ಎತ್ತುಗಳ ಬೆಲೆ ಗಗನಕ್ಕೇ..! “ಜೋಡೆತ್ತುಗಳಾದ ಮಕ್ಕಳು”-“ಎಡೆ”ಹೊಡೆದ ತಂದೆ..!!

Date:

ಮಾಲತೇಶ ಅಂಗೂರ
ಹಾವೇರಿ: ಒಂದು ಕಡೆ ಮುಂಗಾರು ರೈತರ ಬದುಕಿನಲ್ಲಿ ಕಣ್ಣಾ ಮುಚ್ಚಾಲೆಯಾಡುತ್ತಿದ್ದು, ಮಳೆಯ ಸೊಲ್ಲೇ ಇಲ್ಲದೇ ಚೂಟಿದ್ದ, ಗೇಣುದ್ದ ಇರುವ ಬಾಡುತ್ತಿರುವ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆಯ ನಡುವೆ ಕೃಷಿ ಚಟುವಟಿಕೆಗಳು ಮಂದಗತಿಯಲ್ಲಿ ಸಾಗಿವೆ. ಒಂದು ಕಾಲದಲ್ಲಿ ಪ್ರತಿಯೊಬ್ಬ ರೈತನ ಮನೆಯಲ್ಲಿ ಜೋಡೆತ್ತು ಇರುತ್ತಿದ್ದವು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಮಾರುಕಟ್ಟೆಯಲ್ಲಿ ಉತ್ತಮ ಜೋಡೆತ್ತುಗಳ ಬೆಲೆ ಒಂದೂವರೆ ಲಕ್ಷ ರೂಪಾಯಿ ದಾಟಿದೆ. ಈ ಸಂದರ್ಭದಲ್ಲಿ ಸಣ್ಣ ರೈತನಿಗೆ ಜೋಡೆತ್ತು ಖರೀದಿಸುವುದು ಕನಸಿನ ಮಾತಾಗಿದೆ. ಹೀಗಾಗಿ ತನ್ನ ಮಕ್ಕಳನ್ನೇ ರೈತನೋರ್ವ ಜೋಡೆತ್ತುಗಳನ್ನಾಗಿ ಮಾಡಿ “ಎಡೆ” ಹೊಡೆಯುವ ಮೂಲಕ  ಕಳೆ ನಾಶಗೊಳಿಸಲು ಹೊಲಕ್ಕಿಳಿಸಿದ್ದಾನೆ.
ಜಿಲ್ಲೆಯ ರಾಣೆಬೇಬೆನ್ನೂರು ತಾಲೂಕಿನ ವೆಂಕಟಾಪುರ ತಾಂಡದ ರೈತ ಶಂಕರಪ್ಪ ಲಮಾಣಿ ಸುಮಾರು ೩ ಎಕರೆ ೧೬ ಗುಂಟೆ ಜಮೀನಿನಲ್ಲಿ ಎಲೆಕೋಸು ಬೆಳೆದಿದ್ದಾರೆ. ಉತ್ತಮ ಬೆಳೆ ನೀರಿಕ್ಷೆಯಲ್ಲಿ ಸಾಲ ಮಾಡಿ ಕೃಷಿ ಮಾಡಿದ್ದಾರೆ. ಬೀಜ, ಗೊಬ್ಬರ, ಔಷಧಿ, ಕೂಲಿ ಸೇರಿದಂತೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದಾರೆ. ಆದರೆ ಪ್ರಕೃತಿ ಮತ್ತು ಮಾರುಕಟ್ಟೆಯ ಹೊಡೆತ ಈಗ ರೈತನನ್ನ ಸಂಕಷ್ಟಕ್ಕೆ ತಳ್ಳಿದೆ. ಕೆಲ ದಿನಗಳ ಹಿಂದೆ ಸುರಿದ ಪೂರ್ವ ಮುಂಗಾರು ಮಳೆಯಿಂದಾಗಿ ಎಲೆಕೋಸುಬೆಳೆ ಮಧ್ಯೆ ಕಳೆ ಹಾವಳಿ ವ್ಯಾಪಕವಾಗಿ ಬೆಳೆದಿದೆ. ಕಳೆ ನಾಶ ಮಾಡದೇ ಬಿಟ್ಟರೆ ಬೆಳೆ ಬೆಳವಣಿಗೆ ಕುಂಠಿತವಾಗುತ್ತದೆ.
ಗೊಬ್ಬರದ ಶಕ್ತಿ ಕಳೆ ಗಿಡಗಳಿಗೆ ಹೋಗುತ್ತದೆ. ಹೀಗಾಗಿ ಕಳೆ ನಾಶ ಮಾಡುವುದು ರೈತನಿಗೆ ಅನಿ ವಾರ್ಯವಾಗಿದೆ. ಆದರೆ ಕಳೆ ನಾಶ ಮಾಡಲು ಎತ್ತುಗಳ ಅಗತ್ಯವಿದೆ. ಮಾರುಕಟ್ಟೆಯಲ್ಲಿ ಉತ್ತಮ ಜೋಡೆತ್ತುಗಳ ಬೆಲೆ ಒಂದೂವರೆ ಲಕ್ಷ ರೂಪಾಯಿ ದಾಟಿದೆ. ಕೆಲವೆಡೆ ಎರಡು ಲಕ್ಷ ರೂಪಾಯಿಯವರೆಗೂ ಮಾರಾಟವಾಗುತ್ತಿದೆ. ಇಂತಹ ಸಂದರ್ಭದಲ್ಲಿ ರೈತ ಶಂಕರಪ್ಪ ಲಮಾಣಿಗೆ ಜೋಡೆತ್ತು ಖರೀದಿಸುವುದು ಕನಸಿನ ಮಾತಾಗಿದೆ.
ಅನಿವಾರ್ಯವಾಗಿ ಹೊಲದ ಮಧ್ಯೆ ತನ್ನ ಇಬ್ಬರು ಮಕ್ಕಳು ಜೋಡೆತ್ತುಗಳಂತೆ ನೊಗ ಹೊತ್ತು ಸಾಗುತ್ತಾರೆ, ಅವರಿಬ್ಬರ ಹಿಂದೆ ತಂದೆ ಎಡೆಕುಂಟೆ ಹಿಡಿದು ಕಳೆ ನಾಶ ಮಾಡುತ್ತಾನೆ. ಈ ದೃಶ್ಯ ನೋಡಿದರೆ ಯಾರ ಮನಸ್ಸಾದರೂ ಕಲಕದೇ ಇರುವುದಿಲ್ಲ. ಒಂದು ಕಡೆ ಕೃಷಿ ವೆಚ್ಚ ಗಗನಕ್ಕೇರಿದೆ. ಇನ್ನೊಂದು ಕಡೆ ಎತ್ತುಗಳ ಬೆಲೆ ರೈತರ ಕೈಗೆಟುಕದಂತಾಗಿದೆ. ಹೀಗಾಗಿ ರೈತ ಬದುಕಿನ ಹೋರಾಟ ನಡೆಸಲು ತನ್ನ ಮಕ್ಕಳನ್ನೇ ಜೋಡೆತ್ತುಗಳನ್ನಾಗಿ ಮಾಡಿ ಹೊಲದಲ್ಲಿ ಕಳೆ ನಾಶ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಲಿಂಗರಾಜ್ ಲಮಾಣಿ ಮಾತನಾಡಿದ್ದು,  ಜೋಡೆತ್ತು ಖರೀದಿ ಸಾಧ್ಯವಾಗದಿದ್ದರೂ ಬಾಡಿಗೆಗೆ ಪಡೆಯೋಣ ಎಂದರೆ ಒಂದು ದಿನಕ್ಕೆ ಎರಡು ಸಾವಿರದಿಂದ ಎರಡೂವರೆ ಸಾವಿರ ರೂಪಾಯಿವರೆಗೆ ಬಾಡಿಗೆಯಿದೆ. ಈ ಎಲ್ಲ ವೆಚ್ಚ ಭರಿಸುವ ಶಕ್ತಿ ರೈತನ ಬಳಿ ಇಲ್ಲ. ಬೆಳೆಗಿಂತ ಖರ್ಚೆ ಹೆಚ್ಚು ಆಗುವ ಭಯ ಕಾಡುತ್ತಿದೆ. ಹೀಗಾಗಿ ತಮ್ಮ ತಂದೆ ಶಂಕರಪ್ಪ ಲಮಾಣಿ  ’ಹೊರಗಿನಿಂದ ಎತ್ತುಗಳನ್ನು ತರಿಸುವ ಬದಲು ತಮ್ಮ ಕುಟುಂಬದವರ ಶ್ರಮವನ್ನೇ ಬಳಸಲು ಮುಂದಾಗಿದ್ದಾರೆ’, ತಾನೇ ನೊಗದ ಹಿಂದೆ ನಿಂತು ಕೆಲಸ ಮಾಡುತ್ತಿದ್ದರೆ. ಮಕ್ಕಳಾದ  ನಾನು ಮತ್ತು ನ್ನ ಸಹೋದರ ಪ್ರವೀಣ್ ಜೋಡೆತ್ತುಗಳಂತೆ ನೊಗ ಎಳೆಯುತ್ತೇಬೆ.  ಕೇವಲ ೨೦ ದಿನ ದ ಎಲೆಕೋಸು ಬೆಳೆಯಿದೆ. ಈ ಬೆಳೆ ಮಾರುಕಟ್ಟೆಗೆ ತಲುಪುವವರೆಗೆ ಕನಿಷ್ಠ ಮೂರು ಬಾರಿ ಕಳೆ ನಾಶ ಮಾಡಲೇಬೇಕಿದೆ. ಒಂದು ಬಾರಿ ಕಳೆ ನಾಶ ಮಾಡಲು ಮೂರು ಜನ ಸೇರಿ ನಾಲ್ಕೈದು ದಿನಗಳ ಆಗುತ್ತದೆ. ಹೀಗಾಗಿ ಸರಕಾರ ಅಥವಾ ಅಧಿಕಾರಿಗಳು ಸರಕಾರದ ಸಬ್ಸಿಡಿ ಯೋಜನೆಗಳಲ್ಲಿ ಯಂತ್ರೋಪಕರಣ ನೀಡಲಿ ಎಂದು ಮನವಿ ಮಾಡಿದರು.
ರೈತ ಶಂಕರಪ್ಪ ಲಮಾಣಿ ಎತ್ತು ಖರೀದಿಸಲು ಹಣವಿಲ್ಲ, ಬಾಡಿಗೆ ಎತ್ತುಗಳಿಗೆ ಕೊಡುವ ಶಕ್ತಿಯಿಲ್ಲ. ಆದರೆ ಬೆಳೆ ಉಳಿಸಲೇಬೇಕು. ಹೀಗಾಗಿ ತನ್ನ ಮಕ್ಕಳನ್ನೇ ಜೋಡೆತ್ತುಗಳನ್ನಾಗಿ ಮಾಡಿ ಹೊಲಕ್ಕಿಳಿದಿರುವ ಈ ರೈತ ಕೃಷಿಯ ಕಹಿ ಸತ್ಯವನ್ನು ತೆರೆದಿಟ್ಟಿದ್ದಾನೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಆರ್. ಬಿ.ತಿಮ್ಮಪೂರಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಆಗ್ರಹ

ಆರ್. ಬಿ.ತಿಮ್ಮಪೂರಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಆಗ್ರಹ ಹಾವೇರಿ: ಬಡತನದಿಂದ ಬೆಳೆದು,...

ಮಾಧ್ಯಮ ಅಕಾಡೆಮಿಯಿಂದ ರಾಷ್ಟ್ರಮಟ್ಟದ ಸುದ್ದಿ ಛಾಯಾಚಿತ್ರ ಸ್ಪರ್ಧೆ ಹಾಗೂ ಪ್ರದರ್ಶನ

  ಮಾಧ್ಯಮ ಅಕಾಡೆಮಿಯಿಂದ ರಾಷ್ಟ್ರಮಟ್ಟದ ಸುದ್ದಿ ಛಾಯಾಚಿತ್ರ ಸ್ಪರ್ಧೆ ಹಾಗೂ ಪ್ರದರ್ಶನ ಹಾವೇರಿ: ಕರ್ನಾಟಕ...

ನನ್ನ ಅಂತ್ಯಕ್ರಿಯೆ ಯಾವತ್ತೋ ಅಂದೇ ಹಾನಗಲ್‌ನಿಂದ ನನ್ನ ಬೀಳ್ಕೊಡುಗೆ-ಟೀಕೆಗಳಿಗೆ ಶಾಸಕ ಶ್ರೀನಿವಾಸ ಮಾನೆ ತಿರುಗೇಟು

ನನ್ನ ಅಂತ್ಯಕ್ರಿಯೆ ಯಾವತ್ತೋ ಅಂದೇ ಹಾನಗಲ್‌ನಿಂದ ನನ್ನ ಬೀಳ್ಕೊಡುಗೆ-ಟೀಕೆಗಳಿಗೆ ಶಾಸಕ...