ಒಣ ಮೆಣಸಿನಕಾಯಿ ಬೆಲೆ ಕುಸಿತ, ಬ್ಯಾಡಗಿ ಮಾರಕಟ್ಟೆಯಲ್ಲಿ ಧಗ…ಧಗ.. ರೈತ ಆಕ್ರೋಶ, ಆಗ್ನಿ ಶಾಮಕವಾಹನ ಸೇರಿ ಹಲವು ವಾಹನಗಳು ಬೆಂಕಿಗೆ ಆಹುತಿ

Date:

ಒಣ ಮೆಣಸಿನಕಾಯಿ ಬೆಲೆ ಕುಸಿತ, ಬ್ಯಾಡಗಿ ಮಾರಕಟ್ಟೆಯಲ್ಲಿ ಧಗ…ಧಗ..
ರೈತ ಆಕ್ರೋಶ, ಆಗ್ನಿ ಶಾಮಕವಾಹನ ಸೇರಿ ಹಲವು ವಾಹನಗಳು ಬೆಂಕಿಗೆ ಆಹುತಿ
ಹಾವೇರಿ: ಒಣ ಮೆಣಸಿನಕಾಯಿಯ ಬೆಲೆ ಕುಸಿತಗೊಂಡ ಪರಿಣಾಮ, ಆಕ್ರೋಶಗೊಂಡ ಎಪಿಎಂಸಿಗೆ ನುಗ್ಗಿದ ರೈತರು ಕಲ್ಲು ತೂರಾಟ ನಡೆಸಿ, ಎಪಿಎಂಸಿಯ ಕಚೇರಿಗೆ ಬೆಂಕಿ ಹಚ್ಚಿ ಕಿಟಿಕಿ, ಬಾಗಿಲುಗಳನ್ನು ಒಡೆದುಹಾಕಿ ಎಪಿಎಂಸಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಅವರ ಮೇಲೆ ಹಲ್ಲೆ ನಡೆಸಿ ಪೀಠೋಪಕರಣಗಳನ್ನು, ಕಂಪೂಟರಗಳನ್ನು ಧ್ವಂಸಗೊಳಿಸಿದ್ದಲ್ಲದೇ ಅಗ್ನಿಶಾಮಕ ವಾಹನಕ್ಕೆ, ಮಾರುಕಟ್ಟೆಯಲ್ಲಿನ ಚೀಪು, ಕಾರಗಳಿಗೆ ಬೆಂಕಿ ಹಚ್ಚಿ, ೪ ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ.
ಕಳೆದ ವಾರ ಪ್ರತಿ ಕ್ವಿಂಟಾಲ್‌ಗೆ ಬ್ಯಾಡಗಿ ಮೆಣಸಿನ ಕಾಯಿಯ ಬೆಲೆ ೧೨ ಸಾವಿರ ಇತ್ತು. ಈಗ ಕ್ವಿಂಟಾಲ್ ಗೆ ೮ರಿಂದ ೧೦ ಸಾವಿರಕ್ಕೆ ಇಳಿಕೆ ಕಂಡಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯ ಮೇಲೆ ಕಲ್ಲುತೂರಾಟವನ್ನು ರೈತರು ಮಾಡಿದ್ದಾರೆ. ಮೆಣಸಿನಕಾಯಿ ಬೆಲೆ ದಿಢೀರ್ ಕುಸಿದ ಕಾರಣ ರೊಚ್ಚಿಗೆದ್ದ ರೈತರು ಎಪಿಎಂಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಧಿಕ್ಕಾರ ಕೂಗುತ್ತಾ ಪ್ರತಿಭಟನೆ: ಸಾವಿರಾರು ಸಂಖ್ಯೆಯಲಿದ್ದ ರೈತರು ಮಾರುಕಟ್ಟೆ ತುಂಬೆಲ್ಲಾ ಪ್ರತಿಭಟನೆ ಮಾಡುತ್ತಾ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಂಚರಿದ ರೈತರು ಮತ್ತೆ ಕಚೇರಿ ಮುಂದೆ ಧರಣಿ ಕುಳಿತರು. ಮೆಣಸಿನ ಕಾಯಿ ಬೆಲೆ ಕುಸಿತಗೊಂಡ ಪರಿಣಾಮ, ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಯ ಮೇಲೆ ಕಲ್ಲು ತೂರಾಟ ನಡೆಸಿರುವಂತ ರೈತರು, ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಮಾರುಕಟ್ಟೆಗೆ ಒಟ್ಟು ೩೧೩೧೫೬ ಚೀಲ ಮೆಣಸಿನಕಾಯಿ ಆವಕಾಗಿತ್ತು. ಮಧ್ಯಾಹ್ನದವರೆಗೆ ವ್ಯಾಪಾರಸ್ಥರು ಟೆಂಡರ್ ಪ್ರಕ್ರಿಯೆಯಲ್ಲಿ ತೊಡಗಿದ್ದರು. ದರ ಪ್ರಕಟಿಸಿದ ಕೂಡಲೆ ಸೋಮವಾರ ಸಂಜೆ ೪-೩೦ರ ಸುಮಾರಿಗೆ ಏಕಾಏಕಿ ಕಚೇರಿಗೆ ನುಗ್ಗಿದ ರೈತರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಕಚೇರಿಯ ಕಿಟಗಿ, ಬಾಗಿಲಿಗೆ ಬೆಂಕಿ: ರೈತರ ದಂಡು ಕಚೇರಿಗೆ ನುಗ್ಗುತ್ತಿರುವುದನ್ನು ಕಂಡು ಹೆದರಿದ ಮಾರುಕಟ್ಟೆ ಸಿಬ್ಬಂದಿ ಕಚೇರಿ ಬಾಗಿಲು ಮುಚ್ಚಿ ಪಲಾಯನ ಮಾಡಲು ಯತ್ನಿಸಿದಾಗ ರೈತರು ಸುತ್ತುವರಿದು ತಡೆದರು. ಈವೇಳೆ ಎಪಿಎಂಸಿ ಕಚೇರಿಯ ಕಿಟಕಿ, ಬಾಗಿಲಗಳಿಗೆ ಬೆಚ್ಚಲಾಯಿತು. ಕಚೇರಿಯ ಗ್ಲಾಸುಗಳು ಪ್ರತಿಭಟನಾ ಕಾರರ ಆಕ್ರೋಶಕ್ಕೆ ಪುಡಿ, ಪುಡಿಯಾದವು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಮುಂದಾದ ವೇಳೆ ಕೆಲವರು ಪೊಲೀಸರ ಮೇಲೆ ಹಲ್ಲೆ ನಡೆಸಿದರು. ಪೊಲೀಸರು ತಮ್ಮ ಜೀವ ಉಳಿಸಿ ಕೊಳ್ಳಲು ಅಂಗಡಿಯೊಂದಿಗೆ ನುಗ್ಗಿದ ವೇಳೆ ಅವರನ್ನು ಬೆನ್ನು ಹತ್ತಿದ ಕೆಲವರು ಅವರ ಮೇಲೆ ಕಲ್ಲು ತೋರಾಟ ನಡೆಸಿದ್ದು, ಈ ವೇಳೆ ಅಂಗಡಿಯ ಗ್ಲಾಸುಗಳು ಒಡೆದಹೋಗಿವೆ. ಸ್ಥಳದಲ್ಲಿದ್ದ ಅಗ್ನಿಶಾಮಕವಾಹನ ಹಾಗೂ ಬಲ್ಬ ಮಾರುತ್ತಿದ್ದ ವ್ಯಕ್ತಿಯ ಕಾರೊಂದು ಬೆಂಕಿಗೆ ಆಹತಿಯಾಗಿದೆ.
ಬೆಲೆ ನಿಗದಿ ಮಾಡಿ: ಕಳೆದ ವಾರದಷ್ಟೆ ಬೆಲೆ ನೀಡಬೇಕೆಂದು ರೈತರು ಪಟ್ಟು ಹಿಡಿದರು. ೪ ಸಾವಿರಕ್ಕೂ ಹೆಚ್ಚು ದರ ಕುಸಿತ ಕಂಡಿದೆ. ಇದರ ಹಿಂದೆ ಖರೀದಿದಾರರ ಕೈವಾಡವಿದೆ. ಬೆಲೆ ನಿಗದಿ ಮಾಡುವವರೆಗೂ ವಹಿವಾಟು ನಡೆಸಲು ಬಿಡುವುದಿಲ್ಲ ಎಂದು ರೈತgರು ಪಟ್ಟು ಹಿಡಿದರು. ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಪತ್ರಕರ್ತರ ಮೇಲೆ ಹಲ್ಲೆ

ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ಗಲಾಟೆಯನ್ನು ವರದಿಮಾಡಲ ತೆರಳಿದ್ದ ಹಲವು ಪತ್ರಕರ್ತರ ಮೇಲೆ ದುಷ್ಕರ್ಮಿಗಳು ಹಲ್ಲೆನಡೆಸಿದ್ದಾರೆ. ಗಲಾಟೆ ಚಿತ್ರೀಕರಣ ಮಾಡುತ್ತಿದ್ದ ಖಾಸಗಿ ವಾಹಿನಿಯ ಕ್ಯಾಮರಾಮನ್ ಮಂಜುನಾಥ ಭೋವಿ ಅವರ ಮೇಲೆ ತೀವೃ ತರನಾದ ಹಲ್ಲೆಮಾಡಿದ್ದು, ಅವರ ತಲೆಗೆ ಮುಖಕ್ಕೆ ಏಟುಗಳು ಬಿದ್ದಿವೆ. ಅವರನ್ನು ಹೆಚ್ಚಿನ ಚಿಕಿತ್ಸೆಗೆಂದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ

--      ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ ಹಾವೇರಿ: ಇಲ್ಲಿನ ಜಿಲ್ಲಾ...

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು ಹೊರಟಿದ್ದು...

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ ಹಾವೇರಿ : ಹಾವೇರಿನಗರದಲ್ಲಿ ಕಳೆದ ವಾರದಿಂದ...

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ ಹಾವೇರಿ: ಯುವ ಜನಾಂಗ...