ಸರ್ಕಾರ ಹಲಗೇರಿಯಲ್ಲಿ ಪಾಪು ಸ್ಮಾರಕ ನಿರ್ಮಿಸಲಿ; ಸದಾಶಿವಶ್ರೀ

Date:

ಹಾವೇರಿ: ಕನ್ನಡ ನೆಲ, ಜಲ, ಭಾಷೆಗೆ ಕಂಟಕ ಬಂದಾಗ ಸರ್ಕಾರಕ್ಕೆ ಸೆಡ್ಡು ಹೊಡೆದು ನಿರ್ಭಿಡೆ ಮತ್ತು ನಿರ್ಭಿತದಿಂದ ಕನ್ನಡವನ್ನು ಕಟ್ಟುವಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು, ಕನ್ನಡದ ಕಟ್ಟಾಳು, ನಾಡೋಜ ಪಾಟೀಲ ಪುಟ್ಟಪ್ಪ ಅವರು ಈ ನೆಲದ ನಕ್ಷತ್ರವಾಗಿದ್ದರು ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.
ನಗರದ ಶಿವಲಿಂಗೇಶ್ವರ ದಾಸೋಹ ಮಂದಿರದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಸಿದ್ದಣ್ಣ ಚೌಶೆಟ್ಟಿ, ಪಾಟೀಲ ಪುಟ್ಟಪ್ಪ, ಜಿ.ಜಿ. ಹೊಟ್ಟೆಗೌಡ್ರ, ಬಿ.ಪಿ. ಶಿಡೇನೂರ, ಎಸ್.ಎಂ. ಹಾಲಯ್ಯನವರಮಠ, ಮತ್ತು ನಾಗಭೂಷಣ ಮಾಮಲೇದೇಸಾಯಿ ಅವರ ದತ್ತಿನಿಧಿ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಏಕಕಾಲಕ್ಕೆ ಐದು ಪತ್ರಿಕೆಗಳಿಗೆ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ಪಾಪು ಅವರು ಕೇವಲ ಪತ್ರಕರ್ತರು ಮಾತ್ರವಲ್ಲ, ಶ್ರೇಷ್ಠ ಸಾಹಿತಿ, ಸಂಶೋಧಕ, ಇತಿಹಾಸಕಾರ, ಸೂಕ್ಷ್ಮ ಸಂವೇದಾನಾಶೀಲ, ಅದ್ಭುತ ಜ್ಞಾನಕೋಶವಾಗಿದ್ದರು. ಕನ್ನಡನಾಡಿನ ನುಡಿಸೇವಕರ ಸಮಾಧಿಯು ಇಂದು ಹಲಗೇರಿಯಲ್ಲಿದ್ದು, ಸರ್ಕಾರವು ಅಲ್ಲಿ ಸ್ಮಾರಕ ನಿರ್ಮಿಸಿ, ಕನ್ನಡದ ಧೀಮಂತ ನಾಯಕನಿಗೆ ಗೌರವ ತೋರಿಸಬೇಕಾಗಿದೆ ಎಂದು ಹೇಳಿದರು.
ದತ್ತಿ ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ, ಕನ್ನಡ ಭಾಷೆಗೆ ಎಂತಹ ಕುತ್ತು ಬಂದರೂ ಅದನ್ನು ಎದುರಿಸುವ ಶಕ್ತಿಯೂ ಇದೆ. ವಚನ ಸಾಹಿತ್ಯವು ರಾಜಸತ್ತೆಯ ವಿರುದ್ಧ ಜನಾಂದೋಲನ ರೂಪಿಸಿದಂತೆ, ಇಂದಿನ ಆಧುನಿಕ ಸಂಸತ್ತಿನ ಮೂಲವನ್ನು ೧೨ ನೇ ಶತಮಾನದ ಅನುಭವ ಮಂಟಪದ ಮೂಲಕ ಜಗತ್ತಿಗೆ ಪರಿಚಯಿಸಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಾಹಿತ್ಯ ಭವನ ನಿರ್ಮಾಣಕ್ಕೆ ಧನ ಸಹಾಯ ಮಾಡಿದ ಜಿ. ಬಿ. ಸಾವಿರಮಠ, ಅಕ್ಕಮಹಾದೇವಿ ಹಾನಗಲ್ಲ, ಪರಶುರಾಮ ಕರ್ಜಗಿ ಅವರನ್ನು ಕಸಾಪ ಪರವಾಗಿ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಕೋಶಾಧ್ಯಕ್ಷ ಎಸ್.ಎನ್. ದೊಡ್ಡಗೌಡರ ವಹಿಸಿದ್ದರು. ದತ್ತಿದಾನಿಗಳು ಉಪಸ್ಥಿತರಿದ್ದರು.
ಅಕ್ಕಮ್ಮ ಹಾನಗಲ್ಲ ಪ್ರಾರ್ಥಿಸಿದರು. ಈರಣ್ಣ ಬೆಳವಡಿ ಸ್ವಾಗತಿಸಿದರು. ಸಿ.ಎಸ್. ಮರಳಿಹಳ್ಳಿ ದತ್ತಿದಾನಿಗಳ ಪರಿಚಯ ಮಾಡಿದರು. ತಾಲ್ಲೂಕು ಕಸಾಪ ಅಧ್ಯಕ್ಷ ವಾಯ್.ಬಿ. ಆಲದಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಕೆ. ಕರ್ಜಗಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ

--      ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ ಹಾವೇರಿ: ಇಲ್ಲಿನ ಜಿಲ್ಲಾ...

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು ಹೊರಟಿದ್ದು...

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ ಹಾವೇರಿ : ಹಾವೇರಿನಗರದಲ್ಲಿ ಕಳೆದ ವಾರದಿಂದ...

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ ಹಾವೇರಿ: ಯುವ ಜನಾಂಗ...