ಹಾವೇರಿಯಲ್ಲಿ ಕಾಡುಹಂದಿ ಬೇಟೆ; ಆರೋಪಿ ಬಂಧನ

Date:

ಹಾವೇರಿಯಲ್ಲಿ ಕಾಡುಹಂದಿ ಬೇಟೆ; ಆರೋಪಿ ಬಂಧನ
ಸುಟ್ಟ ಕಾಡುಹಂದಿ ಮಾಂಸ ಮಾರಾಟಕ್ಕೆ ಯತ್ನ – ಮತ್ತೊಂದು ಜೀವಂತ ಹಂದಿ, ಬೇಟೆಗೆ ಬಳಸಿದ ಆಯುಧಗಳು ವಶಕ್ಕೆ
ಹಾವೇರಿ: ನಗರದ ನಾಗೇಂದ್ರನಮಟ್ಟಿ ವ್ಯಾಪ್ತಿಯಲ್ಲಿ ಕಾಡುಹಂದಿಯನ್ನು ಬೇಟೆಯಾಡಿ, ಸುಟ್ಟು ಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿ, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ನ.11ರಂದು ಬೆಳಿಗ್ಗೆ 10.30ರ ಸುಮಾರಿಗೆ ಹಾವೇರಿ ಪ್ರಾದೇಶಿಕ ವಲಯದ ಅರಣ್ಯಾಧಿಕಾರಿಗಳು ನೆಡತೋಪು ಪರಿಶೀಲನೆಗಾಗಿ ನಾಗೇಂದ್ರನಮಟ್ಟಿಯಿಂದ ಕರ್ಜಗಿ ಕಡೆಗೆ ತೆರಳುತ್ತಿದ್ದಾಗ, ರಸ್ತೆ ಬಲಭಾಗದ ಖಾಲಿ ಜಾಗದಲ್ಲಿದ್ದ ಜಾಲಿ ಗಿಡಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಅನುಮಾನಗೊಂಡ ಅಧಿಕಾರಿಗಳು ಪರಿಶೀಲಿಸಿದಾಗ ಕಾಡುಹಂದಿಯನ್ನು ಸುಡುತ್ತಿರುವುದು ಪತ್ತೆಯಾಗಿದೆ.
ಸ್ಥಳೀಯರನ್ನು ವಿಚಾರಿಸಿದಾಗ ಕಾಡುಹಂದಿಯನ್ನು ಬೇಟೆಯಾಡಿ ಸುಟ್ಟು ಮಾಂಸ ಮಾರಾಟ ಮಾಡಲು ಯತ್ನಿಸುತ್ತಿರುವುದು ತಿಳಿದುಬಂದಿದೆ. ಸುತ್ತಮುತ್ತ ಪರಿಶೀಲನೆ ನಡೆಸಿದಾಗ ಮತ್ತೊಂದು ಜೀವಂತ ಕಾಡುಹಂದಿಯನ್ನು ಸೆರೆಹಿಡಿದು ಕಾಲುಗಳನ್ನು ಕಟ್ಟಿ ಇಟ್ಟಿರುವುದು ಪತ್ತೆಯಾಗಿದೆ.
ತಕ್ಷಣ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ನಾಗೇಂದ್ರನಮಟ್ಟಿಯ ಅಜ್ಜಪ್ಪ ಪರಸಪ್ಪ ಕುಂಚಿಕೊರವರ್ ಎಂಬ ಆರೋಪಿಯನ್ನು ಸ್ಥಳದಲ್ಲೇ ಬಂಧಿಸಿದ್ದಾರೆ. ಸ್ಥಳದಿಂದ ಒಂದು ಸುಟ್ಟ ಕಾಡುಹಂದಿ, ಒಂದು ಜೀವಂತ ಕಾಡುಹಂದಿ ಹಾಗೂ ಬೇಟೆಗೆ ಬಳಸಿದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.
ನ್ಯಾಯಾಲಯದ ಅನುಮತಿಯಂತೆ ಸುಟ್ಟ ಕಾಡುಹಂದಿಯನ್ನು ನಿಯಮಾನುಸಾರ ವಿಲೇವಾರಿ ಮಾಡಲಾಗಿದೆ. ಜೀವಂತ ಕಾಡುಹಂದಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಅಕ್ಷಯ್ ಪ್ರಕಾಶಕರ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅನುಷಾ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಸಿದ್ದಮ್ಮ ಕರಿಗಾರ, ಉಪವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ ಹಂಡೇರ, ಫಕೀರೇಶ ಮಾಗಡಿ, ಎ.ಎಂ. ನದಾಫ್, ರೇಹಮತ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ:ವಿಎಓ ನೇಮಕಾತಿ ಪರೀಕ್ಷಾ ಅಕ್ರಮ-ನಾಲ್ವರು ಹೆಡ್‌ಕಾನ್‌ಸ್ಟೆಬಲ್‌ ಅಮಾನತು

  ಹಾವೇರಿ:ವಿಎಓ ನೇಮಕಾತಿ ಪರೀಕ್ಷಾ ಅಕ್ರಮ-ನಾಲ್ವರು ಹೆಡ್‌ಕಾನ್‌ಸ್ಟೆಬಲ್‌ ಅಮಾನತು ಓರ್ವ ಸಿಪಿಐ , ಇಬ್ಬರು...

ಶಿಗ್ಗಾಂವ : ಹೊಲದಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ; ಐವರು ಪಾರು

ಶಿಗ್ಗಾಂವ : ಹೊಲದಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ; ಐವರು ಪಾರು ಸೋಲೂರಿನಿಂದ...

ಹಾವೇರಿಯಲ್ಲಿ ರೋಮಾಂಚಕ ಹೋರಿ ಹಬ್ಬದ ವೈಭವ

ಹಾವೇರಿಯಲ್ಲಿ ರೋಮಾಂಚಕ ಹೋರಿ ಹಬ್ಬದ ವೈಭವ ಹಾವೇರಿ:...