ತಿರುಪತಿ ಮಾದರಿಯಲ್ಲಿ ಹಾವೇರಿಯಲ್ಲಿ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ; ಶಿವಣ್ಣನವರ

Date:

ಹಾವೇರಿ: ‘ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ಪುಣ್ಯಕ್ಷೇತ್ರ ತಿರುಪತಿಯಲ್ಲಿ ಇತ್ತೀಚೆಗೆ ಭಕ್ತಶ್ರೇಷ್ಠ ಕನಕದಾಸರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಅದೇ ಮಾದರಿಯಲ್ಲಿ ಹಾವೇರಿಯ ಕಾಗಿನೆಲೆ ವೃತ್ತದಲ್ಲಿಯೂ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ ಮಾಡಲು ತೀರ್ಮಾನಿಸಲಾಗಿದೆ’ ಎಂದು ಕುರುಬ ಸಮುದಾಯದ ಮುಖಂಡರೂ ಆಗಿರುವ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಕುರುಬ ಸಮುದಾಯದ ಸಭೆಯಲ್ಲಿ ಮಾತನಾಡಿದ ಅವರು, “ಭಕ್ತಿಯ ಮೂಲಕ ಸಮಾಜದ ಸುಧಾರಣೆಗೆ ಶ್ರಮಿಸಿದ ಕನಕದಾಸರನ್ನು ಇಡೀ ದೇಶವೇ ಕೊಂಡಾಡುತ್ತದೆ. ಕನಕದಾಸರು ಹುಟ್ಟಿ ಬೆಳೆದ ಹಾವೇರಿ ಜಿಲ್ಲೆಯಲ್ಲಿಯೂ ಅವರ ಹೆಸರನ್ನು ಮತ್ತಷ್ಟು ಅಜರಾಮರವಾಗಿಸಬೇಕಿದೆ. ಹಲವು ಕಡೆಗಳಲ್ಲಿ ಈಗಾಗಲೇ ಅವರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಜಿಲ್ಲಾ ಕೇಂದ್ರದಲ್ಲಿಯೂ ಮೂರ್ತಿ ಬೇಕೆಂಬ ಕೂಗು ಈಗ ನನಸಾಗುತ್ತಿದೆ’ ಎಂದರು.
‘ಕಾಗಿನೆಲೆ ವೃತ್ತದಲ್ಲಿ ವಾಹನಗಳ ದಟ್ಟಣೆ ಹೆಚ್ಚಿದ್ದು, ಅಪಘಾತಗಳು ಆಗುತ್ತಿವೆ. ಮಧ್ಯದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಕಷ್ಟವಾಗುತ್ತದೆ. ಹೀಗಾಗಿ, ಕನಕ ಕುರಿ ಮತ್ತು ಉಣ್ಣೆ ನೇಕಾರರ ಸಹಕಾರಿ ಸಂಘಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಮೂರ್ತಿ ಇರಿಸಲಾಗುವುದು. ಮೂರ್ತಿ ಸಿದ್ಧಪಡಿಸಲು ೧೦ ಲಕ್ಷ ರೂ.ಖರ್ಚಾಗಲಿದೆ. ವೃತ್ತದ ಅಭಿವೃದ್ಧಿಗೆ ನಗರಾಭಿವೃದ್ಧಿ ಪ್ರಾಕಾರವು ೨೫ ಲಕ್ಷ ರೂ.ನೀಡಿದೆ. ಉಳಿದ ಕೆಲಸಗಳಿಗೆ ೧೦ -೧೫ ಲಕ್ಷ ರೂ.ಬೇಕಾಗಬಹುದು. ನಾನೂ ೧ ಲಕ್ಷ ಕೊಡುತ್ತೇನೆ. ಎಲ್ಲರೂ ಕೈಲಾದಷ್ಟು ದೇಣಿಗೆ ನೀಡಿ, ಮೂರ್ತಿ ಪ್ರತಿಷ್ಠಾಪಿಸೋಣ’ ಎಂದರು.
ಕುರುಬ ಸಮುದಾಯದ ಮುಖಂಡ,  ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡ್ರ ಜಿಲ್ಲಾ ಕೇಂದ್ರವಾಗಿರುವ ಹಾವೇರಿ ನಗರದ ಕಾಗಿನೆಲೆ ವೃತ್ತದಲ್ಲಿ ತಿಂಗಳ ಒಳಗಾಗಿ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು. ಇದಕ್ಕೆ ಸಮುದಾಯದ ಜನರು ಒಗ್ಗಟ್ಟಿನಿಂದ ಸಹಕಾರ ನೀಡಬೇಕು ಎಂದ ಅವರು ಮೂರ್ತಿ ಪ್ರತಿಷ್ಠಾಪಿಸುವ ಅವಕಾಶ ಬಂದಿದೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ. ಕಾಗಿನೆಲೆ ಗುರುಪೀಠದಲ್ಲಿ ಈ ಬಾರಿ ಕನಕ ಜಯಂತಿ ಆಚರಿಸುವ ಜವಾಬ್ದಾರಿಯನ್ನು ಹಾವೇರಿ ತಾಲೂಕಿಗೆ ನೀಡಲಾಗಿದೆ. ಕಳೆದ ಬಾರಿ ರಾಣೇಬೆನ್ನೂರಿನವರು ಅದ್ಧೂರಿ ಆಚರಣೆ ಮಾಡಿದ್ದರು. ಈ ಬಾರಿ ನಾವೆಲ್ಲರೂ ದೇಣಿಗೆ ಸಂಗ್ರಹಿಸಿ ಅಭೂತಪೂರ್ವ ಆಚರಣೆ ಮಾಡೋಣ’ ಎಂದರು.
ಸಮುದಾಯದ ಮುಖಂಡರಾದ ಮಹದೇವಗೌಡ ಗಾಜೀಗೌಡ್ರ, ಸಮಾಜದ ಜಿಲ್ಲಾಧ್ಯಕ್ಷ ನಾಗರಾಜ ಆನ್ವೇರಿ, ಅಶೋಕ ಬಣಕಾರ, ಹನುಮಂತಗೌಡ್ರ ಗಾಜೀಗೌಡ್ರ, ಬಸಣ್ಣ ಕಂಬಳಿ, ಅಶೋಕ ಮುದಕಣ್ಣನವರ, ವಿಜಯಕುಮಾರ ಮುದಕಣ್ಣನವರ, ಬಸವರಾಜ ಕೋಟಿ ಹಾಗೂ ತಾಲೂಕಾ ಅಧ್ಯಕ್ಷ ವಿರುಪಾಕ್ಷ ಹುಲ್ಲೂರ, ನಿಂಗಪ್ಪ ತುಕ್ಕಣ್ಣನವರ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಅತಿಥಿ ಶಿಕ್ಷಕರ ಹಾಗೂ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅ   ಅತಿಥಿ ಶಿಕ್ಷಕರ ಹಾಗೂ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ ಹಾವೇರಿ :...

ಹಾವೇರಿ ಜಿಲ್ಲಾ ಪಂಚಾಯತ್‌ಗೆ ಸಿಇಓ ಆಗಿ ದಲ್ಜೀತ್ ಕುಮಾರ್ ವರ್ಗಾವಣೆ

ಹಾವೇರಿ ಜಿಲ್ಲಾ ಪಂಚಾಯತ್‌ಗೆ ಸಿಇಓ ಆಗಿ ದಲ್ಜೀತ್ ಕುಮಾರ್ ವರ್ಗಾವಣೆ ಹಾವೇರಿ: ಹಾವೇರಿಜಿಲ್ಲಾ...

ರಾಣೇಬೆನ್ನೂರು ಬಳಿ ಬೆಂಕಿ ತಗುಲಿ ಸುಟ್ಟು ಕರಕಲಾದ ಪಲ್ಲಕ್ಕಿ ಬಸ್ -ಅಪಾಯದಿಂದ ಪ್ರಯಾಣಿಕರು ಪಾರು

ರಾಣೇಬೆನ್ನೂರು ಬಳಿ ಬೆಂಕಿ ತಗುಲಿ ಸುಟ್ಟು ಕರಕಲಾದ ಪಲ್ಲಕ್ಕಿ ಬಸ್ -ಅಪಾಯದಿಂದ...