ನ. ೨೭ರಂದು ಹಾವೇರಿಯಲ್ಲಿ ಕನಕದಾಸರ ೮.೫ ಅಡಿ ಎತ್ತರದ ಕಂಚಿನ ಮೂರ್ತಿ ಪ್ರತಿಷ್ಠಾಪನೆ

Date:

ಹಾವೇರಿ: ನಗರದ ಹಳೆಯ ಪಿ.ಬಿ. ರಸ್ತೆಯ ಸಮೀಪ, ಕಾಗಿನೆಲೆ ರಸ್ತೆಗೆ ಹೊಂದಿಕೊಂಡಿರುವ ಶ್ರೀ ಕನಕದಾಸ ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಆವರಣದಲ್ಲಿ ಸಂತಶ್ರೇಷ್ಠ ಶ್ರೀ ಕನಕದಾಸರ ೮.೫ ಅಡಿ ಎತ್ತರದ ಭವ್ಯ ಕಂಚಿನ ಮೂರ್ತಿ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಗಳು ನಡೆದಿವೆ. ನ. ೨೭ರಂದು ನಡೆಯಲಿರುವ ಶ್ರೀ ಕನಕದಾಸರ ಜಯಂತ್ಯುತ್ಸವದ ಅಂಗವಾಗಿ ಮೂರ್ತಿಯನ್ನು ಲೋಕಾರ್ಪಣೆಗೊಳಿಸಲು ನಿರ್ಧರಿಸಲಾಗಿದ್ದು, ಹಲವು ವರ್ಷಗಳ ಕನಸು ನನಸಾಗುತ್ತಿರುವುದಕ್ಕೆ ಕನಕದಾಸರ ಅಭಿಮಾನಿಗಳು ಹಾಗೂ ಸಮುದಾಯದ ಜನರಲ್ಲಿ ಸಂತಸ ಮನೆಮಾಡಿದೆ.
ಕಾಗಿನೆಲೆಯ ಶ್ರೀ ಕನಕ ಗುರುಪೀಠದ ಜಗದ್ಗುರು ಡಾ. ನಿರಂಜನಾನಂದಪುರಿ ಮಹಾಸ್ವಾಮೀಜಿಗಳ ಹಾಗೂ ಬ್ಯಾಡಗಿ ಕ್ಷೇತ್ರದ ಶಾಸಕರು, ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಸವರಾಜ ಶಿವಣ್ಣನವರ ಮಾರ್ಗದರ್ಶನದಲ್ಲಿ ಜಿಲ್ಲಾ ಮತ್ತು ತಾಲೂಕು ಕುರುಬರ ಸಂಘದ ಪದಾಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಒಗ್ಗೂಡಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ಕೆ ಕೈಜೋಡಿಸಿದ್ದಾರೆ.
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡರ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ನಾಗರಾಜ ಆನ್ವೇರಿ, ಶ್ರೀ ಕನಕದಾಸ ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಜಿಲ್ಲಾ ಕುರುಬರ ಸಂಘದ ಉಪಾಧ್ಯಕ್ಷ ಅಶೋಕ ಬಣಕಾರ ಸೇರಿದಂತೆ ಹಲವು ಮುಖಂಡರು ಈ ಕಾರ್ಯದಲ್ಲಿ ಮುತುವರ್ಜಿ ವಹಿಸಿದ್ದಾರೆ. ಸಮುದಾಯದ ಸಂಘಟಿತ ಪ್ರಯತ್ನದ ಫಲವಾಗಿ ಮಹತ್ವದ ಕಾರ್ಯ ಸಾಕಾರಗೊಳ್ಳುತ್ತಿದೆ.
ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಕನಕದಾಸರ ಕಂಚಿನ ಮೂರ್ತಿಯನ್ನು ನಿರ್ಮಿಸಿರುವ ಬಿಡದಿಯ ಖ್ಯಾತ ಶಿಲ್ಪಿ ವಿಜಯ್ ಅವರೇ ಹಾವೇರಿಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಮೂರ್ತಿಯನ್ನೂ ಕಲಾತ್ಮಕವಾಗಿ ರೂಪಿಸಿದ್ದಾರೆ. ೮.೫ ಅಡಿ ಎತ್ತರದ ಈ ಭವ್ಯ ಕಂಚಿನ ಮೂರ್ತಿ ಹಾವೇರಿ ನಗರದ ಪ್ರಮುಖ ಆಕರ್ಷಣೆಯಾಗುವುದರ ಜತೆಗೆ ಸಂತ ಕನಕದಾಸರ ಭಕ್ತಿ, ಸಮಾನತೆ, ಸಾಮಾಜಿಕ ಸಾಮರಸ್ಯ ಹಾಗೂ ಜೀವನಾದರ್ಶಗಳನ್ನು ಸಾರಲಿದೆ.
ಹಾವೇರಿ ನಗರದಲ್ಲಿ ಕನಕದಾಸರ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕೆಂಬುದು ಈ ಭಾಗದ ಜನತೆ ಹಾಗೂ ಕನಕದಾಸರ ಅಭಿಮಾನಿಗಳ ಹಲವು ವರ್ಷಗಳ ಆಶಯವಾಗಿತ್ತು. ಇದೀಗ ಆ ಆಶಯ ಸಾಕಾರಗೊಳ್ಳುತ್ತಿರುವುದು ಸಮುದಾಯದ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ.
ಕನಕ ಜಯಂತಿಯ ಶುಭ ಸಂದರ್ಭದಲ್ಲಿ ಮೂರ್ತಿಯ ಪ್ರತಿಷ್ಠಾಪನೆ ನಡೆಯುತ್ತಿರುವುದು ವಿಶೇಷ ಮಹತ್ವ ಪಡೆದಿದೆ. ಮುಂದಿನ ಪೀಳಿಗೆಗೆ ಕನಕದಾಸರ ತತ್ವಾದರ್ಶ, ಕೀರ್ತನೆಗಳು ಹಾಗೂ ಸಮಾನತೆಯ ಸಂದೇಶವನ್ನು ಪರಿಚಯಿಸುವ ಸ್ಮರಣೀಯ ಕಾರ್ಯ ಇದಾಗಲಿದೆ. ಈ ಮೂಲಕ ಹಾವೇರಿ ನಗರದಲ್ಲಿ ಸಂತ ಕನಕದಾಸರ ಕೀರ್ತಿ ಮತ್ತು ಸಾಮಾಜಿಕ ಸಂದೇಶವನ್ನು ಸಾರುವ ಮತ್ತೊಂದು ಸ್ಮಾರಕ ನಿರ್ಮಾಣಗೊಂಡಂತಾಗಲಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ನ.೨೭ಕ್ಕೆ ಹಾವೇರಿಗೆ ಸಿಎಂ ಡಿ.ಕೆ.ಶಿವಕುಮಾರ-ಕನಕದಾಸರ ಕಂಚಿನ ಮೂರ್ತಿಯ ಅನಾವರಣ-ಶಿವಣ್ಣನವರ

ನ.೨೭ಕ್ಕೆ ಹಾವೇರಿಗೆ ಸಿಎಂ ಡಿ.ಕೆ.ಶಿವಕುಮಾರ-ಕನಕದಾಸರ ಕಂಚಿನ ಮೂರ್ತಿಯ ಅನಾವರಣ-ಶಿವಣ್ಣನವರ ಹಾವೇರಿ: ಸಂತ ಕನಕದಾಸರ...

ಆಶ್ರಯ ಮನೆಗಳ ಹಂಚಿಕೆ ಕನಸು ನನಸಾಗಿದೆ: ಸಚಿವ ರುದ್ರಪ್ಪ ಲಮಾಣಿ

ಆಶ್ರಯ ಮನೆಗಳ ಹಂಚಿಕೆ ಕನಸು ನನಸಾಗಿದೆ: ಸಚಿವ ರುದ್ರಪ್ಪ ಲಮಾಣಿ ಹಾವೇರಿ...

ಕಬ್ಬು ಬೆಳೆಗಾರರ ಹೋರಾಟಕ್ಕೆ ಕೊನೆಗೂ ಜಯ!

ಕಬ್ಬು ಬೆಳೆಗಾರರ ಹೋರಾಟಕ್ಕೆ ಕೊನೆಗೂ ಜಯ! ಮಂಗಳವಾರ ಬೆಳಗಿನಜಾವ ೩-೨೫ರವರೆಗೆ ಸಭೆ ಟನ್‌ಗೆ ₹3,225...

ಏಡ್ಸ್ ನಿಯಂತ್ರಣದಲ್ಲಿ ಹಾವೇರಿ ಜಿಲ್ಲೆಗೆ ರಾಷ್ಟ್ರಮಟ್ಟದ ಗೌರವ

ಏಡ್ಸ್ ನಿಯಂತ್ರಣದಲ್ಲಿ ಹಾವೇರಿ ಜಿಲ್ಲೆಗೆ ರಾಷ್ಟ್ರಮಟ್ಟದ ಗೌರವ ವಿಶ್ವ ಏಡ್ಸ್ ದಿನಾಚರಣೆ...