ಹಾವೇರಿಯಲ್ಲಿ: ಮಹಿಳೆಯ ೭ಲಕ್ಷ ಮೌಲ್ಯದ ಮಾಂಗಲ್ಯ ಸರ್ ಕಿತ್ತು ಪರಾರಿಯಾದ ಖದೀಮರು
ಹಾವೇರಿ: ನಗರದಲ್ಲಿ ಮತ್ತೆ ಮಹಿಳೆಯರ ಮಾಂಗಲ್ಯ ಸರ ಕಿತ್ತು ಪರಾರಿಯಾಗುವ ಗ್ಯಾಂಗ್ ಸಕ್ರಿಯವಾಗಿದೆ. ಮನೆಯಿಂದ ನಡೆದುಕೊಂಡು ಹೊರಟಿದ್ದ ಮಹಿಳೆಯ ೭ಲಕ್ಷರೂ ಮೌಲ್ಯದ ಮಾಂಗಲ್ಯ ಸರವನ್ನು ಬೈಕ್ ನಲ್ಲಿ ಬಂದ ಇಬ್ಬರು ಖದೀಮರು ಕಿತ್ತು ಕೊಂಡು ಪರಾಯಾಗಿರುವ ಘಟನೆ ಹಾವೇರಿ ನಗರದ ವಿದ್ಯಾನಗರದ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಕಚೇರಿಯ ಬಳಿ ರಸ್ತೆಯಲ್ಲಿ ಏ.೩೦ರಂದು ರಾತ್ರಿ೧೦-೫೦ರ ಸುಮಾರಿಗೆ ನಡೆದಿದೆ.
೬೦ ವರ್ಷದ ಸುಮಾ ಎನ್ನುವವರು
ನೆಯಲ್ಲಿ ಊಟ ಮಾಡಿ ಜಿ.ಪಂ ರಸ್ತೆ ಕ್ರಾಸ್ ಬಳಿಗೆ ನಡದುಕೊಂಡು ಹೋಗುವಾಗ ಎದುರಿನಿಂದ ಮೋಟಾರ್ ಸೈಕಲಿನಲ್ಲಿ ಬಂದ ಇಬ್ಬರ ಲ್ಲಿ ಹಿಂದೆ ಕುಳಿತವನು ತನ್ನ ಬಲಗೈಯಿಂದ ಸುಮಾಅವರ ಕೊರಳಲ್ಲಿದ್ದ ಬಂಗಾರದ 55 ಗ್ರಾಮ ತೂಕದ 7,00,000/- ಲಕ್ಷರೂ ಮೌಲ್ಯದ ಮಾಂಗಲ್ಯಸರವನ್ನು ಕಿತಗತುಕೊಂಡಿದ್ದಾನೆ.
ಈ ವೇಳೆ ಆತನನ್ನು
ಹಿಡಿಯಲೆಂದುಹೋದ ಸುಮಾ ಅವರ ಪತಿ ಗಂಗಾಧರಯ್ಯ ಕಬ್ಬಿಣಕಂತಿಮಠರು ಬಿದ್ದು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

