ಬೈಲಾ ಪ್ರಕಾರ ವಚನಾನಂದ ಸ್ವಾಮೀಜಿ ಉಚ್ಛಾಟನೆ: ಟ್ರಸ್ಟಿ ಮಹೇಶ ಹಾವೇರಿ
ಹಾವೇರಿ: ಹರಿಹರ ಪಂಚಮಸಾಲಿ ಪೀಠಕ್ಕೆ ವಚನಾನಂದ ಸ್ವಾಮೀಜಿ ಅವರನ್ನು ನಾವೇ ಕರೆದು ಪಟ್ಟಕ್ಕೆ ಏರಿಸಿ, ಈಗ ನಾವೇ ಉಚ್ಛಾಟನೆ ಮಾಡುವ ಪರಿಸ್ಥಿತಿ ಬಂದಿರುವುದು ಬೇಸರ ಮೂಡಿಸಿದೆ. ಪೀಠದ ಬೈಲಾದ ಪ್ರಕಾರವೇ ಅವರನ್ನು ಉಚ್ಛಾಟನೆ ಮಾಡಲಾಗಿದ್ದು, ಕಾನೂನು ಪ್ರಕಾರ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಹರಿಹರ ಪಂಚಮಸಾಲಿ ಪೀಠದ ಟ್ರಸ್ಟಿ ಮಹೇಶ ಹಾವೇರಿ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರ ಪಂಚಮಸಾಲಿ ಪೀಠದ ಉಚ್ಛಾಟಿತ ವಚನಾನಂದ ಸ್ವಾಮೀಜಿ ಸಮಾಜವನ್ನು ಸಂಘಟನೆ ಮಾಡದೇ ಪೀಠದಲ್ಲಿದ್ದುಕೊಂಡು ವೈಯಕ್ತಿಕ ಕೆಲಸಗಳಿಗೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಅತಿಯಾಗಿ ಫಾರಿನ್ ಟ್ರಿಪ್ ಮಾಡುವುದು, ಸಿನಿಮಾ ನಟ, ನಟಿಯರ ಜತೆಗೆ ಫೋಟೋ ತೆಗೆಸಿಕೊಂಡು ಪೀಠದಲ್ಲಿ ಹಾಕುವುದು, ರಾಣಿ ಚನ್ನಮ್ಮನ ಫೋಟೋ ಬಿಸಿಲಿನಲ್ಲಿ ಹಾಕುವುದು, ರಾಜಕಾರಣಿಗಳ ಜತೆಗೆ ಅತಿಯಾಗಿ ಒಡನಾಟ ಇಟ್ಟುಕೊಳ್ಳುವುದು, ಸೇರಿದಂತೆ ಅನೇಕ ವಿಚಾರಗಳಿಂದ ಬೇಸತ್ತು ಎಲ್ಲ ಟ್ರಸ್ಟಿಗಳು ಸ್ವಾಮೀಜಿಗಳನ್ನು ಪೀಠದಿಂದ ಉಚ್ಛಾಟನೆಗೆ ನಿರ್ಧಾರ ಕೈಗೊಂಡಿದ್ದಾರೆ ಎಂದರು.
ಸಮಾಜದ ಅನೇಕ ಹಿರಿಯರು ೨೦೦೮ರಲ್ಲಿ ಹರಿಹರ ಪಂಚಮಸಾಲಿ ಪೀಠ ಸ್ಥಾಪಿಸಿದರು. ಯಾವುದೋ ಕಾರಣದಿಂದ ಸಿದ್ದಲಿಂಗ ಸ್ವಾಮಿಗಳನ್ನು ಪೀಠದಿಂದ ವಿಮುಕ್ತಿಗೊಳಿಸಲಾಯಿತು. ಆಗ ಬಾಲೆಹೊಸೂರ ದಿಂಗಾಲೇಶ್ವರ ಸ್ವಾಮೀಜಿ ಸಲಹೆ ಮೇರೆಗೆ ವಚನಾನಂದ ಸ್ವಾಮೀಜಿ ಅವರನ್ನು ನೇಮಿಸಲಾಯಿತು. ಒಂದು ವರ್ಷ ಗದ್ದುಗೆ ಪೂಜೆ, ಅನುಷ್ಠಾನ ಎಲ್ಲ ಕಲಿಸಿ, ನಂತರ ಪಟ್ಟಾಧಿಕಾರ ಮಾಡಿದೆವು ಎಂದರು.
ಲಿಂಗಾಯತರೆಲ್ಲರೂ ನಾವು ವಿರಕ್ತ ಮತ್ತು ಗುರು ಪರಂಪರೆ, ಬಸವಣ್ಣನವರ ತತ್ವಗಳನ್ನು ನಂಬಿದವರು. ಆದರೆ, ಸ್ವಾಮೀಜಿಗಳು ಅದನ್ನು ಬಿಟ್ಟು ಭಕ್ತರಿಗೆ ಆಶೀರ್ವಾದ ಮಾಡುವುದನ್ನು ಮರೆತು ಐಷಾರಾಮಿ ಜೀವನಕ್ಕೆ ಮೊರೆ ಹೋದರು. ವಿದೇಶಿಯರ ಕರೆದುಕೊಂಡು ಬಂದು ಹೋಳಿ ಆಡಿದರು. ಇದು ನಮ್ಮ ಸಂಸ್ಕೃತಿ ಅಲ್ಲ. ಆಚಾರ, ವಿಚಾರ ಮರೆತು ಸಿನಿಮಾ, ರಾಜಕಾರಣಿಗಳನ್ನು ಕರೆಸಿ ಹುಚ್ಚಾಟ ಆರಂಭಿಸಿದರು. ಅನೇಕ ಬಾರಿ ಎಚ್ಚರಿಸಿದರೂ ಯಾರ ಮಾತೂ ಕೇಳಲಿಲ್ಲ. ಅವರ ಸಮ್ಮುಖದಲ್ಲೇ ಎಲ್ಲ ವ್ಯವಹಾರ ನಡೆದರೂ, ಆಗ ಕೇಳದವರು, ಈಗ ಅವ್ಯವಹಾರದ ಸುಳ್ಳು ಆರೋಪ ಮಾಡುತ್ತಿದ್ದಾರೆ. ಈಗ ಮುಗ್ದ ಭಕ್ತರ ಕಟ್ಟಿಕೊಂಡು ಟ್ರಸ್ಟ್ ವಿರುದ್ಧ ಎತ್ತಿಕಟ್ಟಿದ್ದಾರೆ. ಇಂತಹ ಸ್ವಾಮೀಜಿ ಪೀಠಕ್ಕೆ ಕರೆತಂದಿದ್ದಕ್ಕೆ ಸಮಾಜದವರಲ್ಲಿ ಕ್ಷಮೆ ಕೋರುತ್ತೇವೆ ಎಂದು ಭಾವುಕರಾದರು.
ಈ ಘಟನೆಯಿಂದ ಪೀಠದ ಭಕ್ತರಿಗೆ ನೋವು ಉಂಟು ಮಾಡಿದೆ. ಶ್ವಾಸ ಪೀಠ ಅಥವಾ ಪಂಚಮಸಾಲಿ ಪೀಠ ಎರಡರಲ್ಲಿ ಒಂದನ್ನು ಬಿಡಿ ಎಂದಾಗ ಲೆಕ್ಕ ಕೊಡಿ ಎಂದು ಗಲಾಟೆ ಎಬ್ಬಿಸಿದರು. ಪೀಠದ ನಿಯಮ ಮೀರಿದ್ದರಿಂದ ಉಚ್ಛಾಟನೆ ಮಾಡಲಾಗಿದೆ. ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲಲ್ಲ. ಹೊಸ ಸ್ವಾಮೀಜಿ ನೇಮಕ ಮಾಡುವ ಕುರಿತು ಹಿರಿಯರೊಂದಿಗೆ ಚರ್ಚಿಸಲಾಗುವುದು ಎಂದರು.
ರಾಜಣ್ಣ ಪಾಟೀಲ ಮಾತನಾಡಿ, ರಾಜಕಾರಣಿಗಳಿಗೆ ಟಿಕೆಟ್ ಕೊಡಿಸಲು ಓಡಾಟ, ಶೋಕಿ ಜೀವನ, ಸರ್ಕಾರಿ ಅಧಿಕಾರಿಗಳ ವರ್ಗಾವಣೆ ದಂಧೆ, ಕುಲಪತಿಗಳ ನೇಮಕಾತಿಗೆ ಡೀಲ್ ಮಾಡಲು ಪೀಠ ದುರ್ಬಳಕೆ ಮಾಡಿಕೊಂಡಿದ್ದರು ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಸಮಾಜದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ವಸಂತಮ್ಮ ಹುಲ್ಲತ್ತಿ, ರಾಜ್ಯ ಉಪಾಧ್ಯಕ್ಷ ಶಂಕರ ಬಿಸರಳ್ಳಿ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಅಗಡಿ, ಕಾನೂನು ಸಲಹೆಗಾರ ಸೋಮಶೇಖರ ಕೊತಂಬ್ರಿ, ರಾಜಣ್ಣ ಪಾಟೀಲ, ನಿಜಲಿಂಗಪ್ಪ ಮುದಿಯಣ್ಣವರ, ಜಗದೀಶ ಕನವಳ್ಳಿ, ಸದಾನಂದ ಹಾದಿಮನಿ, ಬಸವರಾಜ ಹಾವಕ್ಕನವರ, ಜಗದೀಶ ಕನವಳ್ಳಿ ಇತರ ಇತರರಿದ್ದರು.
ಬಾಕ್ಸ್
ಬಹಿರಂಗವಾಗಿ ಲೆಕ್ಕ ಕೊಡಲು ಆಗದು..
ಸರ್ಕಾರದಿಂದ ೨೫ ಕೋಟಿ ಅನುದಾನ ಪೀಠಕ್ಕೆ ಬಂದಿದೆ. ಪೀಠದ ಭಕ್ತರು ೧೦ ರೂ.,ನಿಂದ ಹಿಡಿದು ೫೦ ಲಕ್ಷ ರೂ.,ವರೆಗೆ ದೇಣಿಗೆ ಕೊಟ್ಟಿದ್ದಾರೆ. ಕೆಲವರು ಗುಪ್ತದಾನ ಕೊಟ್ಟಿದ್ದಾರೆ. ಎಲ್ಲದಕ್ಕೂ ಲೆಕ್ಕ ಇದೆ. ಬಹಿರಂಗವಾಗಿ ಎಲ್ಲವನ್ನೂ ಲೆಕ್ಕ ಕೊಡಲು ಆಗದು. ಪೀಠದ ಪರಿಮಿತಿಯಲ್ಲಿ ಬಂದು ಭಕ್ತರು ಕೇಳಿದರೆ ಎಲ್ಲ ಲೆಕ್ಕ ಕೊಡಲು ಈಗಲೂ ಸಿದ್ಧವಿದ್ದೇವೆ ಎಂದು ಹರಿಹರ ಪಂಚಮಸಾಲಿ ಪೀಠದ ಹಿರಿಯ ಧರ್ಮದರ್ಶಿ ಪಿ.ಡಿ.ಶಿರೂರ ಹೇಳಿದರು.