ಶುದ್ಧ-ಆರೋಗ್ಯಕರ ಮತದಾರರ ಪಟ್ಟಿ – ಜೂ.೩೦ ರಿಂದ ಮನೆ ಮನೆ ಭೇಟಿ: ಡಿಸಿ ಡಾ.ವಿಜಯಮಹಾಂತೇಶ

Date:

ಹಾವೇರಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತ, ನ್ಯಾಯ ಸಮ್ಮತ ಪಾರದರ್ಶಕ ಚುನಾವಣೆ ನಡೆಸಬೇಕು. ಈ ಹಿನ್ನಲೆಯಲ್ಲಿ ದೋಷರಹಿತ ಶುದ್ಧ ಹಾಗೂ ಆರೋಗ್ಯಕರ ಮತದಾರರ ಪಟ್ಟಿ ತಯಾರಿಕೆ, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-೨೦೨೬ರ ಉದ್ದೇಶವಾಗಿದೆ. ಎಸ್.ಐ.ಆರ್ ಕುರಿತು ಮತದಾರರು ಯಾವುದೇ ಗೊಂದಲಗಳಿಗೆ ಒಳಗಾಗದೇ ಅಗತ್ಯ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಕೋರ್ಟ್ ಹಾಲ್‌ನಲ್ಲಿ ಬುಧವಾರ ರಾಜಕೀಯ ಪಕ್ಷಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ರಾಜಕೀಯ ಪಕ್ಷದವರ ಸಹಕಾರ ಎಲ್ಲ ಹಂತದಲ್ಲಿ ಬೇಕಾಗುತ್ತದೆ. ಎಲ್ಲಾ ರಾಜಕೀಯ ಪಕ್ಷಗಳು ಪ್ರತಿ ಮತಗಟ್ಟೆಗೆ ಒಬ್ಬ ಬಿ.ಎಲ್.ಎ.ನ್ನು ನೇಮಕ ಮಾಡಬೇಕು ಎಂದರು.
ಮನೆ ಮನೆ ಭೇಟಿ: ಜೂ.೩೦ ರಿಂದ ಜು.೨೯ರವರೆಗೆ ಬೂತ ಮಟ್ಟದ ಅಧಿಕಾರಿಗಳು(ಬಿಎಲ್‌ಒ) ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಬಿಎಲ್‌ಒಗಳು ಮತದಾರರ ಮನೆ ಮನೆಗೆ ಭೇಟಿ ಸಮಯದಲ್ಲಿ ದ್ವಿಪ್ರತಿಯಲ್ಲಿ ಎನುಮರೇಷನ್ ಫಾರ್ಮ ನೀಡುತ್ತಾರೆ. ಈ ಫಾರ್ಮನ್ನು ಮತದಾರರು ಭರ್ತಿಮಾಡಿ ಸಹಿ ಮಾಡಬೇಕು. ಹೊಸ ಭಾವಚಿತ್ರ ನೀಡಲು ಅವಕಾಶವಿದೆ, ಫಾರ್ಮ ಭರ್ತಿಮಾಡಲು ಮತದಾರರಿಗೆ ತಿಳಿಯಲಿಲ್ಲ ಅಂದ ಪಕ್ಷದಲ್ಲಿ ಬಿ.ಎಲ್.ಒ.ಗಳು ಭರ್ತಿಮಾಡುತ್ತಾರೆ. ಭರ್ತಿಮಾಡಿದ ಫಾರ್ಮನ ಒಂದು ಪ್ರತಿ ಮತದಾರರ ಹತ್ತಿರ ಹಾಗೂ ಒಂದು ಪ್ರತಿ ಬಿ.ಎಲ್.ಒಗಳ ಹತ್ತಿರವಿರುತ್ತದೆ ಎಂದರು.
ಪ್ರತಿ ಮನೆಗೆ ಮೂರು ಭಾರಿ ಬಿಎಲ್‌ಒ ಭೇಟಿ ನೀಡಲಿದ್ದಾರೆ. ಗೈರು ಮತದಾರ, ವಾಸಸ್ಥಳ ಬದಲಾವಣೆ, ಮೃತ ಹಾಗೂ ನಕಲು ಮತದಾರರ ಪಟ್ಟಿ ಮಾಡಲಾಗುವುದು. ಅನರ್ಹರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗುವುದು ಹಾಗೂ ಅರ್ಹರು ಮತದಾರರ ಪಟ್ಟಿಯಲ್ಲಿ ಮುಂದುವರೆಯಲಿದ್ದಾರೆ. ಈ ಕಾರ್ಯದಲ್ಲಿ ಬಿ.ಎಲ್.ಒ.ಗಳ ಹಾಗೂ ಬಿ.ಎಲ್.ಎ.ಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದರು.
ಲಾಜಿಕಲ್ ಎರರ‍್ಸ್/ತರ್ಕಾಧಾರಿತ ದೋಷಗಳು: ವಯಸ್ಸಿನ ಅಂತರ, ೨೦೦೨ರ ಮತ್ತು ೨೦೨೫ರ ಮತದಾರ ಪಟ್ಟಿಯಲ್ಲಿ ತಂದೆ-ತಾಯಿ ಹೆಸರು ವಿಭಿನ್ನವಾಗಿದ್ದರೆ, ಸಂಬಂಧದ ಕಾಲಂನಲ್ಲಿ ಬೇರೆ ಬೇರೆ ಹೆಸರು ಇದ್ದರೆ ಹಾಗೂ ೨೦೦೨ರಲ್ಲಿ ಗಂಡನೊಂದಿಗೆ ೨೦೨೫ರಲ್ಲಿ ತಂದೆಯೊಂದಿಗೆ ಲಿಂಕೇಜ್ ಆಗಿದ್ದರೆ, ತಂದೆಯರು ವಿಭಿನ್ನವಾಗಿದ್ದರೆ, ಯಾವುದೇ ದಾಖಲೆ ಸಲ್ಲಿಸದೇ ಇರುವುದು ಹಾಗೂ ಕೇವಲ ಆಧಾರ್ ಮಾತ್ರ ಸಲ್ಲಿಕೆ ಪ್ರಕರಣಗಳನ್ನು ಲಾಜಿಕ್ ಎರರ‍್ಸ್/ ತರ್ಕಾಧಾರಿತ ದೋಷಗಳೆಂದು ಪರಿಗಣಿಸಲಾಗುವುದು ಹಾಗೂ ಈ ದೋಷದ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಸಹಾಯವಾಣಿ: ಎಸ್.ಐ.ಆರ್. ಕುರಿತು ಯಾವುದೇ ಸಂದೇಹಗಳಲ್ಲಿದ್ದಲ್ಲಿ ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸಲಾದ ೧೯೫೦ ಮತದಾರ ಸಹಾಯವಾಣಿ ಸಂಪರ್ಕಿಸಬಹುದು ಅಥವಾ ಆಯಾ ತಹಶೀಲ್ದಾರ ಕಚೇರಿ ಸಂಪರ್ಕಿಸಬಹುದು ಎಂದು ತಿಳಿಸಿದರು.
ಮತದಾರ ಅರ್ಹತೆ: ಭಾರತದ ನಾಗರಿಕನಾಗಿರಬೇಕು, ಕನಿಷ್ಠ ೧೮ ವರ್ಷ ಪೂರೈಸಿರಬೇಕು, ವಿಧಾನಸಭಾ ಕ್ಷೇತ್ರದ ಸಾಮಾನ್ಯ ನಿವಾಸಿಯಾಗಿರಬೇಕು ಹಾಗೂ ಯಾವುದೇ ಕಾನೂನಿನಡಿಯಲ್ಲಿ ಅನರ್ಹತೆಗೊಂಡಿರಬಾರದು.
ವೋಟರ್ ಸ್ಪೆಷಲಿಸ್ಟ್ ಸೆಂಟರ್: ಪ್ರತಿ ಮತಗಟ್ಟೆಯಲ್ಲಿ ವೋಟರ್ ಸ್ಪೆಷಲಿಸ್ಟ್ ಸೆಂಟರ್ ತೆರೆಯಲಾಗುವುದು. ಎನುಮರೇಷನ್ ಫಾರ್ಮ ಭರ್ತಿ ಸೇರಿದಂತೆ ವಿವಿಧ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಪ್ರಸ್ತುತ ೧೩,೩೫,೩೪೨ ಮತದಾರರಿದ್ದು, ಈಗಾಗಲೇ ೨೦೦೨ರಲ್ಲಿ ಹಾಗೂ ೨೦೨೫ರ ಮತದಾರರ ಪಟ್ಟಿಯಲ್ಲಿರುವ ೧೨,೭೦,೬೨೭ ಮತದಾರರ ಮ್ಯಾಪಿಂಗ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-೨೦೨೬ ವೇಳಾಪಟ್ಟಿ: ಎಸ್‌ಐಆರ್ ಅರ್ಹತಾ ದಿನಾಂಕ ೦೧-೧೦-೨೦೨೬, ತಯಾರಿ, ತರಬೇತಿ ಮತ್ತು ಮುದ್ರಣ ದಿನಾಂಕ ೨೦-೦೬-೨೦೨೬ ರಿಂದ ೨೯-೦೬-೨೦೨೬ರವರೆಗೆ, ಬಿಎಲ್‌ಒ ಮನೆ ಮನೆ ಭೇಟಿ ದಿನಾಂಕ೩೦-೦೬-೨೦೨೬ ರಿಂದ ೨೯-೦೭-೨೦೨೬ರವರೆಗೆ, ಮತದಾನ ಕೇಂದ್ರಗಳ ತರ್ಕಬದ್ಧಗೊಳಿಸುವಿಕೆ ದಿನಾಂಕ ೨೯-೦೭-೨೦೨೬, ಕರಡು ಮತದಾರರ ಪಟ್ಟಿಯ ಪ್ರಕಟಣೆ ದಿನಾಂಕ ೦೫-೦೮-೨೦೨೬, ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿ ದಿನಾಂಕ ೦೫-೦೮-೨೦೨೬ ರಿಂದ ೦೪-೦೯-೨೦೨೬ರವರೆಗೆ, ಹಕ್ಕುಗಳು ಮತ್ತು ಆಕ್ಷೇಪಣೆಗಳ ಹಂತ/ವಿಲೇವಾರಿ ದಿನಾಂಕ ೦೫-೦೮-೨೦೨೬ ರಿಂದ ೦೩-೧೦-೨೦೨೬ರವರೆಗೆ ನಡೆಯಲಿದೆ. ಅಂತಿಮ ಮತದಾರರ ಪಟ್ಟಿಯನ್ನು ದಿನಾಂಕ ೦೭-೧೦-೨೦೨೬ ರಂದು ಪ್ರಕಟಣೆ ಮಾಡಲಾಗುತ್ತದೆ.
೧೪೮೨ ಮತಗಟ್ಟೆಗಳು: ಜಿಲ್ಲೆಯಲ್ಲಿ ೮೨-ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ೨೪೩, ೮೩-ಶಿಗ್ಗಾಂವ ವಿಧಾನಸಭಾ ಕ್ಷೇತ್ರದಲ್ಲಿ ೨೪೧, ೮೪-ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ೨೬೧, ೮೫-ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ೨೪೨, ೮೬-ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ೨೨೯ ಹಾಗೂ ೮೭-ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ೨೬೬ ಮತಗಟ್ಟೆಗಳು ಸೇರಿ ೧೪೮೨ ಮತಗಟ್ಟೆಗಳಿದ್ದು, ಈ ಮತಗಟ್ಟೆಗಳಿಗೆ ೧೪೮೨ ಬಿಎಲ್‌ಒಗಳು ಹಾಗೂ ೧೪೮ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ.
ಮತದಾರರು ಸಲ್ಲಿಸಬೇಕಾದ ಅವಶ್ಯಕ ದಾಖಲೆಗಳು: ದಿ.೦೧-೦೭-೧೯೮೭ ಕ್ಕಿಂತ ಮೊದಲು ಜನಿಸಿದವರು ಸ್ವಯಂ ಜನ್ಮ ದಿನಾಂಕ-ಸ್ಥಳವನ್ನು ಸ್ಥಾಪಿಸುವ ೧೨ ದಾಖಲೆಗಳ ಪಟ್ಟಿಯಿಂದ ಯಾವುದೇ ದಾಖಲೆ ಸಲ್ಲಿಸಬೇಕು.
ದಿನಾಂಕ ೦೧-೦೭-೧೯೮೭ ರಿಂದ ೦೨-೧೨-೨೦೦೪ರಲ್ಲಿ ಜನಿಸಿದವರು ಸ್ವಯಂ ಜನ್ಮ ದಿನಾಂಕ/ಸ್ಥಳವನ್ನು ದೃಢಪಡಿಸುವ ದಾಖಲೆ, ತಂದೆ ಅಥವಾ ತಾಯಿ ಹುಟ್ಟಿದ ದಿನಾಂಕ/ಸ್ಥಳವನ್ನು ದೃಢಪಡಿಸುವ ದಾಖಲೆ, ಹಾಗೂ ದಿನಾಂಕ ೦೨-೧೨-೨೦೦೪ ರ ನಂತರ ಜನಿಸಿದವರು ಸ್ವಯಂ, ಜನ್ಮ ದಿನಾಂಕ/ಸ್ಥಳವನ್ನು ದೃಢಪಡಿಸುವ ದಾಖಲೆ, ತಂದೆ ಹುಟ್ಟಿದ ದಿನಾಂಕ/ಸ್ಥಳವನ್ನು ದೃಢಪಡಿಸುವ ದಾಖಲೆ, ತಾಯಿ ಹುಟ್ಟಿದ ದಿನಾಂಕ/ಸ್ಥಳವನ್ನು ದೃಢಪಡಿಸುವ ದಾಖಲೆ, ಯಾವುದೇ ಪೋ?ಕರು ಭಾರತೀಯರಲ್ಲದಿದ್ದರೆ, ಜನನದ ಸಮಯದಲ್ಲಿ ಪೋ?ಕರ ಮಾನ್ಯ ಪಾಸ್‌ಪೋರ್ಟ್ ಮತ್ತು ವೀಸಾ, ಭಾರತದ ಹೊರಗೆ ಜನಿಸಿದವರು ಅಥವಾ ನೈಸರ್ಗಿಕವಾಗಿ ಜನಿಸಿದವರು, ಭಾರತದ ಹೊರಗೆ ಜನನ: ವಿದೇಶದಲ್ಲಿರುವ ಭಾರತೀಯ ಮಿ?ನ್‌ನಿಂದ ಜನನ ನೋಂದಣಿ ಪುರಾವೆ, ನೈಸರ್ಗಿಕೀಕರಣ, ಪೌರತ್ವ ನೋಂದಣಿ ಪ್ರಮಾಣಪತ್ರ ಸಲ್ಲಿಸಬೇಕು.
೧೨ ದಾಖಲೆಗಳು: ೧. ಯಾವುದೇ ಸರ್ಕಾರ/ರಾಜ್ಯ ಸರ್ಕಾರ/ಪಿಎಸ್‌ಯುನ ನಿಯಮಿತ ಉದ್ಯೋಗಿ/ ಪಿಂಚಣಿದಾರರಿಗೆ ನೀಡಲಾದ ಯಾವುದೇ ಗುರುತಿನ ಚೀಟಿ/ಪಿಂಚಣಿ ಪಾವತಿ ಆದೇಶ, ೨. ೦೧-೦೭-೧೯೮೭ ಕ್ಕಿಂತ ಮೊದಲು ಸರ್ಕಾರ/ಸ್ಥಳೀಯ ಅಧಿಕಾರಿಗಳು/ಬ್ಯಾಂಕ್‌ಗಳು/ಅಂಚೆ ಯಾವುದೇ ಗುರುತಿನ ಕಚೇರಿ/ ಎಲ್‌ಐಸಿ/ ಪಿಎಸ್‌ಯುಗಳು ಭಾರತದಲ್ಲಿ ನೀಡಿದ ಚೀಟಿ/ಪ್ರಮಾಣಪತ್ರ/ದಾಖಲೆ, ೩. ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜನನ ಪ್ರಮಾಣಪತ್ರ. ೪. ಪಾಸಪೋರ್ಟ, ೫. ಮಾನ್ಯತೆ ಪಡೆದ ಮಂಡಳಿಗಳು/ ವಿಶ್ವವಿದ್ಯಾಲಯಗಳು ನೀಡಿದ ಮೆಟ್ರಿಕ್ಯುಲೇ?ನ್/ ಶೈಕ್ಷಣಿಕ ಪ್ರಮಾಣಪತ್ರ, ೬. ಸಕ್ಷಮ ರಾಜ್ಯ ಪ್ರಾಧಿಕಾರದಿಂದ ನೀಡಲಾದ ಶಾಶ್ವತ ನಿವಾಸ ಪ್ರಮಾಣಪತ್ರ, ೭. ಅರಣ್ಯ ಹಕ್ಕು ಪ್ರಮಾಣಪತ್ರ, ೮. ಒಬಿಸಿ/ಎಸ್‌ಸಿ/ಎಸ್‌ಟಿ ಅಥವಾ ಸಕ್ರಮ ಪ್ರಾಧಿಕಾರದಿಂದ ನೀಡಲಾದ ಯಾವುದೇ ಜಾತಿ ಪ್ರಮಾಣಪತ್ರ, ೯. ರಾಷ್ಟ್ರೀಯ ನಾಗರಿಕರ ನೋಂದಣಿ (ಅದು ಎಲ್ಲೆಲ್ಲಿ ಅಸ್ತಿತ್ವದಲ್ಲಿದೆಯೋ ಅಲ್ಲಿ), ೧೦. ಯಾವುದೇ ಶಾಸನಬದ್ಧ/ಆಡಳಿತಾತ್ಮಕ ನಿಯಂತ್ರಣದ ಅಡಿಯಲ್ಲಿ ಸರ್ಕಾರಿ ಅಧಿಕಾರಿಗಳು ನಿರ್ವಹಿಸುವ ಕುಟುಂಬ ನೋಂದಣಿ,೧೧. ಸರ್ಕಾರದಿಂದ ಪಡೆದ ಯಾವುದೇ ಭೂಮಿ/ಮನೆ ಹಂಚಿಕೆ ಪ್ರಮಾಣಪತ್ರ ಹಾಗೂ ೧೨.ಆಧಾರ್‌ಗೆ ಸಂಬಂಧಿಸಿದಂತೆ, ಆಯೋಗವು ದಿನಾಂಕ ೦೯-೦೯-೨೦೨೫ (ಅನುಬಂಧ ೧೧) ರ ಪತ್ರ ಸಂಖ್ಯೆ ೨೩/೨೦೨೫- ಇಖS/ನಂಪುಟ ೧೧ ರಲ್ಲಿ ನೀಡಲಾದ ನಿರ್ದೇಶನಗಳು ಅನ್ವಯಿಸುತ್ತವೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಶಾಸಕರು ಹಾಗೂ ವಿಧಾನಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಬಸವರಾಜ ಶಿವಣ್ಣನವರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ.ಮೈದೂರು, ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್, ಚುನಾವಣಾ ತಹಶೀಲ್ದಾರ ಅಮೃತಗೌಡ ಪಾಟೀಲ, ರಾಜಕೀಯ ಪಕ್ಷದ ಮುಖಂಡರಾದ ಶಿವರಾಜ ಸಜ್ಜನರ, ಸಂಜೀವಕುಮಾರ ನೀರಲಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಜೂ.೨೮ ರಂದು ಪಲ್ಸ್ ಪೋಲಿಯೋ-ಐದು ವರ್ಷದೊಳಗಿನ ಮಗು ಲಸಿಕೆಯಿಂದ ಹೊರಗುಳಿಯಬಾರದು: ಡಿಸಿ ಡಾ.ವಿಜಯಮಹಾಂತೇಶ

ಜೂ.೨೮ ರಂದು ಪಲ್ಸ್ ಪೋಲಿಯೋ-ಐದು ವರ್ಷದೊಳಗಿನ ಮಗು ಲಸಿಕೆಯಿಂದ ಹೊರಗುಳಿಯಬಾರದು: ಡಿಸಿ...

ಹಾವೇರಿ ಎಸ್ ಪಿ ಯಶೋಧಾ ವಂಟಗೋಡಿ , ಪಿಸಿ ಆನಂದಗೆ ಡಿಜಿ, ಐಜಿ ಪದಕ

ಹಾವೇರಿ ಎಸ್ ಪಿ ಯಶೋಧಾ ವಂಟಗೋಡಿ , ಪಿಸಿ ಆನಂದಗೆ ಡಿಜಿ,...

ದಶಕದ ನಂತರ ಹಾವೇರಿ ಚಿನ್ನದ ಗಣಿಗಾರಿಕೆ ಮರುಜೀವ! ಆತಂಕದಲ್ಲಿ ರೈತರು

ದಶಕದ ನಂತರ ಹಾವೇರಿ ಚಿನ್ನದ ಗಣಿಗಾರಿಕೆ ಮರುಜೀವ! ಆತಂಕದಲ್ಲಿ...

ಮೃದು ಹೃದಯದ, ಅಭಿವೃದ್ಧಿ ಹರಿಕಾರ ಬಸವರಾಜ ಶಿವಣ್ಣನವರ

ಮೃದು ಹೃದಯದ, ಅಭಿವೃದ್ಧಿ ಹರಿಕಾರ ಬಸವರಾಜ ಶಿವಣ್ಣನವರ ಉತ್ತರ ಕರ್ನಾಟಕದ ಹೆಬ್ಬಾಗಿಲು, ಸಾಂಸ್ಕೃತಿಕ...