ಬೆಡ್ತಿ–ವರದಾ ನದಿ ಜೋಡಣೆ ಯೋಜನೆಗೆ ತಜ್ಞರ ಅಂತಿಮ ವರದಿ ಸ್ವಾಗತಾರ್ಹ’:ಆನಂದಸ್ವಾಮಿ ಗಡ್ಡದೇವರಮಠ

Date:

‘ಬೆಡ್ತಿ–ವರದಾ ನದಿ ಜೋಡಣೆ ಯೋಜನೆಗೆ ತಜ್ಞರ ಅಂತಿಮ ವರದಿ ಸ್ವಾಗತಾರ್ಹ’:ಆನಂದಸ್ವಾಮಿ ಗಡ್ಡದೇವರಮಠ

ಯೋಜನೆಗೆ ತಾರ್ಕಿಕ ಅಂತ್ಯ ಹಾಡಲು ಜಂಟಿ ಸಮಿತಿ ರಚಿಸಲಿ: ಆನಂದಸ್ವಾಮಿ ಗಡ್ಡದೇವರಮಠ

ಹಾವೇರಿ: ಬೆಡ್ತಿ ಮತ್ತು ವರದಾ ನದಿ ಜೋಡಣೆ ಯೋಜನೆಗೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಸೋಂದಾ ಸ್ವರ್ಣವಲ್ಲಿಯಲ್ಲಿ ನಡೆದ ಸಂತ ಚಿಂತನ ಸಭೆಯಲ್ಲಿ ಕೈಗೊಂಡಿರುವ ತಜ್ಞರ ಅಂತಿಮ ವರದಿಗೆ ಸ್ಪಂದಿಸುವ ನಿರ್ಣಯ ಸ್ವಾಗತಾರ್ಹವಾಗಿದೆ ಎಂದು ಕಾಂಗ್ರೆಸ್ ಮುಖಂಡ ಆನಂದಸ್ವಾಮಿ ಗಡ್ಡದೇವರಮಠ ತಿಳಿಸಿದ್ದಾರೆ.

ಹಾವೇರಿ, ಗದಗ ಹಾಗೂ ಕೊಪ್ಪಳ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಬಹುನಿರೀಕ್ಷಿತ ಬೆಡ್ತಿ–ವರದಾ ನದಿ ಜೋಡಣೆ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಶಿರಹಟ್ಟಿ-ಬಾಳೆಹೊಸೂರಿನ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಈ ಭಾಗದ 22ಕ್ಕೂ ಹೆಚ್ಚು ಮಠಾಧೀಶರು ಹಾಗೂ ರೈತ ಮುಖಂಡರು ಸಂತ ಚಿಂತನ ಸಭೆಯಲ್ಲಿ ಭಾಗವಹಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.

ಸಭೆಯಲ್ಲಿ ನಿರ್ಧರಿಸಿದಂತೆ ಬೆಡ್ತಿ–ವರದಾ ನದಿ ಜೋಡಣೆಗೆ ಜಂಟಿ ಸಮಿತಿ ರಚಿಸಿ, ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗೆ ತಾರ್ಕಿಕ ಅಂತ್ಯ ಹಾಡಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ತ್ವರಿತವಾಗಿ ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಆಸಕ್ತಿ ತೋರಿರುವುದು ಈ ಭಾಗದ ರೈತರು ಹಾಗೂ ಜನಸಾಮಾನ್ಯರಲ್ಲಿ ಸಂತಸ ಮೂಡಿಸಿದೆ.

ಈ ಯೋಜನೆ ಸಾಕಾರಗೊಂಡರೆ ಬಯಲುಸೀಮೆ ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿ ತೊಡೆದುಹಾಕಲು ಸಾಧ್ಯವಾಗಲಿದೆ. ಆದಷ್ಟು ಶೀಘ್ರ ನದಿ ಜೋಡಣೆ ಕಾರ್ಯ ಅನುಷ್ಠಾನಗೊಂಡರೆ ಬೇಸಿಗೆಯ ದಿನಗಳಲ್ಲಿ ಎದುರಾಗುವ ನೀರಿನ ಬವಣೆಯನ್ನು ತಪ್ಪಿಸಬಹುದು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಏಡ್ಸ್ ನಿಯಂತ್ರಣದಲ್ಲಿ ಹಾವೇರಿ ಜಿಲ್ಲೆಗೆ ರಾಷ್ಟ್ರಮಟ್ಟದ ಗೌರವ

ಏಡ್ಸ್ ನಿಯಂತ್ರಣದಲ್ಲಿ ಹಾವೇರಿ ಜಿಲ್ಲೆಗೆ ರಾಷ್ಟ್ರಮಟ್ಟದ ಗೌರವ ವಿಶ್ವ ಏಡ್ಸ್ ದಿನಾಚರಣೆ...

ಬಸವಣ್ಣನವರ ಚರಿತ್ರೆ ಮತ್ತು ಚಾರಿತ್ರ್ಯವನ್ನು ಯಾರೂ ಅಳಸಿ ಹಾಕಲು ಸಾಧ್ಯವಿಲ್ಲ

ಬಸವಣ್ಣನವರ ಚರಿತ್ರೆ ಮತ್ತು ಚಾರಿತ್ರ್ಯವನ್ನು ಯಾರೂ ಅಳಸಿ ಹಾಕಲು ಸಾಧ್ಯವಿಲ್ಲ ಹಾವೇರಿ: ’ಬಸವ...