“ಹಾವೇರಿ” ಏಲಕ್ಕಿ ಮಾಲೆಯ ಸಾಲಿಗೆ, ಇದೀಗ ರುದ್ರಾಕ್ಷಿ ಮಾಲೆ”

Date:

ಹಾವೇರಿ” ಏಲಕ್ಕಿ ಮಾಲೆಯ ಸಾಲಿಗೆ, ಇದೀಗ ರುದ್ರಾಕ್ಷಿ ಮಾಲೆ”

ಹಾವೇರಿ: ಏಲಕ್ಕಿ ಮಾಲೆಗಳಿಂದಾಗಿ ವಿಶ್ವ ಪ್ರಸಿದ್ದಿಹೊಂದಿರುವ ಹಾವೇರಿಜಿಲ್ಲೆಯಲ್ಲಿ ಇದೀಗ ರುದ್ರಾಕ್ಷಿಮಾಲೆಗಳು ತಯಾರಾಗುತ್ತಿದ್ದು, ಏಲಕ್ಕಿಮಾಲೆಗಳ ಜೊತೆಗೆ ರುದ್ರಾಕ್ಷಿ ಮಾಲೆಗಳು ಸರ‍್ಪಡೆಯಾಗಿವೆ. “ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ನಾರಾಯಣಪೇಟಗ್ರಾಮ ರುದ್ರಾಕ್ಷಿ ಬೃಹತ್ ಮಾಲೆಗಳ ತಯಾರಿಕಿಗೆ ಹೆಸರುವಾಸಿಯಾಗಿದೆ. ಇಲ್ಲಿ ಸಣ್ಣ,ಉಟ್ಟ ರುದ್ರಾಕ್ಷಿಮಾಲೆಗಳಿಂದ ಹಿಡಿದು ಕ್ವಿಂಟಾಲ್‌ಗಟ್ಟಲೇ ಭಾರದ ಮಾಲೆಗಳ ತಯಾರಾಗುವ ಮೂಲಕ ದೇಶದ ನಾನಾ ಭಾಗಗಳಲ್ಲಿ ನಡೆಯುವ ರಥೋತ್ಸವ ಸೇರಿದಂತೆ ವಿವಿಧ ಧರ‍್ಮಿಕ ಕರ‍್ಯಗಳಲ್ಲಿ ಇವುಗಳ ಬಳಕೆಯಾಗುತ್ತಿದೆ.

ನಾರಾಯಣಪೇಟೆಯ ರವಿ ಬಂಕಾಪುರ ಎಂಬುವವರು ಈ ರುದ್ರಾಕ್ಷಿ ಮಾಲೆಗಳ ತಯಾರಿಕೆಯಲ್ಲಿ ತೊಡಗಕೊಂಡಿದ್ದಾರೆ. ರಥಗಳಿಗೆ. ದೇವಸ್ಥಾನದ ಮರ‍್ತಿಗಳಿಗೆ, ಬಸವೇಶ್ವರ ಮರ‍್ತಿಗಳಿಗೆ ಇವರು ತಯಾರಿಸುವ ರುದ್ರಾಕ್ಷಿ ಮಾಲೆಗಳು ಬಳಕೆಯಾಗುತ್ತಿವೆ. ಹಿಂದೂ ರ‍್ಮದಲ್ಲಿ ರುದ್ರಾಕ್ಷಿಗೆ ಅದರದೇ ಆದ ಮಹತ್ವವಿದೆ. ಇದಕ್ಕೆ ಶಿವನ ಕಣ್ಣು ಎಂಬ ರ‍್ಥವಿದೆ. ಇದೇ ರುದ್ರಾಕ್ಷಿ ಮಾಲೆಯನ್ನು ಹಿಡಿದುಕೊಂಡು ಓಂ ನಮಃ ಶಿವಾಯ ಜಪ ಮಾಡಲಾಗುತ್ತದೆ.ಈ ರುದ್ರಾಕ್ಷಿ ಮಾಲೆ ರಚಿಸುವುದು ಪುರಾತನ ಕಲೆಯಾದರೂ, ರವಿ ಬಂಕಾಪುರ ಇದಕ್ಕೆ ಹೊಸ ವಿನ್ಯಾಸ ನೀಡಿದ್ದಾರೆ. ಲಕ್ಷಗಟ್ಟಲೆ ರುದ್ರಾಕ್ಷಿಗಳನ್ನು ಪೋಣಿಸಿ ರಥಕ್ಕೆ ಹಾಕುವಂತಹ ಬೃಹತ್ ಹಾರಗಳನ್ನು ರವಿ ಬಂಕಾಪುರ ಕುಟುಂಬ ತಯಾರಿಸುತ್ತಿದೆ.

ರವಿ ಬಂಕಾಪುರ ದೈವಭಕ್ತರು ಗ್ರಾಮದ ದೇವಸ್ಥಾನದ ಜಾತ್ರೆ ನಡೆದಾಗ ಹೂವಿನಮಾಲೆಯನ್ನು ವಿಶೇಷವಾಗಿ ತಯಾರಿಸಿಕೊಂಡು ಹೋಗಿದ್ದರು. ಆದರೆ ಆ ಮಾಲೆ ತುಂಡಾಗಿ ಹೂಗಳೆಲ್ಲ ನೆಲಕ್ಕೆ ಬಿದ್ದವು. ನಂತರ ರುದ್ರಾಕ್ಷಿಯಿಂದ ಐದು ಎಳೆಯ ಮಾಲೆಯನ್ನು

ತಯಾರಿಸಿಕೊಂಡು ಹೋಗಿದ್ದರು. ಅದು ಸಹ ದಾರ ತುಂಡರಿಸಿ ರಸ್ತೆಯಲ್ಲಿ ರುದ್ರಾಕ್ಷಿಗಳು ಬಿದ್ದವು. ಇದರಿಂದ ವಿಚಲಿತರಾದ ರವಿ ಬಂಕಾಪುರ ಹತ್ತಾರು ರ‍್ಷ ಬಾಳಿಕೆ ಬರುವಂತಹ ರುದ್ರಾಕ್ಷಿ ಮಾಲೆಗಳನ್ನು ಯಾಕೆ ತಯಾರಿಸಬಾರದು ಎಂದು ಯೋಚನೆ ಮಾಡಿದರು.

ಆಗ ಈ ರುದ್ರಾಕ್ಷಿ ಮಾಲೆಗಳ ಕಲ್ಪನೆ ರವಿ ಬಂಕಾಪುರಕ್ಕೆ ಬಂತು. ಗ್ರಾಮಸ್ಥರ ನೆರವಿನಿಂದ ಪ್ಲಾಸ್ಟಿಕ್ ಪೈಪ್, ಜೆಐ ತಂತಿ, ರುದ್ರಾಕ್ಷಿ, ಮುತ್ತು, ವಿವಿಧ ಪ್ಲಾಸ್ಟಿಕ್ ಪುಷ್ಪಗಳಿಂದ ಸುಮಾರು ೬ ಅಡಿಯ ರುದ್ರಾಕ್ಷಿ ಮಾಲೆ ತಯಾರಿಸಿ ದೇವರಿಗೆ ರ‍್ಪಿಸಿದರು. ಅಲ್ಲಿಂದ ರವಿ ಬಂಕಾಪುರ ಹಿಂದಿರುಗಿ ನೋಡಿಲ್ಲ. ಪ್ರಸ್ತುತ ಅವರು ೧೨ ಅಡಿ ಎತ್ತರದವರೆಗಿನ ರುದ್ರಾಕ್ಷಿ ಮಾಲೆಗಳನ್ನು ತಯಾರಿಸುತ್ತಿದ್ದಾರೆ. ರ‍್ಷದಿಂದ ರ‍್ಷಕ್ಕೆ ಇವರ ರುದ್ರಾಕ್ಷಿ ಮಾಲೆಗಳ ಬೇಡಿಕೆ ಅಧಿಕವಾಗುತ್ತಿದೆ. ಆರು, ಎಂಟು, ೧೨ ಅಡಿ ಎತ್ತರದ ರುದ್ರಾಕ್ಷಿ ಮಾಲೆಗಳನ್ನು ಇವರು ತಯಾರಿಸುತ್ತಾ ಬಂದಿದ್ದಾರೆ.

ಲಾಭದ ಹಣ ಪಡೆಯದೇ ತಯಾರಿಕೆ: ಹಲವು ದೇವಸ್ಥಾನಗಳಿಗೆ ನೂರಾರು ರಥಗಳಿಗೆ ಮಠಾಧೀಶರಿಗೆ ಇವರು ತಯಾರಿಸಿದ ರುದ್ರಾಕ್ಷಿ ಮಾಲೆಗಳು ಸಲ್ಲಿಕೆಯಾಗಿವೆ.

ಈ ರುದ್ರಾಕ್ಷಿ ಮಾಲೆ ತಯಾರಿಸುವುದನ್ನು ರವಿ ಬಂಕಾಪುರ ತಮ್ಮ ಸೇವೆ ಎಂದು ತಿಳಿದುಕೊಂಡಿದ್ದಾರೆ. ರುದ್ರಾಕ್ಷಿ ಮಾಲೆಗೆ ಬೇಕಾಗುವ ಪರಿಕರಗಳ ಹಣ ನೀಡಿದರೆ ಸಾಕು ಯಾವುದೇ ಲಾಭದ ಹಣ ಪಡೆಯದೇ ರುದ್ರಾಕ್ಷಿ ಮಾಲೆಯನ್ನು ಇವರು ತಯಾರಿಸಿಕೊಡುತ್ತಾರೆ. ಇವರು ತಯಾರಿಸಿದ ಮಾಲೆಗಳು ರಾಜ್ಯದ ವಿವಿಧೆಡೆ ವಿವಿಧ ದೇವರಿಗೆ ಅಲಂಕರಿಸಲಾಗಿದೆ.

ಇತ್ತೀಚೆಗೆ ಪ್ರರಾಗರಾಜ್ ನಲ್ಲಿ ನಡೆದ ಕುಂಭಮೇಳಕ್ಕೆ ಸಹ ಇವರು ಹೋಗಿದ್ದು, ಅಲ್ಲಿಯು ಸಹ ಸಣ್ಣಪ್ರಮಾಣದ ರುದ್ರಾಕ್ಷಿಮಾಲೆಯನ್ನು ದೇರಿಗೆ

ಸಲ್ಲಿಸಿದ್ದಾರೆ.

ರುದ್ರಾಕ್ಷಿ ಮಾಲೆ ತಯಾರಿಕೆ ಹೇಗೆ: ಕಾಶಿಯಿಂದ ರುದ್ರಾಕ್ಷಿಗಳನ್ನು ತರೆಸಿಕೊಳ್ಳುವ ಇವರು ಅವುಗಳನ್ನು ನೀರಿನಲ್ಲಿ ನೆನೆಸುತ್ತಾರೆ. ಅವುಗಳ ಬಣ್ಣ ಹೋದ ನಂತರ ಬಿಸಿಲಿನಲ್ಲಿ ಒಣಗಿಸುತ್ತಾರೆ. ನಂತರ ತಂತಿಯಲ್ಲಿ ರುದ್ರಾಕ್ಷಿ ಮುತ್ತು ಪೋಣಿಸುತ್ತಾರೆ. ಆ ರೀತಿ ಪೋಣಿಸಿದ ಮಾಲೆಯನ್ನು ಮೊದಲ ಸಿದ್ಧಪಡಿಸಿಟ್ಟುಕೊಂಡಿರುವ ಪ್ಲಾಸ್ಟಿಕ್ ಪೈಪ್‌ನ ಮೇಲೆ ರೇಡಿಯಂ ಕಲರ್‌ಗೆ ತಕ್ಕಂತೆ ಹೆಣಿಯುತ್ತಾ ಹೋಗುತ್ತಾರೆ. ನಂತರ ಅವುಗಳಿಗೆ ಮುತ್ತಿನಮಾಲೆಗಳ ಸಿಂಗಾರ ಮಾಡಿದರೇ ಬೃಹತ್ತಾದ ರುದ್ರಾಕ್ಷಿ ಮಾಲೆಗಳು ಸಿದ್ಧವಾಗುತ್ತಿವೆ.

೧೦ ರಿಂದ ೧೫ ರ‍್ಷ ಬಾಳಿಕೆ ಬರುವ ಮಾಲೆಗಳು: “ಈ ರೀತಿ ತಯಾರಿಸಿದ ಮಾಲೆಗಳು ಸುಮಾರು ೧೦ ರಿಂದ ೧೫ ರ‍್ಷ ಬಾಳಿಕೆ ಬರುತ್ತವೆ. ನೀವು ನೀರಿನಿಂದ ತೊಳೆದರು ಏನು ಆಗುವದಿಲ್ಲಾ” ಎನ್ನುತ್ತಾರೆ ರವಿ ಬಂಕಾಪುರ.

“ರವಿ ಬಂಕಾಪುರ ಮೂಲತಃ ವ್ಯಾಪಾರಿಯಾಗಿದ್ದರೂ ಸಹ ಈ ರುದ್ರಾಕ್ಷಿ ಮಾಲೆ ತಯಾರಿಕೆಗೆ ಮಾತ್ರ ಹಣ ತೆಗೆದುಕೊಳ್ಳುವುದಿಲ್ಲ. ಬೃಹತ್ ರುದ್ರಾಕ್ಷಿ ಮಾಲೆಗಳ ತಯಾರಿಕೆಗೆ ರವಿ ಬಂಕಾಪುರಗೆ ಕುಟುಂಬ ಸಹೋದರರು, ಸ್ನೇಹಿತರು, ಗ್ರಾಮಸ್ಥರು ಸಹ ಕೈಜೋಡಿಸುತ್ತಾರೆ. ಇವರ ಮನೆಯಲ್ಲಿ ಕಳೆದ ೧೦ ರ‍್ಷದಿಂದ ರುದ್ರಾಕ್ಷಿ ಮಾಲೆಗಳನ್ನು ತಯಾರಿಸುತ್ತಾ ಬರುತ್ತಿದ್ದು. ಕಳೆದ ಆರು ರ‍್ಷದಿಂದ ಬೃಹತ್ತಾದ ರುದ್ರಾಕ್ಷಿಮಾಲೆಗಳಿಗೆ ಹೆಚ್ಚಿನ ಬೇಡಿಕೆ ಇದೆ” ಎನ್ನುತ್ತಾರೆ ಗ್ರಾಮಸ್ಥ ವೀರಭದ್ರಯ್ಯ ಹಿರೇಮಠ.

ರುದ್ರಾಕ್ಷಿ ವಿಶೇಷತೆ: ರುದ್ರಾಕ್ಷಿಗೆ ಹಿಂದೂ ರ‍್ಮದಲ್ಲಿ ಬಹಳಷ್ಟು ಪ್ರಾಮುಖ್ಯತೆ ಇದ್ದು, ಇದರಲ್ಲಿ ಒಂದರಿಂದ ೨೧ ಮುಖಗಳಿರುವ ರುದ್ರಾಕ್ಷಿಗಳಿರುತ್ತವೆ. ಒಂದು ಮತ್ತು ಎರಡು ಮುಖಗಳಿರುವ ರುದ್ರಾಕ್ಷಿಗಳಿಗೆ ಬಾರಿ ಬೇಡಿಕೆ ಇದೆ. ರುದ್ರಾಕ್ಷಿಯ ಒಂದೊಂದು ಂದು ಮುಖಕ್ಕೂ ಒಂದೊಂದು ಗ್ರಹ ಚಂದ್ರನ ಹೋಲಿಕೆ ಮಾಡಲಾಗುತ್ತದೆ.೨೭ ಮುಖಗಳನ್ನು ಹೊಂದಿರುವ ರುದ್ರಾಕ್ಷಿಗಳು ದೊರೆತಿವೆ ಎನ್ನುತ್ತಾರೆ.

ಆದರೆ ಅದಕ್ಕೆ ಪುರಾವೆ ಇಲ್ಲ. ಆದರೆ ಒಂದು ಮುಖದ ರುದ್ರಾಕ್ಷಿಗಂತೂ ಅತ್ಯಂತ ಬೇಡಿಕೆ ಇದೆ. ರವಿ ಬಂಕಾಪುರ ಕಾಶಿಯಿಂದ ತರಿಸುವ ರುದ್ರಾಕ್ಷಿಗಳು ಬಹುತೇಕ ಐದು ಮುಖ ಹೊಂದಿದ್ದಾಗಿವೆ. ಅವುಗಳ ಗಾತ್ರದಲ್ಲಿ ವಿಂಗಡಣೆ ಮಾಡಿ ಬೃಹತ್ ಮಾಲೆಗೆ ಮತ್ತು ಚಿಕ್ಕ ಮಾಲೆಗಳಿಗೆ ರುದ್ರಾಕ್ಷಿಗಳನ್ನು ಬಳಕೆ ಮಾಡಲಾಗುತ್ತಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ

--      ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ ಹಾವೇರಿ: ಇಲ್ಲಿನ ಜಿಲ್ಲಾ...

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು ಹೊರಟಿದ್ದು...

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ ಹಾವೇರಿ : ಹಾವೇರಿನಗರದಲ್ಲಿ ಕಳೆದ ವಾರದಿಂದ...

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ ಹಾವೇರಿ: ಯುವ ಜನಾಂಗ...