
ವಿಬಿ-ಜಿ-ರಾಮ್ ಯೋಜನೆ ಕೂಲಿ ದರ ಹೆಚ್ಚಳ: ಡಾ. ಪರಮೇಶ್ ಹುಬ್ಬಳ್ಳಿ
ಹಾವೇರಿ : ಜು.೧ರಿಂದ ವಿ ಕಸಿತ ಭಾರತ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಾದ ವಿಬಿ-ಜಿ-ರಾಮ್-ಜಿ ಜಾರಿಗೆ ಬಂದಿದೆ. ಗ್ರಾಮೀಣ ಭಾಗದ ಒಂದು ಕುಟುಂಬಕ್ಕೆ ಒಂದು ವ?ದಲ್ಲಿ ಕನಿ? ೧೨೫ ದಿನಗಳ ಕೌಶಲ ರಹಿತ ಕೂಲಿ ಕೆಲಸಗಳನ್ನು ಇದು ಖಾತ್ರಿಪಡಿಸುತ್ತದೆ ಎಂದು ತಾಪಂ ಇಒ ಡಾ. ಪರಮೇಶ್ ಹುಬ್ಬಳ್ಳಿ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಜು.೧ರಿಂದ ಹೊಸ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ವಿಬಿ-ಜಿ-ರಾಮ್-ಜಿ ಅನ್ನು ಜಾರಿಗೆ ತಂದಿದೆ. ಎರಡು ದಶಕಗಳಿಂದ ಇದ್ದ ನರೇಗಾ ಯೋಜನೆ ಬದಲು ವಿಬಿ-ಜಿ-ರಾಮ್-ಜಿ ಯೋಜನೆಯನ್ನು ಅಳವಡಿಸಲಾಗಿದೆ.
ಹಿಂದಿನ ಸ್ಕಿಮ್‌ಗಿಂತ ಹೆಚ್ಚು ದಿನ ಕೆಲಸ ಮತ್ತು ಹೆಚ್ಚು ವೇತನ ನೀಡುತ್ತದೆ. ಹಳೆಯ ನರೇಗಾ ಯೋಜನೆಯಡಿ ವ?ಕ್ಕೆ ೧೦೦ ದಿನಗಳ ಉದ್ಯೋಗ ನೀಡಲಾಗುತ್ತಿತ್ತು. ಆದರೆ ಹೊಸ ವಿಬಿ-ಜಿ-ರಾಮ್-ಜಿ ಕಾಯ್ದೆಯಡಿ, ಪ್ರತಿ ಗ್ರಾಮೀಣ ಕುಟುಂಬಕ್ಕೆ ಒಂದು ಆರ್ಥಿಕ ವ?ದಲ್ಲಿ ಕನಿ? ೧೨೫ ದಿನಗಳ ಕಡ್ಡಾಯ ಉದ್ಯೋಗಾವಕಾಶ ಕಲ್ಪಿಸಲಾಗುವುದು. ಹಾಗೂ ಒಂದು ಮಾನವ ದಿನಕ್ಕೆ ೩೮೨ ರೂಪಾಯಿ ಕೂಲಿ ಮೊತ್ತ ನೀಡಲಾಗುವುದು ಎಂದರು.
ಕಾರ್ಮಿಕರ ಸಮರ್ಪಕ ಲಭ್ಯತೆಗೆ ಸುಗಮಗೊಳಿಸಲು ಯೋಜನೆಯಡಿ ೬೦ ದಿನಗಳ ಕಾಲ ವಿರಾಮ ನೀಡುವ ವಿಶೇ? ವ್ಯವಸ್ಥೆ ಮಾಡಲಾಗಿದೆ . ವಿಬಿಜಿರಾಮ್ ಜಿ ಯಶಸ್ವಿಯಾಗಿ ಅನು?ನ ರೂಪರೇ? ಸಿದ್ಧಪಡಿಸಿಕೊಳ್ಳಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ದೀರ್ಘಾವಧಿಯ ಮೂಲ ಸೌಕರ್ಯಕ್ಕೆ ಸಂಬಂಧಿಸಿದ ಉದ್ಯೋಗ ಸೃಷ್ಟಿಸಲಾಗುತ್ತದೆ. ಗ್ರಾ.ಪಂ ಪಿಡಿಒಗಳು ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸುವುದರ ಜತೆಗೆ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಕೈಗೆತ್ತಿಕೊಳ್ಳಬೇಕು ಎಂದು ತಿಳಿಸಿದರು. ಎಲ್ಲ ಗ್ರಾಮ ಪಂಚಾಯತಿಗಳಲ್ಲಿ Iಇಅ ಮುಖಾಂತರ ಎಲ್ಲಾ ಡಂಗುರ, ಜಿಂಗಲ್ಸ್ ಮುಖಾಂತರ ಎಲ್ಲ ೩೩ ಗ್ರಾಂ ಪಂಚಾಯತಿಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ ಎಂದು ತಿಳಿಸಿದರು

