“ಅಕ್ಕಿ ಬದಲು ಹಣ” ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ ವಿರೋಧ

Date:

ಹಾವೇರಿ: ಅನ್ನಭಾಗ್ಯ ಯೋಜನೆಯಡಿ ಸರಕಾರ ಬಿಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ಬದಲು ಹಣ ನೀಡಲು ಮುಂದಾಗಿರುವಕ್ರಮವನ್ನು ವಿರೋಧಿಸಿ ಮಂಗಳವಾರ ಕರ್ನಾಟಕ ರಾಜ್ಯ ಪಡಿತರ ವಿತರಕ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳು ಹಾವೇರಿಯ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಅರ್ಪಿಸಿದರು.

ಅಕ್ಕಿ ಬದಲು ಹಣ ನೀಡುವುದರಿಂದ  ಪಡಿತರ ವಿತರಕರಿಗೆ ಕಮಿಷನ್ ಸಿಗುವುದಿಲ್ಲ ಎಂದು ಆರೋಪಿಸಿರುವ ಪದಾಧಿಕಾರಿಗಳು ಪ್ರತಿ ಕ್ವಿಂಟಾಲ್ ಪಡಿತರ ವಿತರಣೆಗೆ ನಮಗೆ ೧೨೪ ರೂ. ಕಮಿಷನ್ ಸಿಗುತ್ತಿದೆ. ೧೦ ಕೆಜಿ ಪಡಿತರ ವಿತರಿಸಿದರೆ ಹೆಚ್ಚು ಕಮಿಷನ್ ಹಣ ಸಿಗುತ್ತಿತ್ತು. ಆದರೆ ಕಾರ್ಡ್‌ದಾರರಿಗೆ ಹಣ ಕೊಟ್ಟರೆ ನಮಗೆ ಸಿಗಬೇಕಿರುವ ಕಮಿಷನ್ ಹಣವೂ ಖೋತಾ ಆಗುತ್ತದೆ. ಇದರಿಂದ ಈಗಾಗಲೇ ಜೀವನ ನಿರ್ವಹಣೆಗೆ ಕಷ್ಟಪಡುತ್ತಿರುವ ನಮಗೆ ಮುಂದೆ ಇನ್ನಷ್ಟು ಕಷ್ಟವಾಗಲಿದೆ. ಆದ್ದರಿಂದ, ಕಾರ್ಡ್‌ದಾರರಿಗೆ ಹಣ ಬದಲು ಬೇರೆ ಧಾನ್ಯ ವಿತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹಾವೇರಿಜಿಲ್ಲೆಯಲ್ಲಿ ೪೦೦ಕ್ಕೂ ಅಧಿಕ ನ್ಯಾಯಬೆಲೆಯ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಅಕ್ಕಿಯ ಬದಲು ಹಣ ನೀಡುವುದರಿಂದ ಸುಮಾರು ೩೦ಸಾವಿರ ಜನರು ಬೀದಿಗೆ ಬಿದ್ದಂತಾಗುತ್ತದೆ. ಪಡಿತರ ವಿತಕರ ಹಿತದೃಷ್ಟಿಯಿಂದ ಹಣ ನೀಡುವ ಪದ್ದತಿಯನ್ನು ಕೈಬಿಟ್ಟು ಅನ್ಯಭಾಗ್ಯ ಯೋಜನೆಯನ್ನು ಯಥಾವತ್ತಾಗಿ ಜಾರಿಗೆ ತರುವ ಮೂಲಕ ಪ್ರದೇಶವಾರುಜೋಳ, ಅಕ್ಕಿ, ಗೋದಿ, ರಾಗಿ, ಸಕ್ಕರೆ ಹೀಗೆ ಬಡವರ ಇಚ್ಚಾಶಕ್ತಿಯ ಪ್ರಕಾರ ಯೋಜನೆಯನ್ನು ಮುಂದುವರೆಸುವಂತೆ ಅವರು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಪಡಿತರ ವಿತರಕ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾ ಅಧ್ಯಕ್ಷ ಎಂ.ಬಿ.ಪಟ್ಟಣಶೆಟ್ಟಿ, ರಾಜ್ಯ ಉಪಾಧ್ಯಕ್ಷ ಅಬ್ದುಲ್ ರಜಾಕ್ ತಹಶೀಲ್ದಾರ, ಶಿಗ್ಗಾವ ತಾಲೂಕಾ ಅಧ್ಯಕ್ಷ ಮಹದೇವಪ್ಪ ವಡ್ಡರ ಮತ್ತಿತರರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಿದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ

--      ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ ಹಾವೇರಿ: ಇಲ್ಲಿನ ಜಿಲ್ಲಾ...

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು ಹೊರಟಿದ್ದು...

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ ಹಾವೇರಿ : ಹಾವೇರಿನಗರದಲ್ಲಿ ಕಳೆದ ವಾರದಿಂದ...

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ ಹಾವೇರಿ: ಯುವ ಜನಾಂಗ...