“ಸಾಹಿತ್ಯಕೃತಿಗಳ ಓದುವ ಮೂಲಕ ಕೈದಿಗಳು ಪರಿವರ್ತನೆ ಹೊಂದಿ” ಜೈಲಿನಲ್ಲಿಯ ಸಾಹಿತ್ಯ ಕಮ್ಮಟದಲ್ಲಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್

Date:

“ಸಾಹಿತ್ಯಕೃತಿಗಳ ಓದುವ ಮೂಲಕ ಕೈದಿಗಳು ಪರಿವರ್ತನೆ ಹೊಂದಿ”
ಜೈಲಿನಲ್ಲಿಯ ಸಾಹಿತ್ಯ ಕಮ್ಮಟದಲ್ಲಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್
ಹಾವೇರಿ: ಕೈದಿಗಳು ಜೈಲಿನಲ್ಲಿರುವ ಅವಧಿಯನ್ನು ಪರಿವರ್ತನೆಗೆ ಬಳಸಿಕೊಳ್ಳಬೇಕು. ಇದಕ್ಕಾಗಿ ಪುಸ್ತಕಗಳನ್ನು ಓದಿರಿ ಜೊತೆಗೆ ಅನುಭವಗಳನ್ನು ದಾಖಲಿಸಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಸಲಹೆ ನೀಡಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯು ಹಾವೇರಿ ಜಿಲ್ಲಾ ಜೈಲಿನಲ್ಲಿ ಮೂರು ದಿನಗಳವರೆಗೆ ಏರ್ಪಡಿಸಿರುವ ಕಾರಾಗೃಹವಾಸಿಗಳಿಗೆ ಸಾಹಿತ್ಯ ಕಮ್ಮಟವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯವು ಮನು?ರನ್ನಾಗಿ ಮಾಡುತ್ತದೆ. ಪಂಪ, ಕುಮಾರವ್ಯಾಸ, ಕನಕದಾಸ, ಕುವೆಂಪು, ಬೇಂದ್ರೆ ಮೊದಲಾದವರು ಮಾನವೀಯ ಮೌಲ್ಯಗಳನ್ನು ತಮ್ಮ ಕೃತಿಗಳ ಮೂಲಕ ಬಿತ್ತಿದರು. ಕನ್ನಡದ ಆದಿ ಕವಿ ಪಂಪ ’ಮನು? ಜಾತಿ ತಾಮೊಂದೇ ವಲಂ’ ಎಂದು ಸಾರಿದ ಅಂದರೆ ಮನು?ರಾದ ನಾವೆಲ್ಲ ಒಂದು ಎಂದು ಹೇಳಿದ. ಅಂಥವರ ಕೃತಿಗಳನ್ನು ಓದುವುದರ ಮೂಲಕ ಮಾನವೀಯತೆ ಅಳವಡಿಸಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.
ಹಾವೇರಿ ಜಿಲ್ಲೆಯು ಶರೀಫ, ಸರ್ವಜ್ಞ, ಕನಕದಾಸರ ಮೂಲಕ ಪ್ರಸಿದ್ಧವಾಗಿದೆ. ಕನಕದಾಸರು ಕುಲ ಕುಲವೆಂದು ಹೊಡೆದಾಡದಿರಿ ಎಂದು ೫೦೦ ವ?ಗಳ ಹಿಂದೆಯೇ ಹೇಳಿದ್ದಾರೆ. ಆದರೆ ಜಾತಿ, ಧರ್ಮ, ದೇವರ ಹೆಸರಿನಲ್ಲಿ ಅಲ್ಲದೆ ಹೆಣ್ಣಿಗಾಗಿ, ಆಸ್ತಿಗಾಗಿ, ಅಧಿಕಾರಕ್ಕಾಗಿ ಜಗಳವಾಡುತ್ತೇವೆ ಎಂದು ವಿ?ದ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾದ ಪೂರ್ವ ವಲಯದ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ ಮಾತನಾಡಿ, ಕೈದಿಗಳಿಗೆ ಸಾಹಿತ್ಯ ಕಮ್ಮಟವು ವಿಶಿ?ವಾದುದು. ಸಾಹಿತ್ಯವು ಎಲ್ಲರನ್ನೂ ತಲುಪಬೇಕೆಂಬ ಉದ್ದೇಶದ ಈ ಕಮ್ಮಟವು ಸಾರ್ಥಕವಾಗಬೇಕು. ಈಮೂಲಕ ಸಾಹಿತ್ಯದಿಂದ ಬಿಡುಗಡೆಯಾಗಬೇಕು ಜೊತೆಗೆ ಓದುವುದರಿಂದ ಸಾಹಿತ್ಯವೂ ಬಿಡುಗಡೆಯಾಗುತ್ತದೆ ಎಂದರು.
ಕಾನೂನು ಪಾಲಿಸದವರು ಸಮಾಜದಿಂದ ದೂರ ಮಾಡಿ ಜೈಲಿಗೆ ಕಳಿಸಲಾಗುತ್ತದೆ. ನಿಯಂತ್ರಣ ಕಳೆದುಕೊಂಡು ಕಾನೂನಿಗೆ ವಿರುದ್ಧವಾಗಿ ವರ್ತಿಸಿದಾಗ ಜೈಲು ಕಾಣುತ್ತೀರಿ. ಇದಕ್ಕಾಗಿ ಕಾನೂನಿನ ಪರವಾಗಿ ನಿಮ್ಮ ನಡೆ ಇರಲಿ. ಏಕೆಂದರೆ ಅಪರಾಧ- ಅಪರಾಧಿ ನಡುವಿನ ಸಂಬಂಧ ವಿ?ವರ್ತುಲ. ಇಂಥ ವಿ?ವರ್ತುಲದಿಂದ ಹೊರಬರಲು ಸಾಹಿತ್ಯದ ಓದು ನೆರವಾಗುತ್ತದೆ ಎಂದು ತಿಳಿವಳಿಕೆ ಹೇಳಿದರು.
ಸಾಹಿತ್ಯಕ್ಕೆ ಕೆಡುಕನ್ನು ಆಚೆಗೆ ನೂಕಿ ಒಳ್ಳೆಯದನ್ನು ಮಾಡುವ ಶಕ್ತಿಯಿದೆ ಜೊತೆಗೆ ಸಮಾಜದ ವಿರುದ್ಧ ಹೋಗದಂತೆ ತಡೆಯುವ ಶಕ್ತಿಯಿದೆ. ಹಾಗೆಯೇ ಅಪರಾಧ ಪ್ರಜ್ಞೆಯಿಂದ ಹೊರಬರಲು ಸಾಹಿತ್ಯ ನೆರವಾಗುತ್ತದೆ. ಇದಕ್ಕಾಗಿ ಪುಸ್ತಕಗಳನ್ನು ಓದಿರಿ ಎಂದರು.
ಹಾವೇರಿ ಜಿಲ್ಲಾ ಪೊಲೀಷ್ ವರಿಷ್ಠಾಧಿಕಾರಿ ಅಂಶುಕುಮಾರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಲ್.ವೈ.ಶಿರಕೋಳ, ಹಾವೇರಿ ವಿಶ್ವವಿದ್ಯಾಲಯ ಕುಲಪತಿ ಡಾ.ಸುರೇಶ ಜಂಗಮಶೆಟ್ಟಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕುಲಸಚಿವ ಡಾ.ಸಿ.ಟಿ.ಗುರುಪ್ರಸಾದ್ ಹಾಗೂ ಹಾವೇರಿ ಜೈಲಿನ ಸಹಾಯಕ ಅಧೀಕ್ಷಕ ಖಿಲಾರಿ ಹಾಜರಿದ್ದರು.
ಸಾಹಿತ್ಯ ಕಮ್ಮಟದ ಸಂಚಾಲಕ ಗಣೇಶ ಅಮೀನಗಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕ ಡಾ.ಮಲ್ಲಿಕಾರ್ಜುನ ಬಿ.ಮಾನ್ಪಡೆ ಸ್ವಾಗತಿಸಿ,ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ

--      ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ ಹಾವೇರಿ: ಇಲ್ಲಿನ ಜಿಲ್ಲಾ...

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು ಹೊರಟಿದ್ದು...

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ ಹಾವೇರಿ : ಹಾವೇರಿನಗರದಲ್ಲಿ ಕಳೆದ ವಾರದಿಂದ...

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ ಹಾವೇರಿ: ಯುವ ಜನಾಂಗ...