ಹಾವೇರಿಯ ನಾಗೇಂದ್ರಮಟ್ಟಿ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಜೋಡಿ ಚಿರತೆ, ಆತಂಕದಲ್ಲಿ ಜನತೆ

Date:

ಹಾವೇರಿ: ಹಾವೇರಿನಗರದ ನಾಗೇಂದ್ರಮನಟ್ಟಿ ಪ್ರದೇಶದಲ್ಲಿ ಕಳೆದ ಮೂರ್‍ನಾಲ್ಕುದಿನಗಳಿಂದ ಜೋಡಿ ಚಿರತೆಗಳ ಓಡಾಟ ಕಂಡು ಬಂದಿದ್ದು, ತೋಟದಮನೆಯಲ್ಲಿನ ಮೂರುನಾಯಿಗಳನ್ನು ಚಿರತೆಗಳು ಕೊಂದು ತಿಂದಿರುವುದು ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿದೆ.
ಇತ್ತೀಚೆಗೆ ಕಬ್ಬು ಕಟಾವು ಮಾಡುತ್ತಿರುವ ಹಿನ್ನಲೆಯಲ್ಲಿ ಕಬ್ಬಿನ ಹೊಲಗಳಲ್ಲಿ ನೆಲೆ ಕಂಡುಕೊಂಡಿದ್ದ ಚಿರತೆಗಳು ಬಯಲಿಗೆ ಬಂದಿದ್ದು, ಕೆಲವುದಿನಗಳ ಹಿಂದೆ ತಾಲೂಕಿನ ಕುಳೇನೂರುಗ್ರಾಮದಲ್ಲಿ ಹಾಗೂ ಹಾವೇರಿಯ ಹೆಗ್ಗೇರೆಕೆರೆ ಪ್ರದೇಶಗಳಲ್ಲಿ ಕಾಣಿಸಿಕೊಂಡಿದ್ದ ಚಿರತೆಗಳು ಇದೀಗ ನಾಗೇಂದ್ರಮನಟ್ಟಿ ಪ್ರದೇಶಗಳಲ್ಲಿ ಕಾಣಿಸಿಕೊಂಡಿವೆ. ಚಿರತೆಗಳ ಓಡಾಟ ಕಂಡಿರುವ ವಾಯುವಿಹಾರಿಗಳು ಬೆಳಿಗ್ಗೆ ವಾಯುವಿಹಾರಕ್ಕೆ ಹೋಗುವುದನ್ನೇ ಬಿಟ್ಟಿದ್ದಾರೆ. ರಾತ್ರಿ ವೇಳೆ ಹೊಲಗಳಿಗೆ ನೀರುಹಾಯಿಸಲು ರೈತಾಪಿ ಜನರು ಹೊಲಗಳಿಗೆ ಹೋಗಲು ಹೆದರುತ್ತಿದ್ದಾರೆ.
ಇನ್ನೂ ಈ ಚಿರತೆಗಳು ಅಗಡಿ ರಸ್ತೆಯ ಹಿರೇಗುಡ್ಡದ ಹತ್ತಿರ ಹಾಗೂ ರಸ್ತೆಗಳಲ್ಲಿ ಹಲವಾರು ದಿನಗಳಿಂದ ಎರಡು ಚಿರತೆಗಳು ಓಡಾಡುತ್ತಿದ್ದು ಸುತ್ತಮುತ್ತಲಿನ ರೈತರಿಗೆ ಭಯದ ವಾತಾವರಣ ಉಂಟಾಗಿದ್ದು. ಕಳ್ಳಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವಂತ ಭೂ ವೀರಾಪುರ,ಮಾಳಾಪುರ ಮತ್ತು ಕಳ್ಳಿಹಾಳ ಗ್ರಾಮದ ಜನರು, ಹಾವೇರಿ, ಗಣಜೂರು, ಕರ್ಜಗಿ ಜನರು ಆತಂಕದಿದ್ದಾರೆ, ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಗಳನ್ನು ಸೆರೆಹಿಡಿದು ಜನರಲ್ಲಿನ ಆತಂಕವನ್ನು ದೂರ ಮಾಡುವಂತೆ ಜನರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ

--      ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ ಹಾವೇರಿ: ಇಲ್ಲಿನ ಜಿಲ್ಲಾ...

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು ಹೊರಟಿದ್ದು...

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ ಹಾವೇರಿ : ಹಾವೇರಿನಗರದಲ್ಲಿ ಕಳೆದ ವಾರದಿಂದ...

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ ಹಾವೇರಿ: ಯುವ ಜನಾಂಗ...