ಗೋವಿನ ಜೋಳ ಬಿತ್ತನೆ ಬೀಜದ ಗರಿಷ್ಟ ಮಾರಾಟ ದರ ನಿಗದಿಗೆ ಒತ್ತಾಯ
ಹಾವೇರಿ:ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಖಾಸಗಿ ಕಂಪನಿಗಳು ಗೋವಿನ ಜೋಳ ಬಿತ್ತನೆ ಬೀಜಕ್ಕೆ ದುಬಾರಿ ದರ ನಿಗದಿಪಡಿಸಿ ರೈತರನ್ನು ಶೋಷಣೆ ಮಾಡುತ್ತಿದ್ದು, ಕೃಷಿ ವೆಚ್ಚವನ್ನು ಕಡಿಮೆ ಮಾಡಲು ಗೋವಿನ ಜೋಳದ ಬಿತ್ತನೆ ಬೀಜಕ್ಕೆ ಗರಿಷ್ಠ ಮಾರಾಟ ದರ ನಿಗದಿಪಡಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಮಂಗಳವಾರ ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಡಾ.ವಿಜಂi ಮಹಾಂತೇಶ ದಾನಮ್ಮನವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಮುಂಗಾರು ಮತ್ತು ಹಿಂಗಾರು ಹಂಗಾಮುಗಳು ಆರಂಭವಾಗುತ್ತಿದ್ದಂತೆ ಖಾಸಗಿ ಕಂಪನಿಗಳ ಗೋವಿನ ಜೋಳದ ಬೀಜಗಳ ಬೆಲೆ ಗಗನಕ್ಕೇರುವುದರಿಂದ ರೈತರು ಪ್ರತಿ ವರ್ಷ ಆರ್ಥಿಕ ಶೋಷಣೆಗೆ ಒಳಗಾಗುತ್ತಿದ್ದಾರೆ. ಬಿತ್ತನೆ ಬೀಜಗಳ ಬೆಲೆ ಹೆಚ್ಚಳವನ್ನು ತಡೆಯಲು ಮತ್ತು ರೈತರ ಶೋಷಣೆಯನ್ನು ಮುಕ್ತಗೊಳಿಸಲು ೧೯೬೬ ರರ ಬೀಜ ಕಾಯ್ದೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ. ಹಳೆಯ ೧೯೬೬ ರ ಬೀಜ ಕಾಯ್ದೆಯು ಇಂದಿನ ಆಧುನಿಕ ಕೃಷಿ ಪದ್ಧತಿ, ತಂತ್ರಜ್ಞಾನ ಮತ್ತು ಖಾಸಗಿ ಕಂಪನಿಗಳ ಮಾರುಕಟ್ಟೆ ವಿಸ್ತರಣೆಗೆ ತಕ್ಕಂತೆ ಬದಲಾಗಬೇಕಿದೆ. ಹೊಸದಾಗಿ ತರಬೇಕಿರುವ ಬೀಜ ಕಾಯ್ದೆಯಲ್ಲಿ ರೈತರ ಹಿತರಕ್ಷಣೆಗಾಗಿ ಕೆಳಗಿನ ಪ್ರಮುಖ ಅಂಶಗಳನ್ನು ಕಡ್ಡಾಯವಾಗಿ ಸೇರಿಸಬೇಕೆಂದು ಹಾವೇರಿ ಜಿಲ್ಲಾ ರೈತ ಸಂಘ ಒತ್ತಾಯಿಸುತ್ತಿದೆ.
ಹಲವಾರು ಕಂಪೆನಿಯ ಬೀಜಗಳನ್ನು ನೋಂದಣಿ ಮಾಡದೆ, ಮಾರುಕಟ್ಟೆಗೆ ಬಿಟ್ಟು ರೈತರ ಜಮೀನುಗಳಲ್ಲಿ ಬಿತ್ತನೆ ಮಾಡಿಸಿ, ಇಳುವರಿ ಬರದೆ ಇದ್ದಾಗ ಆ ಕಂಪನಿ ವಿರುದ್ಧ ರೈತ ಕೇಸ್ ದಾಖಲಿಸಿದರೆ, ಕೇಸ್ ದಾಖಲಿಸಿದ ಕಂಪನಿ ನೋಂದಣಿ ಆಗಿರುವುದಿಲ. ಎಲ್ಲಾ ಕಂಪನಿಯ ಎಲ್ಲಾ ತಳಿಯ ಬೀಜಗಳು ಮಾರುಕಟ್ಟೆಗೆ ಬರುವ ಮುನ್ನ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಎಲ್ಲಾ ಹೈಬ್ರಿಡ್ ಹಾಗೂ ಜಿ.ಎಂ ಬೀಜಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಿರಲೇಬೇಕು.
ಎಲ್ಲಾ ತಳಿಯ ಬೀಜಗಳ ಪ್ಯಾಕೆಟ್ ಮೇಲೆ ಮೊಳಕೆ ಪ್ರಮಾಣದ ಜೊತೆ ಆನುವಂಶಿಕ ಶುದ್ಧತೆ ಮತ್ತು ಇಳುವರಿ ಪ್ರಮಾಣದ ಲೇಬಲ್ ಅಳವಡಿಸಿರಬೇಕು. ಬೆಳೆ ಹಾನಿ ಆದರೆ ಕಡ್ಡಾಯವಾಗಿ ಕಂಪನಿಗಳೆ ಪರಿಹಾರ ಕೊಡಬೇಕು, ಮತ್ತು ಹೊಣೆಗಾರರಾಗಬೇಕು. ಕಳಪೆ ಬೀಜದಿಂದಾಗಿ ಅಥವಾ ಕಂಪನಿ ಹೇಳಿದಷ್ಟು ಇಳುವರಿ ಬಾರದೆ ಬೆಳೆ ವಿಫಲವಾದರೆ, ಕೃಷಿ ಅಧಿಕಾರಿಗಳು ಪರಿಶೀಲನೆ ನಡೆಸಿದ ೨೦ ದಿನಗಳ ಒಳಗಾಗಿ ನಷ್ಟ ಅನುಭವಿಸಿದ ರೈತನಿಗೆ ಕಂಪನಿಯ ಕಡೆಯಿಂದ ಕಡ್ಡಾಯವಾಗಿ ಆರ್ಥಿಕ ಪರಿಹಾರ ಸಿಗುವಂತಾಗಬೇಕು.
ನಕಲಿ- ಕಳಪೆ ಅಥವಾ ನಿಷೇಧಿತ ಬೀಜಗಳನ್ನು ಮಾರಾಟ ಮಾಡುವ ಜಾಲಕ್ಕೆ ಕೇವಲ ಸಣ್ಣ ದಂಡ ವಿಧಿಸದೆ, ಕಂಪನಿ ಮಾಲೀಕರು ಮತ್ತು ವಿತರಕರಿಗೆ ಕಠಿಣ ಜೈಲು ಶಿಕ್ಷೆ ಹಾಗೂ ಸಗಟು ಲೈಸೆನ್ಸ್ ರದ್ದುಪಡಿಸುವ ಕಠಿಣ ನಿಯಮ ಇರಬೇಕು. ಬೀಜ ವಂಚನೆಗೆ ಸಂಬಂಧಿಸಿದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಜಿಲ್ಲಾ ಮಟ್ಟದಲ್ಲಿ ವಿಶೇಷ ಕೃಷಿ ಗ್ರಾಹಕ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಪ್ರತಿ ಬೀಜದ ಪ್ಯಾಕೆಟ್ ಮೇಲೂ ಕ್ಯೂಆರ್ ಕೋಡ್ ಇರಬೇಕು. ಅದನ್ನು ಸ್ಕ್ಯಾನ್ ಮಾಡಿದರೆ ಆ ಬೀಜ ಎಲ್ಲಿ ಉತ್ಪಾದನೆಯಾಗಿದೆ, ಅದರ ಅಸಲಿತನ ಮತ್ತು ಸರ್ಕಾರ ನಿಗದಿಪಡಿಸಿದ ದರ ಎಷ್ಟು ಎಂಬುದರ ಡಿಜಿಟಲ್ ಪತ್ತೆ ಹಚ್ಚುವಿಕೆ ಮಾಹಿತಿ ರೈತನಿಗೆ ಮೊಬೈಲ್ನಲ್ಲೇ ಸಿಗುವಂತಾಗಬೇಕು.
ಕೇಂದ್ರ ಸರ್ಕಾರವು ಅಗತ್ಯ ವಸ್ತುಗಳ ಕಾಯ್ದೆ-೧೯೫೫ ರಂತೆ ಬಿ.ಟಿ.ಹತ್ತಿ ಬಿತ್ತನೆ ಬೀಜಕ್ಕೆ ಗರಿಷ್ಠ ಮಾರಾಟ ದರವನ್ನು ನಿಗದಿಪಡಿಸಿದ್ದು, ಇದರಿಂದ ವಿನಾಕಾರಣ ಬೀಜಕ್ಕೆ ಅತಿ ಹೆಚ್ಚಿನ ದರ ನಿಗದಿ ಪಡಿಸಿ ರೈತರನ್ನು ಶೋಷಣೆ ಮಾಡುವುದು ತಪ್ಪಿದಂತಾಗಿದೆ. ಅದೇ ರೀತಿ ಮುಸುಕಿನ ಜೋಳ ಬಿತ್ತನೆ ಬೀಜದಲ್ಲೂ ಸಹ ಎಲ್ಲಾ ತಳಿಯ ಬೀಜಗಳು ಇಳುವರಿಯಲ್ಲಿ ಹೆಚ್ಚೆಂದರೆ ೨-೪ ಕ್ವಿಂಟಲ್ ಪ್ರತಿ ಹೆಕ್ಟೇರ್ಗೆ ವ್ಯತ್ಯಾಸವಿರುತ್ತದೆ. ಸದರಿ ಮುಸುಕಿ ಜೋಳ ಬಿತ್ತನೆ ಬೀಜವನ್ನು ಅಗತ್ಯ ವಸ್ತುಗಳ ಕಾಯ್ದೆ-೧೯೫೫ ರಂತೆ ದರ ನಿಗದಿಪಡಿಸಿ ರೈತರ ಶೋಷಣೆಯನ್ನು ತಪ್ಪಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಹಕ್ಕೊತ್ತಾಯ ಮಾಡಿದೆ.
ಈ ಸಂದರ್ಭದಲ್ಲಿ ರಾಮಣ್ಣ ಕೆಂಚಳ್ಳೆರ, ಮಲ್ಲಿಕಾರ್ಜುನ ಬಳ್ಳಾರಿ, ಹೆಚ್. ಹೆಚ್. ಮುಲ್ಲಾ, ಮರಿಗೌಡ ಪಾಟೀಲ, ಶಿವಬಸಪ್ಪ ಗೋವಿ, ಶಿವಯೋಗಿ ಹೊಸಗೌಡ್ರ, ಚನ್ನಪ್ಪ ಮರಡೂರ, ಶಂಕ್ರಣ್ಣ ಶಿರಗಂಬಿ, ಶಾಂತನಗೌಡ ಪಾಟೀಲ, ಸುಭಾಸ ಬೆಣ್ಣಿಹಟ್ಟಿ ಮುಂತಾದವರು ಉಪಸ್ಥಿತರಿದ್ದರು.