“ಎಡ ಪಂಥದವರು ಜಡಪಂಥದವರಾಗಬೇಡಿ”
ಹಾವೇರಿಯಲ್ಲಿ ಪ್ರೊ.ಬರಗೂರು ರಾಮಚಂದ್ರಪ್ಪ
ಹಾವೇರಿ: ಧರ್ಮಕ್ಕಿಂತ ಧಾರ್ಮಿಕ ವಾದ, ಜಾತಿಗಿಂತ ಜಾತಿ ವಾದ, ಖಾಸಗಿ ಭಕ್ತಿಯನ್ನು ಬೀದಿಗೆ ತರುತ್ತಿರುವ ಅಪಾಯದ ದಿನಗಳಲ್ಲಿ ಮನುಷ್ಯ ಸಂಬಂಧಗಳನ್ನು ಬೆಸೆಯಲು ಆಶಾವಾದ ಸೃಜಿಸುವ, ಶೋಷಿತರ ಪರ ನಿಲ್ಲುವ ಸತೀಶ ಕುಲಕರ್ಣಿ ಅವರ ಕಾವ್ಯಗಳಲ್ಲಿರುವ ಕಟ್ಟುವ ಕೂಗು ಇಂದಿಗೂ ಪ್ರಸ್ತುತ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.
ಭಾನುವಾರ ನಗರದ ಕೆ.ಇ.ಬಿ ಸಮುದಾಯ ಭವನದಲ್ಲಿ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಅವರ ೭೫ನೇ ಜನ್ಮದಿನ ನಿಮಿತ್ತ ಜರುಗಿದ ಅಭಿನಂದನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬಂಡಾಯಕ್ಕೆ ಭಾವಕೋಶ ಇರಬೇಕು. ಅಂಥ ಭಾವಕೋಶದಿಂದ ಬಂದ ಕಾವ್ಯಕ್ಕೆ ಕರುಳು ಇರಬೇಕು. ಕರುಳಿಗೆ ಕಣ್ಣು ಇರಬೇಕು. ಯಾವುದೇ ಸಿದ್ಧಾಂತವಿದ್ದರೂ ಕವಿ ಸೃಜನಶೀಲನಾಗಿರಬೇಕು. ಸೌಹಾರ್ಧತೆಗೆ ಧಕ್ಕೆ ಬರುವ ಸಂದರ್ಭದಲ್ಲಿ ನಾವಿದ್ದೇವೆ. ಧರ್ಮಗಳು ಧ್ವೀಪಗಳಾಗುತ್ತಿವೆ, ಜಾತಿಗಳು ಜೇಲುಗಳಾಗಿತ್ತಿವೆ. ಇಂದು ದೇಶಕ್ಕೆ ಬೇಕಾಗಿರುವುದು ಸಮಾನತೆ ಹಾಗೂ ಸೌಹಾರ್ದತೆ.ಈ ಕಾಲಘಟ್ಟದಲ್ಲಿ ಎಡ ಪಂಥದವರು ಜಡಪಂಥದವರಾಗದೇ ಜನಪರವಾಗಿರಬೇಕು ಎಂದರು.
ಸತೀಶ ಕುಲಕರ್ಣಿ ಕುಲಕರ್ಣಿ ಅವರ ಕಾವ್ಯದಲ್ಲಿ ಆಕ್ರೋಶಕ್ಕಿಂತ ಅಂತಃಕರಣವಿದೆ. ಬದ್ಧತೆ ಮತ್ತು ದೃಢತೆ ಇದೆ. ಕಟ್ಟತ್ತೇವ ಕಾವ್ಯದ ಮೂಲಕ ಜನಪದ ಹಾಗೂ ಜನಪರ ಕವಿ ಎನಿಸಿಕೊಂಡಿದ್ದಾರೆ. ಪಾಪ ಪ್ರಜ್ಞೆ ಮತ್ತು ಜಾಗೃತ ಪ್ರಜ್ಞೆ ಇದ್ದಾಗ ಮಾತ್ರ ಬದಲಾವಣೆ ಸಾಧ್ಯ. ಬ್ರಾಹ್ಮಣ್ಯ ಹಾಗೂ ಜನಿವಾರವನ್ನು ತ್ಯಜಿಸಿ ಸಮಾಜ ಎದುರಿಸುತ್ತಿರುವ ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ ಸತೀಶ ಕುಲಕರ್ಣಿ ಪ್ರೇರಕ ಶಕ್ತಿಯೂ ಹೌದು. ಜೊತೆಗೆ ಈ ಭಾಗದಲ್ಲಿ ಬಂಡಾಯ ಸಾಹಿತ್ಯವನ್ನು ಗಟ್ಟಿಗೊಳಿಸಲು ಶ್ರಮಿಸಿದವರು ಎಂದರು.
ಕಟ್ಟುವ ಕವಿ ಅಭಿನಂದನ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದ ಸಾಹಿತಿ ಡಾ.ಧರಣಿದೇವಿ ಮಾಲಗತ್ತಿ, ಬಂಡಾಯಕ್ಕೆ ಭಾವನೆ ಬೇಕು. ಆ ಭಾವನೆಗೆ ಜೀವ ತುಂಬುವ, ಜಾತಿ ಇಲ್ಲದ ಹಾಗೂ ಭೀತಿ ಇಲ್ಲದ ನಾಡು ಕಟ್ಟುವ ಆಶಯವುಳ್ಳ ಸತೀಶ ಕುಲಕರ್ಣಿ ಅವರ ಕಾವ್ಯಗಳಲ್ಲಿ ಸಾಮಾಜಿಕ ಸಮಸ್ಯೆಗಳಿಗೆ ಪ್ರತಿಕ್ರಿಯಿಸುವ ಗುಣವಿದೆ ಎಂದರು.
ಸಾಹಿತಿ ಡಾ.ಸರಜೂ ಕಾಟ್ಕರ್ ಅಭಿನಂದನ ಪರ ನುಡಿಗಳನ್ನಾಡಿ, ಸತ್ವಯುತ ಸಾಹಿತ್ಯ ಬರೆದಿರುವ ಸತೀಶ ಕುಲಕರ್ಣಿ ತಾವು ಹೋದಲೆಲ್ಲ ಸಾಂಸ್ಕೃತಿಕ ಚಹರೆ ಮೂಡಿಸಿದವರು. ಕಟ್ಟತ್ತೇವ ನಾವು ಕಾವ್ಯ ಬಂಡಾಯ ಸಾಹಿತ್ಯದ ಮ್ಯಾನಿಫೆಸ್ಟೋ ಆಗಿದೆ. ಆದರೆ ಕವಿ ಅಜ್ಞಾತವಾಗಿದ್ದರೂ ಕಾವ್ಯ ಪ್ರಸ್ತುತವಾಗಿರುವುದು ಶ್ಲಾಘನೀಯ ಎಂದರು.
ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ ಮಾತನಾಡಿ, ಸಹನೆ ಹಾಗೂ ಸೌಮ್ಯ ವ್ಯಕ್ತಿತ್ವದ ಸತೀಶ ಕುಲಕರ್ಣಿ ಅವರನ್ನು ಸಮೀಪದಿಂದ ಕಂಡಿರುವೆ. ಸಮಾಜವನ್ನು ಜಾಗೃತಗೊಳಿಸುವ ಸಾಹಿತ್ಯ ಅವರದ್ದು. ಸಮಾಜದಲ್ಲಿನ ಸಮಸ್ಯೆ ಅರ್ಥೈಸಿಕೊಂಡು ಸಾಗುವ ಅವರು ಸಾಹಿತ್ಯ ಕ್ಷೇತ್ರದಲ್ಲಿ ಛಾಪು ಮೂಡಿಸಿರುವರು. ವ್ಯವಸ್ಥೆಯನ್ನು ಅಣುಕಿಸುವ ಅವರ ಸಾಹೇಬರ ನಾಯಿ ನಾಟಕ ಮರೆಯಲಾರದ್ದು ಎಂದರು.
ಮಾಜಿ ಶಾಸಕ ನೆಹರು ಓಲೇಕಾರ ಮಾತನಾಡಿ, ಎಲ್ಲರನ್ನು ಗೌರವಿಸುವ ಹಾಗೂ ಕಟ್ಟತ್ತೇವ ನಾವು ಕಾವ್ಯದ ಮೂಲಕ ಜನಮನ ಸೆಳೆದಿರುವ ಸತೀಶ ಕುಲಕರ್ಣಿ ನಮ್ಮ ನಾಡಿನ ಶಕ್ತಿ. ಅವರ ಅಭಿನಂದನ ಸಮಾರಂಭ ಹೆಮ್ಮೆ ತಂದಿದೆ ಎಂದರು.
ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ ದಲಿತ ಹಾಗೂ ಬಂಡಾಯ ಸಾಹಿತ್ಯ ಚಳವಳಿಗಳಲ್ಲಿ ಭಾಗವಹಿಸಿದ್ದರಿಂದ ಸಾಹಿತ್ಯಿಕ ವಲಯದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತು. ಚಂಪಾ ಅವರು ಮೊದಲ ಪಾಠಶಾಲೆ ಆಗಿದ್ದವರು. ಪ್ರೊ.ಬರಗೂರು ರಾಮಚಂದ್ರಪ್ಪ ವಿಶ್ವವಿದ್ಯಾಲಯ ಸ್ಥಾನ ನೀಡಿದವರು. ಸಾಂಪ್ರದಾಯಿಕ ಮನೆತನದಿಂದ ಹೊರಬರುವುದು ಸವಾಲು ಆಗಿದ್ದರೂ ಅದನ್ನು ಮೀರಿ ನಿಂತ ನನಗೆ ಹಾವೇರಿ ನೆಲ ಎಲ್ಲವನ್ನೂ ಕೊಟ್ಟಿದೆ. ಅಪೇಕ್ಷೆ ಮತ್ತು ನಿರೀಕ್ಷೆಗಳನ್ನು ಮೀರಿದ ನನಗೆ ಕಾವ್ಯ ನನ್ನ ಮೊದಲ ಮತ್ತು ಕೊನೆಯ ಆಯ್ಕೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ ತಮ್ಮ ಸಾಹಿತ್ಯದ ಮೂಲಕ ಜನಸಮೂಹವನ್ನು ಎಚ್ಚರಿಸುವ ಕೆಲಸ ಮಾಡಿರುವ ಸತೀಶ ಕುಲಕರ್ಣಿ ಅವರ ೭೫ನೇ ಜನ್ಮದಿನ ನಿಮಿತ್ತ ಕಟ್ಟುವ ಕವಿ ಅಭಿನಂದನ ಗ್ರಂಥ ಬಿಡುಗಡೆಗೊಳಿಸಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸಾಹಿತಿ ಕಲಾವಿದರ ಬಳಗ ಹಾಗೂ ಅವರ ಅಭಿಮಾನಿಗಳ ಸಹಕಾರ ಮತ್ತು ಪ್ರೀತಿಯಿಂದ ಈ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗಿದೆ. ಎಂದರು. ಸಾಹಿತಿಗಳಾದ ಡಾ.ಶಿವಾನಂದ ಕೆಳಗಿನಮನಿ ಹಾಗೂ ಪ್ರೊ.ಮಾರುತಿ ಶಿಡ್ಲಾಪುರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕಲಾವಿದರಿಂದ ಸತೀಶರ ಹೋರಾಟದ ಹಾಡುಗಳು ಹಾಗೂ ಶೇಷಗಿರಿ ಗಜಾನನ ಯುವಕ ಮಂಡಳಿಯಿಂದ ಕಾವ್ಯರಂಗ ಪ್ರದರ್ಶನವಾದವು.
ಸಾಹಿತಿಗಳಾದ ಕುಂ.ವೀರಭದ್ರಪ್ಪ, ಪ್ರೊ.ವಿರೂಪಾಕ್ಷಪ್ಪ ಕೋರಗಲ್ಲ, ಅಲ್ಲಮಪ್ರಭು ಬೆಟ್ಟದೂರು, ಲೋಹಿಯಾ ಪ್ರಕಾಶನದ ಚನ್ನಬಸವಣ್ಣ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಕಾಂಚನಾ ಕುಲಕರ್ಣಿ, ಉದ್ಯಮಿಗಳಾದ ಪ್ರಕಾಶ ಶೆಟ್ಟಿ, ಪವನ್ ದೇಸಾಯಿ, ಡಾ.ವೇದಾರಾಣಿ ದಾಸನೂರ, ಅಭಿನಂದನ ಸಮಿತಿಯ ಮಲ್ಲಿಕಾರ್ಜುನ ಸಾತೇನಹಳ್ಳಿ ಹಾಗೂ ಅಭಿನಂದನ ಗ್ರಂಥದ ಸಂಪಾದಕ ಮಂಡಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅಭಿನಂದನ ಸಮಿತಿ ಅಧ್ಯಕ್ಷ ವಿಜಯಕುಮಾರ ಮುದಕಣ್ಣವರ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲೂಕಾಧ್ಯಕ್ಷ ವೈ.ಬಿ.ಆಲದಕಟ್ಟಿ ಸ್ವಾಗತಿಸಿದರು. ನಾಗರಾಜ ನಡುವಿನಮಠ ನಿರೂಪಿಸಿದರು. ಪೃಥ್ವಿರಾಜ ಬೆಟಗೇರಿ ವಂದಿಸಿದರು.