ಮೋಟೆಬೆನ್ನೂರು ಬಳಿ ಖಾಸಗಿ ಬಸ್ ಪಲ್ಟಿ: ಹಲವರಿಗೆ ಗಾಯ, ಮೂವರ ರಕ್ಷಣೆ

Date:

ಅಪಘಾತದಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಹರಸಾಹಸಪಟ್ಟು ಹೊರತೆಗೆದ 108 ಸಿಬ್ಬಂದಿ

ಹಾವೇರಿ: ಬೆಂಗಳೂರ ಕಡೆಗೆ ತೆರಳುತ್ತಿದ್ದ ಲಗ್ಗೆರೆ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮೋಟಿಬೆನ್ನೂರು ಸಮೀಪ ಗುರುವಾರ ಬೆಳಗಿನ ಜಾವ 4.30ರ ಸುಮಾರಿಗೆ ಪಲ್ಟಿಯಾದ ಘಟನೆ ನಡೆದಿದೆ.

ಅಪಘಾತದ ತೀವ್ರತೆಗೆ ಬಸ್‌ನಲ್ಲಿದ್ದ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದು, ನಾಲ್ವರಿಗೆ ಗಂಭೀರ ಮೂಳೆ ಮುರಿತವಾಗಿರುವುದಾಗಿ ಪ್ರಾಥಮಿಕ ಮಾಹಿತಿ ತಿಳಿಸಿದೆ. ಅಪಘಾತದ ಮಾಹಿತಿ ದೊರೆಯುತ್ತಿದ್ದಂತೆ ಸ್ಥಳಕ್ಕೆ ಮೂರು 108 ಆಂಬುಲೆನ್ಸ್‌ಗಳು ಧಾವಿಸಿ ಗಾಯಾಳುಗಳ ರಕ್ಷಣಾ ಕಾರ್ಯಾಚರಣೆ ಕೈಗೊಂಡವು.

ಬಸ್‌ನೊಳಗೆ ಸಿಲುಕಿಕೊಂಡು ನೋವಿನಿಂದ ನರಳುತ್ತಿದ್ದ ಮೂವರು ಪ್ರಯಾಣಿಕರನ್ನು 108 ಸಿಬ್ಬಂದಿ ಹರಸಾಹಸಪಟ್ಟು ಹೊರತೆಗೆದು ತಕ್ಷಣವೇ ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು.

ಈ ರಕ್ಷಣಾ ಕಾರ್ಯಾಚರಣೆಯಲ್ಲಿ 108 ಆಂಬುಲೆನ್ಸ್ ಚಾಲಕ ತೌಫಿಕ್ ಪಠಾಣ್, ಸ್ಟಾಫ್ ನರ್ಸ್ ಸಂತೋಷ್, ಚೇತನ್ ಸೇರಿದಂತೆ ಹಲವು ಸಿಬ್ಬಂದಿ ಪಾಲ್ಗೊಂಡು ಗಾಯಾಳುಗಳ ಜೀವ ರಕ್ಷಣೆಗೆ ಶ್ರಮಿಸಿದರು.

ಅಪಘಾತ ಸಂಭವಿಸಿದ ತಕ್ಷಣ ಸ್ಥಳಕ್ಕೆ ಧಾವಿಸಿ, ಬಸ್‌ನೊಳಗೆ ಸಿಲುಕಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ 108 ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಎಸ್‌ಐಆರ್ ಪಟ್ಟಿ ತಿರಸ್ಕರಿಸಿ, ೨೦೨೫ರ ಮತಪಟ್ಟಿಯನ್ವಯ ಸ್ಥಳೀಯ ಚುನಾವಣೆಗಳನ್ನು ನಡೆಸಲು ಆಗ್ರಹ

ಎಸ್‌ಐಆರ್ ಪಟ್ಟಿ ತಿರಸ್ಕರಿಸಿ, ೨೦೨೫ರ ಮತಪಟ್ಟಿಯನ್ವಯ ಸ್ಥಳೀಯ ಚುನಾವಣೆಗಳನ್ನು ನಡೆಸಲು ಆಗ್ರಹ ಹಾವೇರಿ:...

ರಾಣೆಬೆನ್ನೂರು ನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹15.60 ಲಕ್ಷ ಮೌಲ್ಯದ ನಕಲಿ ನೋಟು ಜಪ್ತಿ, ಇಬ್ಬರ ಬಂಧನ

ರಾಣೆಬೆನ್ನೂರು ನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹15.60 ಲಕ್ಷ ಮೌಲ್ಯದ...

ನ. ೨೭ರಂದು ಹಾವೇರಿಯಲ್ಲಿ ಕನಕದಾಸರ ೮.೫ ಅಡಿ ಎತ್ತರದ ಕಂಚಿನ ಮೂರ್ತಿ ಪ್ರತಿಷ್ಠಾಪನೆ

ನ. ೨೭ರಂದು ಹಾವೇರಿಯಲ್ಲಿ ಕನಕದಾಸರ ೮.೫ ಅಡಿ ಎತ್ತರದ ಕಂಚಿನ ಮೂರ್ತಿ...