ಕಾರ್ಮಿಕರು ತಮ್ಮ ಹಕ್ಕು- ಸೌಲಭ್ಯಗಳಿಗಾಗಿ ಹೋರಾಡಬೇಕು

Date:

ಕಾರ್ಮಿಕರು ತಮ್ಮ ಹಕ್ಕು- ಸೌಲಭ್ಯಗಳಿಗಾಗಿ ಹೋರಾಡಬೇಕು

ಹಾವೇರಿ: ನಿಧಾನವಾಗಿ ಎಲ್ಲ ಉದ್ಯಮಗಳು ಖಾಸಗೀಕರಣದತ್ತ ವಾಲುತ್ತಿರುವ ಇಂದಿನ ಸಂದರ್ಭದಲ್ಲಿ ಕಾರ್ಮಿಕರು ತಮ್ಮ ಹಕ್ಕು ಮತ್ತು ಸೌಲಭ್ಯಗಳಿಗಾಗಿ ಸಂಘಟನೆಗಳ ಮೂಲಕ ಹೋರಾಟಗಳನ್ನು ರೂಪಿಸಿಕೊಳ್ಳಬೇಕಾಗಿದೆ. ಹಾಗಾದಾಗ ಮಾತ್ರ ಕಾರ್ಮಿಕ ಚಳವಳಿ ಉಳಿಯಲು ಸಾಧ್ಯ ಎಂದು ಕವಿಪ್ರನಿ ನೌಕರರ ಸಂಘದ ಮಾಜಿ ಕಂಪನಿ ಕಾರ್ಯಾಧ್ಯಕ್ಷ ವಿಜಯಕುಮಾರ ಮುದಕಣ್ಣನವರ ಹೇಳಿದರು.
ಗುರುವಾರ ಹಾವೇರಿ ವಿಭಾಗದ ಕವಿಪ್ರನಿ ನೌಕರರ ಸಂಘದ ಸ್ಥಳೀಯ ಸಮಿತಿ ಆಯೋಜಿಸಿದ್ದ ಸಮಾರಂಭದಲ್ಲಿ ಇಲ್ಲಿಯ ಹೆಸ್ಕಾಂ ಆವರಣದಲ್ಲಿರುವ ಕಾರ್ಮಿಕ ಸ್ಮಾರಕಕ್ಕೆ ಪುಷ್ಪಾರ್ಪಣೆ ಮಾಡಿ, ಕಾರ್ಮಿಕ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ವಿಭಾಗೀಯ ಸಹಾಯಕ ಕಾರ್ಯ ನಿರ್ವಾಹಕ ಇಂಜನೀಯರ ಸಿ.ಬಿ. ಹೊಸಮನಿ ಮಾತನಾಡಿ ಆಡಳಿತ ಮಂಡಳಿ ಮತ್ತು ನೌಕರರ ಸಂಘ ಆಳುವ ಸರಕಾರದ ಭಾಗಗಳಾಗಿದ್ದು, ಸಂದರ್ಭಕ್ಕನುಸಾರವಾಗಿ ಕೂಡಿ ಸಾಗಬೇಕಾಗುತ್ತದೆ. ಅಂದಾಗ ಮಾತ್ರ ನೌಕರರ ಅಭಿವೃದ್ಧಿ ಸಾಧ್ಯ ಎಂದರು.
ಹಾವೇರಿ ವೃತ್ತದ ಸಂಘಟನಾ ಕಾರ್ಯದರ್ಶಿ ಶಿವಾನಂದ ಹಾದಿಮನಿ ನಮ್ಮ ಹಕ್ಕುಗಳಿಗಾಗಿ ಎಲ್ಲ ರೀತಿಯ ಹೋರಾಟಗಳನ್ನು ಮಾಡದಿದ್ದಲ್ಲಿ ಆಡಳಿತ ವರ್ಗ ತನ್ನ ಹಿಡಿತವನ್ನು ಬಲವಾಗಿಟ್ಟು ಕೊನೆಗೆ ಸಂಬಳಕ್ಕೂ ಪರದಾಡುವ ಪರಿಸ್ಥಿತಿ ಬರಬಹುದು. ಕಾರಣ ಒಗ್ಗಟ್ಟಿನಲ್ಲಿಯೇ ಕಾರ್ಯತತ್ಪರರಾಗಬೇಕೆಂದರು.
ಸಮಾರಂಭವನ್ನು ಉದ್ದೇಶಿಸಿ ಕೇಂದ್ರ ಸಮಿತಿಯ ಸದಸ್ಯರಾದ ಕೆ.ಎನ್ ಅಗಡಿ, ಸ್ಥಳಿಯ ಸಮಿತಿ ಅಧ್ಯಕ್ಷರಾದ ಶಂಕರ ಕಾಳಶೆಟ್ಟಿ, ಲೆಕ್ಕಾಧಿಕಾರ ಮಹ್ಮದ ಅಮಾನುಲ್ಲಾ, ಕಮ್ಯುನಿಷ್ಟ ಪಕ್ಷದ ರುದ್ರಪ್ಪ ಜಾಬೀನ, ಹನುಮಂತಪ್ಪ ಮರಿದ್ಯಾಮಣ್ಣನವರ, ಖಜಾಂಚಿ ಎಂ.ಎಸ್. ತರಿಕೇರಿ, ಉಪಾಧ್ಯಕ್ಷರಾದ ಜಯಣ್ಣ ಕೋಲಾರ, ಶಂಭಣ್ಣ ಹಾವೇರಿ, ಸಂತೋಷ ಕಲಾಲ, ಸುನೀಲ ದಾನಪ್ಪನವರ, ಮಾಜಿ ಕೇಂದ್ರ ಸಮಿತಿ ಸದಸ್ಯ ಎ.ಕೆ. ಯಮನೂರ, ಎಂ,. ಎಸ್. ಕುಮ್ಮೂರ ಮತ್ತು ಎಂ.ಬಿ. ಮಿಶ್ರಿಕೋಟಿ ಮುಂತಾದವರು ಮಾತನಾಡಿದರು.
ಸಾಹಿತಿ ಕಲಾವಿದರ ಬಳಗದ ಸದಸ್ಯರುಗಳಾದ ಡಾ. ರಾಧಾ, ರೇಣುಕಾ ಗುಡಿಮನಿ, ಶಂಕರ ತುಮ್ಮಣ್ಣನವರ, ವಿರೂಪಾಕ್ಷ ಹಾವನೂರ, ಜುಬೇದಾ ನಾಯಕ್, ರಾಜೇಂದ್ರ ಹೆಗಡೆ, ಶರಣಪ್ಪ ಸಂಗನಾಳ ಉಪಸ್ಥಿತರಿದ್ದರು. ಶಂಕರ ಕಾಳಶೆಟ್ಟಿ ಸ್ವಾಗತಿಸಿದರು. ಕೊನೆಯಲ್ಲಿ ಸಂತೋಷ ಕಲಾಲ ವಂದಿಸಿದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ

--      ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ ಹಾವೇರಿ: ಇಲ್ಲಿನ ಜಿಲ್ಲಾ...

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು ಹೊರಟಿದ್ದು...

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ ಹಾವೇರಿ : ಹಾವೇರಿನಗರದಲ್ಲಿ ಕಳೆದ ವಾರದಿಂದ...

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ ಹಾವೇರಿ: ಯುವ ಜನಾಂಗ...