ಫಲಿಸದ ಲಕ್ಷಾಂತರ ಜನರ ಪ್ರಾರ್ಥನೆ , ಬದುಕಿ ಬರಲಿಲ್ಲ ನಿವೇದನ, ಆಕ್ರೋಶಗೊಂಡ ಜನರಿಂದ ರಸ್ತೆ ತಡೆ

Date:

ಫಲಿಸದ ಲಕ್ಷಾಂತರ ಜನರ
ಪ್ರಾರ್ಥನೆ , ಬದುಕಿ ಬರಲಿಲ್ಲ ನಿವೇದನ
 ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾ ಆಸ್ಪತ್ರೆಯಲ್ಲಿ ಸಾವು ಹಾವೇರಿ : ಇಲ್ಲಿನ ಶಿವಾಜಿನಗರದ ಮೂರನೇ ಕ್ರಾಸ್‌ ನ ಬಾಲಕ ನಿವೇದನ್ ಗುಡಿಗೇರಿ ಗುರುವಾರ ಬೆಳಿಗ್ಗೆ ಮಳೆ ನೀರಿಗೆ ಸಿಲುಕಿ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದ, ಈ ಬಾಲಕನ ಶೋಧಕ್ಕೆ ನಿರಂತರ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಹಾಗೂ ನಗರಸಭೆ ಪೌರಕಾರ್ಮಿಕರು ಬಾಲಕನನ್ನು ಮರಡೂರ ಸೋಸಾಯಿಟಿ ಮುಂಭಾಗದಲ್ಲಿನ ಚರಂಡಿಯಲ್ಲಿ ಪತ್ತೆ ಹಚ್ಚಿದರು .
ಚರಂಡಿಯಲ್ಲಿದ್ದ ಪೈಪನ್ನು ಎರಡು ಕೈಗಳಿಂದ ಹಿಡಿದಿದ್ದ ಬಾಲಕನನ್ನು ಹೊರ ತೆಗೆದಾಗ ಉಸಿರಾಡುತ್ತಿದ್ದ ಎನ್ನಲಾಗಿತ್ತು. ತಕ್ಷಣ ಬಾಲಕನನ್ನು ಅಂಬುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು.
 ಆಸ್ಪತ್ರೆಯ ವೈದ್ಯರು ಬಾಲಕನಿಗೆ ತುರ್ತು ಚಿಕಿತ್ಸೆ ನೀಡಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ನಿವೇದನ್ ಉಸಿರು ಚೆಲ್ಲಿದ್ದಾನೆ.
 ಫಲಿಸಲಿಲ್ಲ ಲಕ್ಷಾಂತರ ಜನರ ಪ್ರಾರ್ಥನೆ: ಚಿರಂಡಿಯಲ್ಲಿ ಕೊಚ್ಚಿ ಹೋಗಿದ್ದ ನಿವೇದನ್
ಬದುಕಿ ಬರಲೆಂದು ಹಾವೇರಿ ಜಿಲ್ಲೆಯ ಹಾಗೂ ರಾಜ್ಯದ ಜನರು ಪ್ರಾರ್ಥಿಸಿದರು. ಆದರೆ ಚಿಕಿತ್ಸೆ ಫಲಕಾರಿ ಯಾಗದೇ ಬಾಲಕ ಮ್ರತ ಪಟ್ಟಿರುವುದಕ್ಕೆ ಲಕ್ಷಾಂತರ ಜನರ ಮಮ್ಮಲು ಮರಗಿದ್ದಾರೆ .
ಮುಗಿಲು ಮುಟ್ಟಿದ ತಂದೆ-ತಾಯಿ, ಬಂಧುಗಳ ಆಕ್ರಂದನ: ಮಗನನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ಆತ ಚಿರಂಜೀವಿಯಾಗಿ ಗುಣಮುಖವಾಗಿ ಬರುತ್ತಾನೆ ಎಂದು ಕಂದನ ತಂದೆ -ತಾಯಿ ಸೇರಿದಂತೆ ಜನರು ಆಶಾಭಾವನೆ ಹೊಂದಿದ್ದರು . ಆದರೆ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಣೆ ಮಾಡಿದ ಮೇಲೆ ಬಾಲಕನ ತಂದೆ -ತಾಯಿ, ಜನರ  ಆಕ್ರಂದನ ಮುಗಿಲು ಮುಟ್ಟಿತ್ತು .
ಮಳೆಬಂದ ಸಂದರ್ಭದಲ್ಲಿ ಮಳೆ‌ನೀರು ರಸ್ತೆ ಮೇಲೆ ಹರಿದು ಅನೇಕ ಸಾವು,ನೋವುಗಳು ಸಂಭವಿಸುತ್ತವೆ. ಇದೀಗ ಬಾಳಿ ಬದುಕಬೇಕಿದ್ದ ಬಾಲಕ ಬಲಿಯಾಗಿದ್ದಾನೆ, ರಾಜಕಾಲುವೆ ತೆರವುಗೊಳಿಸಿ ಚರಂಡಿಯಲ್ಲಿ, ರಾಜ ಕಾಲುವೆಯಲ್ಲಿ ನೀರು ಹರಿಯುವ ವ್ಯವಸ್ಥೆ ಮಾಡಬೇಕು, ಸೂಕ್ತ ಪರಿಹಾರ ನೀಡುವ ವ ಮೂಲಕ ಮುಂದೆ ಈ ರೀತಿಯ ದುರ್ಘಟನೆ ಗಳು ನಡೆಯದಂತೆ ಕ್ರಮ ಜರುಗಿಸುವಂತೆ‌ ಆಗ್ರಹಿಸಿ
ಶಿವಾಜಿನಗರದ ಜನತೆ ನಗರಸಭೆ ಹಾಗೂ ಜಿಲ್ಲಾಡಳಿತದ ವಿರುದ್ಧ ತೀವ್ರ ಅಕ್ರೋಶ ವ್ಯಕ್ತಪಡಿಸಿ ರಸ್ತೆ ತಡೆ ನಡೆಸಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ನಗರಸಭೆ ಪೌರಾಯುಕ್ತರು ಬರಬೇಕು ಎಂದು ಪಟ್ಟು ಹಿಡಿದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ

--      ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ ಹಾವೇರಿ: ಇಲ್ಲಿನ ಜಿಲ್ಲಾ...

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು ಹೊರಟಿದ್ದು...

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ ಹಾವೇರಿ : ಹಾವೇರಿನಗರದಲ್ಲಿ ಕಳೆದ ವಾರದಿಂದ...

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ ಹಾವೇರಿ: ಯುವ ಜನಾಂಗ...