ಕಳುವಾದ ಮೊಬೈಲ್ ಪತ್ತೆ ಹಚ್ಚುವಲ್ಲಿ ದಕ್ಷಿಣ ಭಾರತದಲ್ಲಿಯೇ  ಹಾವೇರಿಜಿಲ್ಲೆಗೆ ಪ್ರಥಮ ಸ್ಥಾನ!

Date:

ಹಾವೇರಿ :  ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಕಳ್ಳತನವಾಗಿದ್ದ ಸುಮಾರು ೨೧೦ ಮೊಬೈಲ್‌ಗಳನ್ನ ಪತ್ತೆ ಹಚ್ಚುವ ಮೂಲಕ ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಮೊಬೈಲ್ ಪತ್ತೆ ಹಚ್ಚಿದ ಖ್ಯಾತಿಗೆ ಹಾವೇರಿಜಿಲ್ಲೆಯ ಪೊಲೀಸರು ಪಾತ್ರರಾಗಿದ್ದಾರೆ.
ಪತ್ತೆ ಹಚ್ಚಿದ ೨೧೦ ಮೊಬೈಲ್‌ಗಳ ಮೌಲ್ಯ ಸುಮಾರು ೪೨ ಲಕ್ಷ ಎಂದು ಅಂದಾಜಿಸಲಾಗಿದೆ. ಹಾವೇರಿ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರು ತಮ್ಮ ಕಚೇರಿಯಲ್ಲಿ ಸೋಮವಾರ ಮೊಬೈಲ್ ಕಲದುಕೊಂಡಿದ್ದ ಮಾಲೀಕರಿಗೆ ಮೊಬೈಲ್ ಹಸ್ತಾಂತರಿಸಿದರು.
ಜಿಲ್ಲೆಗಳಲ್ಲಿ ಅಷ್ಟೇ ಅಲ್ಲದೇ ಹೊರ ರಾಜ್ಯಗಳಲ್ಲಿದ್ದ ಮೊಬೈಲ್‌ಗಳೂ ಪತ್ತೆ : ಜಿಲ್ಲೆಯಲ್ಲಿ ಕಳ್ಳತನವಾಗಿದ್ದ ಸಾರ್ವಜನಿಕರ ಮೊಬೈಲ್‌ಗಳನ್ನ ಪತ್ತೆಹಚ್ಚಿ ನೀಡಿದಕ್ಕೆ ಮೊಬೈಲ್ ಮಾಲೀಕರು ಸಂತಸ ವ್ಯಕ್ತಪಡಿಸಿದ್ದಾರೆ. ಸಿಇಐಆರ್ ಪೊರ್ಟಲ್‌ನ ಸಹಾಯದಿಂದ ವಿವಿಧ ಜಿಲ್ಲೆಗಳಲ್ಲಿ ಅಷ್ಟೇ ಅಲ್ಲದೇ ಹೊರ ರಾಜ್ಯಗಳಲ್ಲಿದ್ದ ಮೊಬೈಲ್‌ಗಳನ್ನೂ ಪೊಲೀಸ್ ಇಲಾಖೆ ಪತ್ತೆ ಹಚ್ಚಿದೆ.
ಕಳೆದ ೩ ವರ್ಷಗಳಿಂದ ಕಳ್ಳತನವಾಗಿದ್ದ ಮೊಬೈಲ್‌ಗಳ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಜಿಲ್ಲೆಯ ವಿವಿಧ ಪೊಲೀಸ್‌ಆಣೆಯ ಪೊಲೀಸರು ಮೊಬೈಲ್ ಪತ್ತೆ ಹಚ್ಚಿ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ. ಈ ಮೂಲಕ ಕಳ್ಳತನವಾಗಿದ್ದ ಮೊಬೈಲ್‌ಗಳನ್ನು ಪತ್ತೆ ಮಾಡುವಲ್ಲಿ ಹಾವೇರಿ ಜಿಲ್ಲೆ ದಕ್ಷಿಣ ಭಾರತದ ರಾಜ್ಯಗಳಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ.
ಜಿಲ್ಲೆಯ ಪೊಲೀಸರಿಗೆ ಹಾವೇರಿ ಎಸ್ಪಿ ಯಶೋಧಾ ವಂಟಗೋಡಿ ಅಭಿನಂದನೆ : ಅತಿ ಹೆಚ್ಚು ಮೊಬೈಲ್ ಪತ್ತೆ ಮಾಡಿ ಪ್ರಥಮ ಸ್ಥಾನಕ್ಕೇರಿದ ಹಾವೇರಿ ಜಿಲ್ಲೆಯ ಪೊಲೀಸರಿಗೆ ಹಾವೇರಿ ಎಸ್ಪಿ ಯಶೋಧಾ ವಂಟಗೋಡಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
’ಮೂರು ವರ್ಷದ ಹಿಂದೆ ಮೊಬೈಲ್ ಕಳ್ಳತನವಾಗಿತ್ತು. ಮೊಬೈಲ್ ಸಿಗುವ ಆಸೆಯನ್ನೇ ಬಿಟ್ಟಿದ್ದೆ. ಆದರೂ ಇರಲಿ ಎಂದು ಸಿಇಐಆರ್ ಪೊರ್ಟಲ್‌ನಲ್ಲಿ ದೂರು ದಾಖಲಿಸಿದ್ದೆ. ಈಗ ಮೊಬೈಲ್ ಸಿಕ್ಕಿರುವುದು ಸಂತಸ ತಂದಿದೆ. ಹೊರ ರಾಜ್ಯಗಳಲ್ಲಿದ್ದ ಮೊಬೈಲ್ ಪತ್ತೆ ಹಚ್ಚಿ ತಂದುಕೊಟ್ಟ ಪೊಲೀಸರಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದು ಮೊಬೈಲ್ ಮಾಲೀಕರು ತಿಳಿಸಿದ್ದಾರೆ.
ಫೋನ್ ಕಳುವಾದಾಗ  ಸಿಇಐಆರ್  ಬಳಕೆ ಮಾಡುವುದು ಹೇಗೆ?: ಕಳ್ಳತನವಾದ ಅಥವಾ ಕಳೆದುಕೊಂಡ ಮೊಬೈಲ್ ಫೋನ್‌ನಲ್ಲಿರುವ ಡೇಟಾವನ್ನು ಅಳಿಸಲು ಅಥವಾ ಫೋನ್ ಬ್ಲಾಕ್ ಮಾಡಲು ಅನುಕೂಲಕರವಾಗುವಂತೆ ೨೦೨೩ರಲ್ಲಿ ಕೇಂದ್ರ ದೂರಸಂಪರ್ಕ ಇಲಾಖೆ ಸೆಂಟ್ರಲ್ ಇಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐಆರ್) ಪೋರ್ಟಲ್ ಪರಿಚಯಿಸಿದೆ.
ಮೊಬೈಲ್ ಕಳೆದುಕೊಂಡವರು ಸಿಇಐಆರ್ ಪೋರ್ಟಲ್‌ಗೆ ತೆರಳಿ ಫೋನ್‌ನ ಇಂಟರ್ ನ್ಯಾಷನಲ್ ಮೊಬೈಲ್ ಇಕ್ವಿಪ್ಮೆಂಟ್ ಐಡೆಂಟಿಟಿ (ಸಿಇಐಆರ್) ನಂಬರ್ ನಮೂದಿಸಬೇಕಾಗುತ್ತದೆ. ಇದರಿಂದ ಕಳೆದು ಹೋದ ಫೋನ್‌ನಲ್ಲಿ ಬೇರೆ ಯಾವುದಾದರೂ ನಂಬರ್ ಚಾಲ್ತಿಯಲ್ಲಿದ್ದರೆ ಪತ್ತೆಹಚ್ಚಲು ಸಹಕಾರಿಯಾಗುತ್ತದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ ಜಿಲ್ಲೆಯಲ್ಲಿ ಬರ ಘೊಷಿಸಿ, ರೈತರ ನೆರವಿಗೆ ಧಾವಿಸಿ-ವೆಂಕಟೇಶ ನಾರಾಯಣಿ

ಹಾವೇರಿ ಜಿಲ್ಲೆಯಲ್ಲಿ ಬರ ಘೊಷಿಸಿ, ರೈತರ ನೆರವಿಗೆ ಧಾವಿಸಿ-ವೆಂಕಟೇಶ ನಾರಾಯಣಿ ಹಾವೇರಿ: ಹಾವೇರಿ...

ಹಾವೇರಿ ಜಿಲ್ಲಾ ಕಾಂಗ್ರೆಸ್‌ಗೆ ಸಮಿತಿಗೆ ಪ್ರಧಾನ ಕಾರ್ಯದರ್ಶಿಯಾಗಿ ರಮೇಶ ಆನವಟ್ಟಿ

ಹಾವೇರಿ ಜಿಲ್ಲಾ ಕಾಂಗ್ರೆಸ್‌ಗೆ ಸಮಿತಿಗೆ ಪ್ರಧಾನ ಕಾರ್ಯದರ್ಶಿಯಾಗಿ ರಮೇಶ ಆನವಟ್ಟಿ ಹಾವೇರಿ:...

ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ(ಎಐ) ವಿಶ್ವವಿದ್ಯಾಲಯ ಘೋಷಿಸಿದ ಸಿ.ಎಂ.ಡಿ.ಕೆ.ಶಿವಕುಮಾರ

ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ(ಎಐ) ವಿಶ್ವವಿದ್ಯಾಲಯ ಘೋಷಿಸಿದ...

ನಕಲಿ ಪತ್ರಕರ್ತರ ಮೇಲೆ ಕ್ರಮಕ್ಕೆ ಆಗ್ರಹ-ಆರ್‌ಟಿಐ ಪತ್ರಕರ್ತರ ಮೆಲೆ ನಿಗಾಕ್ಕೆ ಮನವಿ : ಡಿಜಿಪಿ ಭೇಟಿ ಮಾಡಿದ ಕೆಯುಡಬ್ಲೂಜೆ ನಿಯೋಗ

ನಕಲಿ ಪತ್ರಕರ್ತರ ಮೇಲೆ ಕ್ರಮಕ್ಕೆ ಆಗ್ರಹ-ಆರ್‌ಟಿಐ ಪತ್ರಕರ್ತರ ಮೆಲೆ ನಿಗಾಕ್ಕೆ ಮನವಿ ಡಿಜಿಪಿ...