
ವೀರೇಶ್ ಹ್ಯಾಡ್ಲ ಗೆ ‘ವರ್ಷದ ಕನ್ನಡಿಗ’ ಉತ್ತಮ ಸಾಮಾಜಿಕ ಸೇವೆ ಪ್ರಶಸ್ತಿ
ಹಾವೇರಿ: ಶೋಷಿತರ ಧ್ವನಿ, ಯುವ ಮುಖಂಡ ವೀರೇಶ್ ಹ್ಯಾಡ್ಲ ಅವರಿಗೆ ಗುರುವಾರ ಬೆಂಗಳೂರಿನಲ್ಲಿ ಬೆಂಗಳೂರಿನ ಪ್ರಸಿದ್ಧ ‘ಚಿತ್ರಸಂತೆ’ ಸಂಘಟನೆಯು
‘ವರ್ಷದ ಕನ್ನಡಿಗ’ ಉತ್ತಮ ಸಾಮಾಜಿಕ ಸೇವೆ ಪ್ರಶಸ್ತಿ ನೀಡಿ ಗೌರವಿಸಿದೆ.
ಆಧ್ಯಾತ್ಮಿಕ ಚಿಂತಕರು ಹಾಗೂ ಬ್ರಹ್ಮಾಂಡ ಗುರೂಜಿ ಎಂದೇ ಪ್ರಸಿದ್ಧರಾಗಿರುವ ನರೇಂದ್ರ ಬಾಬು ಶರ್ಮಾ ಮತ್ತು ಜನಪ್ರಿಯ ನಟಿ ನಿಕಿತಾ ಸ್ವಾಮಿ ಅವರು ವೀರೇಶ್ ಹ್ಯಾಡ್ಲ ಅವರಿಗೆ ಪ್ರಶಸ್ತಿ ಫಲಕ ಹಾಗೂ ಪ್ರಮಾಣ ಪತ್ರ ನೀಡಿ ಸನ್ಮಾನಿಸಿ ಗೌರವಿಸಿದರು.
ಎಲೆಮರೆಯ ಕಾಯಂತೆ ತೆರೆ ಮರೆಯಲ್ಲಿ ಇದ್ದುಕೊಂಡು ಸಮಾಜದ ಶೋಷಿತರ ಪರವಾಗಿ ಹಾಗೂ ನಿರಂತರ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ‘ಸ್ವಾಭಿಮಾನಿ ಬಳಗ’ದ ಯುವ ಮುಖಂಡ ವೀರೇಶ್ ಹ್ಯಾಡ್ಲ ಅವರ ನಿರಂತರ ಜನಪರ ಕಾರ್ಯಗಳು ಹಾಗೂ ಸಮಾಜಮುಖಿ ಸೇವೆಯನ್ನು ಗುರುತಿಸಿ ಈ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಅರಮನೆ ನಗರಿಯಲ್ಲಿರುವ ಹ್ಯಾಡೆ ಪಾರ್ಕ್ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
‘ವರ್ಷದ ಕನ್ನಡಿಗ’ ಉತ್ತಮ ಸಾಮಾಜಿಕ ಸೇವೆ ಪ್ರಶಸ್ತಿ ಸ್ವೀಕರಿಸಿದ ವೀರೇಶ್ ಹ್ಯಾಡ್ಲ ಅವರಿಗೆ ಅಭಿಮಾನಿಗಳು, ಸ್ವಾಭಿಮಾನಿ ಬಳಗದ ಸದಸ್ಯರು ಹಾಗೂ ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.

