ಜಿಲ್ಲೆಗಿಂದು ಸಿಎಂ ಆದ ನಂತರ ಡಿ.ಕೆ.ಶಿವಕುಮಾರ ಪ್ರಥಮ ಭೇಟಿ- “ಹಾವೇರಿಜಿಲ್ಲೆಗೆ ಸಿಗುವುದೇ ಹಾವೇರಿನ್ಯಾಯ!”

Date:

ಜಿಲ್ಲೆಗಿಂದು ಸಿಎಂ ಆದ ನಂತರ ಡಿ.ಕೆ.ಶಿವಕುಮಾರ ಪ್ರಥಮ ಭೇಟಿ-
         “ಹಾವೇರಿಜಿಲ್ಲೆಗೆ ಸಿಗುವುದೇ ಹಾವೇರಿನ್ಯಾಯ!”
ಕನಕದಾಸರ ಜಯಂತ್ಯುತ್ಸವಕ್ಕೆ ಮುಖ್ಯಮಂತ್ರಿಗಳ ಮೊದಲ ಅಧಿಕೃತ ಭೇಟಿ; ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಂದ ನೀರಾವರಿ ಯೋಜನೆವರೆಗೆ ಜಿಲ್ಲೆಯ ಜನರ ನಿರೀಕ್ಷೆಗಳ ಸರಮಾಲೆ
ಮಾಲತೇಶ ಅಂಗೂರ
ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ಸೇರಿದಂತೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ಸಂತ ಕನಕದಾಸರ ೫೩೯ನೇ ಜಯಂತ್ಯುತ್ಸವ ಕಾರ್ಯಕ್ರಮದಲಿ ಭಾಗವಹಿಸಲು ಹಾಗೂ ಹಾವೇರಿನಗರದಲ್ಲಿನ ಕಾಗಿನೆಲೆ ಕ್ರಾಸ್‌ನಲ್ಲಿ ನಿರ್ಮಿಸಿರುವ ೮.೫ ಅಡಿ ಎತ್ತರದ ಕನಕದಾಸರ ಕಂಚಿನ ಮೂರ್ತಿಯನ್ನು ಅನಾವರಣಗೊಳಿಸಲು ಜಿಲ್ಲೆಗಿಂದು ಸಿಎಂ ಆದ ನಂತರ ಡಿ.ಕೆ.ಶಿವಕುಮಾರ ಪ್ರಥಮ ಬಾರಿಗೆ ಆಗಮಿಸಲಿದ್ದಾರೆ. ಜಿಲ್ಲೆಗೆ ಇದು ಸಿಎಂ ಅವರು ಅಧೀಕೃತ ಮೊದಲ ಭೇಟಿಯಾಗಿದೆ. ಸಿಎಂ ಭೇಟಿಯ ಹಿನ್ನಲೆಯಲ್ಲಿ ಜಿಲ್ಲೆಯ ಜನರ ನಿರೀಕ್ಷೆಯು ಸಹ ಹೆಚ್ಚಾಗಿದೆ.
ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ನ. ೨೭ರಂದು ಹಾವೇರಿ ಜಿಲ್ಲೆಗೆ ಭೇಟಿ ನೀಡಲಿದ್ದು, ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ನಡೆಯುವ ಸಂತ ಕನಕದಾಸರ ೫೩೯ನೇ ಜಯಂತ್ಯುತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಹಾವೇರಿ ನಗರದ ಕಾಗಿನೆಲೆ ಕ್ರಾಸ್‌ನಲ್ಲಿ ನಿರ್ಮಿಸಿರುವ ೮.೫ ಅಡಿ ಎತ್ತರದ ಕನಕದಾಸರ ಕಂಚಿನ ಮೂರ್ತಿಯನ್ನು ಅನಾವರಣಗೊಳಿಸಲಿದ್ದಾರೆ. ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಬಳಿಕ ಜಿಲ್ಲೆಗೆ ಅವರ ಮೊದಲ ಅಧಿಕೃತ ಭೇಟಿ ಇದಾಗಿರುವುದರಿಂದ ಜಿಲ್ಲೆಯ ಜನರ ನಿರೀಕ್ಷೆಗಳೂ ಗರಿಗೆದರಿವೆ.
ಕನಕದಾಸರ ಮೂರ್ತಿ ಅನಾವರಣ, ಜಯಂತ್ಯುತ್ಸವದ ಸಂಭ್ರಮದ ನಡುವೆಯೇ ಜಿಲ್ಲೆಯ ದಶಕಗಳ ಸಮಸ್ಯೆಗಳಿಗೆ ಪರಿಹಾರ ಸಿಗುವುದೇ? ಅಭಿವೃದ್ಧಿಯ ವಿಚಾರದಲ್ಲಿ ಹಾವೇರಿ ಜಿಲ್ಲೆಗೆ ಹೊಸ ಕೊಡುಗೆಗಳು ದೊರೆಯಲಿವೆಯೇ? ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ವೇಗ ಸಿಗಲಿದೆಯೇ? ಎಂಬ ಪ್ರಶ್ನೆಗಳು ಈಗ ಜಿಲ್ಲೆಯ ಜನರನ್ನು ಕಾಡುತ್ತಿವೆ. ಕೃಷಿ ಪ್ರಧಾನ ಜಿಲ್ಲೆಯಾದ ಹಾವೇರಿಯಲ್ಲಿ ರೈತರ ಸಂಕಷ್ಟ, ಸಮರ್ಪಕ ನೀರಾವರಿ ಕೊರತೆ, ಕುಡಿಯುವ ನೀರಿನ ಸಮಸ್ಯೆ, ಆರೋಗ್ಯ ಸೇವೆಗಳಲ್ಲಿನ ಕೊರತೆ, ಯುವಕರ ನಿರುದ್ಯೋಗ, ಕೈಗಾರಿಕೆಗಳ ಅಭಿವೃದ್ಧಿ ಹಾಗೂ ಅಪೂರ್ಣವಾಗಿರುವ ವಿವಿಧ ಅಭಿವೃದ್ಧಿ ಯೋಜನೆಗಳು ಸರ್ಕಾರದ ಗಮನ ಸೆಳೆಯಬೇಕಾದ ಪ್ರಮುಖ ವಿಚಾರಗಳಾಗಿವೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕನಸು ನನಸಾಗುವುದೇ?ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಆರಂಭವಾಗಿ ನೂರಾರು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಜಿಲ್ಲೆಯ ಜನರಿಗೆ ಮಾತ್ರ ಉನ್ನತ ಮಟ್ಟದ ವೈದ್ಯಕೀಯ ಚಿಕಿತ್ಸೆ ಇನ್ನೂ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಹುಬ್ಬಳ್ಳಿ, ದಾವಣಗೆರೆ, ಮಣಿಪಾಲ, ಮಂಗಳೂರು ಹಾಗೂ ಶಿವಮೊಗ್ಗದ ಆಸ್ಪತ್ರೆಗಳನ್ನು ಅವಲಂಭಿಸಬೇಕಾದ ಅನಿವಾರ್ಯತೆ ಮುಂದುವರಿದಿದೆ. ಹಾವೇರಿಯಲ್ಲಿಯೇ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಬೇಕೆಂಬುದು ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ. ಅಗತ್ಯ ತಜ್ಞ ವೈದ್ಯರ ನೇಮಕಾತಿ, ಆಧುನಿಕ ವೈದ್ಯಕೀಯ ಉಪಕರಣಗಳು, ತುರ್ತು ಚಿಕಿತ್ಸಾ ವ್ಯವಸ್ಥೆ ಹಾಗೂ ಅಪಘಾತ ಸಂತ್ರಸ್ತರಿಗೆ ತ್ವರಿತ ಚಿಕಿತ್ಸೆ ನೀಡುವ ಟ್ರಾಮಾ ಕೇರ್ ಘಟಕದ ಸ್ಥಾಪನೆಗೆ ಸರ್ಕಾರ ಆದ್ಯತೆ ನೀಡಬೇಕಿದೆ.
ಜಿಲ್ಲಾ ಆಸ್ಪತ್ರೆ ಹಾಗೂ ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ತಜ್ಞ ವೈದ್ಯರ ಕೊರತೆ, ವೈದ್ಯಕೀಯ ಸೌಲಭ್ಯಗಳು, ಔಷಧ ಪೂರೈಕೆ ಮತ್ತು ಪರೀಕ್ಷಾ ವ್ಯವಸ್ಥೆಗಳ ಕುರಿತು ಸಾರ್ವಜನಿಕರಿಂದ ಆಗಾಗ್ಗೆ ದೂರುಗಳು ಕೇಳಿಬರುತ್ತಿವೆ. ಇದರೊಂದಿಗೆ ಜಿಲ್ಲಾ ಆಸ್ಪತ್ರೆಯ ಒಳರೋಗಿಗಳಿಗೆ ಆಹಾರ ಪೂರೈಕೆ ಸಂಬಂಧ ಸುಮಾರು ?೨ ಕೋಟಿ ಮೊತ್ತದ ಟೆಂಡರ್ ಪ್ರಕ್ರಿಯೆಯಲ್ಲಿನ ಪಾರದರ್ಶಕತೆ, ಆಹಾರದ ಗುಣಮಟ್ಟ, ಪೌಷ್ಟಿಕಾಂಶ, ಸ್ವಚ್ಛತೆ ಹಾಗೂ ಗುತ್ತಿಗೆ ಷರತ್ತುಗಳ ಪಾಲನೆಯ ಬಗ್ಗೆಯೂ ಪರಿಶೀಲನೆ ಅಗತ್ಯವಾಗಿದೆ. ರೋಗಿಗಳಿಗೆ ನೀಡುವ ಆಹಾರದ ಗುಣಮಟ್ಟದಲ್ಲಿ ಯಾವುದೇ ರಾಜಿ ಸಲ್ಲದು. ಸಾರ್ವಜನಿಕ ಹಣದ ಬಳಕೆಯಲ್ಲೂ ಹೊಣೆಗಾರಿಕೆ ಇರಬೇಕು.
ರೈತರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಯಾವಾಗ?: ಕೃಷಿಯನ್ನೇ ನಂಬಿ ಬದುಕುತ್ತಿರುವ ಹಾವೇರಿ ಜಿಲ್ಲೆಯ ರೈತರು ಒಂದಲ್ಲ ಒಂದು ಸಮಸ್ಯೆಯ ಸುಳಿಯಲ್ಲಿ ಸಿಲುಕುತ್ತಿದ್ದಾರೆ. ಮೆಕ್ಕೆಜೋಳ, ಭತ್ತ, ಬ್ಯಾಡಗಿ ಮೆಣಸಿನಕಾಯಿ, ಸೋಯಾಬೀನ್, ಶೇಂಗಾ ಹಾಗೂ ಕಬ್ಬು ಬೆಳೆಗಾರರು ಬೆಲೆ ಏರಿಳಿತ, ಉತ್ಪಾದನಾ ವೆಚ್ಚ, ಮಾರುಕಟ್ಟೆ ವ್ಯವಸ್ಥೆ ಮತ್ತು ಬೆಳೆ ನಷ್ಟದ ಹೊಡೆತ ಎದುರಿಸುತ್ತಿದ್ದಾರೆ.ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ, ಕಾರ್ಮಿಕರ ಕೂಲಿ ಹಾಗೂ ನೀರಾವರಿ ವೆಚ್ಚ ಹೆಚ್ಚಾಗುತ್ತಿದ್ದರೂ ರೈತರ ಉತ್ಪನ್ನಗಳಿಗೆ ಮಾತ್ರ ನಿರೀಕ್ಷಿತ ಬೆಲೆ ಸಿಗುತ್ತಿಲ್ಲ. ರೈತರ ಆದಾಯಕ್ಕೆ ಭದ್ರತೆ ಒದಗಿಸುವಂತಹ ಶಾಶ್ವತ ನೀತಿ ರೂಪಿಸುವ ಅಗತ್ಯವಿದೆ.
ಇತ್ತೀಚಿನ ದಿನಗಳಲ್ಲಿ ಕಬ್ಬು ದರ ನಿಗದಿಗಾಗಿ ಜಿಲ್ಲೆಯ ರೈತರು ನಡೆಸಿದ ಹೋರಾಟ ರಾಜ್ಯದ ಗಮನ ಸೆಳೆದಿದೆ. ಬೀದಿಗಿಳಿದು ಹೋರಾಟ ನಡೆಸಿದ ಬಳಿಕ ಮಧ್ಯಂತರ ದರದ ಕುರಿತು ಒಪ್ಪಂದದ ಮಾತುಗಳು ಕೇಳಿಬಂದಿವೆ. ಆದರೆ ಉತ್ಪಾದನಾ ವೆಚ್ಚಕ್ಕೆ ತಕ್ಕ ನ್ಯಾಯಯುತ ಬೆಲೆ, ಬಾಕಿ ಪಾವತಿ ಹಾಗೂ ಭವಿಷ್ಯದಲ್ಲಿ ಇಂತಹ ಹೋರಾಟಗಳು ಮರುಕಳಿಸದಂತೆ ಶಾಶ್ವತ ವ್ಯವಸ್ಥೆ ರೂಪಿಸುವುದು ಸರ್ಕಾರದ ಜವಾಬ್ದಾರಿಯಲ್ಲವೇ? ಎಂಬುದು ರೈತರ ಪ್ರಶ್ನೆಯಾಗಿದೆ.
ಪಂಚನದಿಗಳ ಜಿಲ್ಲೆಗೆ ನೀರಾವರಿ ಭಾಗ್ಯ ಯಾವಾಗ?ತುಂಗ-ಭದ್ರಾ, ವರದಾ, ಧರ್ಮಾ ಹಾಗೂ ಕುಮದ್ವತಿ ಸೇರಿದಂತೆ ನದಿಗಳ ಜಲಸಂಪನ್ಮೂಲ ಹೊಂದಿರುವ ಹಾವೇರಿ ಜಿಲ್ಲೆಯಲ್ಲಿ ಇಂದಿಗೂ ಅನೇಕ ಪ್ರದೇಶಗಳು ಸಮರ್ಪಕ ನೀರಾವರಿಗಾಗಿ ಕಾಯುತ್ತಿವೆ. ಏತ ನೀರಾವರಿ ಯೋಜನೆಗಳು, ಕೆರೆ ತುಂಬಿಸುವ ಕಾಮಗಾರಿಗಳು, ಕಾಲುವೆಗಳ ದುರಸ್ತಿ ಹಾಗೂ ಬಾಕಿ ಉಳಿದಿರುವ ನೀರಾವರಿ ಯೋಜನೆಗಳಿಗೆ ವೇಗ ನೀಡಬೇಕೆಂಬುದು ರೈತರ ಬಹುಕಾಲದ ಬೇಡಿಕೆಯಾಗಿದೆ.ಕಂಚಾರಗಟ್ಟಿ ಸಮೀಪದ ತುಂಗಭದ್ರಾ ಬ್ಯಾರೇಜ್ ಸೇರಿದಂತೆ ಪ್ರಸ್ತಾಪಿತ ನೀರಾವರಿ ಯೋಜನೆಗಳ ಪ್ರಸ್ತುತ ಸ್ಥಿತಿಗತಿಯೇನು? ಯಾವ ಯೋಜನೆಗೆ ಎಷ್ಟು ಅನುದಾನ ಬಿಡುಗಡೆಯಾಗಿದೆ? ಎಷ್ಟು ಕಾಮಗಾರಿ ಪೂರ್ಣಗೊಂಡಿದೆ? ಇನ್ನೆಷ್ಟು ಕಾಮಗಾರಿ ಬಾಕಿ ಉಳಿದಿದೆ? ಎಂಬುದಕ್ಕೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕಿದೆ.
ಯೋಜನೆಗಳನ್ನು ಘೋಷಿಸುವುದಷ್ಟೇ ಅಭಿವೃದ್ಧಿಯಲ್ಲ. ಆ ಯೋಜನೆಗಳ ನೀರು ರೈತರ ಹೊಲಗಳಿಗೆ ತಲುಪಿದಾಗ ಮಾತ್ರ ಅದರ ಸಾರ್ಥಕತೆ ಸಾಬೀತಾಗುತ್ತದೆ.
ಹಾವೇರಿ ನಗರಕ್ಕೆ ೨೪/೭ ಕುಡಿಯುವ ನೀರು ಮರೀಚಿಕೆಯೇ?: ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿಯೇ ಕುಡಿಯುವ ನೀರಿನ ಸಮಸ್ಯೆಗೆ ಇನ್ನೂ ಸಂಪೂರ್ಣ ಪರಿಹಾರ ದೊರೆತಿಲ್ಲ. ೨೪/೭ ಕುಡಿಯುವ ನೀರು ಪೂರೈಕೆ ಯೋಜನೆಯ ಅನುಷ್ಠಾನ ನಿಧಾನಗತಿಯಲ್ಲಿ ಸಾಗುತ್ತಿದೆ ಎಂಬ ಅಸಮಾಧಾನ ಸಾರ್ವಜನಿಕರಲ್ಲಿದೆ. ಯೋಜನೆಯ ಕಾಮಗಾರಿಗಳು ಯಾವ ಹಂತದಲ್ಲಿವೆ? ಮನೆಮನೆಗೆ ನಿರಂತರ ನೀರು ಪೂರೈಕೆ ಯಾವಾಗ ಸಾಧ್ಯವಾಗಲಿದೆ? ಎಂಬ ಪ್ರಶ್ನೆಗಳಿಗೆ ಸಂಬಂಧಿಸಿದ ಇಲಾಖೆ ಉತ್ತರಿಸಬೇಕಿದೆ.ಇನ್ನು ಗ್ರಾಮೀಣ ಪ್ರದೇಶಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಮುಂದುವರಿದಿದೆ. ಜಲಜೀವನ್ ಮಿಷನ್ ಯೋಜನೆಯಡಿ ಮನೆಮನೆಗೆ ನೀರು ಪೂರೈಸುವ ಗುರಿ ಘೋಷಣೆಯಾಗಿದ್ದರೂ, ಕೆಲವು ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆಯೇ? ಪೈಪ್‌ಲೈನ್ ಸಂಪರ್ಕ ಕಲ್ಪಿಸಿದ ಬಳಿಕ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿದೆಯೇ? ಎಂಬುದನ್ನು ಪರಿಶೀಲಿಸಬೇಕಿದೆ.
ಯುವಕರಿಗೆ ಉದ್ಯೋಗ, ಕೈಗಾರಿಕೆಗಳಿಗೆ ಉತ್ತೇಜನ ಬೇಕು:ಜಿಲ್ಲೆಯ ಸಾವಿರಾರು ಯುವಕರು ಪದವಿ, ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಪಡೆದು ಉದ್ಯೋಗ ಅರಸಿ ಬೇರೆ ಜಿಲ್ಲೆ ಮತ್ತು ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳ ಕೊರತೆ ಇದಕ್ಕೆ ಪ್ರಮುಖ ಕಾರಣವಾಗಿದೆ.ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ, ಹೊಸ ಉದ್ಯಮಗಳ ಸ್ಥಾಪನೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ಹಾಗೂ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಯೋಜನೆಗಳಿಗೆ ಸರ್ಕಾರ ಆದ್ಯತೆ ನೀಡಬೇಕಿದೆ.ಉದ್ಯೋಗ ಮೇಳಗಳ ಆಯೋಜನೆ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿಗಳು ಕೇವಲ ಕಾರ್ಯಕ್ರಮಗಳಾಗಿ ಉಳಿಯದೆ, ಯುವಕರಿಗೆ ನೈಜ ಉದ್ಯೋಗ ದೊರಕಿಸುವಂತಾಗಬೇಕು. ಜಿಲ್ಲೆಯಲ್ಲಿಯೇ ಉದ್ಯೋಗ ಸಿಗುವಂತಹ ಕೈಗಾರಿಕಾ ವಾತಾವರಣ ನಿರ್ಮಾಣವಾಗಬೇಕಿದೆ.
ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರಕ್ಕೆ ಬೇಕಿದೆ ಕಾಯಕಲ್ಪ:ಜಿಲ್ಲೆಯ ವರಕವಿ ಸರ್ವಜ್ಞರ ಹೆಸರಿನಲ್ಲಿ ಅಭಿವೃದ್ಧಿ ಪ್ರಾಧಿಕಾರ ಘೋಷಣೆಯಾಗಿ ಹಲವು ವರ್ಷಗಳಾದರೂ ನಿರೀಕ್ಷಿತ ಅಭಿವೃದ್ಧಿ ಕಾರ್ಯಗಳು ಮಾತ್ರ ಗೋಚರಿಸುತ್ತಿಲ್ಲ. ಪ್ರಾಧಿಕಾರಕ್ಕೆ ಅಗತ್ಯ ಅನುದಾನ, ಕಚೇರಿ, ಸಿಬ್ಬಂದಿ ಹಾಗೂ ಸಮಗ್ರ ಅಭಿವೃದ್ಧಿ ಕ್ರಿಯಾಯೋಜನೆ ರೂಪಿಸುವ ಮೂಲಕ ಅದಕ್ಕೆ ಕಾಯಕಲ್ಪ ನೀಡಬೇಕಿದೆ.ಕಾಗಿನೆಲೆ ಮತ್ತು ಬಾಡ ಪ್ರದೇಶಗಳ ಅಭಿವೃದ್ಧಿಗೆ ?೩೪ ಕೋಟಿ ಅನುದಾನ ಒದಗಿಸಿರುವುದಾಗಿ ಪ್ರಕಟಣೆಗಳಲ್ಲಿ ತಿಳಿಸಲಾಗಿದೆ. ಈ ಅನುದಾನದಲ್ಲಿ ಯಾವ ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗಿದೆ? ಎಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ? ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಬೇಕಿದೆ. ಇದರೊಂದಿಗೆ ನಿಜಶರಣ ಅಂಬಿಗರ ಚೌಡಯ್ಯನವರ ಐಕ್ಯಮಂಟಪ ಅಭಿವೃದ್ಧಿ, ಶಿಶುನಾಳ ಶರೀಫರ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನ ಮತ್ತು ದಕ್ಷಿಣ ಆಫ್ರಿಕಾದ ಸಂವಿಧಾನ ಶಿಲ್ಪಿ ಎಂದು ಗುರುತಿಸಲ್ಪಟ್ಟ ಎಲ್.ಜಿ. ಹಾವನೂರು ಅವರ ಹೆಸರಿನ ಟ್ರಸ್ಟ್‌ನ ಕಾರ್ಯಚಟುವಟಿಕೆಗಳ ಬಗ್ಗೆಯೂ ಸ್ಪಷ್ಟತೆ ಅಗತ್ಯವಾಗಿದೆ.ಜಿಲ್ಲೆಯ ಸಾಂಸ್ಕೃತಿಕ, ಐತಿಹಾಸಿಕ ಹಾಗೂ ಸಾಮಾಜಿಕ ಮಹತ್ವದ ಸ್ಥಳಗಳ ಅಭಿವೃದ್ಧಿಗೆ ಘೋಷಣೆಯಾದ ಯೋಜನೆಗಳು ಕಾಗದದಲ್ಲಿಯೇ ಉಳಿಯದೆ ಅನುಷ್ಠಾನಗೊಳ್ಳಬೇಕಿದೆ.
ಶಿಕ್ಷಣ, ರಸ್ತೆ ಮತ್ತು ಗ್ರಾಮೀಣ ಅಭಿವೃದ್ಧಿಗೂ ಆದ್ಯತೆ ಸಿಗಲಿ:ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆ, ಶಿಕ್ಷಕರ ಲಭ್ಯತೆ, ಕಾಲೇಜುಗಳಲ್ಲಿ ಅಗತ್ಯ ಸೌಲಭ್ಯಗಳು ಹಾಗೂ ವಿದ್ಯಾರ್ಥಿಗಳ ವಸತಿ ವ್ಯವಸ್ಥೆಯ ಸುಧಾರಣೆ ಅಗತ್ಯವಾಗಿದೆ.ಗ್ರಾಮೀಣ ರಸ್ತೆಗಳ ದುರಸ್ತಿ, ಒಳಚರಂಡಿ ವ್ಯವಸ್ಥೆ, ಬೀದಿದೀಪ, ಸಾರಿಗೆ ಸಂಪರ್ಕ ಹಾಗೂ ಸಾರ್ವಜನಿಕ ಸೌಲಭ್ಯಗಳ ಅಭಿವೃದ್ಧಿಗೂ ಸರ್ಕಾರ ಗಮನಹರಿಸಬೇಕಿದೆ. ಗ್ರಾಮೀಣ ಭಾಗದ ಜನರ ಬದುಕಿನ ಗುಣಮಟ್ಟ ಸುಧಾರಿಸುವ ಯೋಜನೆಗಳಿಗೆ ಆದ್ಯತೆ ನೀಡಬೇಕಿದೆ.
ಚುನಾವಣೆಯ ಹೊಸ್ತಿಲಲ್ಲಿ ಘೋಷಣೆಗಳಲ್ಲ, ಕೆಲಸದ ಲೆಕ್ಕ ಬೇಕು!ಜಿಲ್ಲಾ ಪಂಚಾಯಿತಿ ಚುನಾವಣೆಗಳ ನಿರೀಕ್ಷೆಯ ಹಿನ್ನೆಲೆಯಲ್ಲಿ ಜಿಲ್ಲೆಯ ರಾಜಕೀಯ ಚಟುವಟಿಕೆಗಳು ಚುರುಕಾಗುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ಹೊಸ ಭರವಸೆಗಳ ಪಟ್ಟಿ ನೀಡುವುದಕ್ಕಿಂತ ಈ ಹಿಂದೆ ಘೋಷಣೆಯಾದ ಯೋಜನೆಗಳು ಮತ್ತು ಮಂಜೂರಾದ ಅನುದಾನಗಳ ಅನುಷ್ಠಾನದ ಲೆಕ್ಕ ನೀಡುವುದು ಮುಖ್ಯವಾಗಿದೆ.
ಜಿಲ್ಲೆಗೆ ಎಷ್ಟು ಅನುದಾನ ಬಂದಿದೆ? ಎಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ? ಎಷ್ಟು ಯೋಜನೆಗಳು ಅರ್ಧಕ್ಕೆ ನಿಂತಿವೆ? ಯಾವ ಇಲಾಖೆಗಳಲ್ಲಿ ವಿಳಂಬವಾಗಿದೆ? ಜನರ ಸಮಸ್ಯೆಗಳಿಗೆ ಹೊಣೆಗಾರರು ಯಾರು? ಎಂಬ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕಿದೆ.ಅಭಿವೃದ್ಧಿಯ ಹೆಸರಿನಲ್ಲಿ ಘೋಷಣೆಗಳ ಸುರಿಮಳೆಯಾಗುವುದಕ್ಕಿಂತ ಜನರ ಬದುಕಿನಲ್ಲಿ ಬದಲಾವಣೆ ತರುವ ನಿರ್ಧಾರಗಳು ಜಾರಿಯಾಗಬೇಕು.
ಮೂರ್ತಿಗೆ ಗೌರವ; ಜನರ ಬದುಕಿಗೂ ಆದ್ಯತೆ! ಸಂತ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾನತೆ, ಭಕ್ತಿ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶ ಸಾರಿದವರು. ಅವರ ಹೆಸರಿನಲ್ಲಿ ನಡೆಯುವ ಜಯಂತ್ಯುತ್ಸವ ಕೇವಲ ವೇದಿಕೆ, ಭಾಷಣ ಮತ್ತು ಸಂಭ್ರಮಕ್ಕೆ ಸೀಮಿತವಾಗಬಾರದು. ಅವರು ಪ್ರತಿಪಾದಿಸಿದ ಮೌಲ್ಯಗಳನ್ನು ಜನಜೀವನದಲ್ಲಿ ಅಳವಡಿಸುವ ಸಂಕಲ್ಪವಾಗಬೇಕು.
ಮುಖ್ಯಮಂತ್ರಿಗಳ ಹಾವೇರಿ ಭೇಟಿಯು ಕೇವಲ ಮೂರ್ತಿ ಅನಾವರಣ ಮತ್ತು ಜಯಂತ್ಯುತ್ಸವದ ಕಾರ್ಯಕ್ರಮಕ್ಕೆ ಸೀಮಿತವಾಗದೆ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ಭೇಟಿಯಾಗಬೇಕು ಎಂಬುದು ಜನರ ಆಶಯ.ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರೈತರ ಸಂಕಷ್ಟಕ್ಕೆ ಶಾಶ್ವತ ಪರಿಹಾರ, ನೀರಾವರಿ ಯೋಜನೆಗಳ ಅನುಷ್ಠಾನ, ಕುಡಿಯುವ ನೀರಿನ ಸಮಸ್ಯೆ ನಿವಾರಣೆ, ಯುವಕರಿಗೆ ಉದ್ಯೋಗ, ಶಿಕ್ಷಣ ಮತ್ತು ಕೈಗಾರಿಕಾ ಅಭಿವೃದ್ಧಿ ಸೇರಿದಂತೆ ಹಲವು ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಸ್ಪಷ್ಟ ಭರವಸೆ ನೀಡಬೇಕಿದೆ. ಅಷ್ಟೇ ಅಲ್ಲ, ಘೋಷಣೆಗಳ ಅನುಷ್ಠಾನಕ್ಕೆ ಕಾಲಮಿತಿಯನ್ನೂ ಪ್ರಕಟಿಸಬೇಕಿದೆ.
ಕನಕದಾಸರ ಮೂರ್ತಿ ಅನಾವರಣದ ಮೂಲಕ ಹಾವೇರಿಗೆ ಸಾಂಕೇತಿಕ ಗೌರವ ಸಲ್ಲಿಸುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಜಿಲ್ಲೆಯ ಜನರ ಬಹುದಿನಗಳ ಸಮಸ್ಯೆಗಳಿಗೂ ಪರಿಹಾರದ ಸ್ಪರ್ಶ ನೀಡುವರೇ? ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಹಾವೇರಿ ಜಿಲ್ಲೆಗೆ ಹೊಸ ವೇಗ ನೀಡುವರೇ? ಜಿಲ್ಲೆಯ ಜನರ ಈ ನಿರೀಕ್ಷೆಗಳಿಗೆ ಮುಖ್ಯಮಂತ್ರಿಗಳ ಉತ್ತರವೇನು?

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಎಸ್‌ಐಆರ್ ಪಟ್ಟಿ ತಿರಸ್ಕರಿಸಿ, ೨೦೨೫ರ ಮತಪಟ್ಟಿಯನ್ವಯ ಸ್ಥಳೀಯ ಚುನಾವಣೆಗಳನ್ನು ನಡೆಸಲು ಆಗ್ರಹ

ಎಸ್‌ಐಆರ್ ಪಟ್ಟಿ ತಿರಸ್ಕರಿಸಿ, ೨೦೨೫ರ ಮತಪಟ್ಟಿಯನ್ವಯ ಸ್ಥಳೀಯ ಚುನಾವಣೆಗಳನ್ನು ನಡೆಸಲು ಆಗ್ರಹ ಹಾವೇರಿ:...

ರಾಣೆಬೆನ್ನೂರು ನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹15.60 ಲಕ್ಷ ಮೌಲ್ಯದ ನಕಲಿ ನೋಟು ಜಪ್ತಿ, ಇಬ್ಬರ ಬಂಧನ

ರಾಣೆಬೆನ್ನೂರು ನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹15.60 ಲಕ್ಷ ಮೌಲ್ಯದ...

ಮೋಟೆಬೆನ್ನೂರು ಬಳಿ ಖಾಸಗಿ ಬಸ್ ಪಲ್ಟಿ: ಹಲವರಿಗೆ ಗಾಯ, ಮೂವರ ರಕ್ಷಣೆ

ಮೋಟೆಬೆನ್ನೂರು ಬಳಿ ಖಾಸಗಿ ಬಸ್ ಪಲ್ಟಿ: ಹಲವರಿಗೆ ಗಾಯ, ಮೂವರ ರಕ್ಷಣೆ ಅಪಘಾತದಲ್ಲಿ...

ನ. ೨೭ರಂದು ಹಾವೇರಿಯಲ್ಲಿ ಕನಕದಾಸರ ೮.೫ ಅಡಿ ಎತ್ತರದ ಕಂಚಿನ ಮೂರ್ತಿ ಪ್ರತಿಷ್ಠಾಪನೆ

ನ. ೨೭ರಂದು ಹಾವೇರಿಯಲ್ಲಿ ಕನಕದಾಸರ ೮.೫ ಅಡಿ ಎತ್ತರದ ಕಂಚಿನ ಮೂರ್ತಿ...