ಡಾ.ರಾಜಕುಮಾರ್ ಮರೋಳ ಅವರಿಗೆ  “ಕರ್ನಾಟಕ ಹೆಲ್ತ್‌ಕೇರ್ ವೈದ್ಯ ರತ್ನ ಪ್ರಶಸ್ತಿ-೨೦೨೬”

Date:

ಹಾವೇರಿ: ಹಾವೇರಿಯ ಹಿರಿಯ ಮಕ್ಕಳ ತಜ್ಞ ವೈದ್ಯರಾದ ಡಾ. ರಾಜಕುಮಾರ ಎನ್. ಮರೋಳ್ ಅವರಿಗೆ ಆರೋಗ್ಯ, ವೈದ್ಯಕೀಯ, ಶಿಕ್ಷಣ ಹಾಗೂ ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಗಣನೀಯ ಸೇವೆಯನ್ನು ಗುರುತಿಸಿ ಬೆಂಗಳೂರಿನ ಸಿಗ್ನೇಚರ್ ಮೀಡಿಯಾ ಹೌಸ್ ಇವರು “ಕರ್ನಾಟಕ ಹೆಲ್ತ್‌ಕೇರ್ ವೈದ್ಯ ರತ್ನ ಪ್ರಶಸ್ತಿ-೨೦೨೬” ನೀಡಿ ಗೌರವಿಸಿದ್ದಾರೆ.
ಬೆಂಗಳೂರಿನ ರಾಜಭವನ ರಸ್ತೆಯಲ್ಲಿರುವ ಹೋಟೆಲ್ ಪಾರಾಗ್‌ನಲ್ಲಿ ಆಗಸ್ಟ್ ೨೩ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪದ್ಮಶ್ರೀ ಡಾ. ಎ. ಕಾಮಿನಿ ರಾವ್, ಖ್ಯಾತ ಹೃದ್ರೋಗ ತಜ್ಞ ಡಾ. ಗಿರೀಶ್ ಬಿ. ಎನ್ , ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಅಂಜನಪ್ಪ ಹಾಗೂ ಕರ್ನಾಟಕ ಹೋಮಿಯೋಪತಿ ಅಧ್ಯಕ್ಷ ಡಾ. ಬಿ.ಟಿ. ರುದ್ರೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಡಾ. ರಾಜಕುಮಾರ ಮರೋಳ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಕಳೆದ ೨೮ ವರ್ಷಗಳಿಂದ ಮಕ್ಕಳ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ರಾಜಕುಮಾರ ಮರೋಳ್, ಹಾವೇರಿಯಲ್ಲಿ “ಶಿವಜ್ಯೋತಿ ಮಕ್ಕಳ ಆರೋಗ್ಯ ಸಂಸ್ಥೆ”ಯನ್ನು ಸ್ಥಾಪಿಸಿ, ಜಿಲ್ಲೆಯ ಜನರಿಗೆ ನವಜಾತ ಶಿಶುಗಳು ಮತ್ತು ಮಕ್ಕಳ ತುರ್ತು ಚಿಕಿತ್ಸಾ ಘಟಕ, ಸುಸಜ್ಜಿತ ಪ್ರಯೋಗಾಲಯ ಹಾಗೂ ಮಕ್ಕಳ ಶಸ್ತ್ರಚಿಕಿತ್ಸಾ ಸೇವೆಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಅವರು ಭಾರತೀಯ  ಮಕ್ಕಳ ವೈದ್ಯರ ಸಂಘದ (ಐಎಪಿ)ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸದಸ್ಯರಾಗಿ, ಐಎಪಿ ಕರ್ನಾಟಕದ ಸಾಂಕ್ರಾಮಿಕ ರೋಗಗಳ ಅಧ್ಯಾಯದ ಅಧ್ಯಕ್ಷರಾಗಿ, IಂP ಕರ್ನಾಟಕದ ಉಪಾಧ್ಯಕ್ಷರಾಗಿ, ಹಾಗೂ ವೈದ್ಯಕೀಯ-ಕಾನೂನು ಅಧ್ಯಾಯದ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ೪೬ ಸಮ್ಮೇಳನಗಳಲ್ಲಿ ಉಪನ್ಯಾಸಕರಾಗಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುವ ಅವರು, IಂPಯ ಹಲವು ತರಬೇತಿ ಕಾರ್ಯಕ್ರಮಗಳಲ್ಲಿ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.
ವೈದ್ಯಕೀಯ ಸಂಶೋಧನಾ ಕ್ಷೇತ್ರದಲ್ಲಿಯೂ ಗಮನಾರ್ಹ ಕೊಡುಗೆ ನೀಡಿದ್ದು, ೧೨ ವೈಜ್ಞಾನಿಕ ಸಂಶೋಧನಾ ಪ್ರಕಟಣೆಗಳು, ಒಂದು ಪುಸ್ತಕ, ಆರು ಪುಸ್ತಕ ಅಧ್ಯಾಯಗಳು ಹಾಗೂ ಮೂರು ತರಬೇತಿ ಮಾಡ್ಯೂಲ್‌ಗಳ ಪ್ರಕಟಣೆಯಲ್ಲಿ ಕೊಡುಗೆ ನೀಡಿದ್ದಾರೆ.
ಸಾಮಾಜಿಕ ಸೇವೆಯ ಭಾಗವಾಗಿ ಹಾವೇರಿ ಹಾಗೂ ಸುತ್ತಮುತ್ತಲಿನ ವೈದ್ಯಕೀಯ ಸೌಲಭ್ಯಗಳಿಂದ ವಂಚಿತ ಗ್ರಾಮಗಳಲ್ಲಿ ೨೭ ಉಚಿತ ಆರೋಗ್ಯ ತಪಾಸಣಾ ಮತ್ತು ಔಷಧ ವಿತರಣಾ ಶಿಬಿರಗಳನ್ನು ಆಯೋಜಿಸಿ, ೧೫,೦೦೦ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಆರೋಗ್ಯ ಸೇವೆ ಮತ್ತು ಔಷಧೋಪಚಾರ ಒದಗಿಸಿದ್ದಾರೆ. ಇದಲ್ಲದೆ, ೨೦೧೦ರಿಂದ ೨೦೧೨ರವರೆಗೆ ಹಾವೇರಿ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಅವರ ಸೇವೆಯನ್ನು ಗುರುತಿಸಿ ಈ ಹಿಂದೆ Iಒಂ ಕರ್ನಾಟಕದ ಶಿಕ್ಷಕರ ದಿನಾಚರಣೆ ಪ್ರಶಸ್ತಿ, ಭಾರತೀಯ ಮಕ್ಕಳ ವೈದ್ಯರ ಅಕಾಡೆಮಿಯ ಫೆಲೋಶಿಪ್ (ಈIಂP) ಹಾಗೂ ಚಿಕಿತ್ಸಕ ರತ್ನ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಲಭಿಸಿವೆ.
ಕಳೆದ ಐದು ವರ್ಷಗಳ ಕಾಲ ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಮಕ್ಕಳ ವಿಭಾಗದ ಮುಖ್ಯಸ್ಥರಾಗಿ ಹಾಗೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ನಂತರ, ಪ್ರಸ್ತುತ ಮತ್ತೆ ಹಾವೇರಿಯಲ್ಲಿ ತಮ್ಮ ಶಿವಜ್ಯೋತಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಪ್ರತಿದಿನ ಪೂರ್ಣ ಪ್ರಮಾಣದಲ್ಲಿ ಮಕ್ಕಳ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
“ಕರ್ನಾಟಕ ಹೆಲ್ತ್‌ಕೇರ್ ವೈದ್ಯ ರತ್ನ ಪ್ರಶಸ್ತಿ?೨೦೨೬” ಡಾ. ರಾಜಕುಮಾರ ಮರೋಳ್ ಅವರ ವೈಯಕ್ತಿಕ ಸಾಧನೆಗೆ ದೊರೆತ ಗೌರವ ಮಾತ್ರವಲ್ಲದೆ, ಹಾವೇರಿ ಜಿಲ್ಲೆಯ ವೈದ್ಯಕೀಯ ಕ್ಷೇತ್ರದ ಸೇವೆ ಮತ್ತು ಸಾಧನೆಗೆ ದೊರೆತ ಹೆಮ್ಮೆಯ ಗೌರವವಾಗಿದೆ.

malatesh angur
haveri

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಟಾಕ್ಸಿಕ್: ಲೌಕಿಕ ಬದುಕಿನ ಭ್ರಮಾ ಲೋಕಕ್ಕೆ ಕನ್ನಡಿ ಹಿಡಿದ ಯಶ್ 

ಟಾಕ್ಸಿಕ್: ಲೌಕಿಕ ಬದುಕಿನ ಭ್ರಮಾ ಲೋಕಕ್ಕೆ ಕನ್ನಡಿ ಹಿಡಿದ ಯಶ್ ಚಿತ್ರವಿಮರ್ಶಾ...

ಹಾಬೇರಿ:ನಗರ ಆಶ್ರಯ ಸಮಿತಿ ಸದಸ್ಯತ್ವಕ್ಕೆ-ಕಾಂಗ್ರೆಸ್ ಸದಸ್ಯತ್ವಕ್ಕೆ ಪಟ್ಟಣಶೆಟ್ರು ರಾಜೀನಾಮೆ

ಹಾಬೇರಿ:ನಗರ ಆಶ್ರಯ ಸಮಿತಿ ಸದಸ್ಯತ್ವಕ್ಕೆ-ಕಾಂಗ್ರೆಸ್ ಸದಸ್ಯತ್ವಕ್ಕೆ ಪಟ್ಟಣಶೆಟ್ರು ರಾಜೀನಾಮೆ ಹಾಬೇರಿ: ನಾಗೇಂದ್ರನಮಟ್ಟಿ (ನಗರ)...

ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ರಿಗೆ ಸನ್ಮಾನ

ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ರಿಗೆ ಸನ್ಮಾನ ಹಾವೇರಿ:ಕರ್ನಾಟಕ ವಿಧಾನಸಭೆಯ...

ಹಾವೇರಿ: ಪ್ರೋತ್ಸಾಹ ಧನ ಬಿಡುಗಡೆಗೆ ಲಂಚ-ಸಮಾಲೋಚಕ ಲೋಕಾಯುಕ್ತ ಬಲೆಗೆ

ಹಾವೇರಿ: ಪ್ರೋತ್ಸಾಹ ಧನ ಬಿಡುಗಡೆಗೆ ಲಂಚ-ಸಮಾಲೋಚಕ ಲೋಕಾಯುಕ್ತ ಬಲೆಗೆ ಹಾವೇರಿ: ಪ್ರೋತ್ಸಾಹ ಧನ...