ಕಟ್ಟಡ ಸೋರುತ್ತಿದೆ.  ಕಟ್ಟಡದ ಎದುರುಗಡೆ ಇರುವ ರಸ್ತೆಯು ಸಹ ಕಿರಿದಾಗಿದ್ದು, ಸಾರ್ವಜನಿಕರು ವಾಹನಗಳನ್ನು ತಾಲೂಕಾ ಕಛೇರಿ ಆವರಣದಲ್ಲಿಯೇ ನಿಲ್ಲಿಸುತ್ತಿರುವುದರಿಂದ ವಿಪರೀತ ಜ ದಟ್ಟಣೆ ಯಾಗುತ್ತಿದೆ. ಇದರಿಂದ ಕಛೇರಿಗಳಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸುಲಲಿತವಾಗಿ ಕಾರ್ಯನಿರ್ವಹಿಸಲು ಸಾಧವಾಗುತ್ತಿರಲಿಲ್ಲ.
ಈ ಹಿನ್ನೆಲೆಯಲ್ಲಿ ಹಾವೇರಿ ನಗರದಲ್ಲಿ ತಹಸೀಲ್ದಾರರ ಕಚೇರಿಯನ್ನು ಬೇರೆಡೆಗೆ ನಿರ್ಮಾಣ ಮಾಡುವುದರೊಂದಿಗೆ ತಾಲೂಕಾ ಮಟ್ಟದ ಎಲ್ಲಾ ಇಲಾಖೆಗಳ ಕಚೇರಿಗಳನ್ನು ಒಂದೇ ಕಟ್ಟಡದಲ್ಲಿ ನಿರ್ಮಾಣ ಮಾಡಿದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವುದರಿಂದ ತಾಲೂಕಾ ಆಡಳಿತಸೌಧ ನಿರ್ಮಾಣ ಮಾಡುವುದು ಅತ್ಯಾವಶ್ಯಕವಾಗಿರುವುದರಿಂದ  ಹಾವೇರಿ ನಗರದಲ್ಲಿ  ಪೊಲೀಸ್ ಅಧಿಕ್ಷಕರ ಹೊಸ ಕಛೇರಿ ಕಟ್ಟಡ ನಿರ್ಮಿಸಲು ಪೊಲೀಸ್ ಅಧೀಕ್ಷಕರು ಹಾವೇರಿ ಇವರಿಗೆ ಹಸ್ತಾಂತರಿಸಿದ ಹಾವೇರಿ ನಗರದ ಸಿಟಿಎಸ್ ನಂ.೭೭೯ ೮ ಒಟ್ಟು ಕ್ಷೇತ್ರ ೨೭ ಗುಂಟೆ ಜಮೀನನ್ನು “ತಾಲೂಕು ಆಡಳಿತ ಸೌಧ” ನಿರ್ಮಾಣದ ಉದ್ದೇಶಕ್ಕಾಗಿ   ಸದರ ಜಮೀನನ್ನು ಕಂದಾಯ ಇಲಾಖೆಗೆ ಮರಳಿ ಪಡೆದುಕೊಂಡು ಕಬ್ಬಾ ಪಾವತಿಯೊಂದಿಗೆ ವರದಿ ಸಲ್ಲಿಸಲು ತಹಶೀಲ್ದಾರ ಹಾವೇರಿ ಇವರಿಗೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಹೋರಾಟಕ್ಕೆ ಸಂದ ಜಯ
ಕಂದಾಯ ಇಲಾಖೆಗೆ ಸೇರಿದ ಹಳೆ ತಹಶೀಲ್ದಾರ್ ಆಫೀಸ್‌ನ್ನು  ಪೊಲೀಸ್ ಇಲಾಖೆಗೆ ಹಸ್ತಾಂತರಿಸಿರುವುದನ್ನು ರದ್ದು ಪಡಿಸುವಂತೆ ನಮ್ಮ ಹೋರಾಟಕ್ಕೆ ಮುನ್ನವೆ  ಸರ್ಕಾರದ ಮರಳಿ ಕಂದಾಯ ಇಲಾಖೆಗೆ ಹಸ್ತಾಂತರಿಸಿದೆತೀ ಬಗ್ಗೆ ಆದೇಶದ ಮಾಡಿರುವ ಸರ್ಕಾರಕ್ಕೆ  ಜಿಲ್ಲಾಧಿಕಾರಿಗಳಿಗೆ, ವಿಧಾನಸಭೆಯ  ಉಪಾಧ್ಯಕ್ಷ  ರುದ್ರಪ್ಪ ಲಮಾಣಿ ಅವರಿಗೆ, ಹೋರಾಟಕ್ಕೆ ಬೆಂಬಲಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇವೆ .  ತಹಸಿಲ್ದಾರ್ ಆಫೀಸ್ ಕಟ್ಟಡ ನಿರ್ಮಾಣಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ೫ ಕೋಟಿ ರೂಗಳನ್ನು ಬಿಡುಗಡೆ ಮಾಡಬೇಕೆಂದು ಹಿರಿಯ ನಾಗರಿಕರು ಮತ್ತು ಸಾಮಾಜಿಕ ಕಾರ್ಯಕರ್ತರಾದ ಎಂ.ಎಸ್. ಕೋರಿಶೆಟ್ಟರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ

--      ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ ಹಾವೇರಿ: ಇಲ್ಲಿನ ಜಿಲ್ಲಾ...

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು ಹೊರಟಿದ್ದು...

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ ಹಾವೇರಿ : ಹಾವೇರಿನಗರದಲ್ಲಿ ಕಳೆದ ವಾರದಿಂದ...

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ ಹಾವೇರಿ: ಯುವ ಜನಾಂಗ...