೧೦ ಜನ ಸಾಧಕರಿಗೆ ವಾಲ್ಮೀಕಿ ಪ್ರಶಸ್ತಿ ಘೋಷಣೆ

Date:

೧೦ ಜನ ಸಾಧಕರಿಗೆ ವಾಲ್ಮೀಕಿ ಪ್ರಶಸ್ತಿ ಘೋಷಣೆ
ಬೆಂಗಳೂರು: ರಾಜ್ಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳು ‌ನಡೆದಿವೆ.
 ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ೧೦ ಗಣ್ಯರಿಗೆ ರಾಜ್ಯಮಟ್ಟದ ‘ಮಹರ್ಷಿ ವಾಲ್ಮೀಕಿ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತಿದೆ.
ರಾಜ್ಯಾದ್ಯಂತ ನಾಳೆ  ವಾಲ್ಮೀಕಿ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳು ಪರ‍್ಣಗೊಂಡಿವೆ. ಈ ಮಹತ್ವದ ದಿನದ ಅಂಗವಾಗಿ ರಾಜ್ಯ ರ‍್ಕಾರವು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ೧೦ ಮಂದಿ ಗಣ್ಯ ಸಾಧಕರಿಗೆ ಪ್ರತಿಷ್ಠಿತ ರಾಜ್ಯಮಟ್ಟದ ‘ಮಹರ್ಷಿ ವಾಲ್ಮೀಕಿ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಿದೆ.
ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ  ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.
೧೩೭ ಅರ್ಜಿ ಪರಿಶೀಲನೆ: ಪ್ರಸಕ್ತ ಸಾಲಿನ ವಾಲ್ಮೀಕಿ ಪ್ರಶಸ್ತಿಗಾಗಿ ರಾಜ್ಯದ ಮೂಲೆ ಮೂಲೆಗಳಿಂದ ಒಟ್ಟು ೧೩೭ ಅರ್ಜಿಗಳು ಸ್ವೀಕೃತವಾಗಿದ್ದವು. ತಜ್ಞರ ಸಮಿತಿಯು ಪ್ರತಿಯೊಂದು ಅರ್ಜಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಶೈಕ್ಷಣಿಕ, ಸಾಹಿತ್ಯ, ಕಲೆ-ಸಾಂಸ್ಕೃತಿಕ, ವಿಜ್ಞಾನ-ತಂತ್ರಜ್ಞಾನ ಮತ್ತು ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ನಿಸ್ವಾರ್ಥ
ಕೊಡುಗೆ ನೀಡಿದ ೧೦  ಸಾಧಕರನ್ನು ಅಂತಿಮಗೊಳಿಸಿದೆ.
ರಾಜ್ಯ ಸರ್ಕಾರ ನೀಡುವ ಈ ಪ್ರತಿಷ್ಠಿತ ಪ್ರಶಸ್ತಿಯು ಅತ್ಯಂತ ಮೌಲ್ಯಯುತವಾಗಿದ್ದು, ಪುರಸ್ಕೃತ ಪ್ರತಿಯೊಬ್ಬ ಸಾಧಕರಿಗೂ ₹೫,೦೦,೦೦೦ (೫ ಲಕ್ಷ ರೂಪಾಯಿ) ನಗದು ಬಹುಮಾನ, ೨೫ ಗ್ರಾಂ ತೂಕದ ಚಿನ್ನದ ಪದಕ ಹಾಗೂ ಸ್ಮರಣಿಕೆ ಮತ್ತು ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುತ್ತದೆ. ಒಟ್ಟಾರೆಯಾಗಿ ಚಿನ್ನ ಮತ್ತು ನಗದು ಬಹುಮಾನ ಸೇರಿ ೮.೫ ಲಕ್ಷ ರೂ. ಆಗಲಿದೆ.
ವಾಲ್ಮೀಕಿ ಪ್ರಶಸ್ತಿ ಪುರಸ್ಕೃತರ ಸಂಪರ‍್ಣ ಪಟ್ಟಿ (ಕ್ಷೇತ್ರವಾರು):
ತೇಜಸ್ವಿ ಕಟ್ಟಿಮನಿ – ಶೈಕ್ಷಣಿಕ ಕ್ಷೇತ್ರ
ತಿಪ್ಪಣ್ಣ ಮರಿಕುಂಟೆ – ಸಾಹಿತ್ಯ ಕ್ಷೇತ್ರ
ಆರ್.ಎಂ. ಮುನಿರಾಜು – ಸಾಂಸ್ಕೃತಿಕ ಸೇವೆ
ಡಾ. ಚಂದ್ರನಾಯಕ್ ಎಸ್. – ವಿಜ್ಞಾನ, ತಂತ್ರಜ್ಞಾನ ಮತ್ತು ಶಿಕ್ಷಣ
ಜೆ.ಪಿ. ರಾಜು – ಸಾಮಾಜಿಕ ಸೇವೆ
ಶಿವನಗೌಡ ಹೊನ್ನನಗೌಡ ಪಾಟೀಲ್ – ಸಾಮಾಜಿಕ ಸೇವೆ
ನಂದಕುಮಾರ ಮಾಲಿ ಪಾಟೀಲ – ಸಾಮಾಜಿಕ ಸೇವೆ
ಕೇತಮ್ಮ – ಸಾಮಾಜಿಕ ಸೇವೆ
ಬಿ.ಜಿ. ಕೃಷ್ಣಪ್ಪ – ಸಾಮಾಜಿಕ ಸೇವೆ
ವೆಂಕಟರಾಮ್ – ಸಾಮಾಜಿಕ ಸೇವೆ
 ‘ವಾಲ್ಮೀಕಿ ಜ್ಯೋತಿ’ ಮೆರವಣಿಗೆ: ಜಾನಪದ ಕಲಾ ವೈಭವ
ಪ್ರಶಸ್ತಿ ಪ್ರದಾನ ಕರ‍್ಯಕ್ರಮಕ್ಕೂ ಮುನ್ನ ರಾಜಧಾನಿ ಬೆಂಗಳೂರಿನಲ್ಲಿ ಭವ್ಯ ‘ವಾಲ್ಮೀಕಿ ಜ್ಯೋತಿ ಮೆರವಣಿಗೆ’ ರ‍್ಪಡಿಸಲಾಗಿದೆ. ಐತಿಹಾಸಿಕ ಬಸವನಗುಡಿಯ ಶ್ರೀ ಬೇಡರ ಕಣ್ಣಪ್ಪ ಸ್ವಾಮಿ ದೇವಸ್ಥಾನದಿಂದ ಪರ‍್ಣಕುಂಭ, ನಾದಸ್ವರ ಹಾಗೂ ಜ್ಯೋತಿಯ ಮೆರವಣಿಗೆಯು ವಿಧ್ಯುಕ್ತವಾಗಿ ಆರಂಭವಾಗಲಿದೆ. ಸಾಂಸ್ಕೃತಿಕ ಕಲಾತಂಡಗಳು, ಬುಡಕಟ್ಟು ಜಾನಪದ ನೃತ್ಯಗಳು ಹಾಗೂ ಡೊಳ್ಳು ಕುಣಿತ ಮೆರವಣಿಗೆಗೆ ಮೆರುಗು ನೀಡಲಿವೆ. ಮೆರವಣಿಗೆಯು ಶಾಸಕರ ಭವನದ (ಐಊ) ಆವರಣ ತಲುಪಿದ ಬಳಿಕ, ಅಲ್ಲಿರುವ ಮರ‍್ಷಿ ವಾಲ್ಮೀಕಿ ಅವರ ಪ್ರತಿಮೆಗೆ ಗಣ್ಯರು ಪುಷ್ಪರ‍್ಚನೆ ನೆರವೇರಿಸಿ ಗೌರವ ಸಲ್ಲಿಸಲಿದ್ದಾರೆ. ನಂತರ ವಿಧಾನಸೌಧದ ಸಭಾಂಗಣದಲ್ಲಿ ಮುಖ್ಯ ಕರ‍್ಯಕ್ರಮ ಜರುಗಲಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಕಬ್ಬೂರು ಜಿ.ಪಂ. ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತು ಶಾಸಕ ಬಸವರಾಜ ಶಿವಣ್ಣನವರ  ಸ್ಪಷ್ಟನೆ

ಕಬ್ಬೂರು ಜಿ.ಪಂ. ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತು ಶಾಸಕ ಬಸವರಾಜ ಶಿವಣ್ಣನವರ ...

ಆಯುಧಪೂಜೆ ಕಾರ್ಯಕ್ರಮಕ್ಕೆ  ಕಡ್ಡಾಯ ಹಾಜರಾತಿ ಆದೇಶಕ್ಕೆ ಖಂಡನೆ – ಹಾವೇರಿ ವಿ.ವಿ. ಕುಲ ಸಚಿವರ ವಿರುದ್ಧ ಕ್ರಮಕ್ಕೆ  ಆಗ್ರಹ

ಆಯುಧಪೂಜೆ ಕಾರ್ಯಕ್ರಮಕ್ಕೆ  ಕಡ್ಡಾಯ ಹಾಜರಾತಿ  ಆದೇಶಕ್ಕೆ ಖಂಡನೆ - ಹಾವೇರಿ ವಿ.ವಿ. ಕುಲ...

ಶಾಸಕ ಮಾನೆ ಶ್ರೀನಿವಾಸ  ಹೆಸರಿನಲ್ಲಿ ಹಣ ವಸೂಲಿ: ವಂಚಕ ಪೊಲೀಸ್ ವಶ, ವಿಚಾರಣೆ

ಶಾಸಕ ಮಾನೆ ಶ್ರೀನಿವಾಸ  ಹೆಸರಿನಲ್ಲಿ ಹಣ ವಸೂಲಿ: ವಂಚಕ ಪೊಲೀಸ್...